ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಕಿರುಕುಳ ನೀಡಿದ ಆರೋಪಿ ಬಂಧನ

ಉಪ್ಪಳ: ಬಸ್‌ನಲ್ಲಿ ಪ್ರಯಾಣಿಸು ತ್ತಿದ್ದ ಯುವತಿಯ ದೇಹ ಸ್ಪರ್ಶಿಸಿ ಕಿರುಕುಳ ನೀಡಿದ ಯುವಕನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ಅಂಜರಕಂಡಿ ವೆಣ್ ಮಣಲ್ ಹಾಜರ ಮಂಜಿಲ್‌ನ ಇಬ್ರಾಹಿಂ ಕಂಡೋತ್ (43) ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ. ಆರೋಪಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಮೊನ್ನೆ ಸಂಜೆ ಕಾಸರಗೋಡಿನಿಂದ ತಲಪಾಡಿಗೆ ತೆರಳುತ್ತಿದ್ದ ಬಸ್‌ನಲ್ಲಿ 19ರ ಹರೆಯದ ಯುವತಿಗೆ ಕಿರುಕುಳ ನೀಡಿದ ಆರೋಪದಂತೆ ಇಬ್ರಾಹಿಂ ಕಂಡೋ ತ್‌ನನ್ನು ಪೊಲೀಸರು ಬಂಧಿಸಿ ಕೇಸು ದಾಖಲಿಸಿದ್ದಾರೆ. ಬಸ್ ಕಾಸರಗೋ ಡಿನಿಂದ ಪ್ರಯಾಣ …

ಕುಸಿದು ಬಿದ್ದ ಮನೆ: ಅಸಹಾಯಕ ಸ್ಥಿತಿಯಲ್ಲಿದ್ದ ಕುಟುಂಬಕ್ಕೆ ಶೌರ್ಯ ಘಟಕದಿಂದ ನೆರವು

ಮವ್ವಾರು: ಮನೆಯೊಂದು ಕುಸಿದು ಬಿದ್ದು ಕುಟುಂಬ ಅತಂತ್ರ ಸ್ಥಿತಿಗೆ ತಲು ಪಿದಾಗ ಮವ್ವಾರು ಶೌರ್ಯ ಘಟಕ ಕಾರ್ಯಕರ್ತರ ಸಹಾಯ ದಿಂದ ದುರಸ್ತಿ ನಡೆಸಲಾಗಿದೆ. ನಿನ್ನೆ ಬೆಳಿಗ್ಗೆ ಕುಂಬ್ಡಾಜೆ ಪಂಚಾಯತ್‌ನ ೯ನೇ ವಾರ್ಡ್ ಮವ್ವಾರು ಎಸ್‌ಸಿ ನಗರ ನಿವಾಸಿ ಬಾಬು (50) ಎಂಬವರ ಮನೆ ಕುಸಿದು ಬಿದ್ದಿದೆ. ಮನೆ ಜೀರ್ಣಗೊಂಡ ಹಿನ್ನೆಲೆಯಲ್ಲಿ ಇವರು ಒಂದು ಬದಿಗೆ ಪ್ಲಾಸ್ಟಿಕ್ ಟರ್ಪಾಲ್ ಕಟ್ಟಿ ಅದರಲ್ಲಿ ವಾಸ ಮಾಡುತ್ತಿದ್ದರು. ಇದರಿಂದ ಅಪಾಯದಿಂದ ಪಾರಾಗಿದ್ದಾರೆ. ಮನೆ ಬಿದ್ದ ಮಾಹಿತಿ ತಿಳಿದು ೮ನೇ ವಾರ್ಡ್ ಸದಸ್ಯ …

ಶೆಡ್‌ನ ಮೇಲೆ ಮರ ಬಿದ್ದು ನಿದ್ರಿಸುತ್ತಿದ್ದ ಯುವಕ ಮೃತ್ಯು

ತೃಶೂರು: ಶೆಡ್‌ನ ಮೇಲೆ ಮರ ಬಿದ್ದು ನಿದ್ರಿಸುತ್ತಿದ್ದ ಯುವಕ ಮೃತಪಟ್ಟರು. ಮಣಲೂರು ಕಂಬನಿಪಡಿ ನಿವಾಸಿ ದಿ| ಸುಬ್ರನ್‌ರ ಪುತ್ರ ವಿಷ್ಣು (28) ಮೃತಪಟ್ಟ ಯುವಕ. ಮನೆ ದುರಸ್ತಿ ನಡೆಸುತ್ತಿದ್ದ ಹಿನ್ನಲೆಯಲ್ಲಿ ಮಡಲಿನಿಂದ ಶೆಡ್ ತಯಾರಿಸಿ ಅದರಲ್ಲಿ ಮಲಗುತ್ತಿದ್ದರು. ಬಲವಾದ ಗಾಳಿಗೆ ಹಿತ್ತಿಲಲ್ಲಿದ್ದ ಮರ ಶೆಡ್‌ನ ಮೇಲೆ ಬಿದ್ದು ವಿಷ್ಣು ಅದರಡಿ ಸಿಲುಕಿ ಮೃತಪಟ್ಟಿದ್ದಾರೆ. ಇಂದು ಬೆಳಿಗ್ಗೆ ನೆರೆಮನೆಯವರು ವಿಷ್ಣುವನ್ನು ಮರದಡಿಯಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿ ಪತ್ತೆಹಚ್ಚಿದ್ದಾರೆ. ಬಳಿಕ ಅಗ್ನಿಶಾಮಕದಳ ತಲುಪಿ ಮರ ಮುರಿದು ತೆಗೆದು ವಿಷ್ಣುವನ್ನು ಹೊರಕ್ಕೆ ತೆಗೆಯಲಾಗಿದೆ. …

ಮಳೆಗಾಲದ ಆರಂಭದಲ್ಲೇ ಕುಂಬಳೆ ಬಸ್ ನಿಲ್ದಾಣ ಜಲಾವೃತ: ಪ್ರಯಾಣಿಕರಿಗೆ ಸಮಸ್ಯೆ

ಕುಂಬಳೆ: ಮಳೆಗಾಲದ ಆರಂಭದಲ್ಲೇ ಕುಂಬಳೆ ಬಸ್ ನಿಲ್ದಾಣ ನೀರಿನಿಂದ ಮುಳುಗಿದೆ. ಮಳೆ ಸುರಿಯುವಾಗ ಪ್ರಯಾಣಿಕರು ಒದ್ದೆಯಾಗದಿರಲು ಬಸ್ ನಿಲ್ದಾಣದಲ್ಲಿ ನಿರ್ಮಿಸಿದ ವಿವಾದಿತ ಬಸ್ ವೈಟಿಂಗ್ ಶೆಡ್ ಇದ್ದು ಅದರ ಮುಂಭಾಗದಲ್ಲಿ ನೀರು ತುಂಬಿ ಕೊಂಡಿದೆ. ಇದರಿಂದ ಅದರ ಆಚೆ ಭಾಗದಲ್ಲಿ ಬಸ್‌ಗಳನ್ನು ನಿಲ್ಲಿಸಲಾಗು ತ್ತಿದೆ. ಅಲ್ಲಿಗೆ ತಲುಪಬೇಕಾದರೆ ತುಂಬಿಕೊಂಡಿರುವ ನೀರಿನಲ್ಲೇ ನಡೆದು ಹೋಗಬೇಕಾಗಿದೆ. ಭಾರೀ ಮೊತ್ತ ವ್ಯಯಿಸಿ ನಿರ್ಮಿಸಿದ ರಸ್ತೆಯ ಬದಿಯಲ್ಲಿ ಚರಂಡಿ ನಿರ್ಮಿಸಲಾಗಿದೆ. ಚರಂಡಿಗಿಂತ ತಗ್ಗು ಪ್ರದೇಶದಲ್ಲಿದ್ದ ರಸ್ತೆಯಲ್ಲಿ ನವೀಕರಣ ವೇಳೆ ಚರಂಡಿಯ ಭಾಗದಿಂದ ಮಣ್ಣು …

ರೈಲು ಪ್ರಯಾಣ ವೇಳೆ ನಾಪತ್ತೆಯಾದ ಮೂಕಿ, ಕಿವುಡಿ ಯುವತಿ ಮಲಪ್ಪುರಂ ನಿವಾಸಿಯಾದ ಮೂಕ ಯುವಕನೊಂದಿಗೆ ದಾಂಪತ್ಯಕ್ಕೆ

ಕಾಸರಗೋಡು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಾಪತ್ತೆಯಾದ ಮಾತುಬಾರದ, ಶ್ರವಣಶಕ್ತಿ ಕಳೆದುಕೊಂಡ ಯುವತಿ ಮಲಪ್ಪುರಂ ಕೊಂಡೋಟಿ ನಿವಾಸಿಯಾದ ಮಾತುಬಾರದ, ಶ್ರವಣಶಕ್ತಿ ಕಳೆದುಕೊಂಡ ಯುವಕನನ್ನು ಮದುವೆಯಾದ ಬಗ್ಗೆ ಮಾಹಿತಿ ಲಭಿಸಿದೆ. ಪರಪ್ಪ ಪನ್ನಿತ್ತಡ ಎಂಬಲ್ಲಿನ 20 ಹರೆಯದ ಯುವತಿ ಬುಧವಾರ ಸಂಜೆ ನಾಪತ್ತೆಯಾಗಿದ್ದಾಳೆ. ಮೂಗಿ ಹಾಗೂ ಕಿವುಡಿಯಾದ ಯುವತಿ ತಿರುವನಂತಪುರದ ಸಂಸ್ಥೆಯೊಂದರ ವಿದ್ಯಾರ್ಥಿನಿಯಾಗಿದ್ದಾಳೆ. ಶಿಕ್ಷಣ ಕೇಂದ್ರಕ್ಕೆಂದು ತಿಳಿಸಿ ಯುವತಿ ಮನೆಯಿಂದ ತೆರಳಿದ್ದಳು. ತಂದೆ ತಾಯಿ ಜೊತೆ ನೀಲೇಶ್ವರಕ್ಕೆ ತಲುಪಿದ ಬಳಿಕ ಯುವತಿ ರೈಲಿನಲ್ಲಿ ಪ್ರಯಾಣಿಸಿದ್ದಳು. ಗಂಟೆಗಳು ಕಳೆದ ಬಳಿಕ ಕೊಂಡೋಟಿಯಿಂದ …

ಒಂದೇ ಮಳೆಗೆ ತ್ಯಾಜ್ಯ ಕೇಂದ್ರವಾಗಿ ಮಾರ್ಪಟ್ಟ ಕುಂಬಳೆ ಮೀನು ಮಾರುಕಟ್ಟೆ ರಸ್ತೆ

ಕುಂಬಳೆ: ಕುಂಬಳೆಯಲ್ಲಿ ಮಳೆಗಾಲಪೂರ್ವ ಶುಚೀಕರಣ ಚಟುವಟಿಕೆಗಳು ವಿಫಲಗೊಂಡಿರುವುದರಿಂದ ಒಂದೇ ಮಳೆಗೆ ಮೀನು ಮಾರುಕಟ್ಟೆ ರಸ್ತೆ ತ್ಯಾಜ್ಯ ಕೇಂದ್ರವಾಗಿ ಮಾರ್ಪಾಡುಗೊಂಡಿದೆ. ಇದು ಸಮೀಪದ ವ್ಯಾಪಾರಿಗಳಿಗೆ ಹಾಗೂ ಮೀನು ಕಾರ್ಮಿಕರಿಗೆ ಭಾರೀ ಸಮಸ್ಯೆಯಾಗಿ ಪರಿಣಮಿಸಿದೆ. ಮೀನು ಮಾರುಕಟ್ಟೆ ಸಮೀಪದ ತ್ಯಾಜ್ಯ ರಾಶಿ ಈ ಮೊದಲೇ ಭಾರೀ ಸುದ್ದಿಯಾಗಿತ್ತು.  ಕುಂಬಳೆ ಪಂಚಾಯತ್ ನಾಮಮಾತ್ರಕ್ಕಾಗಿ ನಡೆಸಿದ ಶುಚೀಕರಣ ಚಟುವಟಿಕೆಗಳ ವೇಳೆ ಮಾರುಕಟ್ಟೆ ರೋಡ್‌ನತ್ತ ಕಣ್ಣು ಹಾಯಿಸಿಲ್ಲವೆಂಬ ಆರೋಪ ಈ ಹಿಂದೆಯೇ ಕೇಳಿ ಬಂದಿತ್ತು. ಚರಂಡಿಗಳಲ್ಲಿ ತ್ಯಾಜ್ಯ ತುಂಬಿ ತುಳುಕುತ್ತಿರುವುದರಿಂದ ಮಳೆ ನೀರು, ಪ್ಲಾಸ್ಟಿಕ್ …

ಕಾನೂನು ಕಠಿಣಗೊಳಿಸಿದ ಕೇಂದ್ರ: ಜಿಲ್ಲೆಯ 40ರಷ್ಟು ಕೆಎಸ್‌ಆರ್‌ಟಿಸಿ ಬಸ್‌ಗಳು ಗುಜರಿ ಸೇರುವ ಸಾಧ್ಯತೆ

ಕಾಸರಗೋಡು: ಹದಿನೈದು ವರ್ಷಕ್ಕಿಂತ  ಹಳೆಯದಾದ  ಸರಕಾರಿ ವಾಹನಗಳು ಸಂಚಾರ ನಡೆಸಬಾರದೆಂಬ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ. ಆದರೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವಾ ಅವಧಿಯನ್ನು  15ರಿಂದ 20ಕ್ಕೇರಿಸಿ ಕೇರಳ ಸರಕಾರ ತಂದಿದ್ದ ತಿದ್ದುಪಡಿ ಕಾನೂನಿಗೆ ಕೇಂದ್ರ ಸರಕಾರ ಅನುಮತಿ ನಿರಾಕರಿಸಿದೆ. ಇದರಿಂದಾಗಿ ಕಾಸರಗೋಡು ಜಿಲ್ಲೆಯಲ್ಲಿ ಈಗ ಸಂಚರಿಸುತ್ತಿರುವ ಕೆಎಸ್‌ಆರ್‌ಟಿಸಿ ಬಸ್‌ಗಳ ಪೈಕಿ 15 ವರ್ಷಕ್ಕಿಂತ  ಹೆಚ್ಚು ಹಳೆಯದಾದ ೪೦ರಷ್ಟು ಬಸ್‌ಗಳ ಸಂಚಾರ ನಿಲುಗಡೆಗೊಳಿಸಿ ಅವುಗಳನ್ನು ಗುಜರಿಗೆ ನೀಡಬೇಕಾಗಿ ಬರುವ ಸ್ಥಿತಿ ಈಗ ನಿರ್ಮಾಣವಾಗಿದೆ. 15 ವರ್ಷಕ್ಕಿಂತ …

ರತ್ನಾಕರ ಮಲ್ಲಮೂಲೆಗೆ ಕೇರಳ ಸರಕಾರದ ವನಮಿತ್ರ ಪ್ರಶಸ್ತಿ ಪ್ರದಾನ

ತಿರುವನಂತಪುರ: ಮಳೆಕೊಯ್ಲು, ಜಲಮರುಪೂರಣ ಹಾಗೂ ಸೌರಯೋಜನೆಯ ಮೂಲಕ ಬರಡು ನೆಲದಲ್ಲಿ ಹಸುರು ಕ್ರಾಂತಿಯನ್ನುAಟು ಮಾಡಿ ತನ್ನ ಯೋಜನೆಗಳೆಲ್ಲವನ್ನೂ ಸಾಮಾಜಿಕ ಜಾಗೃತಿಗೆ ಮೀಸಲಿಟ್ಟು ಗಮನ ಸೆಳೆದಿರುವ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆಗೆ ವನಮಿತ್ರ ಪ್ರಶಸ್ತಿಯನ್ನು ಕೇರಳ ಸರ್ಕಾರದ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಸಚಿವ ಶಿಬು ಬೇಬಿ ಜೋನ್ ನೀಡಿ ಅಭಿನಂದಿಸಿದರು.ವಿಶ್ವ ಪರಿಸರದಿನದ ಭಾಗವಾಗಿ ಕೇರಳ ಸರಕಾರದ ಅರಣ್ಯ ಇಲಾಖೆಯವರು ತಿರುವನಂತಪುರದ ನಂದವನದಲ್ಲಿ ಆಯೋಜಿಸಿದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಸಿ.ಪಿ ಜೋನ್ …

ಜನರಲ್ ಆಸ್ಪತ್ರೆಯ ನೂತನ ಕಟ್ಟಡ 7 ವರ್ಷದಿಂದ ನಿಧಾನಗತಿಯಲ್ಲಿ: ಶೀಘ್ರ ಉದ್ಘಾಟಿಸಲು ಸಚಿವರಿಗೆ ಮನವಿ

ಕಾಸರಗೋಡು: ಸಾವಿರಾರು ಮಂದಿ ದಿನಂಪ್ರತಿ ಚಿಕಿತ್ಸೆಗಾಗಿ ತಲುಪುವ ಕಾಸರಗೋಡು ಜನರಲ್ ಆಸ್ಪತ್ರೆಯ ಎಂಟು ಮಹಡಿಯ ಆಸ್ಪತ್ರೆ ಕಟ್ಟಡ ನಿರ್ಮಾಣ ಪೂರ್ತಿಗೊಂಡು ಏಳು ವರ್ಷ ಕಳೆದರೂ ಪೂರ್ತಿಯಾಗದೆ ಆಮೆಗತಿಯಲ್ಲಿ ಸಾಗುತ್ತಿದೆ. ಆರೋಗ್ಯ ರಂಗದಲ್ಲಿ ಜಿಲ್ಲೆ ಎದುರಿಸುತ್ತಿರುವ ಹಿಂದುಳಿದಾವಸ್ಥೆ ಮಧ್ಯೆ ಕಟ್ಟಡ ನಿರ್ಮಾಣದ ವಿಳಂಬ ಇನ್ನಷ್ಟು ಸಮಸ್ಯೆ ಸೃಷ್ಟಿಸುತ್ತಿದೆ ಎಂದು ವಿವರಿಸಿ ನೂತನ ಆರೋಗ್ಯ ಸಚಿವ ಕೆ. ಮುರಳೀಧರನ್‌ರಿಗೆ ಸೇವಾದಳ ರಾಜ್ಯಾಧ್ಯಕ್ಷ ರಮೇಶನ್ ಕರುವಾಚೇರಿ ಮನವಿ ನೀಡಿದ್ದಾರೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ. ಕಟ್ಟಡದ …

ಸಂತಡ್ಕ ಶ್ರೀ ಅರಸು ಸಂಕಲ ಮಾಡದಲ್ಲಿ ರುದ್ರಯಾಗ, ಗಿರಿಜಾ ಕಲ್ಯಾಣೋತ್ಸವ ಇಂದಿನಿಂದ

ಉಪ್ಪಳ: ಸಂತಡ್ಕ ಮಾಡದ ಶ್ರೀ ಅರಸು ಸಂಕಲ ದೈವ ಕ್ಷೇತ್ರದಲ್ಲಿ ಶ್ರೀ ರುದ್ರಯಾಗ ಹಾಗೂ ಗಿರಿಜಾ ಕಲ್ಯಾಣೋತ್ಸವ ಮತ್ತು ನೂತನ ಭೋಜನ ಶಾಲೆಯ ಉದ್ಘಾಟನಾ ಸಮಾರಂಭ ಬ್ರಹ್ಮಶ್ರೀ ವೇದಮೂರ್ತಿ ಪರಕಜೆ ಅನಂತನಾರಾಯಣ ಭಟ್‌ರ ನೇತೃತ್ವದಲ್ಲಿ ಇಂದು ಮತ್ತು ನಾಳೆ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇಂದು ಸಂಜೆ 4ಕ್ಕೆ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ರುದ್ರಯಾಗ ಮತ್ತು ಶ್ರೀ ಗಿರಿಜಾ ಕಲ್ಯಾಣದಲ್ಲಿ ಪೂಜಿಸಲ್ಪಡುವ ಶ್ರೀ ದೇವರ ವಿಗ್ರಹದ ಭವ್ಯ ಶೋಭಾಯಾತ್ರೆ ಮೆರವಣಿಗೆಯೊಂದಿಗೆ ಉತ್ಸವಕ್ಕೆ ಚಾಲನೆ …