ಕಾಸರಗೋಡು ತ್ಸುನಾಮಿ ಕಾಲನಿಯ ಸೇಫ್ಟಿ ಟ್ಯಾಂಕ್‌ನಿಂದ ತ್ಯಾಜ್ಯ ಹೊರಕ್ಕೆ: ಕಾಲನಿ ನಿವಾಸಿಗಳಿಂದ ನಗರಸಭಾ ಕಚೇರಿ ಮುಂದೆ ಧರಣಿ
ಕಾಸರಗೋಡು: 101 ಫ್ಲಾಟ್‌ಗಳಿರುವ ಕಾಸರಗೋಡು ತ್ಸುನಾಮಿ ಕಾಲನಿಯ ಸೇಫ್ಟಿ ಟ್ಯಾಂಕ್ ತುಂಬಿ ತುಳುಕುತ್ತಿದೆ. ಕಾಲನಿಯಲ್ಲಿರುವ ಇಷ್ಟು ಕುಟುಂಬಗಳ ತ್ಯಾಜ್ಯ ತುಂಬಲು ಪ್ರಸ್ತುತವುಳ್ಳ ಸೇಫ್ಟಿ ಟ್ಯಾಂಕ್ ಸಾಕಾಗದೆ ಇರುವುದು ಸಮಸ್ಯೆಗೆ ಕಾರಣವಾಗಿದೆ. ಆದ್ದರಿಂದ ಬೇರೆ ಸೇಫ್ಟಿ ಟ್ಯಾಂಕ್ ಸ್ಥಾಪಿಸಬೇಕು, ಅಲ್ಲದೆ ಸಾಂಕ್ರಾಮಿಕ ರೋಗಗಳಿಂದ ಜನರನ್ನು ಸಂರಕ್ಷಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಕಾಲನಿಯ ನಿವಾಸಿಗಳು ನಗರಸಭಾ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ. ೩೪ನೇ ವಾರ್ಡ್ ಕೌನ್ಸಿಲರ್ ಸುನಿಲ್ ಶೆಟ್ಟಿ ಧರಣಿ ಯನ್ನು ಉದ್ಘಾಟಿಸಿದರು. ಬಳಿಕ ನಗರಸಭಾ ಚೆಯರ್ ಪರ್ಸನ್ ಶಾಹಿನಾ …