ಪುತ್ತಿಗೆ: ಮರಾಟಿ ಸಂರಕ್ಷಣಾ ಸಮಿತಿಯಿಂದ ಓಣಂ ಪ್ರಯುಕ್ತ ವಿವಿಧ ಸ್ಪರ್ಧೆ

ಪುತ್ತಿಗೆ: ಕೇರಳ ಮರಾಟಿ ಸಂರಕ್ಷಣಾ ಸಮಿತಿಯ ಪುತ್ತಿಗೆ ಪಂಚಾಯತ್ ದೇರಡ್ಕ ಮಹಮ್ಮಾಯಿ ಮರಾಟಿ ಸಮಿತಿ ಆಶ್ರಯದಲ್ಲಿ ಓಣಂ ಹಬ್ಬದ ಅಂಗವಾಗಿ ಸಮಾಜ ಬಾಂಧವರಿಗೆ  ವಿವಿಧ ಆಟೋಟ ಸ್ಪರ್ಧೆ ನಡೆಸಲಾಯಿತು.  ಕೃಷ್ಣ ನಾಯ್ಕ ಬೀಡಾರ ಧ್ವಜಾರೋಹಣ ನಡೆಸಿದರು. ಬಳಿಕ ಮಕ್ಕಳಿಗೆ ಹಾಗೂ ಹಿರಿಯರಿಗೆ ವಿವಿಧ ಸ್ಪರ್ಧೆ ನಡೆಯಿತು. ಸಮಾರೋಪ ಸಮಾರಂಭವನ್ನು ಕೇರಳ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ ಮಾನ್ಯ ಉದ್ಘಾಟಿಸಿದರು. ವಾಸು ನಾಯ್ಕ್ ಅಧ್ಯಕ್ಷತೆ ವಹಿಸಿದರು ಸಂರಕ್ಷಣಾ ಸಮಿತಿಯ ಉಪಾಧ್ಯಕ್ಷ ರಾಧಾಕೃಷ್ಣ ಪೈಕ, ಈಶ್ವರ ನಾಯ್ಕ …

ಎನ್‌ಟಿಯು ಮಂಜೇಶ್ವರ ಉಪಜಿಲ್ಲೆ ವತಿಯಿಂದ ಶಿಕ್ಷಕರ ದಿನಾಚರಣೆ

ಮಂಜೇಶ್ವರ: ದೇಶೀಯ ಅಧ್ಯಾಪಕ ಪರಿಷತ್ ಎನ್‌ಟಿಯು ಮಂಜೇಶ್ವರ ಉಪಜಿಲ್ಲಾ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಇಚ್ಲಂಗೋಡು ಎಎಲ್ಪಿಎಸ್ವ ಜನರಲ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಐ.ಕೆ. ವಾಸುದೇವ ಮಯ್ಯರನ್ನು ಅವರ ಸ್ವ-ಗೃಹದಲ್ಲಿ ಗೌರವಿಸಲಾ ಯಿತು. ಎನ್‌ಟಿಯು ರಾಜ್ಯ ಸಮಿತಿ ಸದಸ್ಯ ಅರವಿಂದಾಕ್ಷ ಭಂಡಾರಿ, ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಟೀಚರ್, ದಿವಾಕರ ಆಳ್ವ, ಕೊರಗಪ್ಪ ಶೆಟ್ಟಿ, ಅಧ್ಯಾ ಪಕ ಕೃಷ್ಣಪ್ರಸಾದ್ ಶುಭ ಹಾರೈಸಿದರು. ಉಪಜಿಲ್ಲಾ ಸಮಿತಿ ಸದಸ್ಯ ಜಯರಾಮ ಸಿ ಎಚ್ ಸನ್ಮಾನಿತರ ಪರಿಚಯ ಮಾಡಿದರು. ಕಾರ್ಯದರ್ಶಿ …

ನಗರದ ರಸ್ತೆಗಳ ಶೋಚನೀಯಾವಸ್ಥೆ: ಬಿಜೆಪಿಯಿಂದ ಇಂದು ದೊಂದಿ ಮೆರವಣಿಗೆ

ಕಾಸರಗೋಡು: ನಗರದ ರಸ್ತೆಗಳ ಶೋಚನೀಯಾವಸ್ಥೆ ಪರಿಹಾರಕ್ಕೆ ಕ್ರಮ ಕೈಗೊಳ್ಳದ ಅಧಿಕಾರಿಗಳ ನಿಲುವನ್ನು ಪ್ರತಿಭಟಿಸಿ ಬಿಜೆಪಿ ನಗರಸಭಾ ಸಮಿತಿ ನೇತೃತ್ವದಲ್ಲಿ ಇಂದು ಸಂಜೆ ನಗರದಲ್ಲಿ ದೊಂದಿ ಮೆರವಣಿಗೆ ನಡೆಯಲಿದೆ. ಮಳೆ ಸುರಿಯುವ ವೇಳೆ ನಗರದ ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನಗಳ ಸಂಚಾರಕ್ಕೂ ಅಡಚಣೆ ಎದುರಾಗುತ್ತಿದ್ದು, ಇದು ಅಪಘಾತಗಳಿಗೆ ಕಾರಣವಾಗುತ್ತಿದೆ. ಪೈಪ್ ಲೈನ್ ಅಳವಡಿಸಿದ ಬ ಳಿಕ ಹೊಂಡ ಮುಚ್ಚುವಲ್ಲಿ ಭಾರೀ ಲೋಪವುಂಟುಮಾಡಲಾಗುತ್ತಿದೆ. ರಸ್ತೆಯ ಹೊಂಡ ಮುಚ್ಚುವಲ್ಲಿ ಅಧಿಕಾರಿಗಳು ತೋರಿಸುವ ನಿರ್ಲಕ್ಷ್ಯ ನೀತಿ ಕೊನೆಗೊಳಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ. ಅಧಿಕಾರಿಗಳ ನಿರ್ಲಕ್ಷ್ಯದ …

ನಿವೃತ್ತ ಅಂಚೆ ಅಧಿಕಾರಿ ಬಾಬು ನಾಯ್ಕ ಕೆ. ನಿಧನ

ಪೆರ್ಲ: ಮೂಲತಃ ಪೆರ್ಲ ಕಜಂಪಾಡಿ ನಿವಾಸಿ ಹಾಗೂ ಈಗ ಕಾಸರಗೋಡು ನುಳ್ಳಿಪಾಡಿಯಲ್ಲಿ ವಾಸಿಸುತ್ತಿದ್ದ ಭಾರತೀಯ ಅಂಚೆ ಇಲಾಖೆಯ ಪುಣೆಯ ನಿವೃತ್ತ ಸೀನಿಯರ್ ಸುಪರಿಂಟೆಂಡೆಂಟ್ (ಐಪಿಎಸ್) ಬಾಬು ನಾಯ್ಕ ಕೆ. (84) ನಿಧನ ಹೊಂದಿದರು. ಮೃತರು ಪತ್ನಿ ಕಾಸರಗೋಡು ಸರಕಾರಿ ಹೈಸ್ಕೂಲ್‌ನ ನಿವೃತ್ತ  ಹಿಂದಿ ಅಧ್ಯಾಪಿಕೆ ಸುನಂದ ಭಾ, ಮಕ್ಕಳಾದ ವರ್ಕಾಡಿ ವಿದ್ಯುತ್ ಸೆಕ್ಷನ್ ಕಚೇರಿಯ ಸೀನಿಯರ್  ಸುಪರಿಂಟೆಂಡೆಂಟ್ ಶ್ರೀಮಾ ನಾಯ್ಕ್, ಎಸ್‌ಬಿಐಯ ಚೀಫ್ ಅಸೋಸಿಯೇಟ್ ರೂಪಾಶ್ರೀ ಬಿ, ಅಳಿಯಂದಿರಾದ ವಿಜಯ್ ಕುಮಾರ್ (ಮಂಗಳೂರು ವೆನ್ಲಾಕ್ ಆಸ್ಪತ್ರೆಯ ನಿವೃತ್ತ …

ಟಿ. ರಮಣಿ ನಿಧನ

ಕಾಸರಗೋಡು: ವಿದ್ಯಾನಗರ ಚಿನ್ಮಯಾ ಕಾಲನಿ ಸೋಪಾನ ನಿವಾಸಿ ಟಿ. ರಮಣಿ (74) ನಿಧನ ಹೊಂದಿದರು. ಮೃತರು ಪತಿ ಎ.ಸಿ. ನಾರಾಯಣನ್, ಮಕ್ಕಳಾದ ಮಹೇಂದ್ರನ್, ರನೀಶ್, ಸೊಸೆಯಂ ದಿರಾದ ರಮ್ಯ, ಅಮೃತ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಬಿಎಂಎಸ್ ಮಧೂರು ವಲಯ ಪ್ರತಿನಿಧಿ ಸಮ್ಮೇಳನ

ಮಧೂರು: ಬಿಎಂಎಸ್ ಮಧೂರು ವಲಯ ಪ್ರತಿನಿಧಿ ಸಮ್ಮೇಳನ ಕೂಡ್ಲು ಅಧ್ಯಾಪಕ ಭವನ ಸಭಾಂಗಣದಲ್ಲಿ ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಮಧೂರು ವಲಯ ಅಧ್ಯಕ್ಷ ವಸಂತ ಕೊರುವೈಲು ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಅನಿಲ್ ಬಿ. ನಾಯರ್, ಕೆ. ಗುರುದಾಸ್, ಬಿ. ಮನೀಶ್, ಕೆ. ಸುರೇಶ್, ಎನ್. ನಮಿತ, ಎ. ದೇವಕಿ, ಎ. ತೇಜಸ್, ಕೆ.ಎಸ್. ಶರತ್‌ಕುಮಾರ್, ಪ್ರಭಾಶಂಕರ, ಕೆ.ದಯಾನಂದ, ಕೆ. ಸದಾಶಿವ ಮಾತನಾಡಿದರು. ವಲಯ ಕಾರ್ಯದರ್ಶಿ ಸಿ.ಎಚ್. ಶ್ರೀಧರ ಸ್ವಾಗತಿಸಿ,ವಲಯ ಕೋಶಾಧಿಕಾರಿ ಕೆ. ಅವಿನಾಶ್ ವಂದಿಸಿದರು.

ಶಿರಿಯ, ಬಂಗ್ರಮಂಜೇಶ್ವರ ಕರಾವಳಿ ಯೋಜನೆಗಳ ಉದ್ಘಾಟನೆ ನಾಳೆ

ಮಂಜೇಶ್ವರ: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಮೂಲಕ ನವೀಕರಿಸುವ ಸಂಯೋಜಿತ ಆಧುನಿಕ ಕರಾವಳಿ ಮತ್ಸ್ಯ ಗ್ರಾಮ ಯೋಜನೆ ಅಂಗವಾಗಿ ಶಿರಿಯ, ಬಂಗ್ರಮಂಜೇಶ್ವರಗಳ ವಲಯಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ನಾಳೆ ಸಂಜೆ 3 ಗಂಟೆಗೆ ಮಂಜೇಶ್ವರ ಹಾರ್ಬರ್ ಪರಿಸರದಲ್ಲಿ ನಡೆಯಲಿದೆ. ರಾಜ್ಯ ಸರಕಾರದ ನೂರು ದಿನ ಕ್ರಿಯಾ ಯೋಜನೆಯಲ್ಲಿ ಒಳಪಡಿಸಿ ನಡೆಸುವ ಕಾರ್ಯಕ್ರಮದಲ್ಲಿ ಮೊಬೈಲ್ ಫಿಶ್ ಲೆಂಡಿಂಗ್ ಕಿಯೋಸ್ಕ್‌ಗಳು, ಮೊಬೈಲ್ ಫಿಶ್, ಪ್ರೊಸೆಸಿಂಗ್ ಕಿಯೋಸ್ಕ್‌ಗಳ ವಿತರಣೆ ಹಾಗೂ ಒ.ಬಿ.ಎಂ. ದುರಸ್ತಿ ಕೇಂದ್ರದ ಚಟುವಟಿಕೆ ಉದ್ಘಾಟನೆಯನ್ನು ಹಾರ್ಬರ್ ಇಂಜಿನಿಯರಿಂಗ್, ಸಾಮಾಜಿಕ …

62 ವರ್ಷ ಹಳೆಯದಾದ ಭಜನಾ ಮಂದಿರ ಮೇಲ್ಛಾವಣಿ ನಿರ್ಮಾಣಕ್ಕೆ ತಡೆ: ಬಿಜೆಪಿ ಖಂಡನೆ

ಮಂಗಲ್ಪಾಡಿ: ಪಂಚಾಯತ್ ವ್ಯಾಪ್ತಿಯ ಸುಭಾಶ್ ನಗರದಲ್ಲಿ ಕಳೆದ 62 ವರ್ಷಗಳಿಂದ ಕಾರ್ಯಾಚರಿಸುವ ಭಜನಾ ಮಂದಿರದ ಮೇಲ್ಛಾವಣಿ ನಿರ್ಮಾಣಕ್ಕೆ ತಡೆವೊಡ್ಡುತ್ತಿರುವುದು ಸರಿಯಲ್ಲವೆಂದು ಬಿಜೆಪಿ ತಿಳಿಸಿದ್ದು, ಸ್ಥಳಕ್ಕೆ ಮುಖಂಡರು ಭೇಟಿ ನೀಡಿ ಪದಾಧಿಕಾರಿಗಳಿಗೆ ಬೆಂಬಲ ಘೋಷಿಸಿದ್ದಾರೆ. ಮುಸ್ಲಿಂಲೀಗ್ ಆಡಳಿತದ ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್, ಲೋಕೋಪಯೋಗಿ ಅಸಿಸ್ಟೆಂಟ್ ಇಂಜಿನಿಯರ್ ಶೋಭ ಅವರ ಸೂಚನೆ ಮೇರೆಗೆ ಬಿಜೆಪಿ ಪಂಚಾಯತ್‌ಗೆ ಈ ಬಗ್ಗೆ ಸೂಕ್ತ ಮಾಹಿತಿ ನೀಡಿದೆ. ಅಲ್ಲದೆ ಮಂದಿರ ಪದಾಧಿಕಾರಿಗಳು, ಸ್ಥಳೀಯರು ಸ್ಥಳದಲ್ಲಿ ನಡೆಸುತ್ತಿದ್ದ ಶ್ರಮದಾನದಲ್ಲಿಯೂ ಬಿಜೆಪಿ ಮುಖಂಡರು …

ಸುಭಾಶ್‌ನಗರ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರದ ಮೇಲ್ಛಾವಣಿ ನಿರ್ಮಾಣಕ್ಕೆ ತಡೆ: ಮಂದಿರ ಪದಾಧಿಕಾರಿಗಳಿಂದ ಡಿವೈಎಸ್‌ಪಿಗೆ ಮನವಿ

ಉಪ್ಪಳ: ಬೇಕೂರು ಸುಭಾಶ್ ನಗರದಲ್ಲಿನ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಮಂದಿರದ ಕಟ್ಟಡಕ್ಕೆ ಮೇಲ್ಛಾವಣಿ ನಿರ್ಮಾಣಕ್ಕೆ ತಡೆಯೊಡ್ಡು ತ್ತಿರುವುದಾಗಿ ದೂರಿ ಎಸ್.ಎಂ.ಎಸ್. ಘಟಕ ಡಿವೈಎಸ್‌ಪಿಗೆ ಮಂದಿರದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ. ಹಲವು ವರ್ಷಗಳಿಂದ ಕಾರ್ಯಾಚರಿ ಸುತ್ತಿರುವ ಈ ಮಂದಿರ ಜಿಲ್ಲಾ ರಿಜಿಸ್ಟ್ರರ್ ಕಚೇರಿಯಲ್ಲಿ ನೋಂದಾಯಿಸಿದ್ದು, ಮಂಗಲ್ಪಾಡಿ ಪಂಚಾಯತ್‌ನ ಟ್ಯಾಕ್ಸ್ ಅಸಸ್‌ಮೆಂಟ್ ಲಿಸ್ಟ್‌ನಲ್ಲಿ ಒಳಗೊಂ ಡಿದೆ. ಕುಬಣೂರು ವಿಲ್ಲೇಜ್‌ನ ರಿ ಸರ್ವೇ ನಂಬ್ರ 56/1 ಎ ಎಂಬ ಸ್ಥಳದಲ್ಲಿರುವ ಮಂಗಲ್ಪಾಡಿ ಪಂಚಾಯತ್‌ನ 187/ಎ ಎಂಬ ನಂಬ್ರ ಒಳಗೊಂಡ ಈ …