ಗೂಡಂಗಡಿಗಳಲ್ಲಿ ನಗರಸಭೆಯಿಂದ ರಾತ್ರಿ ಕಾಲ ತಪಾಸಣೆ

ಕಾಸರಗೋಡು: ನಗರಸಭೆ ವ್ಯಾಪ್ತಿಯ ಗೂಡಂಗಡಿಗಳಲ್ಲಿ  ರಾತ್ರಿ  ತಪಾಸಣೆ ತೀವ್ರಗೊಳಿಸುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಶಿಗೆಲ್ಲ ವ್ಯಾಪಕವಾಗಿ ಪತ್ತೆಯಾದ ಹಿನ್ನೆಲೆಯಲ್ಲಿ ನಗರಸಭೆಯ ಆರೋಗ್ಯ ವಿಭಾಗದ ನೇತೃತ್ವದಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಹೆಲ್ತ್ ಇನ್ಸ್‌ಪೆಕ್ಟರ್ ಮಧು ಕೆ., ಪಿಎಚ್‌ಐಗಳಾದ ವೈಶಾಖ್, ಮುಬಶಿರ, ನೌಫಿಯ ಎಂಬಿವರು ಸೇರಿದ ತಂಡ ಗೂಡಂಗಡಿಗಳ ಶುಚಿತ್ವ, ತ್ಯಾಜ್ಯ ಸಂಸ್ಕರಣೆ ಎಂಬಿವುಗಳ ಬಗ್ಗೆ ಪರಿಶೀಲನೆ ನಡೆಸಿದೆ. ಮುಂದಿನ ದಿನಗಳಲ್ಲಿ ಹೋಟೆಲ್, ಕೂಲ್‌ಬಾರ್ ಮೊದಲಾದ ಸಂಸ್ಥೆ ಗಳಲ್ಲೂ ತಪಾಸಣೆ ನಡೆಸಲಾಗುವುದೆಂದು ತಿಳಿಸಲಾಗಿದೆ.

ಯುವತಿಯೊಂದಿಗೆ ಅವಮಾನಕರ ನಡವಳಿಕೆ: ಯೂತ್ ಕಾಂಗ್ರೆಸ್ ಮುಖಂಡ ಶ್ರೀಜಿತ್ ಕೋಡೋತ್ ವಿರುದ್ಧ ಶಿಸ್ತು ಕ್ರಮ

 ಕಾಸರಗೋಡು: ಯುವತಿಯ ಜೊತೆ ಅವಮಾನಕರವಾದ ರೀತಿಯಲ್ಲಿ ನಡೆದುಕೊಂಡನೆಂಬ ದೂರಿನಂತೆ ಯೂತ್ ಕಾಂಗ್ರೆಸ್ ಮುಖಂಡನನ್ನು ಹುದ್ದೆಯಿಂದ ಹೊರತುಪಡಿಸಲಾಗಿದೆ. ಮಂಡಲ ನೇತೃತ್ವದ ನಿರ್ದೇಶ ಪ್ರಕಾರ ಜಿಲ್ಲಾ ನೇತೃತ್ವ ಶಿಸ್ತು ಕ್ರಮ ಸ್ವೀಕರಿಸಿದೆ. ಉದುಮ ವಿಧಾನಸಭಾ ಮಂಡಲ ಉಪಾಧ್ಯಕ್ಷನಾಗಿದ್ದ ಶ್ರೀಜಿತ್ ಕೋಡೋತ್ ಯುವತಿಯ ಜೊತೆ ಅವಮಾನಕರವಾದ ರೀತಿಯಲ್ಲಿ ವ್ಯವಹರಿಸಿದನೆಂಬ ಆರೋಪ ಕೇಳಿ ಬಂದಿತ್ತು. ಘಟನೆ ಬಗ್ಗೆ ಯುವತಿ  ಕಾಂಗ್ರೆಸ್ ಮಂಡಲ ಸಮಿತಿಗೆ ದೂರು ನೀಡಿದ್ದರು. ಸಂಘಟನೆಗೆ ಅವಮಾನ ಉಂಟಾಗುವ ರೀತಿಯ ವ್ಯವಹಾರ ಯೂತ್ ಕಾಂಗ್ರೆಸ್ ನೀತಿಯಂತೆ ಅಂಗೀಕರಿಸಲು ಸಾಧ್ಯವಿಲ್ಲವೆಂದು ಜಿಲ್ಲಾ ಕಮಿಟಿ …

ಅಭಿವೃದ್ಧಿ ಯೋಜನೆಯಲ್ಲಿ ನರೇಂದ್ರ ಮೋದಿಗೆ ಪಕ್ಷಪಾತವಿಲ್ಲ- ಎಂ.ಎಲ್. ಅಶ್ವಿನಿ

ಅಡೂರು: ಅಭಿವೃದ್ಧಿ ಯೋಜನೆ ಗಳನ್ನು ಜ್ಯಾರಿಗೊಳಿಸುವುದರಲ್ಲಿ, ಜನಕ್ಷೇಮಯೋಜನೆಗಳಿಗಾಗಿ ಮೊತ್ತ ಮೀಸಲಿಡುವುದರಲ್ಲಿ ಯಾವುದೇ ಪಕ್ಷಪಾತ ನೀತಿ ತೋರಿಸದ ಆಡಳಿತಾ ಧಿಕಾರಿಯಾಗಿದ್ದಾರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿ ದರು. ವಿವಿಧ ಪೋಷಕ ಸಂಘಟನೆಗಳ ನೇತೃತ್ವದಲ್ಲಿ ವಯೋಜನರಿಗಾಗಿ ಆಯೋಜಿಸಿದ ರಾಷ್ಟ್ರೀಯ ವಯೋ ಶ್ರೀಯೋಜನಾ ಸ್ಕ್ರೀನಿಂಗ್ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಆಯುಷ್ಮಾನ್ ಭಾರತ್ ವಯೋಜನ ಇನ್ಶೂರೆನ್ಸ್ ಯೋಜನೆ ಸಹಿತವಿರುವ ಕೇಂದ್ರ ಸರಕಾರದ ಜನಕ್ಷೇಮ ಯೋಜನೆ ಗಳನ್ನು ಸೂಕ್ತ ಸಮಯದಲ್ಲಿ ಜ್ಯಾರಿಗೊಳಿ ಸಲು ರಾಜ್ಯ ಸರಕಾರ …

ಶಾರದಾ ವಿ. ಭಟ್ ನಿಧನ

ಮಧೂರು: ಕೊಲ್ಯ ಕಕ್ಕೆಪ್ಪಾಡಿ ನಿವಾಸಿ ನಿವೃತ್ತ ಡೆಪ್ಯುಟಿ ತಹಶೀಲ್ದಾರ್ ಕೆ. ವಿಷ್ಣು ಭಟ್‌ರ ಪತ್ನಿ ಶಾರದಾ ವಿ. ಭಟ್ (74) ನಿಧನ ಹೊಂದಿದರು. ಮೃತರು ಪತಿ, ಮಕ್ಕಳಾದ ಲಕ್ಷ್ಮಿನಾರಾಯಣ ಶರ್ಮ, ಶ್ರೀಗಂಗಾ, ಮಹಾಲಕ್ಷ್ಮಿ, ಪುರೋಹಿತ ಮಾಧವ ಶರ್ಮ, ಸೊಸೆಯಂದಿರಾದ ಸವಿತ,  ಶ್ರೀಕಲ, ಅಳಿಯಂದಿರಾದ ವಾಸುದೇವ ಟಿ.ಕೆ., ಈಶ್ವರ ಕಡಂಬಳಿತ್ತಾಯ, ಸಹೋದರರಾದ ಶ್ರೀಕೃಷ್ಣ ಸರಳಾಯ, ಜಯರಾಮ, ಶ್ರೀಧರ, ಸಹೋದರಿಯ ರಾದ ಸತ್ಯವತಿ, ರಾಜೇಶ್ವರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ತಮ್ಮನ ತಮ್ಮನ ಮರಣಾನಂತರ ಕ್ರಿಯೆಗಳ ಮಧ್ಯೆ ಕುಸಿದು ಬಿದ್ದ ಅಣ್ಣ

ಕಾಸರಗೋಡು: ಸಹೋದರನ ಮರಣಾನಂತರ ಕಾರ್ಯಕ್ರಮದ ಮಧ್ಯೆ ಕುಸಿದು ಬಿದ್ದ ಅಣ್ಣ ನಿಧನ ಹೊಂದಿದರು. ತೃಕರಿಪುರ ಆಯಿಟ್ಟಿ ನಗರ ನಿವಾಸಿ ಎಂ. ಲಕ್ಷ್ಮಣನ್ (68) ಮೃತಪಟ್ಟವರು. ತಮ್ಮ ಎಂ. ಗೋಪಾಲನ್ ನಿಧನ ಹೊಂದಿದ ಹಿನ್ನೆಲೆಯಲ್ಲಿ 12ನೇ ದಿನದ ಮರಣಾನಂತರ ಕ್ರಿಯೆಗಳಿಗಾಗಿ ತೃಕ್ಕನ್ನಾಡ್ ಕ್ಷೇತ್ರಕ್ಕೆ ತಲುಪಿದ್ದರು. ಕ್ಷೇತ್ರದಲ್ಲಿ ಹೊರಗೆ ನಡೆಯುತ್ತಿದ್ದ ಕ್ರಿಯೆಗಳ ಮಧ್ಯೆ ಲಕ್ಷ್ಮಣನ್ ಕುಸಿದು ಬಿದ್ದಿದ್ದರು. ಕೂಡಲೇ ಇವರನ್ನು ಪಾಲಕುನ್ನುನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ ಪಿ. ಸರಸ್ವತಿ, ಮಕ್ಕ ಳಾದ ಪಿ. …