ಕಲೆಕ್ಟ್ರೇಟ್ ನೌಕರೆ ಆಶಾಲತರ ಸಾವು:ಎಡಿಎಂ ತನಿಖಾ ವರದಿ ಜಿಲ್ಲಾಧಿಕಾರಿಗೆ ಸಲ್ಲಿಕೆ

ಕಾಸರಗೋಡು: ಕಾಸರಗೋಡು ಕಲೆಕ್ಟ್ರೇಟ್‌ನ ಸೀನಿಯರ್ ಕ್ಲರ್ಕ್, ಚೆಂಗಳ ಅದ್ರುಕುಳಿ ನಿವಾಸಿಯಾದ ಆಶಾಲತಾ (೪೧)ರ ಸಾವಿಗೆ ಸಂಬಂಧಿಸಿ ಎಡಿಎಂ ನಡೆಸಿದ ತನಿಖಾ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು. ಆಶಾಲತಾರ ಆತ್ಮಹತ್ಯೆಗೆ ಕಾರಣ ವರ್ಗಾವಣೆ ಅಥವಾ ಕೆಲಸದ ಒತ್ತಡ ಅಲ್ಲವೆಂದು ವರದಿಯಲ್ಲಿ ತಿಳಿಸಲಾಗಿದೆ. ಐದು ವರ್ಷಗಳಿಂದ ಆಶಾಲತಾ ಭಾರೀ ನಿರಾಸೆಯಲ್ಲಿದ್ದರೆಂದೂ ವರದಿಯಲ್ಲಿ ತಿಳಿಸಲಾಗಿದೆ. ಆಶಾಲತಾ ಆಗಸ್ಟ್ ೭ರಂದು ಐಸ್‌ಕ್ರೀಂನೊಂದಿಗೆ ಇಲಿವಿಷ ಬೆರೆಸಿ ಸೇವಿಸಿದ್ದರು. ಇದರಿಂದ ಅಸ್ವಸ್ಥಗೊಂಡ ಅವರಿಗೆ ಮೊದಲು ಚೆಂಗಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಸ್ಥಿತಿ ಗಂಭೀರವಾಗಿದ್ದುದರಿಂದ ಅವರನ್ನು ಕಲ್ಲಿಕೋಟೆಯ …

ಸ್ವಾತಂತ್ರ್ಯ ಹೋರಾಟಗಾರರನ್ನು ಹೀಯಾಳಿಸುವುದು  ಸ್ವಾರ್ಥ ಹಿತಾಸಕ್ತಿಗಳ ಹವ್ಯಾಸ- ಪ್ರಕಾಶ್ ಮಲ್ಪೆ

ಬದಿಯಡ್ಕ: ಸ್ವಾತಂತ್ರ‍್ಯ ವೀರ ವಿನಾಯಕ ದಾಮೋದರ ಸಾವರ್ಕರನ್ನು ಅವಹೇಳನಗೊಳಿಸುವ ವರಲ್ಲಿ ಎರಡು ವಿಧ. ಎಲ್ಲಾ ತಿಳಿದುಕೊಂಡು ಬೇಕೆಂತಲೇ ದುರುದ್ದೇಶ ಪೂರ್ವಕವಾಗಿ ರಾಜಕೀಯ ಪ್ರೇರಿತವಾಗಿ ಅಪಹಾಸ್ಯ ಮಾಡುವವರು ಒಂದು ವಿಭಾಗ. ಇನ್ನೊಂದು ವಿಭಾಗ ಇವರ ಮಾತುಗಳನ್ನು ಕೇಳಿಕೊಂಡು ಅದನ್ನು ನಿಜವೆಂದೇ ನಂಬಿ ಅಪಾರ್ಥ ಮಾಡಿಕೊಂಡವರು. ಮೊದಲನೆ ವಿಭಾಗಕ್ಕೆ ಏನೂ ಮಾಡೋಕ್ಕಾಗದು. ಆದರೆ ಎರಡನೆ ವಿಭಾಗಕ್ಕೆ ನಿಜವೇ ನೆಂದು ಮನವರಿಕೆ ಮಾಡಿಕೊಡ ಬೇಕಾದ ಅನಿವಾರ್ಯತೆ ಇದೆ. ಅದು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಸಾಧ್ಯವಾಗಬೇ ಕೆಂದು ವಾಗ್ಮಿ, ಸಾಮಾಜಿಕ ಚಿಂತಕ ಪ್ರಕಾಶ್ …

ಜಿಲ್ಲಾ ಮಟ್ಟದ ಓಣಂ ಹಬ್ಬ ವಾರಾಚರಣೆ ಸಮಾಪ್ತಿ

ಕಾಸರಗೋಡು: ಜಿಲ್ಲಾ ಓಣಂ ವಾರಾಚರಣೆ ನಿನ್ನೆ ಸಮಾಪ್ತಿಗೊಂಡಿತು. ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಸ್ಥಳೀಯಾಡಳಿತ ಸಚಿವ ಕೆ.ಎಂ. ಶಾಜಿ ಉದ್ಘಾಟಿಸಿದರು. ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಅಧ್ಯಕ್ಷತೆ ವಹಿಸಿದರು. ಶಾಸಕ ಎಕೆಎಂ ಅಶ್ರಫ್, ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್, ಸಿನಿಮಾ ನಟ ಉಣ್ಣಿರಾಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ, ಉಪಾಧ್ಯಕ್ಷ ಹನೀಫ್ ಕೆ.ಎಂ,  ವಿವಿಧ ಬ್ಲೋಕ್ ಪಂ. ಅಧ್ಯಕ್ಷರಾದ ಸಿ. ಬಾಲನ್, ಅಬ್ದುಲ್ಲ ಕುಂಞಿ, ಯು.ಕೆ. ಸೈಫುಲ್ಲಾ ತಂಙಳ್, ಉಪಾಧ್ಯಕ್ಷೆ …

ಯಶವಂತ ಕುಮಾರ್ ನಿಧನ

 ಮುಳ್ಳೇರಿಯ: ಒಂದು ತಿಂಗಳ ಹಿಂದೆ ನಿಧನ ಹೊಂದಿದ ನಿವೃತ್ತ ಮುಖ್ಯೋಪಾಧ್ಯಾಯ, ಕುಂಟಾರು ಹುಣ್ಸೆಡ್ಕ ನಿವಾಸಿ ವೀರೋಜಿ ರಾವ್‌ರ ಪುತ್ರ ಯಶವಂತ ಕುಮಾರ್ (52) ನಿನ್ನೆ ನಿಧನ ಹೊಂದಿದರು. ಇವರು ರಾಜ್ಯ ಸಾರಿಗೆ ಬಸ್‌ಗಳಲ್ಲಿ ತಾತ್ಕಾಲಿಕ ಚಾಲಕನಾಗಿದ್ದರು. ಅಲ್ಲದೆ ರಿಕ್ಷಾ ಚಾಲಕನಾಗಿಯೂ ದುಡಿದಿದ್ದರು. ಕೃಷಿಕರಾಗಿದ್ದಾರೆ. ಹೃದಯಾಘಾತ ಮರಣಕ್ಕೆ ಕಾರಣವೆನ್ನ ಲಾಗಿದೆ. ಮೃತರು ತಾಯಿ ಜಯಲಕ್ಷ್ಮಿ, ಪತ್ನಿ ಯಶೋಧ, ಮಕ್ಕಳಾದ ಚೈತನ್ಯ, ಶರಣ್ಯ, ಸಹೋದರರಾದ ಪ್ರವೀಣ್ ಕುಮಾರ್, ಕಿಶೋರ್ ಕುಮಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಯೂಸಫ್  ನಿಧನ

ಪೆರ್ಲ: ಇಲ್ಲಿನ ಕೆ ಕೆ ರಸ್ತೆ ನಿವಾಸಿ, ಉಕ್ಕಿನಡ್ಕದ ಹಿರಿಯ ವ್ಯಾಪಾರಿ ಯೂಸಫ್ (92) ನಿಧನ ಹೊಂದಿದರು. ಮೃತರು ಪತ್ನಿ ಮರಿಯಮ್ಮ, ಮಕ್ಕಳಾದ ಅಶ್ರಫ್, ಸಮದ್, ಸಮೀರ್, ಸಲೀಂ, ಸಾಬಿತ್, ಸಹಾನ, ಅಳಿಯಂದಿರಾದ ಸಫರಿ, ಮುಹಮ್ಮದ್, ಸೊಸೆಯಂದಿರಾದ ಸಾಜಿತ, ಸಫೂರ, ಸಹೋದರ ಮೂಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಪುತ್ರ ಅನ್ವರ್ ಹಾಗೂ ಇಬ್ಬರು ಸಹೋದರರು ಈ ಹಿಂದೆ ನಿಧನ ಹೊಂದಿದ್ದಾರೆ.

ಭವಾನಿ ನಿಧನ

ಕಾಸರಗೋಡು: ನೆಲ್ಲಿಕುಂಜೆ ಭವಾನಿ ನಿಲಯದ ದಿ| ಕೆ. ದಾಮೋದರ ಎಂಬವರ ಪತ್ನಿ ಭವಾನಿ (75) ನಿಧನಹೊಂದಿದರು. ಮೃತರು ಮಕ್ಕಳಾದ ಚಿತ್ತರಂಜನ್, ಶೋಭಾ, ಕಿಶೋರ್, ಅನಿಲ್, ಸುನಿಲ್ ಪ್ರವೀಣ್, ಅಳಿಯ ಸೊಸೆಯಂದಿರಾದ ಸುರೇಶ್ ಮಡಪ್ಪುರ (ಶಿಕ್ಷಣ ಕಚೇರಿ ನಿವೃತ್ತ ನೌಕರ), ಸುಧಾ, ವಿನಯ, ಸುಶ್ಮ, ನಿಶಾ, ಶರಣ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ರಾಜೀವಿ ನಿಧನ

ಮಂಜೇಶ್ವರ: ಹೊಸಂಗಡಿ ಬಳಿಯ ಕಡಂಬಾರು ನಿವಾಸಿ ದಿ| ರಮೇಶ ಆಚಾರ್ಯ ರವರ ಪತ್ನಿ ರಾಜೀವಿ (82) ನಿನ್ನೆ ರಾತ್ರಿ ನಿಧನ ಹೊಂದಿದರು. ಮೃತರು ಮಕ್ಕಳಾದ ಭುವನೇಶ್ವರಿ, ಪ್ರದೀಪ, ಉದಯ, ಗೋಕುಲ, ಸೋಮನಾಥ, ತಾರಾನಾಥ, ಭಾರತಿ, ನವೀನ, ಯೋಗೀಶ್ವರಿ, ಸೊಸೆಯಂದಿರಾದ ನಳಿನಿ, ರೇಷ್ಮ, ಹೇಮಲತ, ರಶ್ಮಿ, ಕೃಪಾಲಕ್ಷ್ಮಿ ಅಳಿಯಂದಿರಾದ ಮಂಜುನಾಥ, ಮೌನೇಶ, ಜ್ಞಾನೇಶ, ಸಹೋದರ ಸಹೋದರಿಯರಾದ ಲಲಿತ, ಗಿರಿಜ, ಶಾರದಾ, ಲಕ್ಷ÷್ಮಣ, ಪ್ರಭಾಕರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಹೋದರ ಸುಂದರ, ಸಹೋದರಿಯರಾದ ಉಮಾವತಿ, ಸುಲೋಚನ ಈ …