ಮಧೂರು ಶ್ರೀ ಕಾಳಿಕಾಂಬಾ ಮಠ ಸಹಿತ ವಿವಿಧ ಕ್ಷೇತ್ರಗಳಿಗೆ ಸಂಕಲ್ಪ ಯಾತ್ರೆ ನಡೆಸಿದ ಆನೆಗುಂದಿ ಜಗದ್ಗುರು

ಕಾಸರಗೋಡು: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರ 22ನೇ ವರ್ಷದ ಪರಾಭವ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆ ಜುಲೈ 29ರಿಂದ ಸೆ. 26ರ ವರೆಗೆ ಪಡುಕುತ್ಯಾರಿನ ಶ್ರೀ ಮಠದಲ್ಲಿ ನಡೆಯಲಿದ್ದು ಇದರಂಗವಾಗಿ   ಚಾತುರ್ಮಾಸ್ಯ ವ್ರತ ಸಂಕಲ್ಪ ಯಾತ್ರೆ ನಡೆಯಿತು. ಜೂನ್ 18ರಂದು ಆರಂಭಗೊಂಡ ಯಾತ್ರೆಯಂಗವಾಗಿ  ಸ್ವಾಮೀಜಿ ಯವರು ಬಂಗ್ರಮಂಜೇ ಶ್ವರದ ಶ್ರೀ ಕಾಳಿಕಾಪರಮೇಶ್ವರಿ ದೇವಸ್ಥಾನ, ಆರಿಕ್ಕಾಡಿಯ ಕಾಳ ಶ್ರೀ ಕಾಳಿಕಾಂಬಾ ದೇವಸ್ಥಾನ ಹಾಗೂ ಕಾಞಂಗಾಡ್‌ನ ಅಜಾನೂರು ಶ್ರೀಮದ್ ಪರಶಿವ ವಿಶ್ವಕರ್ಮ ದೇವಸ್ಥಾನಗಳಲ್ಲಿ ದೇವರ ದರ್ಶನ ಪಡೆದು ಯಾತ್ರೆಯ ಸಮಾರೋ ಪವಾಗಿ ಮಧೂರಿನ  ಶ್ರೀ ಕಾಳಿಕಾಂಬಾ ಮಠಕ್ಕೆ ಆಗಮಿಸಿದರು.

ಈ ಸಂದರ್ಭದಲ್ಲಿ  ಆನೆಗುಂದಿ ಮಠದ ಪ್ರತಿಷ್ಠಾನದ ವತಿಯಿಂದ ಮಧೂರು ಶ್ರೀ ಕಾಳಿ ಕಾಂಬಾ ಮಠದ ಪದಾಧಿಕಾರಿಗಳಿಗೆ ಚಾತುರ್ಮಾಸ್ಯ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಹಸ್ತಾಂತರಿಸಲಾಯಿತು. ಧಾರ್ಮಿಕ ಸಭೆಯಲ್ಲಿ ಶ್ರೀ ಮಠದ ಅಧ್ಯಕ್ಷ ಎಂ. ಪುರುಷೋತ್ತಮ ಆಚಾರ್ಯ ಅಧ್ಯಕ್ಷ ವಹಿಸಿದ್ದರು. ಜಗದ್ಗುರುಗಳ ಪ್ರಧಾನ ಆಪ್ತ ಸಹಾಯಕ ಲೋಲಾಕ್ಷ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಲವರು ಉಪಸ್ಥಿತರಿದ್ದರು.

You cannot copy contents of this page