ಕಾಸರಗೋಡು ತ್ಸುನಾಮಿ ಕಾಲನಿಯ ಸೇಫ್ಟಿ  ಟ್ಯಾಂಕ್‌ನಿಂದ ತ್ಯಾಜ್ಯ ಹೊರಕ್ಕೆ: ಕಾಲನಿ ನಿವಾಸಿಗಳಿಂದ ನಗರಸಭಾ ಕಚೇರಿ ಮುಂದೆ ಧರಣಿ

ಕಾಸರಗೋಡು: 101 ಫ್ಲಾಟ್‌ಗಳಿರುವ ಕಾಸರಗೋಡು ತ್ಸುನಾಮಿ ಕಾಲನಿಯ ಸೇಫ್ಟಿ  ಟ್ಯಾಂಕ್  ತುಂಬಿ ತುಳುಕುತ್ತಿದೆ. ಕಾಲನಿಯಲ್ಲಿರುವ  ಇಷ್ಟು ಕುಟುಂಬಗಳ  ತ್ಯಾಜ್ಯ ತುಂಬಲು  ಪ್ರಸ್ತುತವುಳ್ಳ ಸೇಫ್ಟಿ  ಟ್ಯಾಂಕ್  ಸಾಕಾಗದೆ ಇರುವುದು ಸಮಸ್ಯೆಗೆ ಕಾರಣವಾಗಿದೆ. ಆದ್ದರಿಂದ  ಬೇರೆ ಸೇಫ್ಟಿ ಟ್ಯಾಂಕ್ ಸ್ಥಾಪಿಸಬೇಕು, ಅಲ್ಲದೆ ಸಾಂಕ್ರಾಮಿಕ ರೋಗಗಳಿಂದ ಜನರನ್ನು ಸಂರಕ್ಷಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಕಾಲನಿಯ ನಿವಾಸಿಗಳು ನಗರಸಭಾ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ. ೩೪ನೇ ವಾರ್ಡ್ ಕೌನ್ಸಿಲರ್ ಸುನಿಲ್ ಶೆಟ್ಟಿ ಧರಣಿ ಯನ್ನು ಉದ್ಘಾಟಿಸಿದರು. ಬಳಿಕ  ನಗರಸಭಾ ಚೆಯರ್ ಪರ್ಸನ್ ಶಾಹಿನಾ ಸಲೀಂರಿಗೆ ಬೇಡಿಕೆಗಳನ್ನು  ಒಳಗೊಂಡ ಮನವಿ ಸಲ್ಲಿಸಲಾ ಯಿತು.  ಕೆಲವು ದಿನಗಳ ಹಿಂದೆ ಟ್ಯಾಂಕ್‌ನಿಂದ ತ್ಯಾಜ್ಯ ನೀರು ಹೊರಕ್ಕೆ ಹರಿದಿದ್ದು, ಭಾರೀ ಸಮಸ್ಯೆ ಸೃಷ್ಟಿಯಾಗಿತ್ತೆಂದು ನಿವಾಸಿಗಳು ತಿಳಿಸುತ್ತಿದ್ದಾರೆ. ಆ ವೇಳೆ  ಕಾಲನಿ  ನಿವಾಸಿಗಳೇ ಟ್ಯಾಂಕ್ ಶುಚೀಕರಿಸಿದ್ದರು.

RELATED NEWS

You cannot copy contents of this page