ಪೆರುಂಬಳದಲ್ಲಿ ಕಾರು-ರಿಕ್ಷಾ ಢಿಕ್ಕಿ: 6 ಮಂದಿಗೆ ಗಾಯ

ಕಾಸರಗೋಡು: ಪೆರುಂಬಳದಲ್ಲಿ ನಿನ್ನೆ ಮಧ್ಯಾಹ್ನ ಕಾರು ಮತ್ತು ರಿಕ್ಷಾ ಢಿಕ್ಕಿ ಹೊಡೆದು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಐದು ಮಂದಿ ಸೇರಿದಂತೆ ಒಟ್ಟು ಆರು ಮಂದಿ ಗಾಯಗೊಂಡ ಘಟನೆ ನಡೆದಿದೆ. ಆಲಂಪಾಡಿ ನಿವಾಸಿಗಳಾದ ಪ್ರಜಿನ (36), ಹಾಜಿರ 55), ಶಮೀರ (35), 2 ವರ್ಷದ ಮಗು ಹಾಗೂ ರಿಕ್ಷಾ ಚಾಲಕ ಆಲಂಪಾಡಿಯ ಅಬ್ದುಲ್ ಖಾದರ್ (55) ಎಂಬವರು ಈ ಅಪಘಾತದಲ್ಲಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಶಾಲೆ ಸಮೀಪ ಅಪಾಯಭೀತಿಯೊಡ್ಡುವ ಮರ

ಪೆರ್ಲ: ಶಾಲೆಯ ಪರಿಸರದಲ್ಲಿ ಬೃಹತ್ ಮರವೊಂದು ಯಾವುದೇ ಕ್ಷಣದಲ್ಲಿ ಕುಸಿಯುವ ಸ್ಥಿತಿಯಲ್ಲಿದ್ದು, ಇದರಿಂದ ವಿದ್ಯಾರ್ಥಿಗಳ ಸಹಿತ ಸ್ಥಳೀಯರಿಗೆ ಆತಂಕ ಸೃಷ್ಟಿಸಿದೆ.ಉಕ್ಕಿನಡ್ಕ ಎಲ್‌ಪಿ ಶಾಲೆಯ ಗೇಟ್ ಸಮೀಪ ಅಪಾಯಭೀತಿ ಸೃಷ್ಟಿಸುವ ಅಕೇಶಿಯ ಮರಗಳಿವೆ.  ಮಾತ್ರವಲ್ಲದೆ ಈ ಪರಿಸರದಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿದೆ. ಮರಗಳು ಮುರಿದು ಬಿದ್ದರೆ ಅಪಾಯ ಖಚಿತವೆಂದು ಸ್ಥಳೀಯರು ಹೇಳುತ್ತಿದ್ದಾರೆ.ಶಾಲಾ ವಿದ್ಯಾರ್ಥಿಗಳ ಸಹಿತ ಹಲವರು ಈ ಮರಗಳ ಸಮೀಪದ ರಸ್ತೆಯಲ್ಲಿ ನಡೆದು ಹೋಗತ್ತಿದ್ದಾರೆ.   ಧಾರಾಕಾರ ಮಳೆ ಸುರಿಯುವ ವೇಳೆ ಒಣಗಿದ ಮರ ಮುರಿದು ಬಿದ್ದರೆ ಅಪಾಯ …

ಕುಂಬಳೆ ಆಟೋರಿಕ್ಷಾ ಕಾರ್ಮಿಕರಿಗೆ ಪಂಚಾಯತ್  ಕಿರುಕುಳ ಕೊನೆಗೊಳಿಸಬೇಕು- ಬಿಎಂಎಸ್

ಕುಂಬಳೆ: ಆಟೋರಿಕ್ಷಾ ಮಜ್ದೂರ್ ಸಂಘ ಕುಂಬಳೆ ಯೂನಿಟ್ ಸಭೆ ಕುಂಬಳೆ ಜಯ ಮಾರುತಿ ವ್ಯಾಯಾಮ ಶಾಲೆಯಲ್ಲಿ ಸಮಿತಿ ಉಪಾಧ್ಯಕ್ಷ ಸುನಿಲ್‌ರ ಅಧ್ಯಕ್ಷತೆಯಲ್ಲಿ ನಡೆಯಿತು. ಕುಂಬಳೆ ನಗರದಲ್ಲಿ ಪದೇ ಪದೇ ಬಸ್ ನಿಲ್ದಾಣವನ್ನು ಬದಲಾವಣೆ ಮಾಡಿ ಜನರಿಗೆ ಹಾಗೂ ಆಟೋ ಕಾರ್ಮಿಕರಿಗೆ ತೊಂದರೆ ಕೊಡುವುದನ್ನು ಕೊನೆಗೂಳಿಸಬೇಕು ಹಾಗೂ ಕುಂಬಳೆ ನಗರದಲ್ಲಿ ಆಟೋಗಳ ಸಂಖ್ಯೆ ಹೆಚ್ಚಾಗುವುದÀಕ್ಕೆ ಕಡಿವಾಣ ಹಾಕಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು. ಕಳೆದ ಕೆಲವು ವರ್ಷಗಳಿಂದ ಕುಂಬಳೆ ನಗರದಲ್ಲಿ ಶಾಶ್ವತವಾದ ಸುಸಜಿgತ ಬಸ್ ನಿಲ್ದಾಣ ಇಲ್ಲದೆ ಪ್ರಯಾಣೆಕರು ಕಷ್ಟಪಡುತ್ತಿರುವಾಗ …