ಪತ್ನಿಯ ಸಹೋದರನನ್ನು ಇರಿದು ಕೊಲೆಗೈದ ಪ್ರಕರಣದ ಆರೋಪಿ ಹಲವು ವರ್ಷಗಳ ಬಳಿಕ ಬಂಧನ

ಕಾಸರಗೋಡು: 2010ರಲ್ಲಿ ಪರಶ್ಶಿನಿಕಡವು ಮಾಂಕಡವು ಎಂಬಲ್ಲಿ ಜಲೀಲ್ ಎಂಬವರನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ  ತಲೆಮರೆಸಿಕೊಂಡ ಆರೋಪಿ ಸೆರೆಗೀಡಾಗಿದ್ದಾನೆ. ವಾಳಯಿಲ್ ಮುಹಮ್ಮದ್ ಅಲಿ (55) ಎಂಬಾತನನ್ನು ಕಣ್ಣೂರು ಸಿಟಿ ಪೊಲೀಸರ ಪ್ರತ್ಯೇಕ ತನಿಖಾ ತಂಡ ಉಪ್ಪಳದಿಂದ ಸೆರೆಹಿಡಿದಿದೆ. 2010 ಸೆಪ್ಟಂಬರ್ 17ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿತ್ತು. ಪರಶ್ಶಿನಿಕಡವು ಮಾಂಕಡವಿನಲ್ಲಿ ಮೊಯ್ದು ಎಂಬವರ ಮಕ್ಕಳಾದ ಜಲಾಲ್ ಹಾಗೂ ಶಂಸೀರ್ ಎಂಬಿವರನ್ನು ಸಹೋದರಿಯ ಪತಿಯಾದ  ಮುಹಮ್ಮದ್ ಅಲಿ ಆಸ್ತಿ ತರ್ಕದ ವಿವಾದದ ಹಿನ್ನೆಲೆಯಲ್ಲಿ ಕೊಲೆಗೈಯ್ಯಬೇಕೆಂಬ ಉದ್ದೇಶದೊಂದಿಗೆ ಇರಿದು  ಗಾಯಗೊಳಿಸಿದ್ದನು. ಇರಿತದಿಂದ …

ರೈಲಿನಲ್ಲಿ ಕಾಲೇಜು ವಿದ್ಯಾರ್ಥಿಯ ಲ್ಯಾಪ್‌ಟಾಪ್ ಕಳವು: ಆರೋಪಿ ಸೆರೆ

ಕಾಸರಗೋಡು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಯ ಲ್ಯಾಪ್‌ಟಾಪ್ ಹಾಗೂ ಇತರ ಸಾಮಗ್ರಿಗಳು ಒಳಗೊಂಡ ಬ್ಯಾಗ್‌ಗಳನ್ನು ಕಳವುಗೈದ ಪ್ರಕರಣದ ಆರೋಪಿಯನ್ನು ಕಾಸರಗೋಡು ರೈಲ್ವೇ ಪೊಲೀಸ್ ಠಾಣೆಯ ಎಸ್‌ಐ ಸನಿಲ್ ಕುಮಾರ್ ಸಿ.ಎಸ್.ರ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಮಲಪ್ಪುರಂ ಕಾವುಪುರ ಕುನಿಯೇರಿ ಹೌಸ್‌ನ ಮೊಹಮ್ಮದ್ ಜಾಬೀರ್ (38) ಬಂಧಿತ ಆರೋಪಿ. ಮಂಗಳೂರು ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿ ಪಟ್ಟಾಂಬಿ ಚೇಂಬ್ರಾತೆಕ್ಕೆ ಪುರಕ್ಕಲ್ ನಿವಾಸಿ ವಿಷ್ಣುದತ್ ಟಿ.ಪಿ. ಎಂಬವರು ಆಗಸ್ಟ್ 22ರಂದು ಪರಶುರಾಮ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಅವರ ಲ್ಯಾಪ್‌ಟಾಪ್ ಒಳಗೊಂಡಿದ್ದ ಎರಡು …

ನಕಲಿ ಚಿನ್ನಾಭರಣ ಅಡವಿರಿಸಿ ಖಾಸಗಿ ಸಂಸ್ಥೆಯಿಂದ 11 ಲಕ್ಷ ರೂ. ಸಾಲ ಪಡೆದು ವಂಚನೆ

ಕಾಸರಗೋಡು: ಒಳಗೆ ಅರಗು ಹಾಗೂ ಹೊರಗೆ ಚಿನ್ನ ಲೇಪಿಸಿ ನಿರ್ಮಿಸಿದ ಚಿನ್ನಾಭರಣಗಳನ್ನು ಅಡವಿರಿಸಿ 11,44,000 ರೂ. ಸಾಲ ತೆಗೆದು ವಂಚಿಸಿರುವುದಾಗಿ ದೂರಲಾಗಿದೆ. ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ಕಾಸರಗೋಡು ಬ್ರಾಂಚ್ ಮೆನೇಜರ್ ಯು.ಪಿ. ಕಿರಣ್ ಕುಮಾರ್ ನೀಡಿದ ದೂರಿನಂತೆ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಪೊಯಿನಾಚಿ ಚೆರುಕರ ನಿವಾಸಿ ಅಬ್ದುಲ್ ಮಜೀದ್ (೫೨)ನ ವಿರುದ್ಧ ಕೇಸು ದಾಖಲಿಸಲಾಗಿದೆ. 2026 ಫೆಬ್ರವರಿ 25ರಂದು ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. 108.407 ಗ್ರಾಂ ತೂಕದ ಎರಡು ಬಳೆಗಳು, ಒಂದು …

ಯುವಕನನ್ನು ಅಪಹರಿಸಿ ಬೆದರಿಕೆಯೊಡ್ಡಿ 1.02 ಲಕ್ಷ ರೂ. ದರೋಡೆ: ಆರೋಪಿಗಳಿಗಾಗಿ ಶೋಧ

ಬದಿಯಡ್ಕ: ಯುವಕನನ್ನು ಕಾರಿನಲ್ಲಿ ಅಪಹರಿಸಿ ಚೆರ್ಕಳ ಬಳಿಯ ಕ್ವಾರ್ಟರ್ಸ್‌ಗೆ ತಲುಪಿಸಿ ನಗ್ನಗೊಳಿಸಿ ಬಾಲಕಿಯೊಂದಿಗೆ ನಿಲ್ಲಿಸಿ  ವೀಡಿಯೋ ಚಿತ್ರೀಕರಿಸಿ ಬೆದರಿಕೆ ಯೊಡ್ಡಿ 1,02,000 ರೂಪಾಯಿ ಲಪಟಾಯಿಸಿದ ಪ್ರಕರಣದ ಆರೋಪಿಗಳ ಕುರಿತು ಸೂಚನೆ ಲಭಿಸಿವುದಾಗಿಯೂ ಅವರ ಪತ್ತೆಗಾಗಿ ಶೋಧ ತೀವ್ರಗೊಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದ.ಕ. ಜಿಲ್ಲೆಯ ವಿಟ್ಲ ಸೇರಾಜೆ ನಿವಾಸಿಯಾದ ಎ.ಎಸ್.ಸುಜಿತ್ ನೀಡಿದ ದೂರಿನಂತೆ ೫ ಮಂದಿ ತಂಡದ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಇದೇ ವೇಳೆ ಘಟನೆ ನಡೆದಿರುವುದು  ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಾದು ದರಿಂದ …

ಎಂಡಿಎಂಎ ಪ್ರಕರಣ: ಇನ್ನೋರ್ವ ಆರೋಪಿ ಸೆರೆ ಬಂಧಿತರ ಸಂಖ್ಯೆ 8ಕ್ಕೇರಿಕೆ

ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಕಾಲಿಕಡವ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ನಡೆಸಿದ ವಾಹನ ತಪಾಸಣೆಯಲ್ಲಿ ಮಾದಕದ್ರವ್ಯವಾದ 139.29 ಗ್ರಾಂ ಎಂಡಿಎಂಎ ಪತ್ತೆಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವನನ್ನು ವಿಶೇಷ ಪೊಲೀಸರ ತಂಡ ಬಂಧಿಸಿದೆ. ಉತ್ತರ ಪ್ರದೇಶ ಆಗ್ರಾ ನಿವಾಸಿ ವಿಷ್ಣುಕುಮಾರ್ (26) ಬಂಧಿತ ಆರೋಪಿ. ಆ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ ಈ ತನಕ ಬಂಧಿತರಾದವರ ಸಂಖ್ಯೆ ಈಗ ಎಂಟಕ್ಕೇರಿದೆ. ಈ ಪ್ರಕರಣದ ಮುಖ್ಯ ಸೂತ್ರಧಾರಿಣಿ ಗುಜರಾತ್ ಅಹಮ್ಮದಾಬಾದ್ ಲಾಂಬಾ ನಿವಾಸಿ ಹಾಗೂ ಮೂಲತಃ ಪಶ್ಚಿಮ ಬಂಗಾಳ …

ಎಂಎಸ್‌ಎಫ್ ಜಿಲ್ಲಾ ಸಮಿತಿಯಲ್ಲಿ ಸಂದಿಗ್ಧತೆ: 5 ಪದಾಧಿಕಾರಿಗಳು ರಾಜೀನಾಮೆ; ಮಂಜೇಶ್ವರ ಮಂಡಲ ಸಮಿತಿಯಲ್ಲೂ ರಾಜೀನಾಮೆ ಸುಳಿವು

ಕಾಸರಗೋಡು: ಎಂಎಸ್‌ಎಫ್ ಜಿಲ್ಲಾ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯ ಏಕಪಕ್ಷೀಯ ತೀರ್ಮಾನವನ್ನು ಪ್ರತಿಭಟಿಸಿ ಜಿಲ್ಲಾ ಕೋಶಾಧಿಕಾರಿ ಸರ್ಫರಾಸ್ ಬಂದ್ಯೋಡ್ ಸಹಿತದ ಐದು ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಸರ್ಫರಾಸ್‌ನ ಹೊರತಾಗಿ ಉಪಾಧ್ಯಕ್ಷರಾದ ಜಂಶೀರ್ ಮೊಗ್ರಾಲ್, ಮುರ್ಶಿದ್ ಮೊಗ್ರಾಲ್, ಕಾರ್ಯದರ್ಶಿಗಳಾದ ಬಿಲಾಲ್ ಆರಿಕ್ಕಾಡಿ, ಅನ್ಸಾರ್ ವರ್ಕಾಡಿ ಎಂಬಿವರು ಜಿಲ್ಲಾ ಪದಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮಂಜೇಶ್ವರ ಮಂಡಲ ಎಂಎಸ್‌ಎಫ್ ಪದಾಧಿಕಾರಿಗಳು ಕೂಡಾ ಇಂದು ರಾಜೀನಾಮೆ ನೀಡುವರು ಎಂಬ ಸೂಚನೆಯೂ ಇದೆ. ಎಂಎಸ್‌ಎಫ್ ರಾಜ್ಯ ಸಮಿತಿಗೆ ಕಾಸರಗೋಡು ಜಿಲ್ಲಾ ಸಮಿತಿಯಿಂದ ಮಾಜಿ …

ಕೊಯ್ಯೋಡ್ ಉಮರ್ ಮುಸ್ಲಿಯಾರ್ ಸಂಯುಕ್ತ ಜಮಾಯತ್ ಖಾಝಿ

ಕಾಸರಗೋಡು: ಸಮಸ್ತ ಕೇಂದ್ರ ಮುಶಾವರ ಕೋಶಾಧಿಕಾರಿಯಾದ ಕೊಯ್ಯೋಡ್ ಉಮರ್ ಮುಸ್ಲಿಯಾರ್ ರನ್ನು ಕಾಸರಗೋಡಿನ ಸಂಯುಕ್ತ ಜಮಾಯತ್ ಖಾಝಿಯಾಗಿ ನೇಮಕ ಗೊಳಿಸಲು ಸಂಯುಕ್ತ ಜಮಾಯತ್ ತೀರ್ಮಾನಿಸಿದೆ. ಅಧ್ಯಕ್ಷ ಎನ್.ಎ. ನೆಲ್ಲಿಕುನ್ನುರ ಅಧ್ಯಕ್ಷತೆಯಲ್ಲಿ ಜರಗಿದ ಸಂಯುಕ್ತ ಮುಸ್ಲಿಂ ಜಮಾಯತ್ ಸಮಿತಿ ಸದಸ್ಯರ ಹಾಗೂ ಮಾಲಿಕ್ ದೀನಾರ್ ವಲಿಯ ಜುಮುಯತ್ ಮಸೀದಿ ಅಧ್ಯಕ್ಷ, ಕಾರ್ಯದರ್ಶಿಗಳ ಜಂಟಿ ಸಭೆ ಯಲ್ಲಿ ಈ ತೀರ್ಮಾನ ಕೈಗೊಳ್ಳಲಾ ಗಿದೆ. ಪ್ರೊ. ಕೆ. ಆಲಿಕುಟ್ಟಿ ಮುಸ್ಲಿಯಾರ್‌ರ ನಿಧನದ ಹಿನ್ನೆಲೆಯಲ್ಲಿ ಹೊಸ ಖಾಝಿಯವರ ನೇಮಕ ನಡೆದಿದೆ.

ಕಾರಡ್ಕ, ಬೆಳ್ಳೂರು ಪಂಚಾಯತ್‌ಗಳಲ್ಲಿ ಶಾಸಕ ಕಲ್ಲಟ್ರ ಮಾಹಿನ್‌ರಿಂದ  ದೂರು ಆಲಿಕೆ: ಸಮಸ್ಯೆ, ಬೇಡಿಕೆ ಸಹಿತ ತಲುಪಿದ ಜನಸಾಮಾನ್ಯರು

ಕಾಸರಗೋಡು: ಜನರ ಸಮಸ್ಯೆಗಳು, ಅಭಿವೃದ್ಧಿ ವಿಷಯಗಳ ಬಗ್ಗೆ ನೇರವಾಗಿ ತಿಳಿದು ಪರಿಹಾರ ಕಾಣುವುದಕ್ಕಾಗಿ ಶಾಸಕ ಕಲ್ಲಟ್ರ ಮಾಹಿನ್ ನಡೆಸುವ ಜನಸಂಪರ್ಕ ಕಾರ್ಯಕ್ರಮಕ್ಕೆ ಕಾರಡ್ಕ, ಬೆಳ್ಳೂರು ಪಂಚಾಯತ್‌ಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನಸಾಮಾನ್ಯರ ದೂರು ಸಹಿತ ಶಾಶಕರನ್ನು ಭೇಟಿಯಾದರು. ಪಂಚಾಯತ್‌ಗಳ ವಿವಿಧ ಸ್ಥಳಗಳಲ್ಲಿ ನಡೆಯುವ ಜನಸಂಪರ್ಕ ಕಾರ್ಯಕ್ರಮದಲ್ಲಿ ಮಹಿಳೆಯರು, ಯುವಕರು, ವೃದ್ಧರು, ಕೃಷಿಕರು, ಕಾರ್ಮಿಕರ ಸಹಿತ ಹಲವಾರು ಮಂದಿ ಭಾಗವಹಿಸಿದ್ದಾರೆ. ವೈಯಕ್ತಿಕ ದೂರಿನಿಂದ ಆರಂಭಿಸಿ ಸಾರ್ವಜನಿಕವಾದ ಅಭಿವೃದ್ಧಿ ಬೇಡಿಕೆ ಮೊದಲಾದ ವಿಷಯಗಳ ಬಗ್ಗೆ ಜನರು ಶಾಸಕರ ಗಮನಕ್ಕೆ ತಂದಿದ್ದಾರೆ. …

ಬಾಯಾರಿನಲ್ಲಿ ಸಹೋದರರಿಂದ ಗಣಪತಿ ವಿಗ್ರಹರಚನೆ

ಉಪ್ಪಳ: ಗಣೇಶೋತ್ಸವ ಸಮೀಪಿಸಿರುವಂತೆ ಬಾಯಾರುನಲ್ಲಿ ಗಣಪತಿ ವಿಗ್ರಹ ರಚನೆ ಭರದಿಂದ ನಡೆಯುತ್ತಿದೆ. ಈ ತಿಂಗಳ ೧೪ರಂದು ಶ್ರೀ ಗಣೇಶೋತ್ಸವ ನಡೆಯಲಿದೆ. ಬಾಯಾರು ಶ್ರೀ ಪಂಚಲಿAಗೇಶ್ವರ ದೇವಸ್ಥಾನ ಬಳಿಯ ನಿವಾಸಿ ದಿ| ಕೃಷ್ಣಪ್ಪ ಆಚಾರ್ಯರ ಮಕ್ಕಳಾದ ಮಹೇಶ ಹಾಗೂ ಭರತ್ ಸಹೋದರರು ಮನೆಯಲ್ಲಿ ಗಣಪತಿ ವಿಗ್ರಹ ತಯಾರಿಸುತ್ತಿದ್ದಾರೆ. ಈ ವರ್ಷ ಒಟ್ಟು ೫೦ ಗಣಪತಿ ವಿಗ್ರಹ ಸಿದ್ದವಾಗುತ್ತಿದೆ. ಬಾಯಾರು, ಜೋಡುಕಲ್ಲು, ಪ್ರತಾಪನಗರ, ಹೊಸಂಗಡಿ, ಮಿತ್ತನಡ್ಕ, ಸುಂಕದಕಟ್ಟೆ, ನೀಲೇಶ್ವರ , ಕರ್ನಾಟಕದ ಬೆಂಗಳೂರು, ಮಡಿಕೇರಿ ಸಹಿತ ವಿವಿಧ ಕಡೆಗಳಲ್ಲಿ ಪೂಜಿಸುವ …

ಶಾಂತಿಯುತ ವಾತಾವರಣವನ್ನು ಹಾಳುಮಾಡಲು ಯೂತ್ ಲೀಗ್ ಯತ್ನ: ಎಂ.ಎಲ್. ಅಶ್ವಿನಿ

ಮಂಜೇಶ್ವರ: ಶಾಂತಿಯುತ ವಾತಾವರಣವಿರುವ ಪ್ರದೇಶದಲ್ಲಿ ಉದ್ದೇಶಪೂರ್ವಕವಾಗಿ ಉದ್ವಿಗ್ನತೆ ಸೃಷ್ಟಿಸಲು ಯೂತ್ ಲೀಗ್ ಕಾರ್ಯಕರ್ತರು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಜಿ¯sÁ್ಲಧ್ಯಕ್ಷೆ ಎಂ. ಎಲ್. ಅಶ್ವಿನಿ ಆರೋಪಿಸಿದ್ದಾರೆ.ಹಲವು ವರ್ಷಗಳಿಂದ ಗಣೇಶೋತ್ಸವ ನಡೆಯುತ್ತಿರುವ ಸ್ಥಳದಲ್ಲಿ ಉತ್ಸವದ ಅಂಗವಾಗಿ ತಾತ್ಕಾಲಿಕ ಪೆಂಡಾಲ್ ನಿರ್ಮಿಸಿz್ದÀಕ್ಕಾಗಿ ಮುಸ್ಲಿಂ ಲೀಗ್ ಕಾರ್ಯಕರ್ತರು ಅನಗತ್ಯವಾಗಿ ಗೊಂದಲ ಸೃಷ್ಟಿಸಿ, ಸಂಘರ್ಷದ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಇದರ ಭಾಗವಾಗಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಲೋಕೇಶ್ ನೊಂಡ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು …