ವಸತಿಗೃಹದಲ್ಲಿ ಯುವತಿ, ಗೆಳೆಯನನ್ನು ನಗ್ನರನ್ನಾಗಿ ಮಾಡಿ ಫೊಟೋ ತೆಗೆದು ಬೆದರಿಕೆ: ಸೂತ್ರಧಾರ ಕುಂಜತ್ತೂರು ನಿವಾಸಿ ಸೆರೆ

ಹೊಸಂಗಡಿ: ಯುವತಿ ಹಾಗೂ  ಗೆಳೆಯನನ್ನು ವಸತಿಗೃಹದಲ್ಲಿ ನಗ್ನರನ್ನಾಗಿ ಮಾಡಿದ ಬಳಿಕ ಫೊಟೋ ತೆಗೆದು 2 ಲಕ್ಷ ರೂ. ಅಪಹರಿಸಲು ಯತ್ನಿಸಿದ ಪ್ರಕರಣದ ಸೂತ್ರಧಾರ ಸೆರೆಯಾಗಿದ್ದಾನೆ. ಕುಂಜತ್ತೂರಿನ ಪಿ.ಎಂ. ಅಬೂಬಕ್ಕರ್ (40)ನನ್ನು ಮಂಗಳೂರಿನಿಂದ ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಪ್ರಕರಣದ 5ನೇ ಆರೋಪಿಯಾಗಿದ್ದಾನೆ ಈತನೆಂದು ಪೊಲೀಸರು ತಿಳಿಸಿದ್ದಾರೆ. 2026 ಜನವರಿ 14ರಂದು ಮಧ್ಯಾಹ್ನ 12 ಗಂಟೆಗೆ ಹೊಸಂಗಡಿ ಪೇಟೆಯ ವಸತಿಗೃಹವೊಂದರಲ್ಲಿ ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ಯುವತಿ ಹಾಗೂ ಗೆಳೆಯ ವಸತಿಗೃಹದ 206ನೇ ನಂಬ್ರ ಕೊಠಡಿಯಲ್ಲಿದ್ದರು. ಈ ಸಮಯದಲ್ಲಿ …

ಅಡುಗೆ ಕೋಣೆಯೊಳಗೆ ಅವಿತುಕೊಂಡಿದ್ದ ಕಾಳಿಂಗ ಸರ್ಪ: ಬೆಚ್ಚಿ ಬಿದ್ದ ಮನೆಯವರು

ಬಂದಡ್ಕ: ಮನೆಯ ಅಡುಗೆ ಕೊಠಡಿ ಯೊಳಗೆ ನುಗ್ಗಿ ಒಲೆ ಬಳಿ  ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಮುದುಡಿಕೊಂಡ  ಸ್ಥಿತಿಯಲ್ಲಿ ಪ್ರತ್ಯಕ್ಷಗೊಂಡಿದ್ದು ಮನೆಯವರು ಅದನ್ನು ನೋಡಿ ಬೆಚ್ಚಿಬಿದ್ದ ಘಟನೆ ನಡೆದಿದೆ. ಬಂದಡ್ಕ ಸಮೀಪದ ಮಾಣಿಮೂಲೆ ಪಿ.ಕೆ. ಬಾಲಕೃಷ್ಣನ್ ಎಂಬವರ ಮನೆಯ ಅಡುಗೆ ಕೊಠಡಿಯ ಒಲೆ ಬಳಿ ಇರಿಸಲಾಗಿದ್ದ ಪಾತ್ರೆಗಳ ಎಡೆಯಲ್ಲಿ   ಕಾಳಿಂಗ ಸರ್ಪ ಅವಿತುಕೊಂಡಿತ್ತು.   ಅಡುಗೆ ಕೊಠಡಿಯ ಬಾಗಿಲು ತೆರೆದಿಟ್ಟ  ಸಂದರ್ಭದಲ್ಲಿ  ಕಾಳಿಂಗ ಸರ್ಪ   ಕೊಠಡಿಯೊಳಗೆ ಪ್ರವೇಶಿಸಿದ್ದಿರ ಬಹುದೆಂದು ಅಂದಾಜಿಸಲಾಗಿದೆ. ಮನೆಯವರು ಅಡುಗೆ ತಯಾರಿಸಲು ಒಲೆ ಬಳಿ ಬಂದಾಗ …

ಕಾಸರಗೋಡು ನಿವಾಸಿ ನೇತೃತ್ವದಲ್ಲಿ ಭಾರೀ ಅವಯವ ದಾನ ವಂಚನೆ: ಇಬ್ಬರ ಬಂಧನ

ಕಾಸರಗೋಡು: ಅವಯವ ದಾನಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚನೆ ನಡೆಸುವ ತಂಡದ ಇಬ್ಬರನ್ನು ಬಂಧಿಸಲಾಗಿದೆ. ವಂಚನೆ ತಂಡಕ್ಕೆ ನೇತೃತ್ವ ನೀಡುವ ಕಾಸರಗೋಡು ನಿವಾಸಿ ಹಾಗೂ  ಆತನ ಪತ್ನಿಗಾಗಿ ಹುಡುಕಾಟ ನಡೆಯುತ್ತಿದೆ. ಕೊಚ್ಚಿ ಕುನ್ನತ್ತುನಾಡು ನಿವಾ ಸಿಯೂ ಸನ್ ಕಮ್ಯುನಿಕೇಶನ್ಸ್ ಮಾಲಕ ಸಣ್ಣಿ ವರ್ಗೀಸ್, ಪತ್ನಿ ಸಿನಿ ವರ್ಗೀಸ್ ಎಂಬಿವರನ್ನು ಕುನ್ನತ್ತುನಾಡು ಪೊಲೀಸರು ಬಂಧಿಸಿದ್ದಾರೆ. ಇವರ ಸಂಸ್ಥೆಗೆ ಪೊಲೀಸರು ದಾಳಿ ನಡೆಸಿದ್ದಾರೆ.  ಸಂಸದರು,ಶಾಸಕರು ಮೊದ ಲಾದವರ ಹಲವು ನಕಲಿ ಶಿಫಾರಸ್ಸು ಪತ್ರಗಳನ್ನು ಅಲ್ಲಿಂದ ಪತ್ತೆಹಚ್ಚಲಾಗಿದೆ. ಕಾಸರಗೋಡು ಜಿಲ್ಲೆಯ ಮೇಲ್ಪರಂಬ …

ಅಪರಿಮಿತ ಶಬ್ದದೊಂದಿಗೆ ಸಂಚರಿಸಿದ ಕಾರು ವಶ: ಇಬ್ಬರ ವಿರುದ್ಧ ಕೇಸು

ಉಪ್ಪಳ: ಕಾರಿಗೆ ಹೆಚ್ಚುವರಿ ಸೈಲೆನ್ಸರ್ ಅಳವಡಿಸಿ ಅಪರಿಮಿತ ಶಬ್ದ ಸಹಿತ  ಬೆಂಕಿ, ಹೊಗೆ ಸೃಷ್ಟಿಸುತ್ತಾ  ಸಂಚರಿಸಿ ಬಳಿಕ ಆ ದೃಶ್ಯವನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಚಾರ ಮಾಡಿದ   ಇಬ್ಬರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂ ಡು ಕಾರನ್ನು ವಶಕ್ಕೆ ತೆಗೆದಿದ್ದಾರೆ. ಕಂಚಿಲ ಚಾರ್ಲ ನಿವಾಸಿ ಅಹಮ್ಮದ್ ಜಿಲಾಲ್ (19), ಬಂಬ್ರಾಣ ನಂಬೇಡಿ ಹೌಸ್‌ನ ಹಸೈನಾರ್ (22) ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈತಿಂಗಳ ೫ರಂದು  ಉಪ್ಪಳ ಪೆಟ್ರೋಲ್ ಬಂಕ್ ಹಾಗೂ ಪರಿಸರದ ರಸ್ತೆಯಲ್ಲಿ ಅಪರಿಮಿತ ಶಬ್ದದೊಂದಿಗೆ ನಂಬ್ರಪ್ಲೇಟ್ ಇಲ್ಲದ  …

16, 10 ವರ್ಷದ ಬಾಲಕಿಯರಿಗೆ ಕಿರುಕುಳ: ಮಲತಂದೆ ವಿರುದ್ಧ ಪೋಕ್ಸೋ ಕೇಸು, ಬಂಧನ

ಕುಂಬಳೆ: 16 ಹಾಗೂ 10 ವರ್ಷ ಪ್ರಾಯದ ಇಬ್ಬರು ಹೆಣ್ಮಕ್ಕಳಿಗೆ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಹೆಣ್ಮಕ್ಕಳ ಮಲತಂದೆಯಾದ ಕಣ್ಣೂರು ಪಾಪಿನಿಶ್ಶೇರಿ ನಿವಾಸಿ ಪ್ರಸ್ತುತ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕ್ವಾಟರ್ಸ್‌ವೊಂದರಲ್ಲಿ ವಾಸಿಸುವ ಮಧ್ಯವಯಸ್ಕನನ್ನು ಪೋಕ್ಸೋ ಪ್ರಕಾರ ಪೊಲೀಸರು ಬಂಧಿಸಿದ್ದಾರೆ. 2024 ಸೆಪ್ಟಂಬರ್ ತಿಂಗಳಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿ ಬಾಲಕಿಯರು ನೀಡಿದ ದೂರಿನಂತೆ ಮಲತಂದೆ ವಿರುದ್ಧ ಎರಡು ಪೋಕ್ಸೋ ಕೇಸುಗಳನ್ನು  ದಾಖಲಿಸಿಕೊಳ್ಳಲಾಗಿದೆ. ಈ ಬಾಲಕಿಯರು ಬೋರ್ಡಿಂಗ್ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಓಣಂ ರಜೆಯಲ್ಲಿ  ತಾಯಿಯ ಕ್ವಾರ್ಟರ್ಸ್‌ಗೆ …

ಕಗ್ಗಂಟಾಗಿ ಮುಂದುವರಿಯುತ್ತಿರುವ ಮುಖ್ಯಮಂತ್ರಿ ಆಯ್ಕೆ

ತಿರುವನಂತಪುರ: ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಷಯದ ಬಗ್ಗೆ ಕಾಂಗ್ರೆಸ್ ಶಾಸಕರ ಅಭಿಪ್ರಾಯಗಳನ್ನೊಳಗೊಂಡ ವರದಿಯನ್ನು ಕಾಂಗ್ರೆಸ್ ಕೇಂದ್ರ ಸಮಿತಿಯ ವೀಕ್ಷಕರಾದ ಅಜಯ್ ಮಾಖಾನ್ ಮತ್ತು ಮುಕುಲ್ ವಾಸ್ನಿಕ್ ಇಂದು ಕಾಂಗ್ರೆಸ್ ಹೈಕಮಾಂಡ್‌ಗೆ ಸಲ್ಲಿಸುವರು. ಈ ವರದಿಯನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಪರಿಶೀಲಿಸಿದ ಬಳಿಕ ಮುಖ್ಯಮಂತ್ರಿ  ಸ್ಥಾನ ಆಗ್ರಹಿಸುತ್ತಿರುವ ವಿ.ಡಿ. ಸತೀಶ್, ಕಾಂಗ್ರೆಸ್‌ನ ಹಿರಿಯ ನೇತಾರ ರಮೇಶ್ ಚೆನ್ನಿತ್ತಲ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕೆ.ಸಿ. ವೇಣು ಗೋಪಾಲ್‌ರನ್ನು ನೇರವಾಗಿ …

 ಸಾಕುನಾಯಿ ದಾಳಿ: ಪಾದಚಾರಿಗೆ ಗಂಭೀರ ಗಾಯ

ಕುಂಬಳೆ: ಸಾಕು ನಾಯಿಯ ದಾಳಿಯಿಂದ ಗಂಭೀರ ಗಾಯ ಗೊಂಡು ಪಾದಚಾರಿಯೋರ್ವ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕುಂಬಳೆ ಬದ್ರಿಯಾನಗರದ ಮುಜೀಬ್ ರಹ್ಮಾನ್ (52) ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.  ಮಾಳಿಯಂಗರ ಪೆರ್ವಾಡು ರಸ್ತೆಯಲ್ಲಿ  ಬುಧವಾರ ಬೆಳಿಗ್ಗೆ ೭ ಗಂಟೆ ವೇಳೆ  ಮುಜೀಬ್ ರಹ್ಮಾನ್ ನಡೆದು ಹೋಗುತ್ತಿದ್ದಾಗ ಸಮೀಪದ ಮನೆಯೊಂದರ ಗೇಟ್ ಮೂಲಕ ಹೊರಗೆ ಓಡಿ ಬಂದ ನಾಯಿ ಕಚ್ಚಿ ಗಾಯಗೊಳಿ ಸಿದೆ ಎಂದು ದೂರಲಾಗಿದೆ. ನಾಯಿಯ ದಾಳಿ ವೇಳೆ ಮುಜೀಬ್ ರಹ್ಮಾನ್ ಆಯತಪ್ಪಿ ಬಿದ್ದಿದ್ದು ಅವರ ಬೊಬ್ಬೆ ಕೇಳಿ ಸ್ಥಳೀಯರು …

ಅಂಗಡಿಮೊಗರು ಒಡುವಾರು ಅಮಾನತ್ತುಲ್ ಇಸ್ಲಾಂ ಮದ್ರಸ ವಾರ್ಷಿಕ ನಾಳೆಯಿಂದ

ಕುಂಬಳೆ: ಅಂಗಡಿಮೊಗರು ಒಡುವಾರು ಅಮಾನತ್ತುಲ್ ಇಸ್ಲಾಂ ಮದ್ರಸ ವಾರ್ಷಿಕ ಹಾಗೂ ಮತ ವಿಜ್ಞಾನ ಸದಸ್ ನಾಳೆಯಿಂದ 13ರವರೆಗೆ ಒಡುವಾರು ಬದರ್ ಜುಮಾ ಮಸೀದಿಯಲ್ಲಿ ನಡೆಯಲಿದೆ ಎಂದು ಸಂಬಂಧಪಟ್ಟವರು ಸುದ್ಧಿಗೋಷ್ಠಿ ಯಲ್ಲಿ ತಿಳಿಸಿದ್ದಾರೆ. ನಾಳೆ ರಾತ್ರಿ 7 ಗಂಟೆಗೆ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸು ವರು. ಡಾ. ಫರೂಕ್ ನಯಿಮಿ ಕೊಲ್ಲಂ ಹಿಜ್ರ ಎಕ್ಸ್‌ಪೆಡಿಶನ್ ನಿರ್ವಹಿಸುವರು. ಆದಿತ್ಯವಾರ, ಸೋಮವಾರ ರಾತ್ರಿ 8 ಗಂಟೆಗೆ ಸುಬೈರ್ ಮಾಸ್ಟರ್ ತೊಟ್ಟಿಕ್ಕಲ್ ಹಾಗೂ ತಂಡದವರಿಂದ ಇಸ್ಲಾಮಿಕ ಕಥಾ ಪ್ರವಚನ ನಡೆಯಲಿದೆ. ಮಂಗಳವಾರ …

ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದಲ್ಲಿ ಹಿತ್ತಾಳೆ ಕವಚದ 18 ಮೆಟ್ಟಿಲುಗಳ ಲೋಕಾರ್ಪಣೆ 11ರಂದು

ಬದಿಯಡ್ಕ: ಬಡಗು ಶಬರಿಮಲೆಯೆಂದೇ ಪ್ರಸಿದ್ಧವಾದ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ  ಶ್ರೀ ಶಾಸ್ತಾರ ದೇವಸ್ಥಾನದಲ್ಲಿ ನಿರ್ಮಿಸಿದ  ಹಿತ್ತಾಳೆ ಕವಚದ 18 ಮೆಟ್ಟಿಲುಗಳ ಲೋಕಾರ್ಪಣೆ ಹಾಗೂ ಶ್ರೀ ದೇವರ  ಭವ್ಯ ಮಹೋತ್ಸವ ಮೇ 11ರಂದು ನಡೆಯಲಿದೆ. ಅಂದು ಸಂಜೆ 5 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. 6.30ಕ್ಕೆ 101 ಚೆಂಡೆ ವಾದ್ಯಗಳೊಂದಿಗೆ ಹಿತ್ತಾಳೆ ಕವಚದ 18 ಮೆಟ್ಟಿಲುಗಳ ದ್ವಾರಪೂಜೆ ಹಾಗೂ ಲೋಕಾರ್ಪಣೆ ನಡೆಯಲಿರು ವುದು. ಶ್ರೀ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶರಾದ ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ …

ಮೀಯಪದವುನಲ್ಲಿ ಗುಡ್ಡೆ ಜರಿದು ಬೀಳುವ ಆತಂಕ: ಮಲೆನಾಡು ಹೆದ್ದಾರಿಯಲ್ಲಿ ಸಂಚಾರ ಭೀತಿ

ಮಂಜೇಶ್ವರ: ನಂದರಪದವು ಮಲೆನಾಡ ಹೆದ್ದಾರಿಯ ಮೀಯಪದವು ಪರಿಸರ ಪ್ರದೇಶದಲ್ಲಿ ಗುಡ್ಡೆ ಜರಿದು ಬೀಳುವ ಸ್ಥಿತಿಯಲ್ಲಿದ್ದು, ತಡೆಗೋಡೆ ನಿರ್ಮಿಸಿ ಭದ್ರತೆ ಒದಗಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಳೆದ ಮಳೆಗಾಲದಲ್ಲಿ ಮೀಯಪದವು ಸಮೀಪದ ತಿರುವಿನಲ್ಲಿ ಗುಡ್ಡೆ ಜರಿದು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ನಡೆದಿತ್ತÄ.ಮಳೆಗಾಲ ಸಮೀಪಿಸುತ್ತಿದ್ದು, ಮತ್ತೆ ಗುಡ್ಡೆ ಜರಿದು ಬೀಳುವ ಆತಂಕ ಜನರನ್ನು ಕಾಡುತ್ತಿದೆ. ಸಂಬAಧಪಟ್ಟ ಇಲಾಖೆ ಅಧಿಕಾರಿಗಳು ಗುಡ್ಡೆ ಜರಿದು ಬೀಳುವ ಪ್ರದೇಶವನ್ನು ಪರಿಶೀಲಿಸಿ ಭದ್ರತೆ ಒದಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.