ಲಾರಿ-ಬೈಕ್ ಢಿಕ್ಕಿ ಹೊಡೆದು ಬಿಬಿಎ ವಿದ್ಯಾರ್ಥಿ ಮೃತ್ಯು

ಕಾಸರಗೋಡು: ಲಾರಿ ಢಿಕ್ಕಿ ಹೊಡೆದು ಬೈಕ್ ಸವಾರನಾದ ವಿದ್ಯಾರ್ಥಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಉದುಮ ಕೋಟೆಕುನ್ನಿನ ನಸೀರ್- ರಸೀನಾ ದಂಪತಿ ಪುತ್ರ ಲುಕ್ಮಾನ್ (22) ಸಾವನ್ನಪ್ಪಿದ ದುರ್ದೈವಿ. ಮಂಗಳೂರಿನ ಶ್ರೀದೇವಿ ಕಾಲೇಜಿನ ಪ್ರಥಮ ವರ್ಷ ಬಿಬಿಎ ವಿದ್ಯಾರ್ಥಿಯಾಗಿರುವ ಲುಕ್ಮಾನ್ ಜಿಮ್‌ಗೆ ಹೋಗಿ ಬೈಕ್‌ನಲ್ಲಿ ನಿನ್ನೆ ರಾತ್ರಿ ಮನೆಗೆ ಹಿಂತಿರುಗುತ್ತಿದ್ದ ದಾರಿ ಮಧ್ಯೆ ಪಾಲಕುನ್ನು ಪೇಟೆಗೆ ತಲುಪಿ ದಾಗ ಕಾಸರಗೋಡು ಭಾಗದಿಂದ ಸರಕು ಹೇರಿಕೊಂಡು ಬರುತ್ತಿದ್ದ ಲಾರಿ ಬೈಕ್‌ಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಗಂಭೀರ …

ಯುವಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಪಟಾಕಿ ಸ್ಫೋಟ: ಗಂಭೀರ ಗಾಯಗೊಂಡ ಯುವಕ ಚಿಕಿತ್ಸೆಯಲ್ಲಿ; ಸ್ನೇಹಿತನ ವಿರುದ್ಧ ಕೇಸು 

ಬದಿಯಡ್ಕ: ಯುವಕನನ್ನು ಕೊಠಡಿಯೊಳಗೆ ಕೂಡಿ ಹಾಕಿದ ಬಳಿಕ ಮಾಲೆ ಪಟಾಕಿ ಸ್ಫೋಟಿಸಿದ್ದು, ಇದರಿಂದ ಯುವಕ ಗಂಭೀರ ಗಾಯಗೊಂಡಿರುವುದಾಗಿ ದೂರಲಾಗಿದೆ. ಮಲ್ಲ ಚೋಕೆಮೂಲೆ ನಿವಾಸಿಯಾದ ಎಂ.ಅಭಿಲಾಷ್ (32) ಗಂಭೀರ ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಘಟನೆಗೆ ಸಂಬಂಧಿಸಿ ಅಭಿಲಾಷ್ ನೀಡಿದ ದೂರಿನಂತೆ ಸ್ನೇಹಿತನಾದ ಮುಳ್ಳೇರಿಯದ ಪ್ರಣವ್ ಎಂಬಾತನ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಎಪ್ರಿಲ್ 15ರಂದು ರಾತ್ರಿ 10 ಗಂಟೆಯಿಂದ 16ರಂದು ಬೆಳಿಗ್ಗೆ 8 ಗಂಟೆ ಮಧ್ಯೆ ಅಭಿಲಾಷ್‌ರನ್ನು ಮನೆಯೊಂದರ ಕೊಠಡಿಯೊಳಗೆ ಕೂಡಿ ಹಾಕಿದ …

ಕೃಷಿ ತೋಟದಲ್ಲಿ ಕಣಜದ ಹುಳು ದಾಳಿ: ಅಧ್ಯಾಪಕ ಮೃತ್ಯು; ನಾಲ್ವರು ಕಾರ್ಮಿಕರಿಗೆ ಗಾಯ

ಕಾಸರಗೋಡು: ಕೃಷಿ ತೋಟದ ಪೊದೆಗಳನ್ನು ಕಡಿಯುತ್ತಿದ್ದ ವೇಳೆ ಕಣಜದ ಹುಳುಗಳ   ದಾಳಿಗೊಳಗಾಗಿ ಅಧ್ಯಾಪಕ ಸಾವನ್ನಪ್ಪಿ ಹಲವರು ಗಾಯಗೊಂಡ ಘಟನೆ ನಡೆದಿದೆ. ಪನತ್ತಡಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕ ರಾಜಪುರಕ್ಕೆ ಸಮೀಪದ ಬಳಾಂತೋಡು ಚಾಮುಂಡಿಕುನ್ನು ನಿವಾಸಿ ಸಿ. ವಿಜಯ್ ಕುಮಾರ್ (56) ಸಾವನ್ನಪ್ಪಿದ ದುರ್ದೈವಿ. ಆ ವೇಳೆ ಇವರ ಜತೆಗಿದ್ದ ಕಾರ್ಮಿಕರಾದ ತುಂಬೋಡಿ ನಿವಾಸಿಗಳಾದ ನಂದಕುಮಾರ್ (41), ರಾಘವನ್ (70), ಕೇಶವನ್ (53) ಮತ್ತು  ಚಂದ್ರನ್ (50) ಎಂಬವರ ಮೇಲೂ ಕಣಜದ ಹುಳ ದಾಳಿ ನಡೆಸಿದ ಪರಿಣಾಮ …

ಎಸ್‌ಎಸ್‌ಎಲ್‌ಸಿ ಫಲಿತಾಂಶ ನಾಳೆ

 ತಿರುವನಂತಪುರ:  ಎಸ್‌ಎಸ್ ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ನಾಳೆ ಅಪರಾಹ್ನ 3 ಗಂಟೆಗೆ ಪ್ರಕಟಿಸಲಾಗುವುದು. ಏಕೀಕೃತ ಸೇವಾ ಪ್ಲಾಟ್‌ಫಾಂ ಆಗಿರುವ ‘ನಮ್ಮಡೆ ಕೇರಳಂ’ ಎಂಬ ಆಪ್‌ನಲ್ಲ್ಲೂ ಫಲಿತಾಂಶ ಲಭಿಸಲಿದೆ. ಇದರ ಹೊರತಾಗಿ www.results. kite.kerala.gov.in ಎಂಬ ಕ್ಲೌಡ್ ಆಧಾರಿತ ಪೋರ್ಟಲ್ ಮತ್ತು Saphalam KITE ಎಂಬ ಮೊಬೈಲ್ ಆಪ್‌ನಲ್ಲಿ ಫಲಿತಾಂಶ ಲಭಿಸಲಿದೆ. ಸಾಧಾರಣವಾಗಿ ಶಿಕ್ಷಣ ಸಚಿವರೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸುತ್ತಿದ್ದು ಆದರೆ ಈ ಬಾರಿ ಹೊಸ ಸರಕಾರ ಇನ್ನೂ ಅಸ್ತಿತ್ವಕ್ಕೆ ಬಾರದಿರುವುದರಿಂದ ಪರೀಕ್ಷಾ ಫಲಿತಾಂಶ ಪ್ರಕಟಗೊ ಳ್ಳುವಲ್ಲಿ …

ನೀಟ್ ಪರೀಕ್ಷೆ ಅವ್ಯವಹಾರ ಪ್ರತಿಭಟಿಸಿ ಎಂಎಸ್‌ಎಫ್ ಮಾರ್ಚ್: 15 ಮಂದಿ ವಿರುದ್ಧ ಕೇಸು, ಮೂವರ ಸೆರೆ

ಕುಂಬಳೆ:  ನೀಟ್ ಯುಜಿ ಪರೀಕ್ಷೆಯಲ್ಲಿ ನಡೆದ ಅವ್ಯವಹಾ ರವನ್ನು ಪ್ರತಿಭಟಿಸಿ ಎಂಎಸ್‌ಎಫ್ ನೇತೃತ್ವದಲ್ಲಿ ನಿನ್ನೆ ಕುಂಬಳೆಯಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ೧೫ ಮಂದಿ ಎಂಎಸ್‌ಎಫ್ ಕಾರ್ಯ ಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಬಂದ್ಯೋಡು ಖಾಲಿದ್ ಮಂಜಿಲ್‌ನ ಮುಹಮ್ಮದ್  ಸುರ್ಫಾರಾಝ್ (31), ಅಂಗಡಿಮೊಗರು  ಪಳ್ಳಿಕ್ಕೆರೆ ಹೌಸ್‌ನ ಸವಾದ್ ಎಂ.ಪಿ (33) ಮತ್ತು ವರ್ಕಾಡಿ ಧರ್ಮನಗರ ಹೌಸ್‌ನ ಮುಹಮ್ಮದ್ ಅನ್ಸಾರ್ ಡಿ (25) ಎಂಬವರನ್ನು ಪೊಲೀಸರು ಬಂಧಿಸಿ ದ್ದಾರೆ. ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ …

ಮದುವೆಗೆ ಕೆಲವೇ ನಿಮಿಷಗಳ ಮೊದಲು ನಾಪತ್ತೆಯಾದ ಮದುಮಗ ಅತ್ಯಾಚಾರ ಪ್ರಕರಣದಲ್ಲಿ ಸೆರೆ

ಕಾಸರಗೋಡು:  ಮದುವೆ ಮುಹೂರ್ತಕ್ಕೆ  ಕೇವಲ ನಿಮಿಷಗಳ ಮೊದಲು ನಾಪತ್ತೆಯಾದ ವರ  ಅತ್ಯಾಚಾರ ಪ್ರಕರಣದಲ್ಲಿ ಸೆರೆಗೀಡಾಗಿದ್ದಾನೆ. ಬಳಾಲ್ ಸಮೀಪದ ವಿಷ್ಣುನಾರಾಯಣನ್ (24) ಎಂಬಾತನನ್ನು ವೆಳ್ಳರಿಕುಂಡು ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ವಿಷ್ಣುನಾರಾಯಣನ್ ಹಾಗೂ  ವಧುವಾದ ೨೫ರ ಹರೆಯದ ಯುವತಿ ಈ ಹಿಂದೆ ಪ್ರೇಮದಲ್ಲಿದ್ದರು. ಅನಂತರ ಎರಡೂ ಮನೆಯವರು ಮಾತನಾಡಿ ಕೈಗೊಂಡ ನಿರ್ಧಾರದಂತೆ ಇವರ ಮದುವೆಯನ್ನು ಮೇ 10ರಂದು ಬಳಾಲ್ ಸಮೀಪದ ಕ್ಷೇತ್ರವೊಂದರಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಮದುವೆಗೆ ಸಿದ್ಧತೆಗಳೆಲ್ಲಾ ಪೂರ್ಣಗೊಂಡು ವಧು ಹಾಗೂ ಸಂಬಂಧಿಕರು …

ಉದ್ಯೋಗ ಭರವಸೆ ನೀಡಿ ಯುವತಿ, ಯುವಕರು ಸೇರಿ 15ರಷ್ಟು ಮಹಿಳೆಯರಿಗೆ ವಂಚನೆ: ಕಾಸರಗೋಡಿನಲ್ಲೂ ಉದ್ಯೋಗ ವಂಚನೆ ಮಾಫಿಯ ತಂಡ ಸಕ್ರಿಯ

ಹೊಸದುರ್ಗ: ಕಣ್ಣೂರಿನ ಮಿಲಿಟರಿ ಕ್ಯಾಂಟೀನ್‌ನಲ್ಲಿ ಉದ್ಯೋಗ ಭರವಸೆ ನೀಡಿ 1 ಡಜನ್‌ಗಿಂತಲೂ ಹೆಚ್ಚು ಮಹಿಳೆಯರಿಂದ ಸರಾಸರಿ 25,000  ರೂ.ನಂತೆ ಅಪಹರಿಸಿರುವುದಾಗಿ ದೂರಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಓರ್ವ ಉನ್ನತ ಪೊಲೀಸ್ ಅಧಿಕಾರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತನಿಖೆಗಾಗಿ ನೇಮಕಗೊಳಿಸಿದ್ದಾರೆ. ಕಾಞಂಗಾಡ್‌ನ ಖಾಸಗಿ ಸಂಸ್ಥೆಯೊಂದರ ನೌಕರೆ ಅದೇ ಸಂಸ್ಥೆಯ ಇತರ ನೌಕರರಾದ ೧೫ರಷ್ಟು ಮಹಿಳೆಯರನ್ನು  ಪ್ರೋತ್ಸಾಹಿಸಿ ಸಿನೋಜ್  ಎಂಬಾತನೊಂದಿಗೆ ಸೇರಿ ವಂಚನೆಗೆ ದಾರಿ ಮಾಡಿರುವುದಾಗಿ ತೃಕರಿಪುರ ಎಡಚ್ಚಾಕೈ ಮಾಚಿಕ್ಕಾಡ್ ಪರಿಸರ ನಿವಾಸಿಗಳಾದ ದೂರುದಾರರು ತಿಳಿಸಿದ್ದಾರೆ. ತೃಕರಿಪುರ ಸಮೀಪ ಪ್ರದೇಶದಲ್ಲಿರುವವರಾಗಿದ್ದಾರೆ ಈ …

ಮರದಡಿಯಲ್ಲಿ ನಿದ್ರಿಸುತ್ತಿದ್ದ ಯುವಕ ಕಾಡಾನೆ ಆಕ್ರಮಣದಿಂದ ಮೃತ್ಯು

ಪಾಲಕ್ಕಾಡ್: ಮರದಡಿಯಲ್ಲಿ ನಿದ್ರಿಸುತ್ತಿದ್ದ ಯುವಕ ಕಾಡಾನೆಯ ಆಕ್ರಮಣದಿಂದ ಮೃತಪಟ್ಟರು. ಪಾಲಕ್ಕಾಡ್ ಮಲಂಬುಳ ಅಗಮಲವಾರಂ ಬುಡಕಟ್ಟು ಉನ್ನತಿಯಲ್ಲಿ ನಿನ್ನೆ ಮುಂಜಾನೆ ಘಟನೆ ನಡೆದಿದ್ದು, ಇಲ್ಲಿನ ಚಂದ್ರನ್ (45) ಮೃತಪಟ್ಟಿದ್ದಾರೆ. ಇವರ ಜೊತೆಯಲ್ಲಿ ಮಲಗಿದ್ದ ಇನ್ನಿಬ್ಬರು ಓಡಿ ಹೋದ ಕಾರಣ ಪಾರಾದರು. ಅಸಹನೀಯ ಬಿಸಿಯ ಹಿನ್ನೆಲೆಯಲ್ಲಿ ಮನೆಯ ಹೊರಗೆ ಹುಳಿಮರದಡಿಯಲ್ಲಿ ಇವರು ಮಲಗಿ ನಿದ್ರಿಸಿದ್ದರು. ಈ ಮಧ್ಯೆ ಕಾಡಾನೆ ಆಕ್ರಮಿಸಿದೆ. ಕಾಡಾನೆ ಬರುತ್ತಿರುವುದನ್ನು ಗಮನಿಸಿದ ಇನ್ನಿಬ್ಬರು ಓಡಿ ಪಾರಾದರಾದರೂ ಚಂದ್ರನ್‌ರಿಗೆ ಆ ಸಮಯದಲ್ಲಿ ಅಲ್ಲಿಂದ ಪಾರಾಗಲು ಸಾಧ್ಯವಾಗಲಿಲ್ಲ. ಹತ್ತಿರ ತಲುಪಿದ …

ಪನೆಯಾಲ್ ಸಾರ್ವಜನಿಕ ಸ್ಥಳದಿಂದ 100ರಷ್ಟು ಮರಗಳನ್ನು  ಜೆಸಿಬಿ ಉಪಯೋಗಿಸಿ ಕಡಿದುರುಳಿಸಿದ ಸ್ಥಿತಿಯಲ್ಲಿ

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪನೆ ಯಾಲ್‌ನಲ್ಲಿ ಲೋಕೋಪಯೋಗಿ ರಸ್ತೆ ಬದಿಯ 100ರಷ್ಟು ಮರಗಳನ್ನು ಜೆಸಿಬಿ ಉಪಯೋಗಿಸಿ ತೆರವುಗೊಳಿ ಸಲಾಗಿದೆ. ಪೆರಿಯಾಟಡ್ಕ- ಬೇಕಲ ರಸ್ತೆಯ ಪನೆಯಾಲ್ ಪಳ್ಳಾರದಲ್ಲಿ ಘಟನೆ ನಡೆದಿದೆ. ಬುಧವಾರ ಬೆಳಿಗ್ಗೆ ಮರಗಳನ್ನು ನಾಶಗೊಳಿಸಿದ ಬಗ್ಗೆ ಸ್ಥಳೀಯರ ಗಮನಕ್ಕೆ ಬಂದಿದೆ. ಸಾಮಾಜಿಕ ಅರಣ್ಯೀಕರಣದಂಗ ವಾಗಿ ಹಾಗೂ ಪ್ರಕೃತಿಪ್ರೇಮಿಗಳು ನೆಟ್ಟು ಬೆಳೆಸಿದ ಮರಗಳನ್ನು ಒಂದೇ ರಾತ್ರಿಯಲ್ಲಿ ಸಂಪೂರ್ಣವಾಗಿ ಕಡಿದುರುಳಿಸಲಾಗಿದೆ. ಮಹಾಗನಿ, ಊರ ಮಾವಿನಮರಗಳು ಸಹಿತ ವಿವಿಧ ರೀತಿಯ ಮರಗಳನ್ನು ಕಡಿದು ಹಾಕಲಾಗಿದೆ. ರಸ್ತೆಗೆ ಸಮಾನಾಂತರವಾಗಿ 50ಮೀಟರ್ …

‘ಮಿನ್ನಲ್ ಮ್ಯಾಜಿಕ್’ ಬ್ರಾಂಡ್‌ನ ಮದ್ಯ ಈ ತಿಂಗಳ ಕೊನೆಗೆ: ಅರ್ಧ ಲೀಟರ್‌ಗೆ 400 ರೂ.

ತಿರುವನಂತಪುರ: ರಾಜ್ಯ ಸರಕಾರದ ಹೊಸ ಮದ್ಯ ಬ್ರಾಂಡ್ ಮಿನ್ನಲ್ ಮ್ಯಾಜಿಕ್  ಈ ತಿಂಗಳ ಕೊನೆಗೆ ಮಾರುಕಟ್ಟೆಗೆ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗ  ಜವಾನ್ ರಂ ಮಾರುಕಟ್ಟೆಯಲ್ಲಿದೆ. ಅದರ ಹೊರತಾಗಿ ಹೊಸ ಬ್ರಾಂಡ್ ಮಾರುಕಟ್ಟೆಗೆ ತಲುಪಲಿದೆ. ರಾಜ್ಯ ಸರಕಾರದ ಮಾಲಕತ್ವದಲ್ಲಿರುವ ಪಾಲಕ್ಕಾಡ್ ಜಿಲ್ಲೆಯ ಮಲಬಾರ್ ಡಿಸ್ಟಿಲರೀಸ್ ಈ ಮದ ಉತ್ಪಾದಿಸಲಿದೆ.  ಪಿಣರಾಯಿ ವಿಜಯನ್‌ರ ನೇತೃತ್ವದಲ್ಲಿರುವ ಸರಕಾರ ಹೊಸ ಬ್ರಾಂಡ್ ಮದ್ಯ ಮಾರುಕಟ್ಟೆಗೆ ಇಳಿಸಲು ತೀರ್ಮಾನಿಸಿತ್ತು. ಬಿವರೇಜಸ್ ಕಾರ್ಪರೇಶನ್ ಔಟ್‌ಲೆಟ್‌ಗಳ ಮೂಲಕ ಅರ್ಧ ಲೀಟರ್‌ನ ಬಾಟ್ಲಿಯನ್ನು ವಿತರಣೆಗಾಗಿ ತಲುಪಿಸಲಾಗುವುದು. …