ಮಧೂರು ಶ್ರೀ ಕಾಳಿಕಾಂಬಾ ಮಠ ಸಹಿತ ವಿವಿಧ ಕ್ಷೇತ್ರಗಳಿಗೆ ಸಂಕಲ್ಪ ಯಾತ್ರೆ ನಡೆಸಿದ ಆನೆಗುಂದಿ ಜಗದ್ಗುರು

ಕಾಸರಗೋಡು: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರ 22ನೇ ವರ್ಷದ ಪರಾಭವ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆ ಜುಲೈ 29ರಿಂದ ಸೆ. 26ರ ವರೆಗೆ ಪಡುಕುತ್ಯಾರಿನ ಶ್ರೀ ಮಠದಲ್ಲಿ ನಡೆಯಲಿದ್ದು ಇದರಂಗವಾಗಿ   ಚಾತುರ್ಮಾಸ್ಯ ವ್ರತ ಸಂಕಲ್ಪ ಯಾತ್ರೆ ನಡೆಯಿತು. ಜೂನ್ 18ರಂದು ಆರಂಭಗೊಂಡ ಯಾತ್ರೆಯಂಗವಾಗಿ  ಸ್ವಾಮೀಜಿ ಯವರು ಬಂಗ್ರಮಂಜೇ ಶ್ವರದ ಶ್ರೀ ಕಾಳಿಕಾಪರಮೇಶ್ವರಿ ದೇವಸ್ಥಾನ, ಆರಿಕ್ಕಾಡಿಯ ಕಾಳ ಶ್ರೀ ಕಾಳಿಕಾಂಬಾ ದೇವಸ್ಥಾನ ಹಾಗೂ ಕಾಞಂಗಾಡ್‌ನ ಅಜಾನೂರು ಶ್ರೀಮದ್ ಪರಶಿವ …

ಮಾಜಿ ಮುಖ್ಯಮಂತ್ರಿ ಉಮ್ಮನ್‌ಚಾಂಡಿ ಸಂಸ್ಮರಣೆ, ರಕ್ತದಾನ ಶಿಬಿರ

ಮಂಜೇಶ್ವರ : ಮಾಜಿ ಮುಖ್ಯಮಂತ್ರಿ ದಿ| ಉಮ್ಮನ್ ಚಾಂಡಿಯವರ ತೃತೀಯ ವಾರ್ಷಿಕ ಸಂಸ್ಮರಣೆ ಹಾಗೂ ರಕ್ತದಾನ ಶಿಬಿರ ಮಜೀರ್ ಪಳ್ಳದಲ್ಲಿ ಜರಗಿತು. ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಜರಗಿದ ಕಾರ್ಯಕ್ರಮವನ್ನು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಸೋಮಪ್ಪ ಉದ್ಘಾಟಿಸಿದರು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಾಮೋದರ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ ಪ್ರಾಸ್ತಾವಿಕ ಭಾಷಣಗೈದು ಸ್ವಾಗತಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಕಬೈಲು ಸತೀಶ ಅಡಪ ಮುಖ್ಯ ಅತಿಥಿಯÁಗಿ ಭಾಗವಹಿಸಿದ್ದರು. ಮಂಜೇಶ್ವರ …

ನರೇಂದ್ರ ಮೋದಿ ಸರಕಾರದ ಉತ್ತಮ ಆಡಳಿತ ವಿಶ್ವಕ್ಕೆ ಮಾದರಿ- ನವ್ಯಾ ಹರಿದಾಸ್

ಪೆರ್ಲ: ನರೇಂದ್ರ ಮೋದಿ ಸರಕಾರದ ಉತ್ತಮ ಆಡಳಿತ ವಿಶ್ವಕ್ಕೆ ಮಾದರಿಯಾಗಿದೆ ಎಂದು, ವಿಜ್ಞಾನ ತಾಂತ್ರಿಕ ವಲಯ ಸಹಿತ ಭಾರತ ಸಾಧಿಸಿದ ಮುನ್ನಡೆ ಅಭಿವೃದ್ಧಿ ಹೊಂದಿದ ದೇಶಗಳು ಕೂಡಾ ಆಶ್ಚರ್ಯ ಹುಟ್ಟಿಸಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ನವ್ಯಾ ಹರಿದಾಸ್ ನುಡಿದರು. ಬಿಜೆಪಿ ಕುಂಬಳೆ ಮಂಡಲ ಆಯೋಜಿಸಿದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನ್ ದ್ವಿದಿನ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೇಶದ ಅರ್ಧದಷ್ಟಿರುವ ಮಹಿಳಾ ಸಮಾಜದ ಕ್ಷೇಮ ಖಚಿತಪಡಿಸಲು ನರೇಂದ್ರ ಮೋದಿ ಸರಕಾರಕ್ಕೆ …