ಪೆರ್ಲ: ನರೇಂದ್ರ ಮೋದಿ ಸರಕಾರದ ಉತ್ತಮ ಆಡಳಿತ ವಿಶ್ವಕ್ಕೆ ಮಾದರಿಯಾಗಿದೆ ಎಂದು, ವಿಜ್ಞಾನ ತಾಂತ್ರಿಕ ವಲಯ ಸಹಿತ ಭಾರತ ಸಾಧಿಸಿದ ಮುನ್ನಡೆ ಅಭಿವೃದ್ಧಿ ಹೊಂದಿದ ದೇಶಗಳು ಕೂಡಾ ಆಶ್ಚರ್ಯ ಹುಟ್ಟಿಸಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ನವ್ಯಾ ಹರಿದಾಸ್ ನುಡಿದರು. ಬಿಜೆಪಿ ಕುಂಬಳೆ ಮಂಡಲ ಆಯೋಜಿಸಿದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನ್ ದ್ವಿದಿನ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೇಶದ ಅರ್ಧದಷ್ಟಿರುವ ಮಹಿಳಾ ಸಮಾಜದ ಕ್ಷೇಮ ಖಚಿತಪಡಿಸಲು ನರೇಂದ್ರ ಮೋದಿ ಸರಕಾರಕ್ಕೆ ಸಾಧ್ಯ ವಾಗಿದೆ ಎಂದು ಅವರು ನುಡಿದರು. ಕೇಂದ್ರ ಸರಕಾರದ ಕ್ಷೇಮ ಯೋಜನೆ ಗಳು ಅರ್ಹರಾದ ಫಲಾನುಭವಿಗಳಿಗೆ ತಲುಪುತ್ತಿದೆ ಎಂದು ಖಚಿತಪಡಿಸುವ ಮೂಲಕ ಆಡಳಿತದಲ್ಲಿ ಪ್ರಾಮಾಣಿಕತೆ, ದಕ್ಷತೆಯನ್ನು ಹೊಂದಲು ಸಾಧ್ಯವಾಯಿತೆಂದು ಅವರು ಸೂಚಿಸಿದರು.
ಮೋದಿ ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಹಾಗೂ ಮತದಾರರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದು, ಇದು ರಾಜ್ಯದ ಮೂರು ವಿಧಾನಸಭಾ ಮಂಡಲಗಳಲ್ಲಿ ಎನ್‌ಡಿಎಯ ಜಯಕ್ಕೆ ಕಾರಣವಾಯಿತೆಂದು ಅವರು ನುಡಿದರು. ತ್ರಿಪುರ, ಪಶ್ಚಿಮಬಂಗಾಳದಲ್ಲಿ ಸಂಭವಿಸಿರುವುದೇ ಕೇರಳದಲ್ಲೂ ಸಂಭವಿಸಿ ಬಿಜೆಪಿ ಅಧಿಕಾರಕ್ಕೆ ತಲುಪುವ ಕಾಲ ಸನಿಹದಲ್ಲಿದೆ ಎಂದು ನವ್ಯಾ ಹರಿದಾಸ್ ಅಭಿಪ್ರಾಯಪಟ್ಟರು. ಬಿಜೆಪಿ ಕುಂಬಳೆ ಮಂಡಲ ಉಪಾಧ್ಯಕ್ಷ ವಿಕ್ರಮ್ ಪೈ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ವಿ. ಬಾಲಕೃಷ್ಣ ಶೆಟ್ಟಿ, ಸತೀಶ್ಚಂದ್ರ ಭಂಡಾರಿ, ಕಲ್ಲಿಕೋಟೆ ವಲಯ ಅಧ್ಯಕ್ಷ ವಿಜಯ ಕುಮಾರ್ ರೈ, ಜಿಲ್ಲಾ ಉಪಾಧ್ಯಕ್ಷರಾದ ಪಿ. ರಮೇಶ್, ಮುರಳೀಧರ ಯಾದವ್, ರಾಜ್ಯ ಕೌನ್ಸಿಲ್ ಸದಸ್ಯ ಜಯಂತ ಪಾಟಾಳಿ, ಎಸ್‌ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ನಾರಾಯಣ ನಾಯ್ಕ್, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ಎಸ್, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಕೆ, ರೂಪವಾಣಿ ಭಟ್ ಮಾತನಾಡಿದರು. ಪೆರ್ಲ ಶಂಕರ ಸದನದಲ್ಲಿ ಜರಗಿದ ಶಿಬಿರದಲ್ಲಿ ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು ಸಹಿತ ಹಲವರು ಭಾಗವಹಿಸಿದರು.







