ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್  ಓಣಂ ಮಾರುಕಟ್ಟೆಗೆ ಚಾಲನೆ

ಮಂಜೇಶ್ವರ: ಕನ್ಸ್ಯೂಮರ್ ಫೆಡ್ ಹಾಗೂ ಮಂಜೇಶ್ವರ ಸಹಕಾರಿ ಬ್ಯಾಂಕಿನ ಸಂಯುಕ್ತಾಶ್ರಯದಲ್ಲಿ ಮಂಜೇಶ್ವರದ ಎಂ.ಕೆ. ಫಾತಿಮಾ ಕಾಂಪ್ಲೆಕ್ಸ್ನಲ್ಲಿ ಓಣಂ ಸಹಕಾರಿ ಮಾರುಕಟ್ಟೆಗೆ ಚಾಲನೆ ದೊರಕಿತು. ನಿನ್ನೆ ಬೆಳಿಗ್ಗೆ ಬ್ಯಾಂಕ್ ಅಧ್ಯಕ್ಷ ಎಸ್. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಬ್ಯಾಂಕ್‌ನ ಹಿರಿಯ ಗ್ರಾಹಕ ಹರೀಶ್ ಭಟ್‌ರಿಗೆ ಸಾಮಗ್ರಿ ವಿತರಿಸುವ ಮೂಲಕ ಮಂಜೇಶ್ವರ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ಚಾಲನೆ ನೀಡಿದರು. ಬ್ಯಾಂಕ್ ಅಧ್ಯಕ್ಷ ಎಸ್. ರಾಮಚಂದ್ರ ಅವರು ಸಹಕಾರಿ ಸಂಸ್ಥೆಗಳು ಯಾವಾಗಲೂ ಗ್ರಾಹಕರ ಮತ್ತು ಸಮಾಜದ ಹಿತಾಸಕ್ತಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತವೆ. ಹಬ್ಬದ …

ಶಾಸಕರಿಂದ ಆರೋಗ್ಯ ಸಚಿವರ ಭೇಟಿ: ಕಾಸರಗೋಡು ಮೆಡಿಕಲ್ ಕಾಲೇಜ್ ಸಂಬಂಧ ಸಭೆ 9ರಂದು

ಕಾಸರಗೋಡು: ಮೆಡಿಕಲ್ ಕಾಲೇಜ್‌ನ ನಿರ್ಮಾಣ ಚಟುವಟಿಕೆಗಳನ್ನು ಸಮಯಾನುಸಾರ ಪೂರ್ತಿಗೊಳಿಸಲು, ಜಿಲ್ಲೆಯ ಆರೋಗ್ಯ ವಲಯ ಎದುರಿಸುತ್ತಿರುವ ತುರ್ತು ಸಮಸ್ಯೆಗಳಿಗೆ ಪರಿಹಾರ ಕಾಣಲು ಸೆಪ್ಟಂಬರ್ 9ರಂದು ತಿರುವನಂತಪುರದಲ್ಲಿ ಆರೋಗ್ಯ ಸಚಿವ ಕೆ. ಮುರಳೀಧರನ್‌ರ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಸಭೆ ನಡೆಯಲಿದೆ. ವಿಷಯದಲ್ಲಿ ತುರ್ತು ಮಧ್ಯಪ್ರವೇಶ ಮಾಡಬೇಕೆಂದು ಶಾಸಕ ಕಲ್ಲಟ್ರ ಮಾಹಿನ್‌ರ ಮನವಿ ಹಿನ್ನೆಲೆಯಲ್ಲಿ ಸಚಿವರು ಈ ನಿರ್ದೇಶ ನೀಡಿದ್ದಾರೆ. ಮೆಡಿಕಲ್ ಕಾಲೇಜ್‌ನ ಬಾಕಿ ಉಳಿದಿರುವ ನಿರ್ಮಾಣ ಕಾಮಗಾರಿಗಳನ್ನು ವೇಗದಲ್ಲಿ ಪೂರ್ತಿಗೊಳಿಸುವುದು, ಆಸ್ಪತ್ರೆಯ ಪೂರ್ಣ ಮಟ್ಟದ ಚಟುವಟಿಕೆಗಳನ್ನು ಆದಷ್ಟು ಬೇಗ ಆರಂಭಿಸುವುದು, ಜಿಲ್ಲೆಯ …

ಸೋಂಕಾಲು ಜಂಕ್ಷನ್ ಬಸ್ ತಂಗುದಾಣ ಬಳಿ ಅಪಾಯ ಭೀತಿಯೊಡ್ಡುವ ಒಣಗಿದ ಮರ: ತೆರವಿಗೆ ಒತ್ತಾಯ

ಉಪ್ಪಳ: ಸೋಂಕಾಲು ಜಂಕ್ಷನ್‌ನಲ್ಲಿ ಬಾಯಾರು ಭಾಗಕ್ಕೆ ತೆರಳುವ ಬಸ್ ತಂಗುದಾಣ ಪರಿಸರದಲ್ಲಿ ಒಣಗಿದ ಮರವೊಂದು ಯಾವುದೇ ಕ್ಷಣದಲ್ಲಿ ಮುರಿದು ಬೀಳುವ ಆತಂಕ ಕಾಡುತ್ತಿದೆ. ಒಂದು ತಿಂಗಳಿAದ ಮರ ಒಣಗಿ ಶೋಚನೀಯಾವಸ್ಥೆಯಲ್ಲಿ ಕಂಡು ಬರುತ್ತಿದ್ದು, ಮಳೆ, ಗಾಳಿಗೆ ಮುರಿದು ಬೀಳುವ ಸಾಧ್ಯತೆ ಇದೆ. ಇಲ್ಲಿನ ಬಸ್ ತಂಗುದಾಣದಲ್ಲಿ ನಿತ್ಯ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಿದ್ದು, ಅಲ್ಲದೆ ಗೂಡಂಗಡಿ, ದ್ವಿಚಕ್ರ ವಾಹನಗಳನ್ನು ನಿಲುಗಡೆ ಗೊಳಿಸಲಾಗುತ್ತಿದೆ. ಈ ಪರಿಸರ ಜನನಿಬಿಡ ಪ್ರದೇಶವಾಗಿದ್ದು, ಮರ ಮುರಿದು ಬಿದ್ದಲ್ಲಿ ಭಾರೀ ಅಪಾಯಕ್ಕೆ ಕಾರಣವಾಗಬಹುದೆಂದು ಸ್ಥಳೀಯರು ತಿಳಿಸಿದ್ದಾರೆ. …

ಏಮ್ಸ್ ಆಸ್ಪತ್ರೆಗೆ ಸೂಕ್ತವಾದ 274.69 ಎಕ್ರೆ ಸ್ಥಳ ಸರಕಾರಕ್ಕೆ ಜಿಲ್ಲಾಧಿಕಾರಿ ಸಮಗ್ರ ಪ್ರಸ್ತಾವನೆ ಸಲ್ಲಿಕೆ

ಕಾಸರಗೋಡು: ಜಿಲ್ಲೆಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ (ಎಮ್ಸ್) ಆಸ್ಪತ್ರೆ ಸ್ಥಾಪಿಸಲು ಪೆರಿಯಾದಲ್ಲಿರುವ  ಪ್ಲಾಂಟೇಶನ್ ಕಾರ್ಪೋರೇಶನ್ ಆಫ್ ಕೇರಳ (ಪಿಸಿಕೆ) ಸೂಕ್ತ ಸ್ಥಳವೆಂದು ಸ್ಪಷ್ಟಪಡಿಸಿ ಕಾಸರಗೋಡು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್  ರಾಜ್ಯ ಆರೋಗ್ಯ ಇಲಾಖೆಯ ಕಾರ್ಯದರ್ಶಿಗೆ  ಸಮಗ್ರ ಪ್ರಸ್ತಾಪನಾ ವರದಿ ಸಲ್ಲಿಸಿದ್ದಾರೆ. ಪೆರಿಯಾದಲ್ಲಿರುವ ತೋಟಗಾರಿಕಾ ನಿಗಮಕ್ಕೆ  ಸೇರಿದ 274.69 ಎಕ್ರೆ ಪ್ರದೇಶ ಏಮ್ಸ್ ಆಸ್ಪತ್ರೆ ಸ್ಥಾಪಿಸಲು ಸೂಕ್ತ ಸ್ಥಳವಾಗಿದೆ. ಮಾತ್ರವಲ್ಲ ಸಂಪರ್ಕ ರಸ್ತೆ, ಅಗತ್ಯದಷ್ಟು ಜಲವಿದ್ಯುತ್ ಹಾಗೂ ಇತರ ಮೂಲ ಸೌಕರ್ಯಗಳು ಈ ಪ್ರದೇಶದಲ್ಲಿವೆ. …