ಮಳೆಗಾಲ ಆಗಮಿಸುವುದರೊಂದಿಗೆ ಕಳ್ಳರ ಭಯವೂ ಸೃಷ್ಟಿ: ಮಜೀರ್ಪಳ್ಳದಲ್ಲಿ ಜ್ಯುವೆಲ್ಲರಿ ಕಳವು ಯತ್ನ; ಆರೋಪಿಗಳಿಗಾಗಿ ವ್ಯಾಪಕ ಶೋಧ
ಕುಂಬಳೆ: ವರ್ಕಾಡಿ ಬಳಿ ಮಜೀರ್ಪಳ್ಳದ ಜ್ಯುವೆಲ್ಲರಿ ಕಳವಿಗೆ ಯತ್ನಿಸಿದ ಪ್ರಕರಣದಲ್ಲಿ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಅಶ್ರಫ್ ಹಾಗೂ ಶಹೀರ್ ಎಂಬವರು ಪಾಲುದಾರರಾಗಿರುವ ‘ಚೋಯ್ಸ್ ಗೋಲ್ಡ್’ ಎಂಬ ಜ್ಯುವೆಲ್ಲರಿಯಿಂದ ಕಳವು ಯತ್ನ ನಡೆದಿದೆ. ಎಂದಿನಂತೆ ಮೊನ್ನೆ ರಾತ್ರಿ 8 ಗಂಟೆಗೆ ಜ್ಯುವೆಲ್ಲರಿ ಮುಚ್ಚಿ ಇವರು ಮರಳಿದ್ದರು. ಇಲ್ಲಿ ಕಳವು ಯತ್ನ ನಡೆದಿರುವುದು ನಿನ್ನೆ ಬೆಳಿಗ್ಗೆ ಅರಿವಿಗೆ ಬಂದಿದೆ. ಮೊನ್ನೆ ರಾತ್ರಿ ಕಳ್ಳರು ಈ ಕೃತ್ಯ ನಡೆಸಿರಬಹುದೆಂದು ಅಂದಾಜಿಸಲಾಗಿದೆ. ಜ್ಯುವೆಲ್ಲರಿಯ ಮುಂಭಾಗದ ಶೆಟರ್‌ನ್ನು ಜಾಕಿ ಹಾಗೂ …