ಫಿಫಾ ವಿಶ್ವಕಪ್ ಗೆದ್ದ ಸ್ಪೇನ್ : ಕಣ್ಣೀರಿಟ್ಟ ಮೆಸ್ಸಿ
ನ್ಯೂಜೆರ್ಸಿ: 2026 ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿದ ಸ್ಪೇನ್ ವಿಶ್ವ ಚಾಂಪಿಯನ್ ಪ್ರಶಸ್ತಿ ಗೆದ್ದು ಬೀಗಿದೆ. ಹೆಚ್ಚುವರಿ ಸಮಯದಲ್ಲಿ ಫೆರಾನ್ ಟೊರೆಸ್ ಬಾರಿಸಿದ ಏಕೈಕ ಗೋಲು ಸ್ಪೇನ್ ತಂಡಕ್ಕೆ ಐತಿಹಾಸಿಕ ಗೆಲವುತಂದುಕೊಟ್ಟಿದೆ. ಆ ಮೂಲಕ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ಅರ್ಜೆಂಟೀನಾ ವಿಫಲವಾಯಿತು. ಸ್ಪೇನ್ ಫಿಪಾ ವಿಶ್ವಕಪ್ ಗೆಲ್ಲುವುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಅಮೆರಿಕದ ನ್ಯೂಜೆರ್ಸಿ ನಗರದ ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ …