ಬೈಕ್ ಖರೀದಿ ನೆಪದಲ್ಲಿ ಶೋರೂಂಗೆ ತಲುಪಿ ಬೈಕ್‌ನೊಂದಿಗೆ ಪರಾರಿಯಾದ ಯುವಕ

ಕೊಚ್ಚಿ: ಬೈಕ್ ಖರೀದಿಗೆಂದು ತಲುಪಿದ ಯುವಕ ಸೆಕೆಂಡ್ ಸೇಲ್ ಶೋರೂಂನಿಂದ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಬೈಕ್‌ನೊಂದಿಗೆ ಪರಾರಿಯಾಗಿದ್ದಾನೆ. ಆಲುವಾ ಅಸೀಸ್ ಜಂಕ್ಷನ್‌ನ ಫೋರ್ ವ್ಹೀಲ್ ಡ್ರೈವ್ ಎಂಬ ಸಂಸ್ಥೆಯಿಂದ ಕಳವು ನಡೆಸಲಾಗಿದೆ. ಟೆಸ್ಟ್‌ರೈಡ್‌ಗೆಂದು ನೀಡಿದ ಬೈಕ್‌ನೊಂದಿಗೆ ಯುವಕ ವೇಗದಲ್ಲಿ ಸಂಚರಿಸಿ ಪರಾರಿಯಾಗಿ ದ್ದನೆನ್ನ ಲಾಗಿದೆ. ಗಂಟೆಗಳು ಕಳೆದರೂ ಹಿಂತಿರುಗದ ಹಿನ್ನೆಲೆಯಲ್ಲಿ ಈತ ಕಳ್ಳನಾಗಿರಬೇಕೆಂದು ಶೋರೂಂ ನೌಕರರು ತಿಳಿದುಕೊಂಡರು. ಮಾರುಕಟ್ಟೆಯಲ್ಲಿ ಒಂದೂವರೆ ಲಕ್ಷ ರೂ.ಗೂ ಹೆಚ್ಚು ಬೆಲೆಬಾಳುವ ಬಜಾಜ್ ಕಂಪೆನಿಯ ಡೋಮಿ ನಾರ್ ಬೈಕ್ ಈತ ಅಪಹರಿಸಿದ್ದಾನೆ. …

ಮಸೀದಿಗೆ ತೆರಳುತ್ತಿರುವುದಾಗಿ ತಿಳಿಸಿ ಮನೆಯಿಂದ ಹೊರಟ ಉಸ್ತಾದ್‌ರ ಮೃತದೇಹ ಹೊಳೆಯಲ್ಲಿ ಪತ್ತೆ

ತಲಪಾಡಿ: ಮಸೀದಿಗೆ ತೆರಳುವುದಾಗಿ ಮನೆಯಲ್ಲಿ ತಿಳಿಸಿ ಹೊರಟ ಉಸ್ತಾದ್‌ರ ಮೃತದೇಹ ಹೊಳೆಯಲ್ಲಿ ಪತ್ತೆಯಾಗಿದೆ. ಕೋಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜನಾಡಿ, ಮಂಗಳಂದಿಯ ಮೊಹಮ್ಮದ್ ಅಶ್ರಫ್ ಮಾಲಿಕಿ (45)ರ ಮೃತದೇಹ ಗುರುಪುರ ಹೊಳೆಯಲ್ಲಿ ಪತ್ತೆಯಾಗಿದೆ. ಮಸೀದಿಗೆ ತೆರಳುತ್ತಿರುವುದಾಗಿ ತಿಳಿಸಿ ಇವರು ಮಂಗಳವಾರ ಸಂಜೆ ಮನೆಯಿಂದ ಹೊರಟಿದ್ದರು. ರಾತ್ರಿಯಾದರೂ ಹಿಂತಿರುಗದ ಹಿನ್ನೆಲೆಯಲ್ಲಿ ಸಂಬಂಧಿಕರು ಹಲವು ಸ್ಥಳಗಳಲ್ಲಿ ಹುಡುಕಾಟ ನಡೆಸಿದರಾದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಈ ಮಧ್ಯೆ ನಿನ್ನೆ ಬೆಳಿಗ್ಗೆ ಇವರ ಸ್ಕೂಟರ್ ಗುರುಪುರ ಸೇತುವೆಯ ಬಳಿಯಲ್ಲಿ ನಿಲುಗಡೆಗೊಳಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ …

ಮಸೀದಿಗೆ ನಮಾಜಿಗೆಂದು ತೆರಳುತ್ತಿದ್ದ ಮುಸ್ಲಿಂ ಲೀಗ್ ನೇತಾರ ಕುಸಿದುಬಿದ್ದು ನಿಧನ

ಬದಿಯಡ್ಕ: ಮಸೀದಿಗೆ ನಮಾಜಿಗೆಂದು ತೆರಳುತ್ತಿದ್ದ ವೇಳೆ ಕುಸಿದುಬಿದ್ದು ಮುಸ್ಲಿಂ ಲೀಗ್ ಮುಖಂಡ ಮೃತಪಟ್ಟ ಘಟನೆ ನಡೆದಿದೆ. ಚೆಂಗಳ ಪಂಚಾಯತ್ ಮಾಜಿ ಸದಸ್ಯ, ಪಂಚಾಯತ್ ಮುಸ್ಲಿಂ ಲೀಗ್  ಕಾರ್ಯಕಾರಿ ಸಮಿತಿ ಸದಸ್ಯ, ನೆಕ್ರಾಜೆ ನಿವಾಸಿ ಕೆ.ಎನ್. ಬಡುವನ್ ಕುಂಞಿ (66) ಮೃತಪಟ್ಟಿದ್ದಾರೆ. ಇಂದು ಬೆಳಿಗ್ಗೆ ನಮಾಜಿಗೆಂದು ಮಸೀದಿಗೆ ತೆರಳುತ್ತಿದ್ದಾಗ ಕುಸಿದುಬಿದ್ದಿದ್ದು, ಕೂಡಲೇ ಇಂದಿರಾನಗರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿ ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಮೃತರು ಪತ್ನಿ ಆಯಿಶಾ, ಮಕ್ಕಳಾದ ಸಿರಾಜ್, ಅನೈಸ್, ಸಾಬಿರ, ಸುಮಯ್ಯ, ಸಬೀನ, ಸೊಸೆಯಂದಿರಾದ ಬುಶ್ರಾ, …

ಮರ ಬಿದ್ದು ವಿದ್ಯುತ್ ಕಂಬ, ಆಟೋರಿಕ್ಷಾಕ್ಕೆ ಹಾನಿ: ಸಂಚಾರಕ್ಕೆ ಅಡಚಣೆ

ಬಾಯಾರು: ಮುಳಿಗದ್ದೆ-ಬೆರಿಪದವು ರಸ್ತೆಯ ಬದಿಯಾರ್‌ನಲ್ಲಿ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ವಿದ್ಯುತ್ ಕಂಬ ಹಾನಿಗೊಂಡಿದ್ದು, ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಟೋರಿಕ್ಷಾಕ್ಕೆ ಹಾನಿ ಉಂಟಾದ ಘಟನೆ ನಡೆದಿದೆ. ನಿನ್ನೆ ಬೆಳಿಗ್ಗೆ ಸುಮಾರು 10.45ರವೇಳೆ ರಸ್ತೆ ಬದಿಯಲ್ಲಿರುವ ಬೃಹತ್ ಮರವೊಂದು ಮಳೆಗೆ ವಿದ್ಯುತ್ ತಂತಿ ಮೇಲೆ ಬಿದ್ದಿದೆ. ಈ ವೇಳೆ ಮುಳಿಗದ್ದೆ ಭಾಗಕ್ಕೆ ತೆರಳುವ ಬಾಯಾರು ಪದವು ಆಟೋ ನಿಲ್ದಾಣದ ಆರೀಫ್ ಎಂಬವರ ಆಟೋರಿಕ್ಷಾಕ್ಕೆ ಹಾನಿ ಉಂಟಾಗಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ. ವಿದ್ಯುತ್ ಕಂಬಗಳು ಹಾನಿಗೊಂಡಿದ್ದು, ತಂತಿ ಚೆಲ್ಲಾಪಿಲ್ಲಿಗೊಂಡು …

ತೀವ್ರ ಗಾಳಿ, ಮಳೆ: ಬಂದ್ಯೋಡು ಶಿರಿಯದಲ್ಲಿ ಮನೆ ಕುಸಿದು ದಂಪತಿಗೆ ಗಾಯ

ಕುಂಬಳೆ: ಭಾರೀ ಗಾಳಿ, ಮಳೆಗೆ ಬಂದ್ಯೋಡು ಶಿರಿಯದಲ್ಲಿ ಮನೆಯೊಂದು ಕುಸಿದಿದೆ. ಇದರಿಂದ ದಂಪತಿಗಳಿಗೆ ಗಾಯವುಂಟಾಗಿದೆ. ಶಿರಿಯ ಉನ್ನತಿಯ ತಿರುಮಲೇಶ್ ಹಾಗೂ ಪತ್ನಿ ಗಾಯಗೊಂಡವರು. ನಿನ್ನೆ ಮಧ್ಯಾಹ್ನ 12 ಗಂಟೆ ವೇಳೆ ಘಟನೆ ನಡೆದಿದೆ. ಈ ಪರಿಸರದಲ್ಲಿ ಬಲವಾಗಿ ಬೀಸಿದ ಸುಳಿಗಾಳಿಗೆ ಹಾಗೂ ಭಾರೀ ಮಳೆಗೆ ತಿರುಮಲೇಶರ ಹೆಂಚು ಹಾಸಿದ ಮನೆ ಸಂಪೂರ್ಣವಾಗಿ ಕುಸಿದಿದೆ. ಈ ವೇಳೆ ದಂಪತಿ ಮನೆಯೊಳಗಿದ್ದರು. ಪತ್ನಿಯ ಕಾಲಿಗೆ ಗಾಯವುಂಟಾಗಿದೆ. ಇವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತ ಸಂಭವಿಸುವಾಗ ತಿರುಮಲೇಶರ ತಾಯಿ ಹಾಗೂ …

ಬಿದ್ದು ಸಿಕ್ಕಿದ ಪರ್ಸ್ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ 8ನೇ ತರಗತಿ ವಿದ್ಯಾರ್ಥಿ

ಹೊಸದುರ್ಗ: ರಸ್ತೆ ಬದಿಯಲ್ಲಿ ಬಿದ್ದು ಸಿಕ್ಕಿದ ಬೆಲೆಬಾಳುವ ದಾಖಲೆಗಳು ಅಡಕವಾದ ಪರ್ಸ್ 8ನೇ ತರಗತಿ ವಿದ್ಯಾರ್ಥಿ ವಾರೀಸು ದಾರನಿಗೆ ಹಸ್ತಾಂತರಿಸಿದನು. ನೀಲೇಶ್ವರ ಪರಿಪ್ಪುವಡ ವಿಭವ ಶಾಲಾ ಬಳಿಯಿಂದ 15ರಷ್ಟು ದಾಖಲೆಪತ್ರಗಳು ಅಡಕವಾಗಿರುವ ಪರ್ಸ್ ಛಾಯೋತ್ತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ೮ನೇ ತರಗತಿ ವಿದ್ಯಾರ್ಥಿ ಹಾಗೂ ಶಾಲೆಯ ಎನ್‌ಸಿಸಿ ಕೆಡೆಟ್ ಪಾಲಾ ನಿವಾಸಿ ದ್ರುಪದ್‌ನಿಗೆ ಬಿದ್ದು ಸಿಕ್ಕಿತ್ತು. ದಾಖಲೆಪತ್ರಗಳು  ಅಡಕವಾಗಿರುವ ಈ ಪರ್ಸ್‌ನ್ನು ದ್ರುಪದ್ ಕೂಡಲೇ ನೀಲೇಶ್ವರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದನು. ತನಿಖೆಯಲ್ಲಿ ಪರ್ಸ್‌ನ ವಾರೀಸುದಾರ ಪಾಲಕ್ಕಾಡ್ …

ಕುಂಬಳೆ ಪಂಚಾಯತ್ ನಿರ್ಲಕ್ಷ್ಯ ವಿರುದ್ಧ ವ್ಯಾಪಾರಿಗಳಿಂದ 6ರಂದು ಮಾರ್ಚ್

ಕುಂಬಳೆ: ಪಂಚಾಯತ್ ಹಾಗೂ ಪೊಲೀಸರು ಕುಂಬಳೆ ಪೇಟೆಯೊಂದಿಗೆ ತೋರುವ ಅವಗಣನೆಯನ್ನು ಪ್ರತಿಭಟಿಸಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕುಂಬಳೆ ಘಟಕ, ಮರ್ಚೆಂಟ್ಸ್ ಯೂತ್‌ವಿಂಗ್ ತೀವ್ರ ಆಂದೋಲನಕ್ಕೆ ನೇತೃತ್ವ ನೀಡಲಿದೆ ಎಂದು ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕುಂಬಳೆ ಘಟಕ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಹೋರಾಟದ ಮೊದಲ ಹಂತವಾಗಿ ಈ ತಿಂಗಳ 6ರಂದು ಬೆಳಿಗ್ಗೆ  10 ಗಂಟೆಗೆ ಪಂಚಾಯತ್ ಕಚೇರಿಗೆ ವ್ಯಾಪಾರಿಗಳು ಮಾರ್ಚ್ ನಡೆಸುವರು. ರಾಜ್ಯ ಸಮಿತಿ ಉಪಾಧ್ಯಕ್ಷ ಕೆ. ಅಹಮ್ಮದ್ ಶರೀಫ್ ಉದ್ಘಾಟಿಸುವರು. ರಾಜೇಶ್ ಮನಯತ್ ಅಧ್ಯಕ್ಷತೆ …

ಅನಾಥ ಮೃತದೇಹದ ಅಂತ್ಯ ಸಂಸ್ಕಾರ: ಕೊಂಡೆವೂರು ಶ್ರೀಗಳಿಂದ ಸ್ಪಷ್ಟೀಕರಣ

ಉಪ್ಪಳ: ಹಿಂದೂ ಕಾರ್ಯಕರ್ತನ ಮೃತದೇಹವನ್ನು ಮುಸ್ಲಿಂ ಮಹಿಳೆಯ ನೇತೃತ್ವದಲ್ಲಿ ಸಂಸ್ಕರಿಸಲಾಯಿತೆಂಬ ವರದಿಗಳ ಹಿನ್ನೆಲೆಯಲ್ಲಿ ಕೊಂಡೆವೂರು ಆಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹಾಗೂ ಮಂಗಲ್ಪಾಡಿ ಸೇವಾ ಭಾರತಿ ಸ್ಪಷ್ಟೀಕರಣ ನೀಡಿದೆ. ನಿನ್ನೆ ಕೊಂಡೆವೂರು ಆಶ್ರಮದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಸ್ವಾಮೀಜಿ ಸ್ಪಷ್ಟೀಕರಣ ನೀಡಿದ್ದಾರೆ. ಮೃತ ನಾರಾಯಣರ ಮೃತದೇಹವನ್ನು ಸಂಸ್ಕರಿಸಲು ಶೇಖ್ ಜಾಯಿದ್ ವೃದ್ಧಾಶ್ರಮದ ಸಂಚಾಲಕ ಇಕ್ಬಾಲ್ ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ಆಶ್ರಮದ ಕಡೆಯಿಂದ ಮಂಗಲ್ಪಾಡಿ ಸೇವಾ ಭಾರತಿಯ ಅಧ್ಯಕ್ಷ ರಘು ಚೆರುಗೋಳಿಯವರಿಗೆ ಜವಾಬ್ದಾರಿ ನೀಡಲಾಗಿತ್ತು. ಇದರಂತೆ ಜೂನ್ ೨೬ರಂದು ಮಧ್ಯಾಹ್ನ …

ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಆಶ್ರಯದಲ್ಲಿ ಕನ್ನಡ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ

ಕುಂಬಳೆ: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಾಸರಗೋಡು ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ಕನ್ನಡ ಪತ್ರಿಕಾ ದಿನಾಚರಣೆ ಹಾಗೂ ಪತ್ರಿಕಾ ದಿನ ಪ್ರಶಸ್ತಿ ಪ್ರಧಾನ ಸಮಾರಂಭ ಕುಂಬಳೆ ಸಮೀಪದ ನಾಯ್ಕಾಪು ಲಿಟ್ಲ್ ಲಿಲ್ಲಿ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಿನ್ನೆ ನಡೆಯಿತು.ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಉದ್ಘಾಟಿಸಿದರು. ಅವರು ಮಾತನಾಡಿ, ವಸ್ತು ನಿಷ್ಠ ವರದಿಗಾರಿಕೆಗೆ ಪತ್ರಿಕೆಗಳು ಹೊಣೆಗಾರಿಕೆಯಾಗಿದೆ. …

ಶಾಲೆಗಳ ರಜೆ ಸುದ್ದಿ ಬಗ್ಗೆ ನಕಲಿ ಪ್ರಚಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ

ಕಾಸರಗೋಡು: ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ನೀಡುವ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸಂದೇಶಗಳನ್ನು ಪ್ರಚಾರಪಡಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ತಿಳಿಸಿದ್ದಾರೆ. ಔದ್ಯೋಗಿಕ ಸೂಚನೆಗಳು ಪಿಆರ್‌ಡಿ ಪ್ರಕಟಣೆಗಳಾಗಿಯೂ, ಜಿಲ್ಲಾಧಿಕಾರಿಯವರ ಔದ್ಯೋಗಿಕ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಪೇಜ್‌ಗಳಲ್ಲೂ, ಜಿಲ್ಲಾ ಇನ್ ಫರ್ಮೇಶನ್ ಕಚೇರಿಯ ಫೇಸ್‌ಬುಕ್ ಪೇಜ್‌ನಲ್ಲೂ ಪ್ರಕಟಪಡಿಸಲಾ ಗುವುದು. ಅಲ್ಲದೆ ನಕಲಿ ಸುದ್ದಿಗಳನ್ನು ಪ್ರಚಾರಪಡಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.