ಸಮುದ್ರ ಕಿನಾರೆಯಲ್ಲಿ ರುಂಡವಿಲ್ಲದ ಗಂಡಸಿನ ಮೃತದೇಹ ಪತ್ತೆ: ನಿಗೂಢತೆ, ಸಮಗ್ರ ತನಿಖೆ ಆರಂಭ

ಕಾಸರಗೋಡು: ಕಾಸರಗೋಡು ಲೈಟ್ ಹೌಸ್ ಬಳಿಯ ಸಮುದ್ರ ಕಿನಾರೆಯಲ್ಲಿ ರುಂಡವಿಲ್ಲದ ಅಪರಿಚಿತ ಗಂಡಸಿನ ಮೃತದೇಹ ಇಂದು ಮುಂಜಾನೆ ಪತ್ತೆಯಾಗಿದೆ.  ಮೃತದೇಹ ನಗ್ನವಾಗಿ ಕವುಚಿ ಬಿದ್ದ ಸ್ಥಿತಿಯಲ್ಲಿತ್ತು. ಇಂದು ಬೆಳಿಗ್ಗೆ ಮೀನುಗಾರಿಕೆಗೆ  ತೆರಳಿದ ಬೆಸ್ತರಿಗೆ  ಮೃತದೇಹ ಕಂಡುಬಂದಿದೆ.  ಅವರು ನೀಡಿದ ಮಾಹಿತಿಯಂತೆ  ಕಾಸರಗೋಡು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ಆರಂಭಿಸಿದ್ದಾರೆ. ಸುಮಾರು ಒಂದೂವರೆ ತಿಂಗಳ ಹಿಂದೆ ಈ ವ್ಯಕ್ತಿ  ಮೃತಪಟ್ಟಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ  ವ್ಯಕ್ತಿಸಮುದ್ರಕ್ಕೆ ಬಿದ್ದರೆ  ಮೃತದೇಹ ಸಮುದ್ರದಲ್ಲಿ ಒಂದೂವರೆ ತಿಂಗಳೊಳಗೆ ಪೂರ್ಣವಾಗಿ ಜೀರ್ಣಿಸುವುದಿಲ್ಲ. ಮಾತ್ರವಲ್ಲದೆ ರುಂಡ …

ಸೋಲಾರ್ ಡ್ರಯರ್‌ನಲ್ಲಿರಿಸಿದ್ದ 235 ಕಿಲೋ ಅಡಿಕೆ ಕಳವು: ಮೂವರು ಆರೋಪಿಗಳ ಬಂಧನ

ಬದಿಯಡ್ಕ: ಸೋಲಾರ್ ಡ್ರಯರ್‌ನಲ್ಲಿ ಇರಿಸಿದ್ದ 235 ಕಿಲೋ ಅಡಿಕೆ ಕಳವುಗೈದ ಪ್ರಕರಣದಲ್ಲಿ ಮೂರು ಮಂದಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಕಿನ್ನಿಂಗಾರು ಕೈಪಂಗಳ  ನಿವಾಸಿ  ಕೆ. ಗಣೇಶ್ (29), ಗುತ್ಯಡ್ಕ ನಿವಾಸಿ ಶಿಶಿರ್ ಕುಮಾರ್ (19), ಸತೀಶ್ ಕುಮಾರ್ (31) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಇವರನ್ನು ಪೊಲೀಸರು ನ್ಯಾಯಾಲ ಯದಲ್ಲಿ ಹಾಜರುಪಡಿ ಸಿದ್ದು, ಈ ವೇಳೆ ಆರೋಪಿಗಳಿಗೆ ರಿಮಾಂಡ್ ವಿಧಿಸಲಾಗಿದೆ. ಏತಡ್ಕ ನಿವಾಸಿ ಇಬ್ರಾಹಿಂ ಎಂಬವರ ಮನೆ ಸಮೀಪದ ಸೋಲಾರ್ ಡ್ರಯರ್‌ನಲ್ಲಿ ಇರಿಸಿದ್ದ ಅಡಿಕೆಯನ್ನು ಜುಲೈ 2 ಹಾಗೂ …

ಅಸೌಖ್ಯ: ಗಲ್ಫ್ ಉದ್ಯಮಿ ನಿಧನ

ಉಪ್ಪಳ: ಮಣ್ಣಂಗುಳಿ ನಿವಾಸಿ ದಿ| ಪಿ.ಬಿ ಅಬೂಬಕ್ಕರ್ ಪಾರಕಟ್ಟರ ವರ ಪುತ್ರ ದುಬೈಯಲ್ಲಿ ಉದ್ಯಮಿ ಯಾಗಿರುವ ಮೊಯಿನುದ್ದೀನ್ ಶೆಹದಿಲ್ (43) ನಿನ್ನೆ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಹಲವು ವರ್ಷಗಳಿಂದ ದುಬೈಯಲ್ಲಿ ಉದ್ಯಮಿಯಾಗಿದ್ದು, ಹೃದಯದ ಅಸೌಖ್ಯ ನಿಮಿತ್ತ 4 ದಿನಗಳ ಹಿಂದೆ ಊರಿಗೆ ಆಗಮಿಸಿದ್ದರು. ಕಳೆದ ಮೂರು ದಿನಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದುಬೈ ಮಣ್ಣಂಗುಳಿ ಕಲ್ಚರಲ್ ಸೆಂಟರ್ ಸಂಸ್ಥೆಯ ಮಾಜಿ ಅಧ್ಯಕ್ಷರಾಗಿದ್ದರು. ಮೃತರು ತಾಯಿ ಕೈರುನ್ನೀಸ, ಪತ್ನಿ ಸಕೀನ, ಮಕ್ಕಳಾದ ಸಿಮ್ರಾನ್, …

ಯುವಕನನ್ನು ಸೀಮೆ ಎಣ್ಣೆ ಸುರಿದು ಕಿಚ್ಚಿಟ್ಟು ಕೊಲೆಗೈಯ್ಯಲೆತ್ನ: ಯುವತಿ ಸಹಿತ ನಾಲ್ಕು ಮಂದಿ ಪೊಲೀಸ್ ಕಸ್ಟಡಿಯಲ್ಲಿ ಎಎಸ್‌ಪಿ ನೇತೃತ್ವದಲ್ಲಿ ಸಮಗ್ರ ತನಿಖೆ ಆರಂಭ

ಕುಂಬಳೆ: ಮೊಗ್ರಾಲ್‌ನಲ್ಲಿ ಯುವಕನನ್ನು ತಡೆದು ನಿಲ್ಲಿಸಿದೇಹಕ್ಕೆ ಸೀಮೆ ಎಣ್ಣೆ ಸುರಿದು ಕಿಚ್ಚಿಟ್ಟು ಕೊಲೆ ಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ಯುವತಿ ಸಹಿತ ನಾಲ್ಕು ಮಂದಿ ಯನ್ನು ಕುಂಬಳೆ ಪೊಲೀಸರು ಕಸ್ಟಡಿಗೆ ತೆಗೆದು ತನಿಖೆ ನಡೆಸುತ್ತಿದ್ದಾರೆ. ತಮಿಳುನಾಡಿನ ನಾಗಪಟ್ಟಣಂ ನಿವಾಸಿಗಳಾದ ಶರವಣ, ಲಿಂಗ, ಮಾರಿ ಹಾಗೂ ವೆಳ್ಳುಪುರಂ  ನಿವಾಸಿಯಾದ ಇನ್ನೋರ್ವ  ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಕರ್ನಾಟಕದ ಹುಬ್ಬಳ್ಳಿ ನಿವಾಸಿಯೂ, ಮೊಗ್ರಾಲ್ ಕೊಪ್ಪಳದಲ್ಲಿ ವಾಸಿಸುವ ಸಾರಣೆ  ಮೇಸ್ತ್ರಿಯಾದ  ಅಬ್ದುಲ್ ಗಫೂರ್ (45)ರ ದೂರಿನ  ಮೇರೆಗೆ ಇವರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿ ಕಸ್ಟಡಿಗೆ …

ಮಧೂರು ಕ್ಷೇತ್ರದ ಪಾರಂಪರ್ಯ ಅರ್ಚಕ ವೇಣುಗೋಪಾಲ ಕಲ್ಲೂರಾಯ ನಿಧನ

ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಪಾರಂಪರ್ಯ ಅರ್ಚಕ ವೇಣುಗೋಪಾಲ ಕಲ್ಲೂರಾಯ (78) ನಿಧನ ಹೊಂದಿದರು. ಸ್ವಗೃಹವಾದ ಮಧೂರು ಮೇಲಿನಮನೆಯಲ್ಲಿ ನಿನ್ನೆ ರಾತ್ರಿ ನಿಧನ ಸಂಭವಿಸಿದೆ. ಶಿವಳ್ಳಿ ಬ್ರಾಹ್ಮಣಸಭಾ ಕಾಸರಗೋಡು ವಲಯ ಸಮಿತಿ ಮಾಜಿ ಅಧ್ಯಕ್ಷ, ಕೇಂದ್ರ ಸಮಿತಿ ಮಾಜಿ ಉಪಾಧ್ಯಕ್ಷರೂ ಆಗಿದ್ದರು. ನಿವೃತ್ತ ಶಿಕ್ಷಕನೂ ಆಗಿದ್ದ ಇವರು ಯಕ್ಷಗಾನ ಕಲಾವಿದರೂ, ಸಂಗೀತ ವಿದ್ವಾನ್, ಪುರೋಹಿತ ಹಾಗೂ ಧಾರ್ಮಿಕ, ಸಾಮಾಜಿಕ ಮುಂದಾಳುವೂ ಆಗಿದ್ದರು. ಮೃತರ ಅಂತ್ಯಸಂಸ್ಕಾರ ಇಂದು ಬೆಳಿಗ್ಗೆ ನಡೆಯಿತು. ಮೃತರು ಪತ್ನಿ ಕಮಲಾಕ್ಷಿ ಯಾನೆ …

ಉಸ್ಬಕಿಸ್ಥಾನದಲ್ಲಿ ಕೇರಳೀಯ ವಿದ್ಯಾರ್ಥಿನಿಯ ಕೊಲೆಗೆ ಕಾರಣ ಮತಾಂತರಕ್ಕೆ ನಿರಾಕರಣೆ -ಆರೋಪ: ತನಿಖೆ ಕ್ರೈಂ ಬ್ರಾಂಚ್‌ಗೆ ಹಸ್ತಾಂತರ

ಕೊಚ್ಚಿ: ಉಸ್ಬಕಿಸ್ಥಾನದಲ್ಲಿ  ಆಲಪ್ಪುಳ ನಿವಾಸಿಯಾದ ಮೆಡಿಕಲ್ ವಿದ್ಯಾರ್ಥಿನಿಯನ್ನು ಸಹಪಾಠಿಯಾದ ಮಲಪ್ಪುರಂ ನಿವಾಸಿ ತಲೆಗೆ ಹೊಡೆದು ಕೊಲೆಗೈಯ್ಯಲು ಕಾರಣ ಆಕೆ ಮತಾಂತರಗೊಳ್ಳಲು ನಿರಾಕರಿಸಿರುವುದೇ ಆಗಿದೆಯೆಂಬ ಆರೋಪ ಕೇಳಿಬಂದಿದೆ.  ಆಲಪ್ಪುಳದ ಹರಿಪ್ಪಾಡ್ ಪಿಲಾಕುಳ ಪುದುಕ್ಕಾಡ್‌ನ ಸುಪ್ರಭಾ ಭವನದ ಬಸಂತ್ ಹಾಗೂ ಮಿನಿ ದಂಪತಿಯ ಪುತ್ರಿ ಸಾವರಿಯ (22) ಪೈಶಾಚಿಕ ರೀತಿಯಲ್ಲಿ ಕೊಲೆಗೈಯ್ಯಲ್ಪಟ್ಟ ದುರ್ದೈವಿಯಾಗಿದ್ದಾಳೆ.   ಈ ಪ್ರಕರಣಕ್ಕೆ ಸಂಬಂಧಿಸಿ ಸಾವರಿಯಳ ಸಹಪಾಠಿಯೂ ಮಲಪ್ಪುರಂ ಪೆರಿಂದಲ್‌ಮಣ್ಣ ನಿವಾಸಿಯಾದ ಸದರುಲ್ ಅನಂ (23) ಎಂಬಾತ ನನ್ನು ಉಸ್ಬಕಿಸ್ಥಾನದಲ್ಲಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ …

ನಿವೃತ್ತ ಸಾರಿಗೆ ಅಧಿಕಾರಿ ಮನೆಯಿಂದ 13 ಕಿಲೋ ಚಿನ್ನಾಭರಣ, ಒಂದೂವರೆ ಕೋಟಿ ರೂ. ವಶ

ಲಕ್ನೋ: ಅಸಿಸ್ಟೆಂಟ್ ರೀಜಿನಲ್ ಟ್ರಾನ್ಸ್ ಪೋರ್ಟ್ ಆಫೀಸರ್ ಆಗಿದ್ದ ವ್ಯಕ್ತಿಯ ಮನೆಯಿಂದ 13 ಕಿಲೋ ಚಿನ್ನ ಹಾಗೂ ಒಂದೂವರೆ ಕೋಟಿ ರೂಪಾಯಿಗಳನ್ನು  ವಿಜಿಲೆನ್ಸ್ ಅಧಿಕಾರಿಗಳು ವಶಪಡಿಸಿಕೊಂ ಡಿದ್ದಾರೆ. ಉತ್ತರಪ್ರದೇಶದ ಆಗ್ರಾ ಎಆರ್‌ಟಿಒ ಆಗಿದ್ದ ಲಲಿತ್ ಕುಮಾರ್ ಎಂಬವರ ಮನೆಯಿಂದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ಹಣವನ್ನು ವಶಪಡಿಸಲಾಗಿದೆ. ಇವುಗಳನ್ನು ಮನೆಯ ಗೋಡೆ ಹಾಗೂ ಪೀಠೋಪಕರಣಗಳ ಮಧ್ಯೆ ಗುಪ್ತ ಕಪಾಟು ನಿರ್ಮಿಸಿ ಅದಕ್ಕೆ ಡಿಜಿಟಲ್ ಲಾಕರ್ ಅಳವಡಿಸಿ ಬಚ್ಚಿಡಲಾಗಿತ್ತು.  ಗೋಡೆ ಹಾಗೂ ಪೀಠೋಪಕ ರಣಗಳಲ್ಲಿ ಗುಪ್ತವಾಗಿ  ಕಪಾಟುಗಳನ್ನು ನಿರ್ಮಿಸಿರು …

ಹಾಸ್ಟೆಲ್ ಬಸ್ ಹಸ್ತಾಂತರ ಕಾರ್ಯಕ್ರಮದಲ್ಲಿ ನೌಕರನಿಂದ ಪೂಜೆ: ಕೇರಳ ಕೇಂದ್ರ ವಿ.ವಿಯಲ್ಲಿ ವಿವಾದ

ಕಾಸರಗೋಡು: ಪೆರಿಯ ಕೇಂದ್ರ ಕೇರಳ ವಿ.ವಿಯಲ್ಲಿ ಮತ್ತೆ ಪೂಜೆ ವಿವಾದ ಉಂಟಾಗಿದೆ. ವಿವಿಯ ಹುಡುಗರ ಹಾಸ್ಟೆಲ್‌ಗೆ ಕೆನರ ಬ್ಯಾಂಕ್ ನೀಡಿದ ಬಸ್‌ನ ಕೀಲಿಕೈ ಹಸ್ತಾಂತರ ಕಾರ್ಯಕ್ರಮದ ಪೂರ್ವಭಾವಿಯಾಗಿ ವಾಹನದ ಪೂಜೆ ನಡೆಸಲಾಗಿದೆ. ವಿ.ವಿಯ ನೌಕರ ಪೂಜೆ ನಡೆಸಿರುವುದು.ವಿ.ವಿಯ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕವಾದ ಕಾರ್ಯಕ್ರಮಗಳನ್ನು ನಡೆಸಬಾರದೆಂಬ ಮಾನದಂಡವನ್ನು ಮೀರಿ ಪೂಜೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ವಿಶ್ವವಿದ್ಯಾನಿಲಯದ ಧಾರ್ಮಿಕ ಸೌಹಾರ್ದತೆಯನ್ನು ಹಾನಿಗೊಳಿಸಲಿರುವ ಪ್ರಜ್ಞಾಪೂರ್ವಕವಾದ ಯತ್ನದಂಗವಾಗಿ ಹೀಗೆ ಮಾಡಲಾಗಿದೆ ಎಂದು ಎಸ್‌ಎಫ್‌ಐ ಆರೋಪಿಸಿದೆ. ವೈಸ್ ಚಾನ್ಸಲರ್ ಪ್ರೊ. ಸಿದ್ದು ಪಿ. ಅಲ್ಗುರ್, …

ಪ್ರಧಾನಮಂತ್ರಿ ವಯೋಶ್ರೀ ಯೋಜನೆಯಲ್ಲಿ ಬಿಜೆಪಿಯಿಂದ ವ್ಹೀಲ್ ಚೆಯರ್ ವಿತರಣೆ

ಉಪ್ಪಳ: ಅನಾರೋಗ್ಯದ ಕಾರಣ ದಿಂದಾಗಿ ಮೊಣಕಾಲಿನ ಮೇಲ್ಭಾಗ ದವರೆಗೆ ಕತ್ತರಿಸಬೇಕಾಗಿ ಬಂದ ಮಂಗಲ್ಪಾಡಿ ಪಂಚಾಯತ್‌ನ ಕುಬ ಣೂರು, ಪಂಜ ನಿವಾಸಿ ಸುರೇಶ್‌ರಿಗೆ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಪ್ರಧಾನಮಂತ್ರಿ ವಯೋ ಶ್ರೀ ಯೋಜನೆಯಡಿ ಗಾಲಿಕುರ್ಚಿಯನ್ನು ನಿನ್ನೆ ವಿತರಿಸಿದರು.ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ ವಲ್ಸರಾಜ್, ಬಿಜೆಪಿ ಕುಂಬಳೆ ಮಂಡಲ ಉಪಾಧ್ಯಕ್ಷ ವಿಕ್ರಂ ಪೈ, ಪಂಚಾಯತ್ ಸದಸೆ್ಯ ಸಾಕ್ಷಿ ಶೆಟ್ಟಿ, ಮಂಗಲ್ಪಾಡಿ ನಾರ್ತ್ ಬಿಜೆಪಿ ಅಧ್ಯಕೆÀ್ಷ ರೇವತಿ ಚೆರುಗೋಳಿ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರಾದ ಬಾಬು ಕುಬಣೂರು, ಹರಿನಾಥ ಭಂಡಾರಿ, …

ಕೊಲ್ಲೂರು ಮುಕಾಂಬಿಕಾ ಕ್ಷೇತ್ರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ವಿ.ಡಿ. ಸತೀಶನ್‌ರಿಗೆ ಸ್ವಾಗತ

ಕೊಲ್ಲೂರು: ಮುಖ್ಯಮಂತ್ರಿ ಯಾದ ಬಳಿಕ ಪ್ರಥಮವಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ ವಿ.ಡಿ. ಸತೀಶನ್ ತಲುಪಿದ್ದಾರೆ. ಕ್ಷೇತ್ರ ಟ್ರಸ್ಟಿ ಸದಸ್ಯರು ಸಹಿತವಿರುವವರು ಇವರಿಗೆ ಪೂರ್ಣಕುಂಭ ಸ್ವಾಗತ ನೀಡಿದ್ದಾರೆ. ಕ್ಷೇತ್ರದಲ್ಲಿ ಪ್ರತ್ಯೇಕ ಪೂಜೆಗಳನ್ನು ವಿ.ಡಿ. ಸತೀಶನ್ ನೆರವೇರಿಸಿದರು. ಇಂದು ಬೆಳಿಗ್ಗೆ 6 ಗಂಟೆಗೆ ಇವರು ಕ್ಷೇತ್ರಕ್ಕೆ ತಲುಪಿದ್ದಾರೆ. ಚಂಡಿಕಾ ಹೋಮದಲ್ಲಿ ಪೂರ್ಣ ಸಮಯ ಮುಖ್ಯಮಂತ್ರಿ ಭಾಗವ ಹಿಸಿದ್ದು, ಆ ಬಳಿಕ ಮಂಗಳೂರು ಮೂಲಕ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ. ಕ್ಷೇತ್ರ ಪರಿಸರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಿನ್ನೆ ರಾತ್ರಿ 11 …