ಹತ್ತನೇ ತರಗತಿ ವಿದ್ಯಾರ್ಥಿ ನಾಪತ್ತೆ-ದೂರು

ಬದಿಯಡ್ಕ: ಸಹಪಾಠಿ ಹಾಗೂ ಆತನ ಸಂಬಂ ಧಿಕರೊಂದಿಗೆ ಕಾಸರಗೋಡಿನ ಮೊಬೈಲ್ ಅಂಗಡಿಗೆ ಹೋದ ಹತ್ತನೇ ತರಗತಿ ವಿದ್ಯಾರ್ಥಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ನೆಕ್ರಾಜೆ ನಿವಾಸಿಯಾದ 15ರ ಹರೆಯದ ಬಾಲಕ  ನಾಪತ್ತೆಯಾ ಗಿರುವುದಾಗಿ  ದೂರಲಾಗಿದೆ. ನಿನ್ನೆ ಮಧ್ಯಾಹ್ನ 2.30ಕ್ಕೆ  ಬಾಲಕ ಆತನ ಸಹಪಾಠಿ ಹಾಗೂ ಸಂಬಂಧಿಕರೊಂ ದಿಗೆ ಕಾಸರ ಗೋಡಿನ ಮೊಬೈಲ್ ಅಂಗ ಡಿಯೊಂದಕ್ಕೆ ತೆರಳಿದ್ದರು.  ಅನಂತರ ಬಾಲಕ  ಮರಳಿ ಬಂದಿಲ್ಲವೆಂದು ತಿಳಿಸಿ ತಾಯಿ ಬದಿಯಡ್ಕ ಪೊಲೀ ಸರಿಗೆ ದೂರು ನೀಡಿದ್ದಾರೆ.  ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿ …

ಮೊದಲು ಉಪಯೋಗ, ಬಳಿಕ ವ್ಯಾಪಾರ: ಕಮಿಶನ್ ವ್ಯವಸ್ಥೆಯಲ್ಲಿ ಎಂಡಿಎಂಎ ಮಾರಾಟ ಮಾಡಿದ ಅಧ್ಯಾಪಿಕೆಯರ ತಂಡದ ಇನ್ನೋರ್ವೆ ಬಲೆಗೆ; ಕೀರ್ತನಳ ಖಾತೆಗೆ ತಲುಪಿದ್ದು ಲಕ್ಷಾಂತರ ರೂ.

ಕಲ್ಲಿಕೋಟೆ: ಎಂಡಿಎಂಎ ಪ್ರಕರ ಣದಲ್ಲಿ ಸೆರೆಯಾದ ಅಧ್ಯಾಪಿಕೆಯರ ಬಗ್ಗೆ ಇನ್ನಷ್ಟು ಮಾಹಿತಿಗಳು ಬಹಿರಂ ಗವಾಗುತ್ತಿದೆ. ಇನ್‌ಸ್ಟಾಗ್ರಾಮ್ ಮೂಲಕ ಮಂಗಳೂರಿನ ಮಾದಕ ಮಾಫಿಯಾದೊಂದಿಗೆ ಇವರು ಸಂಪರ್ಕ ಬೆಳೆಸಿದ್ದರು. ಮೊದಲು ಮಾದಕ ಮಾಫಿಯ ತಂಡ ಇವರಿಗೆ ಎಂಡಿಎಂಎ ಉಪಯೋಗಿಸಲು ನೀಡಿತ್ತು. ಅದು ಇಷ್ಟವಾದಾಗ ಇವರು ಮಾರಾಟದಲ್ಲೂ ಸಕ್ರಿಯರಾ ದರು. ಇದಕ್ಕೆ ಇವರಿಗೆ ಭಾರೀ ಮೊತ್ತ ಕಮಿಷನ್ ಆಗಿ ನೀಡಲಾಗುತ್ತಿತ್ತು. ಇವರಿಬ್ಬರು ಅಧ್ಯಾಪಿಕೆಯರಾದ ಕಾರಣ ಇವರನ್ನು ಮಾಫಿಯಾ ಸೂಕ್ತವಾಗಿ ಬಳಸಿಕೊಂಡಿತು. ಇವರಿಬ್ಬರು ವಿವಾ ಹಿತರಾಗಿದ್ದರೂ ಪತಿಯಿಂದ ದೂರ ವಿದ್ದರು. ಎಂಡಿಎಂಎ ಖರೀದಿಸುವವರು …

ಹಿರಿಯ ಜೀಪು ಚಾಲಕ ನಿಧನ

ಮುಳ್ಳೇರಿಯ: ಹಿರಿಯ ಜೀಪು ಚಾಲಕರಾಗಿದ್ದ ದೇಲಂಪಾಡಿ ಮೈಂದಂಪಾರ ನಿವಾಸಿ ನಾರಾ ಯಣ ಮಣಿಯಾಣಿ (66) ನಿಧನ ಹೊಂದಿದರು. ನಿನ್ನೆ ಬೆಳಿಗ್ಗೆ ಅಸೌಖ್ಯ ಉಲ್ಬಣಗೊಂಡು ಆಸ್ಪತ್ರೆಗೆ ದಾಖಲಿ ಸಲಾಗಿತ್ತು. ಜೀಪು ಚಾಲಕರಾಗಿದ್ದ ಇವರು  ಬಳಿಕ ಮುಳ್ಳೇರಿಯದಲ್ಲಿ ಆಟೋರಿಕ್ಷ ಚಲಾಯಿಸುತ್ತಿದ್ದರು. ಅಸೌಖ್ಯ ನಿಮಿತ್ತ ಮನೆಯಲ್ಲಿ ವಿಶ್ರಾಂತಿ ಯಲ್ಲಿದ್ದರು.  ಮೃತರು ಪತ್ನಿ ಶೋಭಾ, ಮಕ್ಕಳಾದ ನವೀನ್‌ರಾಜ್, ಪುಷ್ಪರಾಜ್, ಶಿಲ್ಪ, ಅಳಿಯ ಸನೀಶ್, ಸೊಸೆಯಂದಿರಾದ ಸುಸ್ಮಿತ, ಲಾವಣ್ಯ, ಸಹೋದರರಾದ ಅಪ್ಪಕುಂಞಿ ಮಣಿ ಯಾಣಿ, ಗೋಪಾಲ ಮಣಿಯಾಣಿ, ಸಹೋದರಿ ಸರಸ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು …

ಡಿವೈಎಸ್‌ಪಿಗಳಿಗೆ ಮತ್ತೆ ವರ್ಗಾವಣೆ : ಕಾರಡ್ಕ ನಿವಾಸಿ ಕೆ. ವಿನೋದ್ ಬೇಕಲ ಡಿವೈಎಸ್‌ಪಿ

ಕಾಸರಗೋಡು: ಗೃಹ ಸಚಿವ ರಮೇಶ್ ಚೆನ್ನಿತ್ತಲ ಜಿಲ್ಲೆಯ ವಿವಿಧ ಕಡೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮರಳಿದ ಬೆನ್ನಲ್ಲೇ ಜಿಲ್ಲೆಯ ಮೂರು ಡಿವೈಎಸ್‌ಪಿಯವರನ್ನು ಮತ್ತೆ ವರ್ಗಾವಣೆ ಮಾಡಲಾಗಿದೆ. ಕಾಸರಗೋಡು ಸ್ಟೇಟ್ ಸ್ಪೆಷಲ್ ಬ್ರಾಂಚ್ ಡಿವೈಎಸ್‌ಪಿಯಾಗಿ ನೀಲೇಶ್ವರ ನಿವಾಸಿಯಾದ ಎಂ. ಸುನಿಲ್ ಕುಮಾರ್‌ರನ್ನು ನೇಮಕ ಮಾಡಲಾಗಿದೆ. ಪ್ರಸ್ತುತ ಜಿಲ್ಲಾ ಸ್ಪೆಷಲ್ ಬ್ರಾಂಚ್ ಡಿವೈಎಸ್‌ಪಿ ಆಗಿದ್ದಾರೆ. ಮೊದಲ ವರ್ಗಾವಣೆ ಯಾದಿಯಲ್ಲಿ ಸುನಿಲ್ ಕುಮಾರ್‌ರನ್ನು ಪಾಲಕ್ಕಾಡ್‌ಗೆ ವರ್ಗಾಯಿಸಲಾಗಿತ್ತು. ಇದು ಪೊಲೀಸ್ ಸೇನೆಯಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಬೇಕಲ ಡಿವೈಎಸ್‌ಪಿಯಾಗಿ ಈ ಮೊದಲು ವಿ.ಕೆ. ವಿಶ್ವಂಭರನ್‌ರನ್ನು ನೇಮಕ …

ದೆಹಲಿಯಿಂದ ಕಡಿಮೆ ಬೆಲೆಗೆ ಕಾರು ಖರೀದಿಸಿ ನೀಡುವುದಾಗಿ ತಿಳಿಸಿ ಹಣ ಪಡೆದು ವಂಚನೆಗೈದ ಆರೋಪಿ ಬಂಧನ

ಕಾಸರಗೋಡು: ದೆಹಲಿಯಿಂದ ಕಡಿಮೆ ಬೆಲೆಗೆ ಇನ್ನೋವಾ ಕಾರುಗಳನ್ನು ಖರೀದಿಸಿ ನೀಡುವುದಾಗಿ ತಿಳಿಸಿ ಹಣ ಪಡೆದು ವಂಚಿಸಿದ ಯುವಕನನ್ನು ಗುರುವಾಯೂರು ಪೊಲೀಸರು ಕಾಸರಗೋಡಿನಿಂದ ಬಂಧಿಸಿದ್ದಾರೆ.  ಕಾಸರಗೋಡು ಪಳ್ಳಿಕೆರೆ  ನಿವಾಸಿ ಮುಹಮ್ಮದ್ ತನ್ಸೀರ್ (32) ಎಂಬಾತನನ್ನು ಎಸ್‌ಎಚ್‌ಒ ವಿಪಿನ್ ಕೆ ವೇಣುಗೋಪಾಲ್‌ರ ನೇತೃತ್ವದಲ್ಲಿರುವ ಪೊಲೀಸ್ ತಂಡ ಬಂಧಿಸಿದೆ. ತಾಮರಯೂರ್  ನಿವಾಸಿ ಫೆಲಿಕ್ಸ್ ಆಂಟನಿ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ವಂಚಕರನ್ನು ಬಂಧಿಸಿದ್ದಾರೆ.  2024ರಲ್ಲಿ  ಪ್ರಕರಣಕ್ಕೆ  ಕಾರಣವಾದ ಘಟನೆ ನಡೆದಿದೆ. ಕಡಿಮೆ ಬೆಲೆಗೆ ೩ ಇನ್ನೋವಾ ಕಾರುಗಳನ್ನು  ಖರೀದಿಸಿ ನೀಡುವುದಾಗಿ …

ಬೇವಿಂಜೆಯಲ್ಲಿ ಟ್ಯಾಂಕರ್ ಲಾರಿ ಅಪಘಾತ: ಕ್ಯಾಬಿನ್‌ನಲ್ಲಿ ಸಿಲುಕಿಕೊಂಡ ಚಾಲಕನ ರಕ್ಷಣೆ

ಕಾಸರಗೋಡು: ಕಾಸರಗೋಡು ಭಾಗದಿಂದ ಕಣ್ಣೂರಿನತ್ತ ಸಿಮೆಂಟ್ ಮಿಶ್ರಣದೊಂದಿಗೆ ಸಾಗುತ್ತಿದ್ದ ಟ್ಯಾಂಕರ್ ಲಾರಿ ಚೆರ್ಕಳಕ್ಕೆ ಸಮೀಪದ ಬೇವಿಂಜೆ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ನಿಯಂ ತ್ರಣ ತಪ್ಪಿ ಮಗುಚಿ ಬಿದ್ದು, ಈ ವೇಳೆ ಅದರ ಕ್ಯಾಬಿನ್‌ನೊಳಗೆ ಸಿಲುಕಿಕೊಂ ಡಿದ್ದ ಚಾಲಕನನ್ನು ಕಾಸರಗೋಡು ಅಗ್ನಿಶಾಮಕದಳ ರಕ್ಷಿಸಿದ ಘಟನೆ ನಡೆದಿದೆ. ತಮಿಳುನಾಡು ನಿವಾಸಿ ಸಿದ್ದಿಕ್(42) ಎಂಬವರು ಕ್ಯಾಬಿನ್‌ನಲ್ಲಿ ಸಿಲುಕಿಕೊಂಡ ಚಾಲಕನಾಗಿದ್ದಾರೆ. ನಿನ್ನೆ ಸಂಜೆ ಈ ಅಪಘಾತ ಸಂಭವಿಸಿದೆ. ವಿಷಯ ತಿಳಿದು ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಸುಕು ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ …

ನಿವೃತ್ತ ಎಸ್‌ಐ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಪಾರಕಟ್ಟೆಯಲ್ಲಿ  ವಾಸಿಸುತ್ತಿದ್ದ ನಿವೃತ್ತ ಎಸ್.ಐ ಧನ್‌ರಾಜ್ (65) ನೇಣು  ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ಬೆಳಿಗ್ಗೆ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಇವರನ್ನು ಕೂಡಲೇ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೆಲಸ ನಿರ್ವಹಿಸಿದ್ದ ಧನ್‌ರಾಜ್ ಹಲವು ಪ್ರಕರಣಗಳನ್ನು ಬೆಳಕಿಗೆ ತರುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಕಾಸರಗೋಡು ಕ್ರೈಂ ಬ್ರಾಂಚ್ ಯೂನಿಟ್‌ನಿಂದ ನಿವೃತ್ತಿ ಹೊಂದಿದ ಬಳಿಕ ಚೆರ್ಕಳದ ಖಾಸಗಿ ಆಸ್ಪತ್ರೆಯೊಂದರ ಸೆಕ್ಯುರಿಟಿ ಆಫೀಸರ್ ಆಗಿ ಲಸ …

ಮಾಜಿ ಅನಿವಾಸಿ ಬಾಪುಂಞಿ ಮೈಂಕೂಡಲ್ ನಿಧನ

ಕುಂಬಳೆ: ಕೊಡ್ಯಮ್ಮೆ ನಿವಾಸಿ ಬಾಪುಂಞಿ ಮೈಂಕೂಡಲ್ (61) ನಿಧನಹೊಂದಿದರು. ಇವರು ಮಾಜಿ ಅನಿವಾಸಿಯಾಗಿದ್ದರು. ಅಸೌಖ್ಯ ನಿಮಿತ್ತ ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೃತರ ಅಂತ್ಯಕ್ರಿಯೆ ಇಂದು ಬೆಳಿಗ್ಗೆ ಕೊಡ್ಯಮ್ಮೆಯ ಜುಮಾ ಮಸೀದಿ ಪರಿಸರದಲ್ಲಿ ನಡೆಸಲಾಯಿತು. ಮೃತರು ಪತ್ನಿ ಖದೀಜ, ಮಕ್ಕಳಾದ ಮುನ್ಶಿರ, ಮುಹಾಸ್ (ಸೌದಿ), ಮುಫಸಲ್ (ದುಬೈ), ಅಳಿಯ-ಸೊಸೆಯಂದಿರಾದ ಆರಿಸ್ ಉಳವಾರ್, ಸಹದಿಯ, ರಿಫ, ಸಹೋದರ-ಸಹೋ ದರಿಯರಾದ ಮುಹಮ್ಮದ್ ಕುಂಞಿ (ಸೌದಿ), ಆಸ್ಯುಮ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತ ಬಾಪುಂಞಿ ಅವರು ಕಾರವಲ್ ವರದಿಗಾರ ಅಬ್ದುಲ್ಲ ಕುಂಬಳೆ …

ಕೊಂಡೆವೂರು ಶ್ರೀಗಳ ಚಾತುರ್ಮಾಸ್ಯ ಸಂಕಲ್ಪ ನಾಳೆ

ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ 23ನೇ ಚಾತುರ್ಮಾಸ್ಯ ವೃತ ಸಂಕಲ್ಪ ನಾಳೆ ಗುರುಪೂರ್ಣಿಮೆಯಂದು ನಡೆಯಲಿದೆ. ಬೆಳಿಗ್ಗೆ ಗಣಹೋಮ, ನಿತ್ಯಾನಂದ ಗುರುಗಳಿಗೆ ಪಂಚಾಮೃತಾಭಿಷೇಕ, ವಿಶೇಷ ಸೀಯಾಳಾಭಿಷೇಕ ಬಳಿಕ ವ್ಯಾಸಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಮಹಾಪೂಜೆಯ ನಂತರ ಶ್ರೀ ಗುರುಪಾದುಕಾಪೂಜೆ, ಚಾತುರ್ಮಾಸ್ಯ ಸಂದೇಶ ನೀಡಿ ಶ್ರೀಗಳು ಅನುಗ್ರಹಿಸುವರು. ಚಾತುರ್ಮಾಸ್ಯ ಸಂದರ್ಭದಲ್ಲಿ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ಮತ್ತು ಯಜ್ಞ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

ಶ್ರೀ ವಿಶ್ವ ಬ್ರಾಹ್ಮಣ ಸೇವಾ ಸಂಘ, ಉಪ ಸಮಿತಿಗಳ ವಾರ್ಷಿಕ ಮಹಾಸಭೆ

ಕಾಸರಗೋಡು: ಶ್ರೀ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಹಾಗೂ ಉಪಸಮಿತಿ ಗಳಾದ ಶ್ರೀ ವಿಶ್ವಕರ್ಮ ಯುವಕ ಸಂಘ, ಶ್ರೀ ವಿಶ್ವಕರ್ಮ ಮಹಿಳಾ ಸಂಘ ಕಾಸರಗೋಡು ಇದರ ವಾರ್ಷಿಕ ಮಹಾಸಭೆ ಕರಂದಕ್ಕಾಡು ಶ್ರೀ ವಿಶ್ವಕರ್ಮ ಮಂದಿರದಲ್ಲಿ ಸಂಘದ ಅಧ್ಯಕ್ಷ ಕೆ ಭುವನೇಶ ಆಚಾರ್ಯ ತಾಳಿಪಡ್ಪು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಕೆ ಜಿ ಗಣೇಶ ಆಚಾರ್ಯ ಹಾಗೂ ಲೆಕ್ಕ ಪತ್ರವನ್ನು ಕೋಶಾಧಿಕಾರಿ ಪ್ರವೀಣ್ ಕುಮಾರ್ ಆಚಾರ್ಯ ನಲ್ಕ ಮಂಡಿಸಿದರು.ಮಹಿಳಾ ಸಂಘದ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ …