ಓಡಂಗಲ್ಲು ಸೇತುವೆ ನಿರ್ಮಾಣ ನಾಲ್ಕು ವರ್ಷಗಳಲ್ಲಿ ಸಾಕಾರಗೊಳಿಸಲು ಪ್ರಾಮಾಣಿಕ ಪ್ರಯತ್ನ- ಶಾಸಕ ಕಲ್ಲಟ್ರ ಮಾಹಿನ್
ಬದಿಯಡ್ಕ: ಗ್ರಾಮೀಣ ಪ್ರದೇಶದ ಜನರ ಬಹುಕಾಲದ ಕನಸಾದ ಓಡಂಗಲ್ಲು ಸೇತುವೆ ನಿರ್ಮಾಣಕ್ಕೆ ಮುಂದಿನ ನಾಲ್ಕು ವರ್ಷಗಳಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಭರವಸೆ ನೀಡಿದರು. ಅವರು ಅಜ್ಜಿಮೂಲೆಯ ಜೈ ಗುರುದೇವ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ ೩೬ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಗ್ರಾಮೀಣ ಪ್ರದೇಶದ ಜನತೆಯ ಮತೀಯ ಸಾಮರಸ್ಯ , ಒಗ್ಗಟ್ಟು ಹಾಗೂ ಜನಪರ ಹೋರಾಟ ನಾಡಿನ ಅಭಿವೃದ್ಧಿಗೆ ನಾಂದಿಯಾಗಿದ್ದು ಶ್ರೀಕೃಷ್ಣ ಅಷ್ಟಮಿ ಆಚರಣೆಯ ಮೂಲಕ …