ಯುವಕನನ್ನು ಪೊಲೀಸ್ ಠಾಣೆಯಿಂದ ಕರೆದೊಯ್ದು ಕೊಲೆಗೈದ ಪ್ರಕರಣ: ಗಲ್ಫ್‌ಗೆ ಪರಾರಿಯಾಗಿದ್ದ ಇನ್ನೋರ್ವ ಆರೋಪಿ ಬೆಂಗಳೂರು ವಿಮಾನ ನಿಲ್ದಾಣದಿಂದ ಸೆರೆ

ಮಂಜೇಶ್ವರ: ಪೊಲೀಸರ ಕಸ್ಟಡಿಯಲ್ಲಿದ್ದ ಯುವಕನನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿ ಕರೆದೊಯ್ದ ಬಳಿಕ ಆತನನ್ನು ಕೊಲೆಗೈದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಬೆಂಗಳೂರು ವಿಮಾನ  ನಿಲ್ದಾಣದಿಂದ  ಬಂಧಿಸಲಾಗಿದೆ. ಕುಂಜತ್ತೂರು ಕಣ್ವತೀರ್ಥ ಕುಚ್ಚಿಕ್ಕಾಡ್ ನಿವಾಸಿ ಅಬ್ದುಲ್ ರಹಿಮಾನ್ ಸಿನಾನ್ (26) ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ.  ಈ ವಿಷಯವನ್ನು ಬೆಂಗಳೂರು ವಿಮಾನ ನಿಲ್ದಾಣದ ಎಮಿಗ್ರೇಶನ್  ವಿಭಾಗದ ಅಧಿಕಾರಿಗಳು ತಿಳಿಸಿರುವುದಾಗಿ ಮಂಜೇಶ್ವರ ಪೊಲೀಸರು ಹೇಳಿದ್ದಾರೆ. ಮೀಯಪದವು ಬಳಿಯ ಮದಂಗಲ್ಲು ಎಂಬಲ್ಲಿನ ದಿ| ಅಬ್ದುಲ್ಲರ ಪುತ್ರ ಮೊಯ್ದೀನ್ ಆರಿಫ್ (22)ರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಅಬ್ದುಲ್ …

ತಾಯಿ, ಪುತ್ರಿ ನಾಪತ್ತೆ

ಕುಂಬಳೆ: ತಾಯಿ ಮತ್ತು ಪುತ್ರಿ ನಾಪತ್ತೆಯಾದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಬಂಬ್ರಾಣ ಗ್ರಾಮದ ಕಿದೂರು ಕುಂಟಂಗೇರಡ್ಕ ಹೌಸ್‌ನ ಸುನಿಲ್ ಕುಮಾರ್ ಎಂಬವರ ಪತ್ನಿ ರಮ್ಯ ಬಿ. (29) ಮತ್ತು ಪುತ್ರಿ ಶ್ರೀರಕ್ಷಾ (7) ಎಂಬುರು ಆಗಸ್ಟ್ 19ರಿಂದ ಬೆಳಿಗ್ಗೆ 8.30ರಿಂದ ಮನೆಯಿಂದ ಹೋದವರು ಬಳಿಕ ಮನೆಗೆ ಹಿಂತಿರುಗದ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ನಾಪತ್ತೆಯಾದ ರಮ್ಯಾಳ ಪತಿ ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಶಾಲೆಗೆ ನಡೆದು ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕಿರುಕುಳಕ್ಕೆತ್ನಿಸಿದ ಆರೋಪಿ ಬಂಧನ

ಬದಿಯಡ್ಕ: ಶಾಲೆಗೆ ನಡೆದು ಹೋಗುತ್ತಿದ್ದ ೧೩ರ ಹರೆಯದ ವಿದ್ಯಾರ್ಥಿನಿಗೆ ಕಿರುಕುಳ ನೀಡಲೆತ್ನಿಸಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಳ್ಳತ್ತಡ್ಕ ನಿವಾಸಿಯಾದ ರಮೇಶ್ (43) ಎಂಬಾತನನ್ನು ಬದಿಯಡ್ಕ ಎಸ್‌ಐ ಸುನಿಲ್ ಕುಮಾರ್ ಹಾಗೂ ತಂಡ ಸೆರೆ ಹಿಡಿದಿದೆ. ಮೂರು ದಿನಗಳ ಹಿಂದೆಯಷ್ಟೇ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿತ್ತು. ಶಾಲೆಗೆ ನಡೆದು ಹೋಗುತ್ತಿದ್ದ ಬಾಲಕಿಯನ್ನು ದಾರಿಯಲ್ಲಿ ತಡೆದು ನಿಲ್ಲಿಸಿ ದೇಹ ಸ್ಪರ್ಶಿಸಿ ಕಿರುಕುಳಕ್ಕೆತ್ನಿಸಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ವಿವಿಧ ಪ್ರದೇಶಗಳ ಸಿಸಿಟಿವಿ …

ನಗರ ಮಧ್ಯದ ಕೆಪಿಆರ್‌ರಾವ್ ರೋಡ್‌ನಲ್ಲಿ ಆಳ ಹೆಚ್ಚುತ್ತಿರುವ ಹೊಂಡಗಳು: ವಾಹನ ಸಂಚಾರಕ್ಕೆ ಸಮಸ್ಯೆ

ಕಾಸರಗೋಡು: ನಗರಸಭೆಯ ಮೂಗಿನ ನೇರ ಕೆಳಗೆ, ನಗರಮಧ್ಯದ ಕೆಪಿಆರ್ ರಾವ್ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಡಿಪ್ಪೋ ಸಮೀಪದ ರಸ್ತೆಯಲ್ಲಿ ಬೃಹತ್ ಹೊಂಡಗಳು ಸೃಷ್ಟಿಯಾಗಿದೆ. ಇದರಿಂದ ಕೆಎಸ್‌ಆರ್‌ಟಿಸಿ ಬಸ್‌ಗಳು ಡಿಪ್ಪೋಗೆ ಪ್ರವೇಶಿಸುವುದಕ್ಕೆ ಸಮಸ್ಯೆಯಾಗುತ್ತಿದೆ. ತೀವ್ರ ಮಳೆಗೆ ಹೊಂಡಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆಳವೂ ದೊಡ್ಡದಾಗುತ್ತಾ ಹೋಗುತ್ತಿದೆ. ಕೆಪಿಆರ್‌ರಾವ್ ರಸ್ತೆ ನಗರದ ಪ್ರಧಾನ ವಾಹನದಟ್ಟಣೆಯಿರುವ ರಸ್ತೆಗಳಲ್ಲೊಂದಾಗಿದೆ. ಬ್ಯಾಂಕ್ ರಸ್ತೆಯ ಸಾರಿಗೆ ತಡೆಯನ್ನು ಹೊರತುಪಡಿಸಲು ಹೆಚ್ಚಿನವರು ಇದೇ ರಸ್ತೆಯನ್ನು ಸಂಚಾರಕ್ಕಾಗಿ ಉಪಯೋಗಿಸುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಡಿಪ್ಪೋದಲ್ಲಿ ಬಸ್‌ಗಳ ಪ್ರವೇಶ ಹಾಗೂ ಹೊರ ಹೋಗುವುದು ಆಗುವಾಗ ಸಂಭವಿಸುವ …

ಸಾಲದ ಹೊರೆ : ವ್ಯಾಪಾರಿ ನಾಪತ್ತೆ

ಬದಿಯಡ್ಕ: ವ್ಯಾಪಾರಿ ನಾಪತ್ತೆಯಾದ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದೆ. ಕುಂಬ್ಡಾಜೆ ಮಾರ್ಪನಡ್ಕ ಹೌಸ್‌ನ ಮುಹಮ್ಮದ್ ಅಜಿರ್ಷ (22) ನಾಪತ್ತೆಯಾದ ವ್ಯಕ್ತಿ. ಇವರು ಅಗೋಸ್ತ್ ೧೫ರಂದು ಬೆಳಿಗ್ಗೆ ೧೧ ಗಂಟೆಗೆ  ಮನೆಯಿಂದ ಹೊರಹೋ ದ ವರು ನಂತರ  ಹಿಂತಿರುಗಿಲಿಲ್ಲ ವೆಂದು  ಅವರ  ತಾಯಿ ಸುಬೈದಾ ಎ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.  ಮೊ ಮ್ಮದ್ ಅಜಿರ್ಷ ಈ ಹಿಂದೆ ನಾಯಮ್ಮಾರಮೂಲೆಯಲ್ಲಿ ಅಂಗಡಿ ನಡೆಸುತ್ತಿದ್ದರು.  ಆ ವತಿಯಿಂದ ಅವರು …

139.29 ಗ್ರಾಂ ಎಂಡಿಎಂಎ ಪತ್ತೆ ಪ್ರಕರಣ: ತನಿಖೆಗೆ ಡಿವೈಎಸ್‌ಪಿ ನೇತೃತ್ವದ 17 ಪೊಲೀಸರನ್ನೊಳಗೊಂಡ ವಿಶೇಷ ತಂಡ ರಚನೆ

ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ಈತಿಂಗಳ ೯ರಂದು ಪೊಲೀಸರು ಮಾದಕದ್ರವ್ಯವಾದ 139.29 ಗ್ರಾಂ ಎಂಡಿಎಂಎ ಪತ್ತೆಹಚ್ಚಿದ ಪ್ರಕರಣದ ಮುಂದಿನ  ಹಂತದ ತನಿಖೆಗಾಗಿ  ಡಿವೈಎಸ್ಪಿ ನೇತೃತ್ವದಲ್ಲಿ 17 ಮಂದಿ ಪೊಲೀಸರ ನ್ನೊಳಗೊಂಡ ವಿಶೇಷ ತನಿಖಾ ತಂಡಕ್ಕೆ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ರೂಪು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಎರ್ನಾಕುಳಂ  ಅರಿಕ್ಕಪ್ಪಾಡಿ ಪೂಮಲ ವೆಸ್ಟ್ ವೇಂಙಳ ಪುಳಿಯಾನ್ತೋಟಂ ಅಬ್ದುಲ್ ಸಲಾಂ ಪಿ.ಎ (27), ಎರ್ನಾಕುಳಂ ಅರಿಕ್ಕಪ್ಪಾಡಿ ಪೂಮಲ ಕರಿವಿಳ್ಳಿ ಹೌಸಿನ ಮೊಹಮ್ಮದ್ ಹುಸೈನ್ ಕೆ.ಎಚ್ (28), …

ನೀರು ಸೇದುತ್ತಿದ್ದ ಮಧ್ಯೆ ಬಾವಿಗೆ ಬಿದ್ದು ಆರ್‌ಎಸ್‌ಎಸ್ ಕಾರ್ಯಕರ್ತ ನಿಧನ

ಕಾಸರಗೋಡು: ಪೆರಿಯ ವಡಕ್ಕೇಕರೆ ನಡುವಿಲ್ ವೀಟಿಲ್ ನಿವಾಸಿ ಪುರುಷೋತ್ತಮನ್ (64) ಬಾವಿಗೆ ಬಿದ್ದು ಮೃತಪಟ್ಟರು. ನೀರು ಸೇದುತ್ತಿದ್ದ ಮಧ್ಯೆ ಆಯ ತಪ್ಪಿ ಬಾವಿಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಇಂದು ಬೆಳಿಗ್ಗೆ ಘಟನೆ ನಡೆದಿದೆ. ಮನೆಯ ಸಮೀಪದಲ್ಲಿರುವ ತರವಾಡು ಮನೆಗೆ ನೀರು ಕೊಂಡೊಯ್ಯಲೆಂದು ತೆರಳಿದ್ದರು. ಒಂದು ಬಕೆಟ್ ನೀರು ಮನೆಗೆ ತಲುಪಿಸಿದ ಬಳಿಕ ಮತ್ತೆ ಹಿಂತಿರುಗದ ಹಿನ್ನೆಲೆಯಲ್ಲಿ ನೋಡಿದಾಗ ಹಗ್ಗ ಹಾಗೂ ಬಕೆಟ್ ಬಾವಿಯಲ್ಲಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶಂಕೆ ತೋರಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅವರು ತಲುಪಿ …

ಮೀಂಜ ಗ್ರಾಮಕಚೇರಿ ಮುಂಭಾಗ ಪಿಂಚಣಿದಾರರ ಪ್ರತಿಭಟನಾ ಸಂಗಮ

ಮೀಯಪದವು: ಕ್ಷೇಮ ಪಿಂಚಣಿಯನ್ನು ಬುಡಮೇಲುಗೊಳಿ ಸುವ ಯುಡಿಎಫ್ ಸರಕಾರದ ತೀರ್ಮಾನಕ್ಕೆದುರಾಗಿ ಸಿಪಿಎಂ ರಾಜ್ಯ ಸಮಿತಿಯ ಅಹ್ವಾನ ಪ್ರಕಾರ ಮೀಂಜ ಗ್ರಾಮ ಕಛೇರಿಯ ಮುಂದೆ ಪಿಂಚಣಿದಾರರ ಪ್ರತಿಭಟನಾ ಸಂಗಮ ನಡೆಯಿತು. ಸಿಪಿಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಸಿಜಿ ಮ್ಯಾಥ್ಯು ಉದ್ಘಾಟಿಸಿದರು. ಲೋಕೇಶ ಚಿನಾಲ ಅಧ್ಯಕ್ಷತೆ ವಹಿಸಿದರು. ರಾಮಚಂದ್ರ ಟಿ. ಸ್ವಾಗತಿಸಿದರು. ಬಾಳಪ್ಪ ಬಂಗೇರ, ಜನಾರ್ದನ ಪೂಜಾರಿ, ಐರಿನ್ ಜೋಸ್ಫಿನ್ ನೇತೃತ್ವ ನೀಡಿದರು.

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಅಧ್ಯಾಪಕನಿಗೆ ಏಳು ವರ್ಷ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯಾಗಿರುವ ಅಧ್ಯಾಪಕನಿಗೆ ಕಾಸರಗೋಡು ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾಧೀಶ ರಾದ ಕೆ. ಸಂತೋಷ್ ಕುಮಾರ್ ವಿವಿಧ ಸೆಕ್ಷನ್‌ಗಳಲ್ಲಾಗಿ ೭ ವರ್ಷಕಠಿಣ ಸಜೆ ಹಾಗೂ ೭೦,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಎನ್‌ಸಿಸಿ ಇನ್‌ಸ್ಟ್ರಕ್ಟರ್ ಹಾಗೂ ಅಧ್ಯಾಪಕನೂ ಆಗಿರುವ ಮೈರೆ ಗ್ರಾಮದ ಬಿಸ್ಮಿಲ್ಲಾ ಮಂಜಿಲ್‌ನ ಇಬ್ರಾಹಿಂ ಎಂ (54) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಪೋಕ್ಸೋ ಆಕ್ಟ್ ಪ್ರಕಾರ ಆರೋಪಿಗೆ 5 ವರ್ಷ ಕಠಿಣ ಸಜೆ ಮತ್ತು …