ಮಂಜೇಶ್ವರದಲ್ಲಿ ಹಲಸು ಮೇಳಕ್ಕೆ ಚಾಲನೆ: ಜನರನ್ನು ಆಕರ್ಷಿಸಿದ ಮೇಳದಲ್ಲಿ ವೈವಿಧ್ಯಮಯ ಆಹಾರ ಪ್ರದರ್ಶನ

ಮಂಜೇಶ್ವರ: ಮಂಜೇಶ್ವರದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿರುವ ಮೂರು ದಿನಗಳ ‘ಹಲಸು ಹಣ್ಣಿನ ಮೇಳ’ಕ್ಕೆ ನಿನ್ನೆ ಮಂಜೇಶ್ವರ ಮೆಜೆಸ್ಟಿಕ್ ಮ್ಯಾನರ್ (ಕಲಾ ಸ್ಪರ್ಶಂ) ಸಭಾಂಗಣದಲ್ಲಿ ಚಾಲನೆ ದೊರೆಯಿತು. ಮಂಜೇಶ್ವರ ಪಂಚಾಯತ್‌ನ ಮಾಜಿ ಅಧ್ಯಕ್ಷೆ ಜೀನ್ ಲವಿನಾ ಮೊಂತೆರೋ ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡಿ ಹಲಸು ಬೆಳೆಗಾರರು ಗ್ರಾಹಕರಿಗೆ ನೇರವಾಗಿ ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭ ಪಡೆಯಲು ಹಲಸು ಮೇಳ ಕಾರ್ಯಕ್ರಮದ ಆಯೋಜನೆಯಾಗಿವೆ. ಅದರ ಜೊತೆ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ರೈತರು ತಾವು ಬೆಳದಂತಹ ಹಲಸನ್ನು …

ಪೈವಳಿಕೆ ಚಿತ್ತಾರಿ ಚಾವಡಿಯಿಂದ ಭಂಡಾರ ತೆರಳುವ ದಾರಿಗೆ ತಡೆ : ಆರ್‌ಡಿಒಗೆ ನೀಡಿದ ದೂರಿನಲ್ಲಿ ಕ್ರಮವಿಲ್ಲವೆಂದು ಆರೋಪ

ಪೈವಳಿಕೆ: ಚಿತ್ತಾರಿ ಚಾವಡಿಯಿಂದ ಬೋಳಂಗಳ ದೈವಸ್ಥಾನಕ್ಕೆ ಭಂಡಾರ ತೆರಳುವ ದಾರಿಯಲ್ಲಿ ಕಲ್ಲುಕಟ್ಟಿ ತಡೆ ಸೃಷ್ಟಿಸಿದ ಬಗ್ಗೆ ವಿಭಾಗೀಯ ಕಂದಾಯ ಅಧಿಕಾರಿಗೆ ನೀಡಿದ ದೂರಿನಲ್ಲಿ ಯಾವುದೇ ಕ್ರಮ ಉಂಟಾಗಿಲ್ಲವೆಂದು ದೂರುದಾರರಾದ ಪೈವಳಿಕೆ ಚಿತ್ತಾರಿ ಚಾವಡಿಯ ಯಜಮಾನ, ಮೆನೇಜಿಂಗ್  ಟ್ರಸ್ಟಿ ಪಿ. ರಂಗತ್ರೈ ಬಲ್ಲಾಳ ಅರಸರು ಆರೋಪಿಸಿದ್ದಾರೆ. ಕಳೆದ ಫೆಬ್ರವರಿ 9, 10ರಂದು ನಡೆದ ದೈವನೇಮಕ್ಕಾಗಿ ಚಿತ್ತಾರಿ ಚಾವಡಿಯಿಂದ ಭಂಡಾರ ತೆರಳುವ ವೇಳೆ ದಾರಿಯಲ್ಲಿ ತಡೆ ಸೃಷ್ಟಿಸಿದ ಬಗ್ಗೆ ವ್ಯಕ್ತಿಯೋರ್ವನ ವಿರುದ್ಧ ಕಾಸರಗೋಡು ಆರ್‌ಡಿಒರಿಗೆ ದೂರು ನೀಡಲಾಗಿತ್ತು. ಸುಮಾರು 800 …

ಟಿ.ಕೆ. ಅಬ್ದುಲ್ಲ ಹಾಜಿ ನಿಧನ

  ಬಂದ್ಯೋಡು: ಚಳ್ಳಂಗಯ ತಲೆಮೊಗರು ಬಾಣಿಯನ್‌ಮೂಲೆ ನಿವಾಸಿ ಟಿ.ಕೆ. ಅಬ್ದುಲ್ಲ ಹಾಜಿ (70) ನಿಧನ ಹೊಂದಿದರು. ಹಲವಾರು ವರ್ಷ ಕಾಲ ಕೊಲ್ಲಿಯಲ್ಲಿದ್ದರು. ಮೃತರು ಪತ್ನಿ ಆಸ್ಯಮ್ಮ, ಮಕ್ಕಳಾದ ಶಾಹುಲ್ ಹಮೀದ್ ಹಿಮಮಿ ಸಖಾಫಿ, ಆತಿಕ್ಕ, ಕಮರುನ್ನಿಸ, ಸುಮಾಯ್ಯ, ಅಳಿಯಂದಿ ರಾದ ಯೂಸಫ್ ಎ.ಕೆ., ಅಬ್ದುಲ್ ಸತ್ತಾರ್, ಸೊಸೆ ಮೈಮೂನ ಮೀಯ ಪದವು ಹಾಗೂ ಸಹೋದರ ಸಹೋದರಿ ಯರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.

ಹಿರಿಯ ಟೈಲರ್ ನಿಧನ

ಮುಳ್ಳೇರಿಯ: ಮುಳ್ಳೇರಿಯದ ಬಟ್ಟೆ ಅಂಗಡಿಯಲ್ಲಿ ಹಲವು ವರ್ಷಗಳ ಕಾಲ ಟೈಲರ್ ಆಗಿದ್ದ ತೆಕ್ಕೇಕರೆ ನಿವಾಸಿ ಸುಬ್ಬ ಪಾಟಾಳಿ ಯಾನೆ ಸುಭಾಷ್ (76) ನಿಧನ ಹೊಂದಿದರು. ಇತ್ತೀಚೆಗಿನಿಂದ ಕಾರಡ್ಕ ಗಾಂಧಿನಗರ ದಲ್ಲಿ ಟೈಲರ್ ಅಂಗಡಿ ನಡೆಸುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ಸ್ಕೂಟರ್ ಅಪಘಾತ ಸಂಭವಿಸಿ  ಚಿಕಿತ್ಸೆಯಲ್ಲಿದ್ದರು. ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ. ಮೃತರು ಪತ್ನಿ ಕಮಲಾಕ್ಷಿ, ಮಕ್ಕಳಾದ ಸಂತೆಷ್, ಗಿರೀಶ್, ಬಿಂದು, ಸೊಸೆ ಮೇಘ, ಅಳಿಯ ರಘುನಾಥ್ ಅಡ್ಕಸ್ಥಳ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಸಹೋದರರಾದ …