ವ್ಯಕ್ತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ: ವ್ಯಕ್ತಿಯೊಬ್ಬರು ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಂಜತ್ತೂರು ಗೋಳಿಯಡಿ ನಿವಾಸಿ ಬಾಬು ಶೆಟ್ಟಿ (77) ಮೃತಪಟ್ಟ ವ್ಯಕ್ತಿ.  ಮೊನ್ನೆ ರಾತ್ರಿ ಮನೆಯಲ್ಲಿ ಊಟ ಮಾಡಿ ನಿದ್ರಿಸಿದ್ದ ಇವರು ನಿನ್ನೆ ಬೆಳಿಗ್ಗೆ ನಾಪತ್ತೆಯಾಗಿದ್ದರು. ಇದರಿಂದ ಮನೆಯವರು ಹುಡುಕಾಡಿದಾಗ ಮನೆ ಸಮೀಪದ ಕೊಟ್ಟಿಗೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದರು. ಕೂಡಲೇ ಮಂಗಲ್ಪಾಡಿಯ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ಪತ್ನಿ ರತ್ನಾವತಿ, ಮಕ್ಕಳಾದ ದಿನೇಶ, ರಾಜೇಶ, ಅರುಂಧತಿ, ಅಳಿಯ ರಘುರಾಮ, ಸೊಸೆಯಂದಿರಾದ ವಿದ್ಯಾಲತ, ರಮ್ಯ ಹಾಗೂ …

ಫ್ರಿಡ್ಜ್ ಸ್ಫೋಟ: ಒಂದೇ ಕುಟುಂಬದ ನಾಲ್ಕು ಮಂದಿ ಸಾವು 

ಬೆಂಗಳೂರು: ಮನೆಯಲ್ಲಿ ಫ್ರಿಡ್ಜ್ ಸ್ಫೋಟಗೊಂಡು ಸಂಭವಿಸಿದ ದುರಂತದಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ಮೃತಪಟ್ಟ ಘಟನೆ ಬೆಳಗಾವಿಯಲ್ಲಿ ನಡೆದಿದೆ.  ಇಲ್ಲಿನ ಗಜಾನನ ದಾಮೋನೆ (65), ಶಾರದಾ ದಾಮೋನೆ (45), ಭಾರತಿ ದಾಮೋನೆ (50), ರೋಶನ್ ದಾಮೋನೆ (21) ಎಂಬಿವರು ಮೃತಪಟ್ಟ ವ್ಯಕ್ತಿಗಳಾಗಿದ್ದಾರೆ.  ಈ ದುರಂತದಲ್ಲಿ ಗಂಭೀರ ಗಾಯಗೊಂಡ ಪ್ರಿಯಾ ದಾಮೋನೆ (28) ಹಾಗೂ ಗಂಗಾ ದಾಮೋನೆ ಎಂಬಿವರು ಚಿಕಿತ್ಸೆಯಲ್ಲಿದ್ದಾರೆ. ನಿನ್ನೆ ಈ ದುರಂತ ಸಂಭವಿಸಿದೆ. ಫ್ರಿಡ್ಜ್ ಸ್ಫೋಟಗೊಂಡ ತಕ್ಷಣ ಬೆಂಕಿ ಹತ್ತಿಕೊಂಡಿರುವುದೇ ದುರಂತಕ್ಕೆ ಕಾರಣವಾಗಿದೆ.

ನಾಪತ್ತೆಯಾದ ಯುವತಿ, ಮಗಳ ಮಾಹಿತಿ ಅಲಭ್ಯ ತನಿಖೆ ತೀವ್ರ

ಕಾಸರಗೋಡು: ಉದುಮ ಪಡಿಞ್ಞಾರ್‌ನಿಂದ ನಾಪತ್ತೆಯಾದ ಯುವತಿ ಹಾಗೂ ಆರರ ಹರೆಯದ ಪುತ್ರಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ತಚ್ಚರಕುನ್ನು ನಿವಾಸಿಯಾದ ಹಾರಿಸ್ ಎಂಬವರ ಪತ್ನಿ ಫಾತಿಮತ್ ಬುಶ್ರ(28) ಹಾಗೂ  ಆಕೆಯ ಆರು ವರ್ಷದ  ಮಗಳು  ಸೆಪ್ಟಂಬರ್ 8ರಂದು ರಾತ್ರಿಯಿಂದ ನಾಪತ್ತೆಯಾ ಗಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಸಹೋದರಿ ನೀಡಿದ ದೂರಿನಂತೆ ಬೇಕಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಮೊಬೈಲ್ ಫೋನ್ ನಂಬ್ರ ಕೇಂದ್ರೀಕರಿಸಿ ನಡೆಸಿದ ತನಿಖೆಯ  ಆರಂಭದಲ್ಲಿ ಕೆಲವು ಸೂಚನೆಗಳು ಲಭಿಸಿತ್ತು. ಆದರೆ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಯುವತಿ …

ಅನಧಿಕೃತ ಮಣ್ಣು ಸಾಗಾಟ: ಟಿಪ್ಪರ್ ಲಾರಿ, ಜೆಸಿಬಿ ವಶ: ಇಬ್ಬರು ಕಸ್ಟಡಿಗೆ

ಕುಂಬಳೆ: ಹೊಯ್ಗೆಯ ರೀತಿಯಲ್ಲೇ ಅನಧಿಕೃತವಾಗಿ ಮಣ್ಣು ಸಾಗಾಟ ದಂಧೆಯು ವ್ಯಾಪಕಗೊಂಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಕುಂಬಳೆ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಮಣ್ಣು ಸಾಗಿಸುತ್ತಿದ್ದ ಒಂದು ಟಿಪ್ಪರ್ ಲಾರಿ ಹಾಗೂ  ಮಣ್ಣು ತೆಗೆಯಲು ಬಳಸಿದ  ಜೆಸಿಬಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.  ಬಂದ್ಯೋಡು ಮೀಪ್ರಿಯಿಂದ ಅನಧಿಕೃತವಾಗಿ ಮಣ್ಣು ಸಾಗಾಟ ನಡೆಯುತ್ತಿದೆಯೆಂಬ ಬಗ್ಗೆ ನಿನ್ನೆ ಕುಂಬಳೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಐ ಅನೂಪ್ ಸ್ಟೀಫನ್, ಎಎಸ್‌ಐ ಅತುಲ್‌ರಾಂ ಎಂಬಿವರ ನೇತೃತ್ವದಲ್ಲಿ ಪೊಲೀಸರು ಅಲ್ಲಿಗೆ ದಾಳಿ ನಡೆಸಿದಾಗ …

ಅಘೋಷಿತ ವಿದ್ಯುತ್ ಕಡಿತ ಪ್ರತಿಭಟಿಸಿ ಬಿಜೆಪಿಯಿಂದ ಕುಂಬಳೆ ಕೆಎಸ್‌ಇಬಿ ಕಚೇರಿಗೆ ಪಂಜಿನ ಮೆರವಣಿಗೆ

ಕುಂಬಳೆ: ರಾಜ್ಯದಲ್ಲಿ ಇದೀಗ ತೀವ್ರಗೊಂಡ ಅಘೋಷಿತ ವಿದ್ಯುತ್ ಕಡಿತವನ್ನು ಪ್ರತಿಭಟಿಸಿ ಬಿಜೆಪಿ ಕುಂಳೆ ಮಂಡಲ ಸಮಿತಿ ನೇತೃತ್ವದಲ್ಲಿ  ಕುಂಬಳೆ ಕೆಎಸ್‌ಇಬಿ ಕಚೇರಿಗೆ ಪಂಜಿನ ಮೆರವಣಿಗೆ ನಡೆಸಲಾಯಿತು. ಕುಂಬಳೆ ಪೇಟೆಯಲ್ಲಿರುವ  ಬಿಜೆಪಿ ಪಂಚಾಯತ್ ಸಮಿತಿ ಕಚೇರಿಯಿಂದ  ಆರಂಭಗೊಂಡ ಮೆರವಣಿಗೆ ಪೇಟೆ ಸುತ್ತಿ ಕೆಎಸ್‌ಇಬಿ ಕಚೇರಿಗೆ ತಲುಪಿದೆ. ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್ ಮೇಣದ ಬತ್ತಿ ಉರಿಸಿ  ಪ್ರತಿಭಟನೆಯನ್ನು ಉದ್ಘಾಟಿ ಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್, ಮಂಡಲ ಅಧ್ಯಕ್ಷ ಬಿ. ವಿಕ್ರಂ ಪೈ,  ಉಪಾಧ್ಯಕ್ಷ ಸುಧಾಕರ …

ಯೋಧನಾದ ಪುತ್ರ ಕೆಲಸದ ಸ್ಥಳದಲ್ಲಿ ಮೃತಪಟ್ಟ ಬಗ್ಗೆ ಮಾಹಿತಿ ಲಭಿಸಿದ ಬೆನ್ನಲ್ಲೇ ತಂದೆ ನೇಣು ಬಿಗಿದು ಆತ್ಮಹತ್ಯೆ

ತಿರುವನಂತಪುರ: ಯೋಧನಾದ ಪುತ್ರ ಕೆಲಸದ ಸ್ಥಳದಲ್ಲಿ ಮೃತಪಟ್ಟ ಬಗ್ಗೆ ಮಾಹಿತಿ ತಿಳಿದ ಬೆನ್ನಲ್ಲೇ ತಂದೆ ಆತ್ಮಹತ್ಯೆಗೈದ ಘಟನೆ ನಡೆದಿದೆ. ಮರನಲ್ಲೂರ್ ಚೀನಿವಿಳ ಚೆಮ್ಮೋಡ್ ನಿವಾಸಿ ಋಷಿಕೇಶನ್ ನಾಯರ್ (69) ನೇಣು ಬಿಗಿದು ಮೃತಪಟ್ಟವರು. ದೆಹಲಿಯಲ್ಲಿ ಸೈನಿಕನಾಗಿರುವ ಪುತ್ರ ವಿಶಾಖ್ (38) ಕೆಲಸದ ಸ್ಥಳದಲ್ಲಿ ಮೃತಪಟ್ಟ ಬಗ್ಗೆ ನಿನ್ನೆ ಬೆಳಿಗ್ಗೆ 7.30ರ ವೇಳೆ ಮನೆಗೆ ಮಾಹಿತಿ ಲಭಿಸಿತ್ತು. ಇದರ ಬೆನ್ನಲ್ಲೇ ತಂದೆ ನಾಪತ್ತೆಯಾಗಿದ್ದರು. ಬಳಿಕ ನಡೆಸಿದ ಹುಡುಕಾಟದಿಂದ ಮನೆ ಸಮೀಪದ ರಬ್ಬರ್ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. …

ನರ್ಸಿಂಗ್ ಶಿಕ್ಷಣಕ್ಕೆಂದು ಬೆಂಗಳೂರಿಗೆ ಹೋದ ಯುವತಿ ವಾಸಿಸುತ್ತಿದ್ದುದು ಸ್ನೇಹಿತನ ಜೊತೆ ದೆಹಲಿಯಲ್ಲಿ: ಮಾದಕವಸ್ತು ಪ್ರಕರಣದಲ್ಲಿ ಬಂಧನ

ಕಲ್ಲಿಕೋಟೆ: ನರ್ಸಿಂಗ್ ಶಿಕ್ಷಣಕ್ಕೆಂದು ತಿಳಿಸಿ ಬೆಂಗಳೂರಿಗೆ ಹೋದ ಯುವತಿ ಸ್ನೇಹಿತನೊಂದಿಗೆ ದೆಹಲಿಯಲ್ಲಿ ವಾಸಿಸಿ ಮಾದಕ ವಸ್ತು ಮಾರಾಟ ದಂಧೆ ನಡೆಸುತ್ತಿರುವುದನ್ನು ಪೊಲೀಸರು ನಡೆಸಿದ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ. ತಿರುವನಂತಪುರ ಮಲಯನ್ ಕೀಳ್ ಪೊಟ್ಟಯಿಲ್ ಏಳಕ್ಕೋಡ್ ಎಂಬಲ್ಲಿನ ಸೂರ್ಯ (23) ಹಾಗೂ ನಿಲಂಬೂರ್ ಚಪ್ಪಾತ್ ಚೊಕ್ಕಾಡ್‌ನ ಅಜ್ಮಲ್ (32) ಎಂಬಿವರನ್ನು ಮಾದಕವಸ್ತು  ಸಹಿತ ಸೆರೆಹಿಡಿಯಲಾಗಿದೆ. ಸೂರ್ಯ ನರ್ಸಿಂಗ್ ಶಿಕ್ಷಣಕ್ಕೆಂದು ತಿಳಿಸಿ ಬೆಂಗಳೂರಿಗೆ ತೆರಳಿದ್ದಳೆನ್ನಲಾಗಿದೆ. ಆದರೆ ಈಕೆ ಮಾದಕವಸ್ತು ಮಾಫಿಯಾಗಳ ಹಿಡಿತಕ್ಕೆ ಸಿಲುಕಿರುವುದು ಹೇಗೆ ಎಂಬುದು ಸ್ಪಷ್ಟಗೊಂಡಿಲ್ಲ. ಮೂರು ತಿಂಗಳ ಹಿಂದೆ …

ಎದೆನೋವು ಚಿಕಿತ್ಸೆಗಾಗಿ ಆಸ್ಪತ್ರೆಗೆ  ತೆರಳಿದ ಅಕ್ಕಸಾಲಿಗ ಕುಸಿದುಬಿದ್ದು ಮೃತ್ಯು

ಉಪ್ಪಳ: ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದ  ವ್ಯಕ್ತಿ ಅಲ್ಲಿ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬಂದ್ಯೋಡು ಮಳ್ಳಂಗೈ ನಿವಾಸಿಯೂ ಕುಂಬಳೆಯಲ್ಲಿ ಅಕ್ಕಸಾಲಿಗನಾಗಿದ್ದ ಪುಂಡರೀಕ ಆಚಾರ್ಯ ವೈ.ಎನ್ (56) ಮೃತಪಟ್ಟ ವ್ಯಕ್ತಿ. ನಿನ್ನೆ ಬೆಳಿಗ್ಗೆ ಮನೆಯಲ್ಲಿದ್ದ ಇವರಿಗೆ ಎದೆನೋವು ಕಾಣಿಸಿಕೊಂಡಿತ್ತೆನ್ನಲಾಗಿದೆ. ಇದರಿಂದ ಚಿಕಿತ್ಸೆಗಾಗಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಟೋಕನ್ ತೆಗೆದು ಕುಳಿತಿದ್ದಾಗ ಕುಸಿದುಬಿದ್ದಿದ್ದಾರೆ.  ಕೂಡಲೇ ವೈದ್ಯರು ತಪಾಸಣೆ ನಡೆಸಿದಾಗ ಮೃತಪಟ್ಟಿರುವು ದಾಗಿ ತಿಳಿದುಬಂದಿದೆ. ಇದೇ ವೇಳೆ ಆಸ್ಪತ್ರೆಗೆ ತೆರಳಿದ ಪುಂಡರೀಕ ಆಚಾರ್ಯರಿಗೆ ಮನೆಯವರು …

ರಸ್ತೆಯಲ್ಲಿ  ಬಿದ್ದಿದ್ದ ಸರ್ವೀಸ್ ವಯರ್  ಕುತ್ತಿಗೆಗೆ ಸಿಲುಕಿ ಬೈಕ್ ಸವಾರರಿಗೆ ಗಂಭೀರ ಗಾಯ

ಕಾಸರಗೋಡು:  ರಸ್ತೆಯಲ್ಲಿ ಕಡಿದು ಬಿದ್ದಿದ ವಿದ್ಯುತ್  ಸರ್ವೀಸ್ ವಯರ್ ಕುತ್ತಿಗೆಗೆ ಸಿಲುಕಿದ ಪರಿಣಾಮ ನಿಯಂತ್ರಣ ತಪ್ಪಿದ ಬೈಕ್   ಚರಂಡಿಗೆ ಬಿದ್ದು ಬೈಕ್‌ವಲ್ಲಿದ್ದ ಇಬ್ಬರು ಯುವಕರು ಗಂಭೀರ ಗಾಯಗೊಂಡ ಘಟನೆ   ಸೂರ್ಲಿನಲ್ಲಿ ನಿನ್ನೆ ನಡೆದಿದೆ.  ಪರವನಡ್ಕ ತಲಕ್ಲಾಯಿ  ನಿವಾಸಿ ವಿನಯಪ್ರಸಾದ್ (22) ಮತ್ತು ಕೈಂದಾರಿನ ಮಿಥುನ್ (23) ಎಂಬವರು ಗಾಯಗೊಂಡ ಯುವಕರಾಗಿದ್ದಾರೆ.  ಮಧೂರು ರಸ್ತೆಯ ಸೂರ್ಲುನಲ್ಲಿ  ರಸ್ತೆಗೆ ಅಡ್ಡವಾಗಿ ಜೋತು ಬಿದ್ದಿದ್ದ ವಿದ್ಯುತ್  ಕಂಬದ ಸರ್ವೀಸ್ ತಂತಿ  ಲಾರಿಯೊಂದಕ್ಕೆ  ಸಿಲುಕಿ  ತುಂಡಾಗಿ ಬಿದ್ದಿತ್ತು. ಅನಂತರ ವಿನಯಪ್ರಸಾದ್ ಮತ್ತು ಮಿಥುನ್ …

ಕೆಎಸ್‌ಆರ್‌ಟಿಸಿ ಬಸ್‌ನ ಚಕ್ರ ಸ್ಫೋಟ: ಪ್ಲಾಟ್‌ಫಾಂ ಸೀಟಿನಡಿ ಕಾಲು ಸಿಲುಕಿ ಪ್ರಯಾಣಿಕೆ ಜಖಂ

ಕಾಸರಗೋಡು: ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ  ಬಸ್‌ನ ಚಕ್ರ ಸಿಡಿದು ಪ್ಲಾಟ್‌ಫಾಂಗೆ ಹಾನಿ ಉಂಟಾಗಿದ್ದು, ಇದರಿಂದ ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕೆಯ ಕಾಲು ಸೀಟಿನ ಅಡಿಭಾಗದಲ್ಲಿ ಸಿಲುಕಿ ಮುರಿತಕ್ಕೊ ಳಗಾದ ಘಟನೆ ನಡೆದಿದೆ. ನೀಲೇಶ್ವರ ಅಳಿತ್ತಲ ನಿವಾಸಿ ಎಂ.ಕೆ. ಕುಂಞಾ ಯಿಷ (39) ಗಾಯಗೊಂಡ ಪ್ರಯಾಣಿಕೆ. ಪಯ್ಯನ್ನೂರಿನಿಂದ ಹೊಸದುರ್ಗಕ್ಕೆ ಬರಲೆಂದು ಇವರು ನೀಲೇಶ್ವರದಿಂದ ಬಸ್ಸೇರಿದ್ದರು. ಬಸ್ ಹೊಸದುರ್ಗ ಸೌತ್‌ಗೆ ತಲುಪಿದಾಗ ಭಾರೀ ಶಬ್ದದೊಂದಿಗೆ ಅದರ ಚಕ್ರ ಸಿಡಿದಿದೆ. ಅದರ ರಭಸಕ್ಕೆ ಬಸ್‌ನ ಅಡಿ ಭಾಗದ ಪ್ಲಾಟ್ ಫಾಂಗೂ ಹಾನಿ ಉಂಟಾದಾಗ …