ಶಾಲೆ ಸಮೀಪ ಅಪಾಯಭೀತಿಯೊಡ್ಡುವ ಮರ

ಪೆರ್ಲ: ಶಾಲೆಯ ಪರಿಸರದಲ್ಲಿ ಬೃಹತ್ ಮರವೊಂದು ಯಾವುದೇ ಕ್ಷಣದಲ್ಲಿ ಕುಸಿಯುವ ಸ್ಥಿತಿಯಲ್ಲಿದ್ದು, ಇದರಿಂದ ವಿದ್ಯಾರ್ಥಿಗಳ ಸಹಿತ ಸ್ಥಳೀಯರಿಗೆ ಆತಂಕ ಸೃಷ್ಟಿಸಿದೆ.ಉಕ್ಕಿನಡ್ಕ ಎಲ್‌ಪಿ ಶಾಲೆಯ ಗೇಟ್ ಸಮೀಪ ಅಪಾಯಭೀತಿ ಸೃಷ್ಟಿಸುವ ಅಕೇಶಿಯ ಮರಗಳಿವೆ.  ಮಾತ್ರವಲ್ಲದೆ ಈ ಪರಿಸರದಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿದೆ. ಮರಗಳು ಮುರಿದು ಬಿದ್ದರೆ ಅಪಾಯ ಖಚಿತವೆಂದು ಸ್ಥಳೀಯರು ಹೇಳುತ್ತಿದ್ದಾರೆ.ಶಾಲಾ ವಿದ್ಯಾರ್ಥಿಗಳ ಸಹಿತ ಹಲವರು ಈ ಮರಗಳ ಸಮೀಪದ ರಸ್ತೆಯಲ್ಲಿ ನಡೆದು ಹೋಗತ್ತಿದ್ದಾರೆ.   ಧಾರಾಕಾರ ಮಳೆ ಸುರಿಯುವ ವೇಳೆ ಒಣಗಿದ ಮರ ಮುರಿದು ಬಿದ್ದರೆ ಅಪಾಯ ಖಚಿತ. ಆದ್ದರಿಂದ ಅಪಾ ಯಭೀತಿ ಹುಟ್ಟಿಸುವ ಮರಗಳನ್ನು ಕಡಿದು ತೆರವುಗೊಳಿಸಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

RELATED NEWS

You cannot copy contents of this page