ಕುಸಿದು ಬಿದ್ದ ಮನೆ: ಅಸಹಾಯಕ ಸ್ಥಿತಿಯಲ್ಲಿದ್ದ ಕುಟುಂಬಕ್ಕೆ ಶೌರ್ಯ ಘಟಕದಿಂದ ನೆರವು

ಮವ್ವಾರು: ಮನೆಯೊಂದು ಕುಸಿದು ಬಿದ್ದು ಕುಟುಂಬ ಅತಂತ್ರ ಸ್ಥಿತಿಗೆ ತಲು ಪಿದಾಗ ಮವ್ವಾರು ಶೌರ್ಯ ಘಟಕ ಕಾರ್ಯಕರ್ತರ ಸಹಾಯ ದಿಂದ ದುರಸ್ತಿ ನಡೆಸಲಾಗಿದೆ. ನಿನ್ನೆ ಬೆಳಿಗ್ಗೆ ಕುಂಬ್ಡಾಜೆ ಪಂಚಾಯತ್‌ನ ೯ನೇ ವಾರ್ಡ್ ಮವ್ವಾರು ಎಸ್‌ಸಿ ನಗರ ನಿವಾಸಿ ಬಾಬು (50) ಎಂಬವರ ಮನೆ ಕುಸಿದು ಬಿದ್ದಿದೆ. ಮನೆ ಜೀರ್ಣಗೊಂಡ ಹಿನ್ನೆಲೆಯಲ್ಲಿ ಇವರು ಒಂದು ಬದಿಗೆ ಪ್ಲಾಸ್ಟಿಕ್ ಟರ್ಪಾಲ್ ಕಟ್ಟಿ ಅದರಲ್ಲಿ ವಾಸ ಮಾಡುತ್ತಿದ್ದರು. ಇದರಿಂದ ಅಪಾಯದಿಂದ ಪಾರಾಗಿದ್ದಾರೆ. ಮನೆ ಬಿದ್ದ ಮಾಹಿತಿ ತಿಳಿದು ೮ನೇ ವಾರ್ಡ್ ಸದಸ್ಯ ಕೊರಗಪ್ಪ ಸ್ಥಳಕ್ಕೆ ತಲುಪಿ 9ನೇ ವಾರ್ಡ್ ಪ್ರತಿನಿಧಿ, ಪಂಚಾಯತ್ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮವ್ವಾರು ಶೌರ್ಯ ತಂಡ ಘಟಕದ ಕಾರ್ಯಕರ್ತರು ತಲುಪಿ ರಾತ್ರಿ 11 ಗಂಟೆವರೆಗೆ ಕೆಲಸ ಮಾಡಿ ಮನೆಯನ್ನು ದುರಸ್ತಿಗೊಳಿಸಿ ನೀಡಿದ್ದಾರೆ. ಮನೆ ದುರಸ್ತಿಗೆ ಬೇಕಾದ ಕಂಗು ಹಾಗೂ ಇತರ ಸಾಮಗ್ರಿಗಳನ್ನು ರವೀಂದ್ರ ರೈ ಗೋಸಾಡ ನೀಡಿದ್ದು, ನೆರೆಮನೆಯಿಂದ ಹಳೆ ಹೆಂಚು ತಂದು ದುರಸ್ತಿಗೊಳಿ ಸಲಾಗಿದೆ. ಅಸಹಾಯಕ ಸ್ಥಿತಿಯಲ್ಲಿದ್ದ ಕುಟುಂಬಕ್ಕೆ ಸಹಾಯ ಮಾಡಿದ ಶೌರ್ಯ ಕಾರ್ಯಕರ್ತರ ಈ ಕೆಲಸ ಸ್ಥಳೀಯರ ಪ್ರಶಂಸೆಗೆ ಪಾತ್ರವಾಗಿದೆ. 

You cannot copy contents of this page