ಕಾಸರಗೋಡು ಸ್ಪೋಟ್ಸ್ ಕೌನ್ಸಿಲ್ ಕಚೇರಿಗೆ ವಿಜಿಲೆನ್ಸ್ ದಾಳಿ: ಗಂಭೀರ ವಂಚನೆಗಳು ಪತ್ತೆ

ಕಾಸರಗೋಡು: ಜಿಲ್ಲಾ ಸ್ಪೋಟ್ಸ್ ಕೌನ್ಸಿಲ್ ಕಚೇರಿಗೆ ವಿಜಿಲೆನ್ಸ್ ತಂಡ ನಿನ್ನೆ ನಡೆಸಿದ ದಾಳಿಯಲ್ಲಿ ಭಾರೀ ವಂಚನೆ ಪತ್ತೆಹಚ್ಚಲಾಗಿದೆ. ಈ ಬಗ್ಗೆ ಸಮಗ್ರ ವರದಿ ತಯಾರಿಸಿ  ಶೀಘ್ರ ವಿಜಿಲೆನ್ಸ್ ಡೈರೆಕ್ಟರ್‌ಗೆ ಕಳುಹಿಸಲಾಗುವುದು. ಅನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾ ಗುವುದೆಂದು  ಅಧಿಕಾರಿಗಳು ತಿಳಿಸಿದ್ದಾರೆ.  2025 ಸೆಪ್ಟಂಬರ್ 29ರಂದು ಚೆರ್ವತ್ತೂರಿನಲ್ಲಿ ನಡೆದ ಜಿಲ್ಲಾ ಕಂದಾಯ  ಬಿಲ್ಲುಗಾರಿಕೆ  ಚಾಂಪ್ಯನ್ ಶಿಪ್‌ನಲ್ಲಿ ಅರ್ಹತಾಪಟ್ಟಿಯಲ್ಲಿ ಒಳಗೊಳ್ಳದ ಇಬ್ಬರನ್ನು ರಾಜ್ಯ ಚಾಂಪಿಯನ್‌ಶಿಪ್‌ಗೆ  ಸೇರಿಸಿಕೊಂಡಿರು ವುವುದು ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ. ಇದರ ಹಿಂದೆ ಕಾರ್ಯಾಚರಿಸಿದವರು ಹಾಗೂ ಅರ್ಹತೆಯಿಲ್ಲದೆ ರಾಜ್ಯ ಚಾಂಪ್ಯನ್‌ಶಿಪ್‌ನಲ್ಲಿ …

ಬೈಕ್‌ನಲ್ಲಿ ತಲುಪಿ ಮಹಿಳೆಯ ಮಾಲೆ ಕಸಿದ ಪ್ರಕರಣ: ಇನ್ನೋರ್ವ ಆರೋಪಿ ಸೆರೆ

ಉಪ್ಪಳ: ಬೈಕ್‌ನಲ್ಲಿ ತಲುಪಿ ಪಾದಚಾರಿ ಮಹಿಳೆಯ ಕುತ್ತಿಗೆಯಿಂದ  ಚಿನ್ನದ ಸರ ಎಗರಿಸಿದ ಪ್ರಕರಣದಲ್ಲಿ ಇನ್ನೋರ್ವ ಸೆರೆಗೀಡಾಗಿದ್ದಾನೆ. ಕುಂಬಳೆ ಬಂಬ್ರಾಣದ ಈಂದುಗುರಿ ನಿವಾಸಿ ಸುಧೀಶ್ (27) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಒಂದನೇ ಆರೋಪಿಯಾದ ಬಂಬ್ರಾ ಣದ ಸಂದೀಪ್ ಎಂಬಾತನನ್ನು ಈ ಮೊದಲು ಬಂಧಿಸಲಾಗಿತ್ತು. ೨೦೨೬ ಜೂನ್ ೨೨ರಂದು ಸಂಜೆ  ಹೊಸಂಗಡಿ ಸರ್ವೀಸ್ ರಸ್ತೆಯಲ್ಲಿ ಮಹಿಳೆ ನಡೆದುಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ತಲುಪಿದ ತಂಡ ಸರ ಎಗರಿಸಿ ಪರಾರಿಯಾಗಿತ್ತು.  ಈ ಪ್ರಕರಣದಲ್ಲಿ ಸೆರೆಗೀಡಾಗದೆ ತಪ್ಪಿಸಿಕೊಂಡಿದ್ದ ಸುಧೀಶ್‌ನನ್ನು ಮಂಜೇಶ್ವರ …

ಮೂತ್ರಪಿಂಡ ಸಮಸ್ಯೆ ಯುವತಿ ಮೃತ್ಯು

ಬೆಳ್ಳೂರು: ಕಳೆದ ಕೆಲವು ವರ್ಷಗಳಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿ ಮೃತಪಟ್ಟರು. ಬೆಳ್ಳೂರು ಪಂಚಾಯತ್‌ನ ಕರ್ಕಟಗೋಳಿ  ಕುಂಞಣ್ಣ ಭಂಡಾರಿ (ಬೆಳ್ಳೂರಲ್ಲಿ ಈ ಹಿಂದೆ ಹೋಟೆಲ್ ವ್ಯಾಪಾರಿಯಾಗಿದ್ದರು)ಯವರ ಪುತ್ರಿ ಅಶ್ವಿನಿ ಕೆ. (33)ಮೃತಪಟ್ಟ ಯುವತಿ. ಮೂತ್ರಪಿಂಡ ಸಮಸ್ಯೆ ಹಿನ್ನೆಲೆಯಲ್ಲಿ ಡಯಾಲಿಸಿಸ್ ನಡೆಸಲಾಗುತ್ತಿತ್ತು. ಕಳೆದ ಮೂರು ದಿನದ ಹಿಂದೆ ಅಸೌಖ್ಯ ಉಲ್ಬಣಗೊಂಡು ನಿಧನ ಸಂಭವಿಸಿದೆ. ಮೃತರು ತಂದೆ, ತಾಯಿ ಜಯಂತಿ, ಪತಿ ಗೋಪಾಲ ಭಂಡಾರಿ, ಸಹೋದರ ರಂಜಿತ್ ಭಂಡಾರಿ, ಸಹೋದರಿ ಅಕ್ಷತ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ರೈಲು ನಿಲ್ದಾಣ ಪರಿಸರದಿಂದ ಬೈಕ್ ಕಳವು: ಮೂವರು ಯುವಕರ ಸೆರೆ

ಕಾಸರಗೋಡು: ರೈಲು ನಿಲ್ದಾಣ ಪರಿಸರದಲ್ಲಿ ನಿಲ್ಲಿಸಿದ್ದ ಬೈಕನ್ನು ಕದ್ದು ಗುಜರಿ ಅಂಗಡಿಗೆ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ. ತೃಕರಿಪುರ ತಟ್ಟಾಚ್ಚೇರಿಯ ಶರ್ಬಾಸ್ ಸುಬೈರ್ (22), ಪಯ್ಯನ್ನೂರು ಪೂಂಜಕ್ಕಾಡ್ ನಿವಾಸಿಗಳಾದ ಮುಹಮ್ಮದ್ ಸಾಬೀತ್ ಪಿ.ವಿ (21) ಮತ್ತು ಮುಹಮ್ಮದ್ ಫವಾಸ್ (21) ಬಂಧಿತ ಆರೋಪಿಗಳು. ಕಳೆದ ಸೋಮವಾರ ಬೆಳಿಗ್ಗೆ ತೃಕರಿಪುರ ವಳಂಬಚ್ಚಿ ನಿವಾಸಿ ಹಾಗೂ ಅಧ್ಯಾಪಕರಾಗಿರುವ ಪಿ.ವಿ. ಪ್ರಶೋಬ್ ಬೈಕನ್ನು ತೃಕರಿಪುರ ರೈಲು ನಿಲ್ದಾಣದ ಪರಿಸರದಲ್ಲಿ ಪಾರ್ಕ್ ಮಾಡಿದ್ದರು. ಅವರು ರಾತ್ರಿ ಹಿಂತಿರುಗಿದಾಗ …

ಶಬರಿಮಲೆ ದೇಗುಲದಿಂದ ಚಿನ್ನದ ಕಿರೀಟ ನಾಪತ್ತೆ : ಬದಲಾಗಿ ಇರಿಸಿದ್ದು ಚಿನ್ನಲೇಪಿತ ಕಿರೀಟ

ಪತ್ತನಂತಿಟ್ಟ: ಶಬರಿಮಲೆ ದೇಗುಲದ ಗರ್ಭಗುಡಿಯ ಬಾಗಿಲುಗಳ ಚಿನ್ನ ಲೇಪಿತ ಕವಚಗಳು ಸೇರಿದಂತೆ ಹಲವು ಅಮೂಲ್ಯ ಸೊತ್ತುಗಳನ್ನು ಕಳವುಗೈದ ಸಂಬಂಧ  ಹೈಕೋರ್ಟ್‌ನ ಮೇಲ್ನೋಟದಲ್ಲಿ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿರುವಂತೆಯೇ  ಶಬರಿಮಲೆ ಕ್ಷೇತ್ರದಿಂದ 55.72 ಪವನ್‌ನ ಚಿನ್ನದ ಕಿರೀಟವೂ ನಾಪತ್ತೆಯಾದ ಕಳವಳಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಕ್ಷೇತ್ರದ ಭದ್ರತಾ ಕೊಠಡಿಯೊಳಗಿರಿಸಲಾಗಿರುವ  ಚಿನ್ನ ಸಹಿತ ಇತರ ಅಮೂಲ್ಯ ವಸ್ತುಗಳ ಲೆಕ್ಕಾಚಾರ ನಡೆಸುತ್ತಿದ್ದ ವೇಳೆ ಅಲ್ಲಿದ್ದ ಚಿನ್ನದ ಕಿರೀಟ ನಾಪತ್ತೆಯಾಗಿ ರುವುದನ್ನು  ಖಚಿತಪಡಿಸಲಾಗಿದೆ. ತಮಿಳುನಾಡಿನ ಭಕ್ತರೊಬ್ಬರು 2012 ಅಗೋಸ್ತ್ ತಿಂಗಳಲ್ಲಿ ಈ …

ಅಸೌಖ್ಯ: ಬಡಗಿ ನಿಧನ

ಮಂಜೇಶ್ವರ: ಕಡಂಬಾರು ಚೆಂಬಪದವು ನಿವಾಸಿ ಹಿರಿಯ ಬಡಗಿ ಕನಿಲ ಜಯಂತ ಆಚಾರ್ಯ (75) ನಿಧನ ಹೊಂದಿದರು. ಅಸೌಖ್ಯ ತಗಲಿದ್ದ ಇವರು ನಿನ್ನೆ ಬೆಳಿಗ್ಗೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಬಂಗ್ರಮAಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ಕ್ಷೇತ್ರದ ಮಾಜಿ ಮೊಕ್ತೇಸರರಾಗಿದ್ದರು. ಮೃತರು ಪತ್ನಿ ಅನಸೂಯ, ಸಹೋದರ ಹರಿಶ್ಚಂದ್ರ ಆಚಾರ್ಯ, ಸಹೋದರಿ ರಾಜೀವಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಾಲ್ಕು ಸಹೋದರರು ಈ ಹಿಂದೆ ನಿಧನ ಹೊಂದಿದ್ದಾರೆ. ಅಂತ್ಯಸAಸ್ಕಾರ ನಿನ್ನೆ ಮಧ್ಯಾಹ್ನ ರಾಮತ್ತಮಜಲು ರುದ್ರಭೂಮಿಯಲ್ಲಿ ನಡೆಯಿತು.

ಆಹಾರದ ಗುಣಮಟ್ಟ ಪ್ರಶ್ನಿಸಿದ ಯುವಕರ ಮೇಲೆ ಹಲ್ಲೆ : ಹೋಟೆಲ್ ನಡೆಸುವ ವ್ಯಕ್ತಿ ಸೇರಿ ಐವರ ವಿರುದ್ಧ ಕೇಸು

ಕಾಸರಗೋಡು: ಹೋಟೆಲ್‌ನಲ್ಲಿ ಆಹಾರ ಸೇವಿಸಲು ಬಂದ ಯುವಕರು ಆಹಾರದ ಗುಣಮಟ್ಟದ ಬಗ್ಗೆ ಪ್ರಶ್ನಿಸಿದಾಗ ಹೋಟೆಲ್ ನಡೆಸುತ್ತಿರುವ ವ್ಯಕ್ತಿ ಸಹಿತ ಐವರು ಸೇರಿ ಆ ಯುವಕರಿಗೆ ಹಲ್ಲೆ ನಡೆಸಿದ ಬಗ್ಗೆ ನೀಡಲಾದ ದೂರಿನಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಡನೀರು ಕಳರಿ ಹೌಸ್‌ನ ಅಜಿತ್ ಕೆ (23)  ಈ ಬಗ್ಗೆ ದೂರು ನೀಡಿದ್ದು ಅದರಂತೆ ಪೊಲೀಸರು  ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚೆಂಗಳ ಸಿಟಿಜನ್‌ನಗರದ ಹೋಟೆಲೊಂದಕ್ಕೆ ನಾನು ಮತ್ತು  ಸ್ನೇಹಿತರಾದ ಅಭಿಲಾಷ್ (22), ಸುಮೋದ್ (23), ಹರಿಪ್ರಸಾದ್ (20) ಮತ್ತು ಕೆ. …

ಕೆಲಸಕ್ಕೆಂದು ತಿಳಿಸಿ ಹೋದ ಯುವಕ ನಾಪತ್ತೆ-ದೂರು

ಕುಂಬಳೆ: ಕೆಲಕ್ಕೆಂದು ತಿಳಿಸಿ ಮನೆಯಿಂದ ಹೋದ ಯುವಕ ನಾಪತ್ತೆಯಾಗಿರುವುದಾಗಿ ದೂರಲಾಗಿದೆ.  ಎಡನಾಡು ಸಹಕಾರಿ ಬ್ಯಾಂಕ್ ಸಮೀಪದ ನಿವಾಸಿ  ಕೆಂಬಯ್ಯ ಎಂಬವರ ಪುತ್ರ ಸಂತೋಷ್ ಎ.ಕೆ (38) ನಾಪತ್ತೆಯಾದ ಯುವಕ.  ಈ ಬಗ್ಗೆ ಇವರ ಸಹೋದರಿ ನಂಜಮ್ಮ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.  ಕಳೆದ ಜೂನ್ 13ರಂದು ಬೆಳಿಗ್ಗೆ 7 ಗಂಟೆಗೆ ಮಂಗಳೂರು ತೊಕ್ಕೋಟ್‌ನಲ್ಲಿ ಕೆಲಸಕ್ಕೆಂದು ತಿಳಿಸಿ  ಸಂತೋಷ್ ತೆರಳಿದ್ದರು. ಆದರೆ ಅವರು ಇದು ವರೆಗೆ ಮರಳಿ  ಬಂದಿಲ್ಲವೆಂದೂ ಅಲ್ಲದೆ ಅವರ ಬಗ್ಗೆ …

ಇಂಟರ್‌ಲಾಕ್ ಬ್ರಿಕ್ಸ್ ಸಂಸ್ಥೆಯಿಂದ 4.30 ಲಕ್ಷ ರೂ. ಮೌಲ್ಯದ ಸೊತ್ತು ಕಳವು: ತನಿಖೆ ಆರಂಭ

ಮಂಜೇಶ್ವರ: ಇಂಟರ್‌ಲಾಕ್ ಬ್ರಿಕ್ಸ್ ನಿರ್ಮಿಸುವ ಸಂಸ್ಥೆಗೆ ಕಳ್ಳರು ನುಗ್ಗಿ ಭಾರೀ ಪ್ರಮಾಣದ ಸಾಮಗ್ರಿಗಳನ್ನು ಕಳವು ನಡೆಸಿದ್ದಾರೆ. ಬಡಾಜೆ ಪಾಪಿಲ ದಲ್ಲಿ ಕಾರ್ಯವೆಸಗುತ್ತಿರುವ  ಕನ್‌ಸ್ಟ್ರಕ್ಷನ್ ಮೆಟೀರಿಯಲ್ ಪಾಪಿಲ ಇಂಟರ್ ಲಾಕಿಂಗ್ ಕಾಂಕ್ರೀಟ್ ಬ್ರಿಕ್ಸ್ ಎಂಬ ಹೆಸರಿನ ಸಂಸ್ಥೆಯಿಂದ ಕಳವು ನಡೆದಿದೆ. ಸೆಪ್ಟಂಬರ್ 11ರಿಂದ 22ರ  ಮಧ್ಯೆ ಕಳ್ಳರು ಸಂಸ್ಥೆಗೆ ನುಗ್ಗಿ ಇಂಟರ್ ಲಾಕ್ ಬ್ರಿಕ್ಸ್ ತಯಾರಿ ಯಂತ್ರದ ಎರಡು ೫ ಎಚ್‌ಪಿ ಮೋಟಾರ್‌ಗಳು, ಎರಡು ಅಚ್ಚುಗಳು,  ಸೀಲಿಂಗ್ ಫ್ಯಾನ್, ಗ್ಯಾಸ್ ಸಿಲಿಂಡರ್ ಹಾಗೂ ಇಲೆಕ್ಟ್ರಿ ಕಲ್ ವಯರ್‌ಗಳನ್ನು  ನಾಶಗೊಳಿಸಿ …

ಮನೆಯಲ್ಲಿ 1.7 ಕಿಲೋ ಗಾಂಜಾ ಪತ್ತೆ: ಮಹಿಳೆ ಸೆರೆ

ಕಾಸರಗೋಡು: ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆ ಯಲ್ಲಿ ಮನೆಯಲ್ಲಿ ಬಚ್ಚಿಟ್ಟಿದ್ದ 1.718 ಕಿಲೋ ಗ್ರಾಂ ಗಾಂಜಾ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂ ಧಿಸಿ ಪಾಣತ್ತೂರು ಪುತ್ತೂರಡ್ಕದ ಪಿ.ಸಿ. ಮೀನಾಕ್ಷಿ (47) ಎಂಬಾಕೆಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಕಾಸರಗೋಡು ಎಕ್ಸೈಸ್ ಇಂಟೆಲಿಜೆನ್ಸ್ ಆಂಡ್ ಇನ್‌ವೆಸ್ಟಿಗೇಷನ್ ಬ್ಯೂರೋಗೆ ಲಭಿಸಿದ ಗುಪ್ತ ಮಾಹಿತಿಯಂತೆ ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟೀ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಇನ್ಸ್‌ಪೆಕ್ಟರ್ ವಿಷ್ಣು ಪ್ರಕಾಶ್‌ರ ನೇತೃತ್ವದ ಅಬಕಾರಿ ತಂಡ ಮೊನ್ನೆ ರಾತ್ರಿ ಪಾಣತ್ತೂರು ಪುತ್ತೂರಡ್ಕದಲ್ಲಿ ದಾಳಿ ಮತ್ತು ತಪಾಸಣೆ …