ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಪಿಣರಾಯಿ ವಿಜಯನ್

ತಿರುವನಂತಪುರ: ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಎಡರಂಗ ಹೀನಾಯವಾಗಿ ಸೋಲನುಭವಿಸಿದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ವಿಶೇಷ ಧೂತರೋರ್ವರ ಮೂಲಕ ಪಿಣರಾಯಿ ವಿಜಯನ್ ರಾಜ್ಯಪಾಲ  ರಾಜೇಂದ್ರ ಅರ್ಲೇಕರ್‌ರಿಗೆ ಕಳುಹಿಸಿಕೊಟ್ಟಿದ್ದು ಅದನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ. ಮಾತ್ರವಲ್ಲ  ನೂತನ ಸರಕಾರ ರಚನೆಯಾಗುವ ತನಕ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ  ಪಿಣರಾಯಿ ವಿಜಯನ್‌ರಿಗೆ ರಾಜ್ಯಪಾಲರು ನಿರ್ದೇಶ ನೀಡಿದ್ದಾರೆ.

ಸಿನಿಮಾ ನಟ ಸಂತೋಷ್ ಕೆ. ನಾಯರ್ ವಾಹನ ಅಪಘಾತದಲ್ಲಿ ಮೃತ್ಯು

ಪತ್ತನಂತಿಟ್ಟ: ಸಿನಿಮಾ ಸೀರಿಯಲ್ ನಟ ಸಂತೋಷ್ ಕೆ. ನಾಯರ್ (66) ವಾಹನ ಅಪಘಾತದಲ್ಲಿ ಮೃತಪಟ್ಟರು. ಎಂ.ಸಿ.ರಸ್ತೆಯಲ್ಲಿ ಇಂದು ಬೆಳಿಗ್ಗೆ ಅಪಘಾತ ಸಂಭವಿಸಿದೆ. ಸಂತೋಷ್ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಎದುರಿನಿಂದ ಆಗಮಿಸುತ್ತಿದ್ದ ಪಾರ್ಸಲ್ ಲಾರಿಗೆ ಢಿಕ್ಕಿ ಹೊಡೆದಿದೆ. ಕೂಡಲೇ ಅಡೂರಿನ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಚಿಕಿತ್ಸೆ ಮಧ್ಯೆ ಮೃತಪಟ್ಟರು. ಕಾರಿನಲ್ಲಿ ಜೊತೆಗಿದ್ದ ಪತ್ನಿ ಶುಭಶ್ರೀ, ಪಾರ್ಸಲ್ ಲಾರಿ ಚಾಲಕ ಸುಧೀಶ್ ಎಂಬಿವರಿಗೂ ಗಾಯಗಳುಂ ಟಾಗಿದ್ದು ಇವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಸಂತೋಷ್‌ರ ಕೊನೆಯ ಸಿನಿಮಾವಾಗಿದೆ …

ಬಿಜೆಪಿ ಕಾರ್ಯಕರ್ತನನ್ನು ತಡೆದು ನಿಲ್ಲಿಸಿ ಹಲ್ಲೆ: 10 ಮಂದಿ ವಿರುದ್ಧ ಕೇಸು

ಕಾಸರಗೋಡು:  ಬಿಜೆಪಿ ಕಾರ್ಯಕರ್ತನನ್ನು ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿಯೂ, ಬಿಯರ್ ಬಾಟ್ಲಿಯಿಂದ ಹೊಡೆದು ಬೈಕ್‌ಗೆ ಹಾನಿ ಉಂಟುಮಾಡಿರುವುದಾಗಿ ದೂರಲಾಗಿದೆ. ಪೂಚಕ್ಕಾಡ್ ಪುದಿಯಪುರದ ಪಿ. ಹರೀಶ್ ಕುಮಾರ್ (36)ರ ಮೇಲೆ  ಹಲ್ಲೆಗೈಯ್ಯಲಾಗಿದೆ. ಈ ಘಟನೆಗೆ ಸಂಬಂಧಿಸಿ ಮುಕ್ಕೋಡ್‌ನ ಅಬ್ದುಲ್ ರಹ್ಮಾನ್, ವಾಜಿದ್, ಮೊಯ್ನು, ರಫೀಕ್ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಆರು ಮಂದಿ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ಸಂಜೆ 5 ಗಂಟೆ ವೇಳೆ ಘಟನೆ ನಡೆದಿದೆ. ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ಹರೀಶ್ ಕುಮಾರ್‌ರನ್ನು ಪೂಚಕ್ಕಾಡ್‌ನಲ್ಲಿ ತಂಡ ತಡೆದು …

ರಾಜ್ಯದ 3 ಕಡೆ ಅರಳಿದ ತಾವರೆ: ಎಡರಂಗದ ಕೋಟೆಗಳಿಗೆ ಲಗ್ಗೆ

ತಿರುವನಂತಪುರ: ರಾಜ್ಯದ ಎಡಪಕ್ಷಗಳ ಭದ್ರಕೋಟೆಗಳಲ್ಲಿ ಮೂರು ತಾವರೆ ಅರಳಿದೆ. ಎಡಪಕ್ಷಗಳ ಭದ್ರಕೋಟೆ ಎಂದು ಕರೆಸಿಕೊಂಡಿದ್ದ ಕಳಕೂಟಂ, ಚಾತನ್ನೂರ್‌ನಲ್ಲೂ, ನೇಮಂನಲ್ಲೂ ಬಿಜೆಪಿ ಜಯಗಳಿಸಿ ರಾಜ್ಯದ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ರಾಜ್ಯದ ಇತರ ಆರು ಮಂಡಲಗಳಲ್ಲಿ ದ್ವಿತೀಯ ಸ್ಥಾನಕ್ಕೆ ತಲುಪಲು ಬಿಜೆಪಿಗೆ ಸಾಧ್ಯವಾಗಿದೆ. ನೇಮಂನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಸಿಪಿಎಂ ಮುಖಂಡ, ಸಚಿವರಾಗಿರುವ ವಿ. ಶಿವನ್ ಕುಟ್ಟಿಯವರನ್ನು ಸೋಲಿಸಿ ಮಂಡಲ ವನ್ನು ಮತ್ತೆ ವಶಪಡಿಸಿದ್ದಾರೆ. ಕಳಕೂಟಂನಲ್ಲಿ ಸಿಪಿಎಂ ಮುಖಂಡ, ಮಾಜಿ ಸಚಿವ ಕಡಗಂಪಳ್ಳಿ ಸುರೇಂದ್ರನ್‌ರನ್ನು ಸೋಲಿಸಿ ಬಿಜೆಪಿಯ …

ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಮುಖ್ಯಮಂತ್ರಿ ಗಾದಿಗೆ ಕಸರತ್ತು ಆರಂಭ: ಚರ್ಚೆಗೆ ಎಐಸಿಸಿ ವೀಕ್ಷಕರ ತಂಡ ಇಂದು ಆಗಮನ; ಮುಖ್ಯಮಂತ್ರಿ ರೇಸ್‌ನಲ್ಲಿ ಮೂವರು ಗಣ್ಯರು

ತಿರುವನಂತಪುರ: ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ 102 ಸ್ಥಾನಗಳನ್ನು ಪಡೆದು ಐತಿಹಾಸಿಕ ಗೆಲುವು ಸಾಧಿಸಿದ ಬೆನ್ನಲ್ಲೇ  ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಗಾದಿಗಾಗಿ ಕಸರತ್ತು ಆರಂಭಗೊಂಡಿದೆ. ಮುಖ್ಯಮಂತ್ರಿ ರೇಸ್‌ನಲ್ಲಿ ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್, ಕಾಂಗ್ರೆಸ್‌ನ ಹಿರಿಯ  ನೇತಾರ ರಮೇಶ್ ಚೆನ್ನಿತ್ತಲ ಮೊದಲ ಸ್ಥಾನದಲ್ಲಿದ್ದಾರೆ. ಇವರ ಹೊರತಾಗಿ ಕಾಂಗ್ರೆಸ್‌ನ ಕೇಂದ್ರ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕೂಡಾ ಇದರಲ್ಲಿ ಒಳಗೊಂಡಿದ್ದಾರೆ. ಮುಖ್ಯಮಂತ್ರಿ ಆಯ್ಕೆ ಕುರಿತಾದ ಕ್ರಮದಲ್ಲಿ ಪಕ್ಷ ಈಗಾಗಲೇ ತೊಡಗಿದೆಯೆಂದೂ ಈ  ವಿಷಯದಲ್ಲಿ ಕೆಲವೇ ದಿನಗಳೊಳಗೆ ತೀರ್ಮಾನ ಉಂಟಾಗಲಿದೆಯೆಂದು ಇಂದು ಬೆಳಿಗ್ಗೆ …

ಗೆದ್ದ ಅಭ್ಯರ್ಥಿಗಳು: ಗರಿಷ್ಠ ಬಹುಮತ ಪಿ.ಕೆ.ಕುಂಞಾಲಿಕುಟ್ಟಿಗೆ, ಕನಿಷ್ಠ ಸಿ. ರವೀಂದ್ರನ್‌ರಿಗೆ

ತಿರುವನಂತಪುರ: ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮುಸ್ಲಿಂ ಲೀಗ್‌ನ ಹಿರಿಯ ನೇತಾರ ಹಾಗೂ ಮಲಪ್ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಪಿ.ಕೆ. ಕುಂಞಾಲಿಕು ಟ್ಟಿಯವರು 85,074 ಮತಗಳ ಭಾರೀ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಇದು ಈ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಅಭ್ಯರ್ಥಿಗಳ ಪೈಕಿ ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆದ್ದ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಕುಂಞಾಲಿಕುಟ್ಟಿ ಪಾತ್ರರಾಗಿದ್ದಾರೆ. ಅತೀ ಕಡಿಮೆ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಯೆಂದರೆ ಮಾಜಿ ಶಿಕ್ಷಣ ಸಚಿವ ಮಣಲೂರಿನ ಸಿಪಿಎಂ (ಎಡರಂಗ) ಸಿ. ರವೀಂದ್ರನ್ …

ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಗಾಲಪೂರ್ವ ಶುಚೀಕರಣಕ್ಕೆ ಚಾಲನೆ

ಉಪ್ಪಳ: ಮಳೆಗಾಲಪೂರ್ವ ಶುಚೀಕರಣ ಕಾರ್ಯಗಳಿಗೆ ಮಂಗಲ್ಪಾಡಿ ಪಂಚಾಯತ್ ಆಡಳಿತ ಸಮಿತಿ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. ಉಪ್ಪಳಗೇಟ್ ಪರಿಸರದಲ್ಲಿ ಶುಚೀಕರಣ ಆರಂಭಿಸಲಾಗಿದೆ. ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್ ಉದ್ಘಾಟಿಸಿದರು. ಆರೋಗ್ಯ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಪಂಚಾಯತ್ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಹಸಿರು ಕ್ರಿಯಾಸೇನೆ ಸದಸ್ಯೆಯರು ಸಹಕಾರ ನೀಡಿದರು. ಇದೇ ರೀತಿ ೨೪ ವಾರ್ಡ್‌ಗಳಲ್ಲೂ ಶುಚೀಕರಣ ನಡೆಯಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಉಪೇಕ್ಷಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್ ತಿಳಿಸಿದ್ದಾರೆ.

ಮಂಜೇಶ್ವರದಲ್ಲಿ ಯುಡಿಎಫ್ ಪರ ಸಿಪಿಎಂ ಮತ ಸೋರಿಕೆ-ಕೆ.ಸುರೇಂದ್ರನ್

ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈಬಾರಿ ಎಲ್‌ಡಿಎಫ್‌ನ ಮತಗಳು ಭಾರೀ ಪ್ರಮಾಣದಲ್ಲಿ ಯುಡಿಎಫ್ ಪರ ಸೋರಿಕೆಯುಂಟಾಗಿದೆಯೆಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಆರೋಪಿಸಿದ್ದಾರೆ. ಈ ಚುನಾವಣೆಯಲ್ಲಿ ಎಲ್‌ಡಿಎಫ್‌ಗೆ 20,000ದಷ್ಟು ಮತಗಳು ನಷ್ಟಗೊಂಡಿವೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಮತೀಯ ಧ್ರುವೀಕರಣ ನಡೆದಿದೆ. ಮುಸ್ಲಿಂ ಲೀಗ್ ಮತ್ತು ಮತೀಯ ಮೂಲಭೂತವಾದಿ ಸಂಘಟನೆಗಳು ಮತೀಯ ಧ್ರುವೀಕರಣಕ್ಕೆ ಯತ್ನಿಸಿವೆ.ಮತೀಯ ಚಿಂತನೆ ಹೊಂದಿರುವ ಎಲ್ಲಾ ಮತೀಯ ಸಂಘಟನೆಗಳು ಆರಂಭದಿಂದಲೇ ಬಿಜೆಪಿಯನ್ನು ಪರಾಜಯಗೊಳಿಸಲು ಯತ್ನಿಸಿದ್ದವು. ಆದಾಗ್ಯೂ ಬಿಜೆಪಿಯ ಅಡಿಪಾಯ ಜಿಲ್ಲೆಯ …

ಮಂಜೇಶ್ವರದಲ್ಲಿ ಯುಡಿಎಫ್‌ಗೆ ಗೆಲುವು: ಉಪ್ಪಳದಲ್ಲಿ ವಿಜಯೋತ್ಸವ ಮೆರವಣಿಗೆ

ಉಪ್ಪಳ: ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಮಂಜೇಶ್ವರ ಮಂಡಲದಿಂದ ಸ್ಪರ್ಧಿಸಿದ ಐಕ್ಯರಂಗದ ಅಭ್ಯರ್ಥಿ ಎಕೆಎಂ ಅಶ್ರಫ್‌ರ ಭರ್ಜರಿ ಗೆಲುವು ಹಿನ್ನೆಲೆಯಲ್ಲಿ ಯುಡಿಎಫ್‌ನಿಂದ ಉಪ್ಪಳ ಸಹಿತ ವಿವಿಧ ಕಡೆಗಳಲ್ಲಿ ನಿನ್ನೆ ಸಂಜೆ ವಿಜಯೋತ್ಸವ ಆಚರಿಸಲಾಯಿತು. ಮೊಗ್ರಾಲ್ ಪುತ್ತೂರು, ಕುಂಬಳೆ ಭಾಗಗಳಿಂದ ವಾಹನಗಳ ಮೂಲಕ ಅಭ್ಯರ್ಥಿಯನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದರು.

ಜಿಲ್ಲೆಯ 5 ವಿಧಾನಸಭಾ ಮಂಡಲಗಳ ಅಭ್ಯರ್ಥಿಗಳಿಗೆ ಲಭಿಸಿದ ಮತಗಳ ವಿವರ

ಕಾಸರಗೋಡು: ಜಿಲ್ಲೆಯ ಐದು ವಿಧಾನಸಭಾ ಮಂಡಲಗಳ ವಿಜೇತ ಅಭ್ಯರ್ಥಿಗಳು ಹಾಗೂ ವಿವಿಧ ಅಭ್ಯರ್ಥಿಗಳಿಗೆ ಲಭಿಸಿದ ಮತಗಳ ವಿವರ. ಮಂಜೇಶ್ವರದಲ್ಲಿ ಮುಸ್ಲಿಂ ಲೀಗ್‌ನ ಶಾಸಕ ಎಕೆಎಂ ಅಶ್ರಫ್ ಜಯ ಗಳಿಸಿದ್ದು 96,948 ಮತ ಇವರಿಗೆ ಲಭಿಸಿದೆ. 29,252 ಮತಗಳ ಅಂತರದಿAದ ಜಯ ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್- 67,696, ಸಿಪಿಎಂನ ಕೆ.ಆರ್. ಜಯಾನಂದ -21,212,  ಬಹುಜನ ಸಮಾಜ್ ಪಾರ್ಟಿ ಅಭ್ಯರ್ಥಿ ಸಂಜೀವ- 212, ಸ್ವತಂತ್ರ ಅಭ್ಯರ್ಥಿಗಳಾದ ಜೀನ್ ಲವೀನಾ ಮೊಂತೇರೊ- 523, ಕಣ್ಣೂರು ಅಬ್ದುಲ್ಲ ಮಾಸ್ತರ್ – …