ಕುಂಬ್ಡಾಜೆಯಲ್ಲಿ ಮಳೆಗಾಲಪೂರ್ವ ಸ್ವಚ್ಛತೆಗೆ ಚಾಲನೆ

ಬದಿಯಡ್ಕ: ಆರೋಗ್ಯ ಜಾಗೃತಿಯಂಗವಾಗಿ ಕುಂಬ್ಡಾಜೆ ಪಂಚಾಯತ್, ಕುಟುಂಬ ಆರೋಗ್ಯ ಕೇಂದ್ರದ ಜಂಟಿ ಆಶ್ರಯದಲ್ಲಿ ನಿನ್ನೆ ಮಾರ್ಪನಡ್ಕ ಪಾಂಚಜನ್ಯ ಸಭಾಂಗಣದಲ್ಲಿ ಆರೋಗ್ಯ ವಿಚಾರ ಸಂಕಿರಣ ಮತ್ತು ಪೇಟೆ ಶುಚೀಕರಣ ಕಾರ್ಯಕ್ರಮ ನಡೆಯಿತು.ಕುಂಬ್ಡಾಜೆ ಪಂ.ನ ೧೪ ವಾರ್ಡ್ ಗಳಲ್ಲಿ ೧೪ರವರೆಗೆ ವಾರ್ಡ್ ಮಟ್ಟ ದಲ್ಲಿ ಜನಪ್ರತಿನಿದಿsಗಳ ನೇತೃತ್ವದಲ್ಲಿ ಸ್ವಚ್ಛತಾ ಸಪ್ತಾಹವನ್ನು ಆಚರಿಸ ಲಾಗುವುದು. ಇದರಂಗವಾಗಿ ನಡೆದ ವಿಚಾರ ಸಂಕಿರಣ, ಸಭೆ ಮತ್ತು ಗುಂಪು ಚರ್ಚೆಯಲ್ಲಿ ೨೦೦ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.ಕುಂಬ್ಡಾಜೆ ಪಂ. ಆರೋಗ್ಯ ಮತ್ತು ಶಿಕ್ಷಣ ವ್ಯವಹಾರಗಳ ಸಮಿತಿ ಅಧ್ಯಕ್ಷೆ …

ಮುಸ್ಲಿಂಲೀಗ್‌ಗೆ ನಾಲ್ಕು ಸಚಿವ ಸ್ಥಾನ: ಪಟ್ಟಿ ಸಿದ್ಧ

ತಿರುವನಂತಪುರ: ಹತ್ತು ವರ್ಷದ ಬಳಿಕ ಕೇರಳದಲ್ಲಿ ಮತ್ತೆ ಅಧಿಕಾರಕ್ಕೇರಲಿರುವ ಯುಡಿಎಫ್ ಸರಕಾರದಲ್ಲಿ ಸಚಿವರಾಗುವ ಮುಸ್ಲಿಂ ಲೀಗ್‌ನ ನೇತಾರರಾದ ಯಾದಿಯನ್ನು ಮುಸ್ಲಿಂ ಲೀಗ್ ರಾಜ್ಯ ನೇತೃತ್ವ ಈಗಾಗಲೇ ತಯಾರಿಸಿದೆ. ಇದರಂತೆ ಮುಸ್ಲಿಂ ಲೀಗ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ಕುಂಞಾಲಿಕುಟ್ಟಿ, ಪಿ.ಕೆ ಬಶೀರ್, ಎಂ.ಕೆ. ಶಾಜಿ ಮತ್ತು ಎನ್. ಶಂಸುದ್ದೀನ್ ಎಂಬವರ ಪಟ್ಟಿಯನ್ನು  ಸಚಿವ ಸ್ಥಾನಕ್ಕಾಗಿ ಮುಸ್ಲಿಂ ಲೀಗ್ ಸಿದ್ಧಪಡಿಸಿದೆ. ಯುಡಿಎಫ್ ಸಚಿವ ಸಂಪುಟದಲ್ಲಿ ಮುಸ್ಲಿಂ ಲೀಗ್‌ಗೆ ನಾಲ್ಕು ಸಚಿವ ಸ್ಥಾನ ನೀಡುವ ತೀರ್ಮಾನವನ್ನು ಯುಡಿಎಫ್ ಈಗಾಗಲೇ ಕೈಗೊಂಡಿದೆ. …

ಕೃಷಿಕೆ ನಿಧನ

ಪೈವಳಿಕೆ: ಖ್ಯಾತ ಯಕ್ಷಗಾನ ಕಲಾವಿದರಾಗಿದ್ದ ದಿ| ಕರುವೋಳು ದೇರಣ್ಣ ಶೆಟ್ಟಿಯವರ ಪತ್ನಿ ರಾಧಮ್ಮ (86) ನಿಧನ ಹೊಂದಿದರು. ಕೃಷಿಕೆಯಾ ಗಿದ್ದರು. ಮೃತರು ಮಕ್ಕಳಾದ ಯಶೋಧ, ವಿಶಾಲಾಕ್ಷಿ, ಸುಮತಿ, ದಿನೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಪೈವಳಿಕೆ ಸಿಪಿಎಂ ಲೋಕಲ್ ಸಮಿತಿ, ಶಿರಂತಡ್ಕ ಕಾಡೂರು ಕುರುಡಪದವು ಬ್ರಾಂಚ್ ಸಮಿತಿ, ಕಿಸಾನ್ ಸಭಾ, ಸಿಐಟಿಯು, ಮಹಿಳಾ ಅಸೋಸಿಯೇಶನ್, ಡಿವೈಎಫ್‌ಐ ಘಟಕಗಳು, ಲಕ್ಕಿ ಸ್ಟಾರ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಗೋಳಿಕಟ್ಟೆ ಸಂತಾಪ ಸೂಚಿಸಿದೆ. ಮೃತರ …

ರಾಜ್ಯಕ್ಕೆ ತಲುಪಿದ ಶೃಂಗೇರಿಶ್ರೀಗಳಿಗೆ ಸ್ವರ್ಗದಲ್ಲಿ ಗಾರ್ಡ್ ಆಫ್ ಆನರ್

ಪೆರ್ಲ: ಶೃಂಗೇರಿ ಮಠದ ಕಿರಿಯ ಮಠಾಧೀಶ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಏಳು ದಿನಗಳ ಕೇರಳ ಭೇಟಿಗಾಗಿ ನಿನ್ನೆ ಸಂಜೆ ಪುತ್ತೂರು ಪಾಣಾಜೆ ಮೂಲಕ ಗಡಿ ಭಾಗವಾದ ಸ್ವರ್ಗಕ್ಕೆ ಆಗಮಿಸಿದಾಗ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿ ಡಿಜಿಪಿ ರಾವಡ ಆಜಾದ್ ಚಂದ್ರಶೇಖರ್‌ರ ನೇತೃತ್ವದಲ್ಲಿ ರಾಜ್ಯ ಸರಕಾರದ ಪರವಾಗಿ ಗಾರ್ಡ್ ಆಫ್ ಆನರ್ ನೀಡಿ ಗೌರವಿಸಲಾಯಿತು. ಡಿಐಜಿ ಯತೀಶ್ಚಂದ್ರ ಐಪಿಎಸ್ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳು ಸ್ವರ್ಗಕ್ಕೆ ತಲುಪಿದ್ದರು. ಕಜಂಪಾಡಿ ಸುಬ್ರಹ್ಮಣ್ಯ ಭಟ್, ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನದ ಅರ್ಚಕ …