ನಿವೃತ್ತ ಮುಖ್ಯೋಪಾಧ್ಯಾಯರ ಮನೆಯಿಂದ ಚಿನ್ನಾಭರಣ ಕಳವು
ಕುಂಬಳೆ: ಓಣಂ ಆಚರಣೆಗಾಗಿ ಊರಿಗೆ ತೆರಳಿದ್ದ ನಿವೃತ್ತ ಮುಖ್ಯೋ ಪಾಧ್ಯಾಯರ ಮನೆಗೆ ಕಳ್ಳರು ನುಗ್ಗಿ ಚಿನ್ನಾಭರಣ ದೋಚಿದ ಘಟನೆ ನಡೆದಿದೆ. ಕುಂಬಳೆ ಕೃಷ್ಣನಗರದಲ್ಲಿ ವಾಸಿಸುವ ಕೊಡ್ಯಮ್ಮೆ ಜಿಎಚ್ ಎಸ್‌ಎಸ್‌ನ ನಿವೃತ್ತ ಮುಖ್ಯೋಪಾ ಧ್ಯಾಯ ಥೋಮಸ್ ಟಿ.ಜೆ ಅವರ ಮನೆಯಿಂದ ಕಳವು ನಡೆದಿದೆ. ಮನೆಯ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕೊಠಡಿಯೊಳಗೆ ಕಪಾಟಿನಿಂದ ಮುಕ್ಕಾಲುಪವನ್‌ನ ಬೆಂಡೋಲೆ ಹಾಗೂ ಅರ್ಧ ಪವನ್‌ನ ಉಂಗುರ ದೋಚಿದ್ದಾರೆ. ಥೋಮಸ್ ಟಿ.ಜೆ ಹಾಗೂ ಪತ್ನಿ ಸೋಫಿಯಮ್ಮ ( ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ …