ಮಂಜೇಶ್ವರ : ಮಾಜಿ ಮುಖ್ಯಮಂತ್ರಿ ದಿ| ಉಮ್ಮನ್ ಚಾಂಡಿಯವರ ತೃತೀಯ ವಾರ್ಷಿಕ ಸಂಸ್ಮರಣೆ ಹಾಗೂ ರಕ್ತದಾನ ಶಿಬಿರ ಮಜೀರ್ ಪಳ್ಳದಲ್ಲಿ ಜರಗಿತು. ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಜರಗಿದ ಕಾರ್ಯಕ್ರಮವನ್ನು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಸೋಮಪ್ಪ ಉದ್ಘಾಟಿಸಿದರು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಾಮೋದರ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ ಪ್ರಾಸ್ತಾವಿಕ ಭಾಷಣಗೈದು ಸ್ವಾಗತಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಕಬೈಲು ಸತೀಶ ಅಡಪ ಮುಖ್ಯ ಅತಿಥಿಯÁಗಿ ಭಾಗವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತು ಉಪಾಧ್ಯಕ್ಷೆ ಕಮಲಾಕ್ಷಿ ಕೆ., ಮಿಂಜ ಪಂಚಾಯತು ಉಪಾಧ್ಯಕ್ಷೆ ಉಷಾ ಪೂಂಜ, ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಮ್ಯ ಕೆ, ಯೂತ್ ಕಾಂಗ್ರೆಸ್ ಅಧ್ಯಕ್ಷ ಬಾತಿಷ್ ಅಹಮದ್, ವರ್ಕಾಡಿ ಮಂಡಲ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಅರಿಬೈಲು, ಪಂಚಾಯತ್ ಸದಸ್ಯ ಉಮೇಶ್ ಶೆಟ್ಟಿ ಅಸನ ಬೈಲು, ಮುಖಂಡರಾದ ದಿವಾಕರ ಎಸ್.ಜೆ, ಶಾಂತಾ ಆರ್. ನಾಯ್ಕ್, ಅಸೀಸ್ ಕಲ್ಲೂರು, ಮೊಹಮ್ಮದ್ ಹನೀಫ್ ಎಚ್.ಎ, ಮಮತಾ ದಿವಾಕರ್, ಸದಾಶಿವ ಕೆ, ಕಂಚಿಲ ಮೊಹಮ್ಮದ್, ಬಿ.ಕೆ.ಮೊಹಮ್ಮದ್, ಜಗದೀಶ್ ಮೂಡಂಬೈಲು, ಅಬ್ದುಲ್ ಖಾದರ್ ಹಾಜಿ ತಲೇಕಳ, ಫ್ರಾನ್ಸಿಸ್ ಡಿಸೋಜಾ, ಮೊಹಮ್ಮದ್ ಮಜಾಲ್, ವಿನೋದ್ ಕುಮಾರ್ ಪಾವೂರು, ಶೇಕ್ ಅಬ್ಬಾಸ್, ಮೊಹಮ್ಮದ್ ಕೆದುಂಬಾಡಿ, ಅಬುಸಾಲಿ, ಕೀರ್ತನ್ ಶೆಟ್ಟಿ, ಮೂಸ ಧರ್ಮನಗರ, ವೇದ ನೀರೊಳಿಕೆ, ರೋನಿ ಡಿಸೋಜಾ, ರಾಮಚಂದ್ರ ಶೆಟ್ಟಿ ಬೆಜ್ಜ, ಇಮ್ತಿಯಾಜ್ ಅಹಮದ್, ಸೈತ್ ಶೆಟ್ಟಿ, ಐತಪ್ಪ, ಅಬೂಬಕ್ಕರ್ ಕಿನ್ಯಜೆ, ಗಂಗಾಧರ ಕೆ, ವಸಂತರಾಜ ಶೆಟ್ಟಿ, ಬೌತಿಸ್ ಡಿಸೋಜ, ಅದ್ರಾಮ ಕೋಳ್ಯೂರು, ಕೆ ಎಚ್ ಅಬೂಬಕರ್, ವಸಂತ ಮಾಸ್ತರ್, ಸುಧಾಕರ ಉಜಿರೆ, ಸಿರಾಜುದ್ದೀನ್ ತಂಙಳ್, ನಫೀಸತ್ ಮಿಸ್ರಿಯಾ, ರಾಬಿಯಾ, ಇಸ್ಮಾಯಿಲ್, ಸಿರಾಜ್ ಧರ್ಮನಗರ ಭಾಗವಹಿಸಿದರು. ಮುಸ್ಲಿಂ ಲೀಗ್ ಮುಖಂಡರಾದ ಎಕೆಎಂ ನೌಫಲ್, ಅಬ್ದುಲ್ ಮಜೀದ್ ಬಿ.ಎ, ಇಲ್ಯಾಸ್ ತೂಮಿನಾಡು, ಅನ್ಸಾರ್ ವರ್ಕಾಡಿ, ರಜಾಕ್ ಕೆದಂಬಾಡಿ,ಬದ್ರುದ್ದೀನ್ ಪಾವೂರು, ಮುಂತಾದವರು ಶುಭ ಹಾರೈಸಿದರು.







