ಕಾಂಗ್ರೆಸ್ ಮುಖಂಡ ನಿಧನ

ಪೆರ್ಲ: ಹಿರಿಯ ಕಾಂಗ್ರೆಸ್ ಮುಖಂಡ, ನಲ್ಕ ವಾಗ್ದೇವಿ ಅನುದಾನಿತ ಪ್ರಾಥಮಿಕ ಶಾಲೆಯ ನಿಕಟಪೂರ್ವ ವ್ಯವಸ್ಥಾಪಕ ಶ್ರೀಕೃಷ್ಣ ಭಟ್ ವರ್ಮುಡಿ (78) ನಿಧನ ಹೊಂದಿದರು. ಎಣ್ಮಕಜೆ ಮಂಡಲ ಕಾಂಗ್ರೆಸ್ ಸಮಿತಿ ಕೋಶಾಧಿಕಾರಿ, ಯುಡಿಎಫ್ ಚುನಾವಣಾ ಸಮಿತಿ ಪದಾಧಿಕಾರಿಯಾಗಿ ಹಲವಾರು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು.  ಎಣ್ಮಕಜೆ ಪಂಚಾಯತ್ ವ್ಯಾಪ್ತಿ ಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಲು ಇವರು ನೀಡಿದ ಕೊಡುಗೆ ಅನನ್ಯ ಎಂದು ಪಕ್ಷದ ಮುಖಂಡರು ತಿಳಿಸುತ್ತಿದ್ದು, ಇವರ ಅಗಲಿಕೆ ಪಕ್ಷಕ್ಕೆ ನಷ್ಟವುಂಟುಮಾಡಿರುವುದಾಗಿ ಜಿಲ್ಲಾ ಪಂಚಾಯತ್ ಸದಸ್ಯ ಸೋಮ ಶೇಖರ ಜೆ.ಎಸ್. ಸಂತಾಪದಲ್ಲಿ ತಿಳಿಸಿದ್ದಾರೆ.

ಮೃತರು ಪತ್ನಿ ಶಂಕರಿ, ಮಕ್ಕ ಳಾದ ಶಾರದ, ರವಿಶಂಕರ, ಸತ್ಯನಾ ರಾಯಣ, ಗಣೇಶಕೃಷ್ಣ, ಅಳಿಯ ಡಾ. ಶ್ಯಾಮ್‌ಪ್ರಸಾದ್, ಸೊಸೆಯಂದಿರಾದ ವಿದ್ಯಾ, ಆಶಾಲಕ್ಷ್ಮಿ, ಸೌಮ್ಯ, ಸಹೋದರರಾದ ಡಾ. ಸತ್ಯಶಂಕರ ವರ್ಮುಡಿ, ಡಾ. ವಿಘ್ನೇಶ್ವರ ವರ್ಮುಡಿ, ಸಹೋದರಿಯರಾದ ಇಂದಿರಾ ಕೆ,  ಶಾಂತ ಜಿ., ಸರೋಜ ಕೆ. ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವೆ ಸಹೋದರಿ ವಿಜಯಲಕ್ಷ್ಮಿ ಇ. ಈ ಹಿಂದೆ ನಿಧನ ಹೊಂದಿದ್ದಾರೆ.

RELATED NEWS

You cannot copy contents of this page