ಕಾಸರಗೋಡು: ಬೀರಂತಬೈಲು ಸುಗುಣ ನಿಲಯದ ಕೆ. ರಮಾನಂದ ಬಂಗೇರ (91) ನಿಧನ ಹೊಂದಿದರು. ಇವರು ಇಂಡಿಯನ್ ಆಯಿಲ್ ಕಾರ್ಪರೇಶನ್ ಕಂಪೆನಿಯಲ್ಲಿ ಉದ್ಯೋಗಿಯಾಗಿ ನಿವೃತ್ತರಾಗಿದ್ದರು. ಇವರ ಪತ್ನಿ ಸುಗುಣ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಕೀರ್ತಿ, ಲತಾ, ನರೇಶ್, ಅಳಿಯಂದಿರಾದ ಮಹೇಶ್, ಕುಮಾರ್, ಸೊಸೆ ಸವಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.




