ಶಾಲಾ ಬಸ್ -ಬೈಕ್ ಢಿಕ್ಕಿ ಹೊಡೆದು ಯುವಕ ಮೃತ್ಯು
ಮುಳ್ಳೇರಿಯ: ಶಾಲಾ ಬಸ್ ಹಾಗೂ ಬೈಕ್ ಢಿಕ್ಕಿ ಹೊಡೆದು ಗಾಳಿಮುಖ ಬಳಿಯ ನಿವಾಸಿ ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಗಾಳಿಮುಖ ಗೋಳಿ ತ್ತಡಿ ಪುದಿಯವಳಪ್ಪ್‌ನ ಶಮ್ಮಾಸ್ ಅಬ್ದುಲ್ಲ (25) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇಂದು ಬೆಳಿಗ್ಗೆ 9 ಗಂಟೆ ವೇಳೆ ಬೋವಿಕ್ಕಾನ ಬಳಿಯ ಮಾಸ್ತಿಕುಂಡ್ ನಲ್ಲಿ ಕುನಿಲ್ ಶಾಲೆಯ ಬಸ್ ಹಾಗೂ ಬೈಕ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಶಮ್ಮಾಸ್ ಅಬ್ದುಲ್ಲರನ್ನು ತಕ್ಷಣ ಸ್ಥಳೀಯರ ನೇತೃತ್ವದಲ್ಲಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. …