ಮಂಜೇಶ್ವರದಲ್ಲಿ ಗಂಟೆಗಳ ಮಧ್ಯೆ ಎರಡು ಘಟನೆಗಳು: ರೈಲು ಢಿಕ್ಕಿ ಹೊಡೆದು ಇಬ್ಬರು ಯುವಕರು ದಾರುಣ ಮೃತ್ಯು

ಉಪ್ಪಳ: ಮಂಜೇಶ್ವರದಲ್ಲಿ ನಿನ್ನೆ ಗಂಟೆಗಳೊಳಗೆ ಇಬ್ಬರು ಯುವಕರು ರೈಲು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಸಂಭವಿಸಿದೆ. ಹೊಸಬೆಟ್ಟು ಸ್ಫೂರ್ತಿನಗರದ ಬಾಡಿಗೆ ಮನೆಯಲ್ಲಿ ವಾಸಿಸುವ ಉಮೇಶ (40) ಹಾಗೂ ಮಂಜೇಶ್ವರ ಕೀರ್ತೇಶ್ವರ ದೇವಸ್ಥಾನ ಬಳಿಯ ಮನೀಶ್ (18) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಉಮೇಶ್ ನಿನ್ನೆ ಸಂಜೆ ೫ ಗಂಟೆಗೆ ರೈಲು ಢಿಕ್ಕಿ ಹೊಡೆದು ಮೃತಪಟ್ಟಿ ದ್ದಾರೆ. ಮಂಜೇಶ್ವರ ರೈಲು ನಿಲ್ದಾಣ ಬಳಿಯ ಹಳಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಅನಂತರ ರಾತ್ರಿ 9.45ರ ವೇಳೆ ಇದೇ ಸ್ಥಳದ ಬೇರೊಂದು ಹಳಿಯಲ್ಲಿ …

ಸ್ನೇಹಿತರೊಂದಿಗೆ ಮಾತನಾಡುತ್ತಾ ಕುಳಿತಿದ್ದಾಗ ದಾರುಣ ಘಟನೆ: ತೆಂಗಿನ ಮರ ಮೈಮೇಲೆ ಬಿದ್ದು ಪೆರ್ವಾಡ್  ಜುಮಾ ಮಸೀದಿ ಅಧ್ಯಕ್ಷ ಮೃತ್ಯು

ಕುಂಬಳೆ: ಸ್ನೇಹಿತರೊಂದಿಗೆ ಮಾತನಾಡುತ್ತಾ ಕುಳಿತಿದ್ದಾಗ ತೆಂಗಿನಮರ ತುಂಡಾಗಿ ಮೈ ಮೇಲೆ ಬಿದ್ದು ಮಸೀದಿ ಅಧ್ಯಕ್ಷ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಪೆರ್ವಾಡ್ ಜುಮಾ ಮಸೀದಿ ಸಮಿತಿ ಅಧ್ಯಕ್ಷರೂ, ಮೀನುಕಾರ್ಮಿಕನಾದ ಪೆರ್ವಾಡ್‌ನ ಅಬ್ದುಲ್ಲ (65) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇಂದು ಬೆಳಿಗ್ಗೆ 8.30ರ ವೇಳೆ ಪೆರ್ವಾಡ್ ಪಿ.ಎಸ್ ಗ್ರೌಂಡ್‌ನ ಬಳಿ ದುರ್ಘಟನೆ ಸಂಭವಿಸಿದೆ. ಅಬ್ದುಲ್ಲ ಸ್ನೇಹಿತರಾದ ಇಬ್ರಾಹಿಂ ಹಾಗೂ ಹಸೈನಾರ್‌ರೊಂದಿಗೆ ಪೆರ್ವಾಡ್ ಪಿ.ಎಸ್. ಗ್ರೌಂಡ್‌ನ ಬಳಿಯ ಕಡಪ್ಪುರದಲ್ಲಿ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಅಲ್ಲೇ ಇದ್ದ ತೆಂಗಿನಮರ ಮುರಿದು ಅಬ್ದುಲ್ಲರ …

ಹೊಸದುರ್ಗದಿಂದ ಸೆರೆಯಾದ ಬಾಂಗ್ಲಾ ಯುವತಿಯ ಕುಟುಂಬ ಸದಸ್ಯರ ಪತ್ತೆಗೆ ವ್ಯಾಪಕ ಶೋಧ

ಕಾಸರಗೋಡು: ಬಾಂಗ್ಲಾದೇಶ ದಿಂದ ಅನಧಿಕೃತವಾಗಿ ಕೇರಳಕ್ಕೆ  ಅಕ್ರಮವಾಗಿ ಬಂದು ವಾಸಿಸುತ್ತಿದ್ದ ಯುವತಿಯನ್ನು ಹೊಸದುರ್ಗದಿಂದ ಪೊಲೀಸರು ಬಂಧಿಸಿರುವ ಬೆನ್ನಲ್ಲೇ ಆಕೆಯಜತೆಗೆ ಇಲ್ಲಿಗೆ ಬಂದಿರುವ ಕುಟುಂಬದವರ ಪತ್ತೆಗಾಗಿ ಪೊಲೀ ಸರು ವ್ಯಾಪಕ ಶೋಧ ಆರಂಭಿಸಿದ್ದಾರೆ.  ಬಾಂಗ್ಲಾ ಪ್ರಜೆಯಾಗಿರುವ ಸೆಲ್ಮಾ ಕೌತೂಲಿಯಾ(31) ಎಂಬಾಕೆಯ ನ್ನು ನಿನ್ನೆ ಹೊಸದುರ್ಗ ರೈಲು ನಿಲ್ದಾಣದಿಂದ ಪೊಲೀಸರು ಬಂಧಿಸಿ ದ್ದರು. ಈಕೆ ಮಲಪ್ಪುರಂನಿಂದ ಮಲಬಾರ್ ಎಕ್ಸ್‌ಪ್ರೆಸ್ ರೈಲು ಗಾಡಿಯಲ್ಲಿ ನಿನ್ನೆ ಬೆಳಿಗ್ಗೆ ಹೊಸದುರ್ಗ ರೈಲು ನಿಲ್ದಾಣದಲ್ಲಿ ಬಂದಿಳಿಯತ್ತಿರು ವಂತೆಯೇ  ಶಂಕೆಗೊಂಡ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ಆಕೆ ಬಾಂಗ್ಲಾದೇಶದ …

ಕುಂಡಂಗುಳಿಯಲ್ಲಿ ಭಯಂಕರ ಶಬ್ದದೊಂದಿಗೆ ರಸ್ತೆ ಇಬ್ಭಾಗ: 50 ಮೀಟರ್ ದೂರದವರೆಗೆ ಬಿರುಕು

ಕಾಸರಗೋಡು: ಭಾರೀ ಶಬ್ದದೊಂದಿಗೆ ಕುಂಡಂಗುಳಿಯಲ್ಲಿ ರಸ್ತೆ ಬಿರುಕು ಬಿಟ್ಟಿದೆ. ನಿನ್ನೆ  ಬೆಳಿಗ್ಗೆ ಕುಂಡಂಗುಳಿ, ಮೂನಾಂಗಡವ್ ರಸ್ತೆ ಜಂಕ್ಷನ್ ಸಮೀಪ ಪೊಯಿನಾಚಿ- ಬಂದಡ್ಕ ಅಂತಾರಾಜ್ಯ ಹೆದ್ದಾರಿಯಲ್ಲಿ ಬಿರುಕು ಕಂಡು ಬಂದಿದೆ. ಭಾರೀ ಮಳೆಯ ಮಧ್ಯೆ ಭಯಂಕರ ಶಬ್ದವುಂಟಾಗಿತ್ತೆಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಆ ಕ್ಷಣದಲ್ಲೇ ೫೦ ಮೀಟರ್‌ನಷ್ಟು ದೂರದಲ್ಲಿ ರಸ್ತೆ ಇಬ್ಭಾಗವಾದ ಸ್ಥಿತಿಯಲ್ಲಿ ಕಂಡು ಬಂದಿದೆ. ಈ ಬಿರುಕಿನಲ್ಲಿ ಮಳೆನೀರು  ಹರಿಯುತ್ತಿದೆ. ಸಿಡಿಲು ಬಡಿದು ರಸ್ತೆ ಇಬ್ಭಾಗವಾಗಿರಬೇಕೆಂದು ಶಂಕಿಸಲಾಗುತ್ತಿದೆ. ಆದರೆ ಮಿಂಚು ಸ್ಥಳೀಯರ ಗಮನಕ್ಕೆ ಬಂದಿರಲಿಲ್ಲವೆಂದು ಹೇಳಲಾಗುತ್ತಿದೆ. ಬಸ್ …

ಕಾಸರಗೋಡು ನಗರದಲ್ಲಿ ವ್ಯಾಪಕಗೊಂಡ ಬೀದಿ ನಾಯಿಗಳು; ಜನರಲ್ ಆಸ್ಪತ್ರೆ, ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ತಲುಪುವವರಿಗೆ ಆತಂಕ

ಕಾಸರಗೋಡು: ಕಾಸರಗೋಡು ನಗರದ ವಿವಿಧೆಡೆ ಬೀದಿ ನಾಯಿಗಳು ತುಂಬಿಕೊಂಡಿದ್ದು ಇದರಿಂದ ಜನತೆ ನಡೆದಾಡಲು ಭಯಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಹೆಚ್ಚಾಗಿ ಕಾಸರಗೋಡು ಜನರಲ್ ಆಸ್ಪತ್ರೆ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪರಿಸರದಲ್ಲಿ ಅತೀ ಹೆಚ್ಚು ಬೀದಿನಾಯಿಗಳು ಬೀಡುಬಿಟ್ಟಿವೆ. ಇದರಿಂದ ಇಲ್ಲಿಗೆ ತಲುಪುವವರು  ಭಯಪಡುತ್ತಿದ್ದಾರೆ.  ನಾಯಿಗಳ ಹಿಂಡು ಜನರ ಮೇಲೆ ದಾಳಿಗೆ  ಮುಂದಾಗುತ್ತಿದ್ದು ಇದರಿಂದ ನಡೆದಾಡಲು ಸಾಧ್ಯವಾಗುತ್ತಿಲ್ಲವೆಂಬ ಆರೋಪ ಕೇಳಿಬರುತ್ತಿದೆ.  ದ್ವಿಚಕ್ರ ವಾಹನಗಳ ಸವಾರರ ಮೇಲೂ ನಾಯಿಗಳು ಎರಗಲು ಮುಂದಾಗುತ್ತಿವೆ. ಇದರಿಂದ ವಾಹನ  ನಿಯಂತ್ರಣ ತಪ್ಪಿ ಅಪಾ ಯಕ್ಕೆಡೆಯಾಗುವ ಸ್ಥಿತಿಯೂ …

ವಿದ್ಯುತ್ ಕಂಬಗಳಲ್ಲಿ ಬ್ಯಾನರ್ ಸ್ಥಾಪಿಸಬಾರದು- ಕೆಎಸ್‌ಇಬಿ

ಕಾಸರಗೋಡು: ಕೆಎಸ್‌ಇಬಿಯ ವಿದ್ಯುತ್ ವಿತರಣೆ ಶೃಂಖಲೆಗಳಲ್ಲಿ ಬ್ಯಾನರ್‌ಗಳು, ಫ್ಲೆಕ್ಸ್ ಬೋರ್ಡ್ ಗಳು, ಹಾರ್ಡಿಂಗ್‌ಗಳನ್ನು ಸ್ಥಾಪಿಸಬಾರದೆಂದು ಕಾಸರಗೋಡು ಇಲೆಕ್ಟ್ರಿಸಿಟಿ ಸರ್ಕಲ್ ಡೆಪ್ಯುಟಿ ಚೀಫ್ ಇಂಜಿನಿಯರ್ ತಿಳಿಸಿದ್ದಾರೆ. ಈ ರೀತಿಯ ಬೋರ್ಡ್‌ಗಳು ಸ್ಥಾಪಿಸುವುದು ಗಂಭೀರ ವಿದ್ಯುತ್ ಅಪಘಾತಗಳಿಗೆ ಕಾರಣವಾಗಬ ಹುದು. ಈ ರೀತಿಯ ಚಟುವಟಿಕೆಗಳು ಕಾನೂನು ಬಾಹಿರ ಹಾಗೂ ೨೦೦೩ರ ಕೇಂದ್ರ ಇಲೆಕ್ಟ್ರಿಸಿಟಿ ಆಕ್ಟ್ ಪ್ರಕಾರ ಶಿಕ್ಷಾರ್ಹವಾದ ಅಪರಾಧವಾಗಿದೆ. ಮಳೆ ಹಾಗೂ ಗಾಳಿ ಇರುವ ಸಮಯಗಳಲ್ಲಿ ಒದ್ದೆಯಾದ ಬ್ಯಾನರ್‌ಗಳು, ಫ್ಲೆಕ್ಸ್‌ಗಳು ವಿದ್ಯುತ್ ತಂತಿಗಳಿಗೆ ಸ್ಪರ್ಷಿಸುತ್ತಿರುವುದರ ಮೂಲಕ ದುರಂತಿಗಳು ಉಂಟಾಗಬಹುದು. ಅಲ್ಲದೆ …

ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದಲ್ಲಿ ಮಹಾರುದ್ರಯಾಗ, ದೃಢಕಲಶ

ಬದಿಯಡ್ಕ: ಪೆರಡಾಲ ಶ್ರೀ ಉದ ನೇಶ್ವರ ದೇವಸ್ಥಾನದ ಬ್ರಹ್ಮಕಲ ಶೋತ್ಸವ ಇತ್ತೀಚೆಗೆ ಜರಗಿದ್ದು, ದೃಢಕಲಶ ನಿನ್ನೆ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಇವರ ನೇತೃತ್ವದಲ್ಲಿ ಜರಗಿತು. ಸೋಮವಾರ ಸಂಜೆ ಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ರಾಕ್ಷೆÆÃಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ, ವಾಸ್ತು ಪುಣ್ಯಾ ಹಾಂತ ನಡೆಯಿತು. ನಿನ್ನೆ ಪ್ರಾತಃಕಾಲ ಗಣಪತಿ ಹವನ, ಕಲಶಪೂಜೆ, ಕಲಶಾಭಿಷೇಕ, ಮಹಾಪೂಜೆ, ಶ್ರೀ ಮಹಾರುದ್ರಯಾಗ ನಡೆಯಿತು.ಶ್ರೀಮದೆಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತಿ ಪ್ರಾರ್ಥನೆ ಮಾಡಿದರು. …

ಕಾಸರಗೋಡು ನಗರಸಭೆಗೆ ಆಧುನಿಕ ಸೌಕರ್ಯಗಳೊಂದಿಗಿನ ಹೊಸ ಕಚೇರಿ ಸಮುಚ್ಛಯ ನಿರ್ಮಿಸಲು ಸಚಿವರಿಗೆ ನಗರಸಭಾಧ್ಯಕ್ಷೆ ಮನವಿ

ಕಾಸರಗೋಡು: ಜಿಲ್ಲೆಯ ಕೇಂದ್ರ ನಗರವಾದ ಕಾಸರಗೋಡಿನಲ್ಲಿ ಕಾರ್ಯಾಚರಿಸುತ್ತಿರುವ ನಗರಸಭಾ ಕಚೇರಿ ಕಟ್ಟಡ ಜೀರ್ಣಗೊಂಡಿದ್ದು, ಸ್ಥಳ ಪರಿಮಿತಿಯಿಂದ ಸಂದಿಗ್ಧತೆಯನ್ನು ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ನೂತನ ಕಟ್ಟಡ ನಿರ್ಮಿಸಬೇಕೆಂಬ ಬೇಡಿಕೆಯೊಂದಿಗೆ ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ ಸಚಿವ ಕೆ.ಎಂ. ಶಾಜಿಯವರಿಗೆ ಮನವಿ ನೀಡಿದ್ದಾರೆ. ಮಳೆಗಾಲದಲ್ಲಿ ಕಟ್ಟಡದ ವಿವಿಧ ಭಾಗಗಳಲ್ಲಿ ನೀರು ಸೋರುತ್ತಿದ್ದು, ಜೀರ್ಣಗೊಂಡ ಕಟ್ಟಡದ ಅಸೌಕರ್ಯ ಕಚೇರಿ ಚಟುವಟಿಕೆಗಳಿಗೆ ಪ್ರತಿಕೂಲವಾಗುತ್ತಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ. 1998 ನವೆಂಬರ್ ೨೫ರಂದು ದಿ| ಸಯ್ಯೀದ್ ಅಬ್ದುಲ್ ರಹಿಮಾನ್ ಬಾಫಕಿ ತಂಙಳ್‌ರ ಅಧ್ಯಕ್ಷತೆಯಲ್ಲಿ …

ಕಡಲ್ಕೊರೆತ: ಚೇರಂಗೈ ಕಡಪ್ಪುರದ  ಕುಟುಂಬಗಳಿಗೆ ಆತಂಕದ ಬದುಕು

ಕಾಸರಗೋಡು: ಮಳೆ ತೀವ್ರಗೊಳ್ಳುತ್ತಿರುವಂತೆಯೇ ತೀರ ನಿವಾಸಿಗಳು ಆತಂಕದಲ್ಲಿದ್ದಾರೆ. ಕಡಲ್ಕೊರೆತ ಭಯದಲ್ಲಿ ಜಿಲ್ಲೆಯ ಸಮುದ್ರತೀರದ ಹಲವಾರು ಕುಟುಂಬಗಳು ಸಂಕಷ್ಟದಲ್ಲಿವೆ. ಚೇರಂಗೈ ಕಡಪ್ಪುರದಲ್ಲಿ ದಶಕಗಳಿಂದ ಕಡಲ್ಕೊರೆತದ ಭೀತಿಯಲ್ಲಿ ಕುಟುಂಬಗಳು ಜೀವನ ಸಾಗಿಸುತ್ತಿವೆ. ಈ ಕಡಪ್ಪುರದಲ್ಲಿ ಜಿಯೋ ಬ್ಯಾಂಗ್ ಜೋಡಿಸಿಟ್ಟಿಡುವ ಪ್ರತಿರೋಧ ಸಾಮಾನ್ಯವಾಗಿ ನಡೆಯುತ್ತಿರುವುದೆಂದು ಹೇಳಲಾಗುತ್ತಿದೆ. ಆದರೂ ಮಳೆಗಾಲದಲ್ಲಿ ತೆರೆಗಳು ಮನೆಗಳಿಗೆ ತಲುಪುತ್ತದೆ ಎಂದು ದೂರಲಾಗಿದೆ. ಕಿರು ನೀರಾವರಿ ಇಲಾಖೆ ಕಳೆದ ವರ್ಷ ಜಿಲ್ಲೆಯ ತೀರ ವಲಯದಲ್ಲಿ ಜ್ಯಾರಿಗೊಳಿಸಬೇಕಾದ ಯೋಜನೆಗಳ ನಿರ್ದೇಶವನ್ನು ಸರಕಾರಕ್ಕೆ ಸಲ್ಲಿಸಿತ್ತು. ಆದರೆ ಅದರಲ್ಲಿ ಯಾವುದೇ ಕ್ರಮ ಉಂಟಾಗಿರಲಿಲ್ಲ. …

ಬೋವಿಕ್ಕಾನ ಪೇಟೆಯಲ್ಲಿ ಬೀದಿನಾಯಿ ಕಾಟ: ವ್ಯಾಪಾರಿ ಸಹಿತ 3 ಮಂದಿಗೆ ಕಡಿತಬೋವಿಕ್ಕಾನ ಪೇಟೆಯಲ್ಲಿ ಬೀದಿನಾಯಿ ಕಾಟ

 ವ್ಯಾಪಾರಿ ಸಹಿತ ೩ ಮಂದಿಗೆಬೋವಿಕ್ಕಾನ: ಪೇಟೆಯಲ್ಲಿ ಬೀದಿನಾಯಿಗಳ ಉಪಟಳ ತೀವ್ರಗೊಂಡಿರುವುದಾಗಿ ದೂರಲಾಗಿದೆ. ವ್ಯಾಪಾರಿ ಸಹಿತ ಮೂರು ಮಂದಿಗೆ ನಾಯಿ ಕಚ್ಚಿದೆ. ನಿನ್ನೆ ಬೆಳಿಗ್ಗೆ 8 ಗಂಟೆಗೆ ಪೇಟೆಯ ಸಮೀಪದ ಮನೆ ಬಳಿ ನಿಂತಿದ್ದ ಸಿ.ಎಚ್. ಅಬ್ದುಲ್ಲ ಕುಂಞಿ ಎಂಬವರಿಗೆ ನಾಯಿ ಕಚ್ಚಿದೆ. ಬಳಿಕ  ಅಂಗಡಿ ತೆರೆಯಲು ತಲುಪಿದ ಅಚ್ಯುತನ್ ಎಂಬ ವ್ಯಾಪಾರಿಗೂ ನಾಯಿ ಆಕ್ರಮಿಸಿದೆ. ಕಾನತ್ತೂರು ರಸ್ತೆಯಲ್ಲಿ ಅಂಗಡಿ ತೆರೆಯಲು ತಲುಪಿದ ಮಹಿಳಾ ಟೈಲರ್‌ಗೂ ಕೂಡಾ ನಾಯಿ ಕಚ್ಚಿದೆ. ಇವರ ಮುಖಕ್ಕೆ ಗಾಯವುಂಟಾಗಿದೆ. ಈ ಮೂರು ಮಂದಿಯನ್ನು …