ಉಪ್ಪಳ: ಬಸ್ನಲ್ಲಿ ಪ್ರಯಾಣಿಸು ತ್ತಿದ್ದ ಯುವತಿಯ ದೇಹ ಸ್ಪರ್ಶಿಸಿ ಕಿರುಕುಳ ನೀಡಿದ ಯುವಕನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಕಣ್ಣೂರು ಅಂಜರಕಂಡಿ ವೆಣ್ ಮಣಲ್ ಹಾಜರ ಮಂಜಿಲ್ನ ಇಬ್ರಾಹಿಂ ಕಂಡೋತ್ (43) ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ. ಆರೋಪಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಮೊನ್ನೆ ಸಂಜೆ ಕಾಸರಗೋಡಿನಿಂದ ತಲಪಾಡಿಗೆ ತೆರಳುತ್ತಿದ್ದ ಬಸ್ನಲ್ಲಿ 19ರ ಹರೆಯದ ಯುವತಿಗೆ ಕಿರುಕುಳ ನೀಡಿದ ಆರೋಪದಂತೆ ಇಬ್ರಾಹಿಂ ಕಂಡೋ ತ್ನನ್ನು ಪೊಲೀಸರು ಬಂಧಿಸಿ ಕೇಸು ದಾಖಲಿಸಿದ್ದಾರೆ. ಬಸ್ ಕಾಸರಗೋ ಡಿನಿಂದ ಪ್ರಯಾಣ ಆರಂಭಿಸಿದಾಕ್ಷಣ ದಿಂದಲೇ ಯುವತಿಯ ಸಮೀಪ ನಿಂತಿದ್ದ ಇಬಹಿಂ ಆಕೆಯ ದೇಹ ಸ್ಪರ್ಶಿಸಿ ಕಿರುಕುಳ ನೀಡತೊಡಗಿದ್ದನೆಂದು ದೂರಲಾಗಿದೆ. ಇದನ್ನು ಯುವತಿ ವಿರೋಧಿಸಿದ್ದಳು. ಆದರೆ ಅದನ್ನು ಲೆಕ್ಕಿಸದೆ ಆತ ಕಿರುಕುಳ ಮುಂದುವರಿ ಸಿದ್ದಾನೆ. ಕಿರುಕುಳ ಸಹಿಸಲಸಾಧ್ಯ ವಾದಾಗ ಯುವತಿ ವಿಷಯವನ್ನು ಸಂಬಂಧಿಕರಿಗೆ ತಿಳಿಸಿದ್ದಾಳೆ. ಇದರಿಂದ ಬಸ್ ಉಪ್ಪಳ ಬಸ್ ನಿಲ್ದಾಣಕ್ಕೆ ತಲುಪಿದಾಗ ನಾಗರಿಕರು ಉಪಾ ಯದಿಂದ ಯುವಕನನ್ನು ಸೆರೆಹಿಡಿದು ಉಪ್ಪಳ ಪೊಲೀಸ್ ಕಂಟ್ರೋಲ್ ರೂಂಗೆ ಒಪ್ಪಿಸಲಾಗಿದೆ. ಕೂಡಲೇ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ಇಬ್ರಾಹಿಂನನ್ನು ಕಸ್ಟಡಿಗೆ ತೆಗೆದು ಬಂಧನ ದಾಖಲಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ.






