ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ವತಿಯಿಂದ ಸಾಹಿತ್ಯ ರಸಪ್ರಶ್ನೆ ಸ್ಪರ್ಧೆ

ಉಪ್ಪಳ : ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮಂಜೇಶ್ವರ ಉಪಜಿಲ್ಲಾ ಸಮ್ಮೇಳನ ಹಾಗೂ ನಾಡಹಬ್ಬದ ಅಂಗವಾಗಿ ಕನ್ನಡ ಸಾಹಿತ್ಯ ರಸಪ್ರಶ್ನೆಯನ್ನು ಮುಳಿಂಜ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. ಕನ್ನಡ ಅಧ್ಯಾಪಕ ಸಂಘದ ಕೇಂದ್ರ ಸಮಿತಿಯ ನಿಕಟಪೂರ್ವ ಉಪಾಧ್ಯಕ್ಷ ಸತ್ಯನಾರಾಯಣ ಭಟ್ ದೈಗೋಳಿ ಉದ್ಘಾಟಿಸಿ ಮಾತನಾಡಿ, ‘ಮಕ್ಕಳಲ್ಲಿ ಸಾಹಿತ್ಯಾಭಿರುಚಿಯನ್ನು ಮೂಡಿಸಲು ಸಾಹಿತ್ಯ ರಸಪ್ರಶ್ನೆ ಕಾರ್ಯಕ್ರಮಗಳು ಪೂರಕವಾಗುತ್ತದೆ. ಇದರಿಂದಾಗಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹಿರಿಯ ಸಾಹಿತಿಗಳು ನೀಡಿದ ಕೊಡುಗೆಗಳು, ಕನ್ನಡ ಸಂಸ್ಕೃತಿಯನ್ನು ಮತ್ತೊಮ್ಮೆ ಮೆಲುಕು ಹಾಕಿದಂತಾಗುತ್ತದೆ’ ಎಂದು ತಿಳಿಸಿದರು. ಉಪಜಿಲ್ಲಾ …

ಅ. 15ರಂದು ವ್ಯಾಪಾರಿಗಳಿಂದ ಲೋಕಭವನ್ ಮಾರ್ಚ್: 13ರಂದು ಸಂಜೆ ದೊಂದಿ ಮೆರವಣಿಗೆ

ಕಾಸರಗೋಡು: ಯುಪಿಐ ವ್ಯವಹಾರಗಳ ಮೇಲೆ ಹೇರಿದ ಎಂಡಿಆರ್ ಶುಲ್ಕ ಹಿಂತೆಗೆಯಬೇಕೆಂದು ಒತ್ತಾಯಿಸಿ ಅ. 15ರಂದ ಬೆಳಿಗ್ಗೆ 1೦ಕ್ಕೆ ತಿರುವನಂತಪುರ ಲೋಕ ಭವನಕ್ಕೆ ನಡೆಯಲಿರುವ ಮಾರ್ಚ್ ಯಶಸ್ವಿಗೊಳಿಸಬೇಕೆಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಜಿಲ್ಲಾಧ್ಯಕ್ಷ ಕೆ. ಅಹಮ್ಮದ್  ಶರೀಫ್ ವಿನಂತಿಸಿದ್ದಾರೆ. ಅಂದು ಎಲ್ಲಾ ವ್ಯಾಪಾರಿಗಳೂ ಯುಪಿಐ ವ್ಯವಹಾರಗಳನ್ನು ಬಹಿಷ್ಕರಿಸಬೇಕೆಂದೂ ಅವರು ಕರೆ ನೀಡಿದರು. ಕೆವಿವಿಇಎಸ್ ಜಿಲ್ಲಾ ಕಾರ್ಯಕಾರಿ ಸಭೆಯಲ್ಲಿ ಅಧ್ಯ ಕ್ಷತೆ ವಹಿಸಿ ಅವರು ಮಾತನಾಡಿದರು. ಲೋಕಭವನ್ ಮಾರ್ಚ್‌ನಲ್ಲಿ ಜಿಲ್ಲೆಯಿಂದ  ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಿಗಳು ಭಾಗಹಿಸಬೇಕೆಂದೂ ಅವರು …

ರಕ್ತವಾಂತಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಿಹಾರದ ಯುವಕ ಸಾವು

 ಕಾಸರಗೋಡು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ  ಯುವಕ ರಕ್ತವಾಂತಿಯಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಬಿಹಾರದ ನೌಸಾ ನಿವಾಸಿ ಮುಹಮ್ಮದ್ ಎಂಬವರ ಪುತ್ರ ಮುಹಮ್ಮದ್ ಶಹನ್‌ಬಾಚ್ (18) ಸಾವನ್ನಪ್ಪಿದ ಯುವಕ. ಈತ ನಿನ್ನೆ ತನ್ನ ಸ್ನೇಹಿತರ ಜೊತೆ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಂಗಳೂರಿನಿಂದ ತೃಶೂರಿಗೆ ಪ್ರಯಾಣಿಸುತ್ತಿದ್ದನು. ದಾರಿ ಮಧ್ಯೆ ಆತ ತೀವ್ರ ಅಸ್ವಸ್ತಕ್ಕೊಳಗಾಗಿ ರಕ್ತವಾಂತಿ ಮಾಡತೊಡಗಿ ಪ್ರಜ್ಞೆ ಕಳೆದುಕೊಂಡನು. ರೈಲು ಕಾಸರಗೋಡು ನಿಲ್ದಾಣಕ್ಕೆ ತಲುಪಿದಾಗ ರೈಲ್ವೇ ಭದ್ರತಾ ಪಡೆ ತಕ್ಷಣ ಜನರಲ್ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಆಸ್ಪತ್ರೆಯ …

ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆ ಮಾಲಕ ನಿಧನ

ಪುತ್ತೂರು: ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆಯ ಮಾಲಕ ಮುಳಿಯ ಶ್ಯಾಮ್ ಭಟ್ (81) ನಿನ್ನೆ ರಾತ್ರಿ ನಿಧನ ಹೊಂದಿದರು. ಪುತ್ತೂರಿನ ಪಾಂಗ್ಲಾಯಿಯಲ್ಲಿರುವ ಸ್ವಗೃಹದಲ್ಲಿ ಅಲ್ಪ ಕಾಲದಿಂದ ಚಿಕಿತ್ಸೆಯಲ್ಲಿದ್ದರು. ಪುತ್ತೂರು, ಬೆಂಗಳೂರು, ಮಡಿಕೇರಿ, ಗೋಣಿಕೊಪ್ಪಲು ಹಾಗೂ ಬೆಳ್ತಂಗಡಿಯಲ್ಲಿ ಮುಳಿಯ ಚಿನ್ನಾಭರಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದರು. ಮೃತರು ಮಕ್ಕಳಾದ ಕೇಶವ ಪ್ರಸಾದ್ ಮುಳಿಯ, ಕೃಷ್ಣ ನಾರಾಯಣ ಮುಳಿಯ, ವಿದ್ಯಾಸರಸ್ವತಿ, ಅಳಿಯ ಶ್ಯಾಮಸುಂದರ್, ಸೊಸೆಯಂದಿರಾದ ಕೃಷ್ಣವೇಣಿ ಪ್ರಸಾದ್, ಅಶ್ವಿನಿ ಕೃಷ್ಣ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಕುಸುಮಾವತಿ ನಿಧನ

 ಪೆರ್ಲ: ಶೇಣಿ ಗ್ರಾಮದ ಓಣಿಬಾಗಿಲು ಹೊಸಗದ್ದೆ ಮೂಲೆ ನಿವಾಸಿ ದಿ| ಅಮ್ಮು ಪೂಜಾರಿಯವರ ಪತ್ನಿ ಕುಸುಮಾವತಿ (8೦) ಇಂದು ಮುಂಜಾನೆ ನಿಧನ ಹೊಂದಿದರು. ಮೃತರು ಮಕ್ಕಳಾದ ಸುರೇಶ್, ದೇವದಾಸ್, ದಿಲೀಪ್ (ಪೆರ್ಲ  ಬಿಲ್ಲವ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ), ರಾಜೇಶ್, ಶ್ರೀಧರ (ಪೆರ್ಲ ಬಿಲ್ಲವ ಸಂಘದ ಸಕ್ರಿಯ ಸದಸ್ಯ), ಆಶಾಲತ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಕುಸುಮಾವತಿಯವರ ನಿಧನಕ್ಕೆ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಪೆರ್ಲ ಸಂತಾಪ ಸೂಚಿಸಿದೆ.

ಕೊಲ್ಲಂಗಾನ ಕಾಂಗ್ರೆಸ್ ವಾರ್ಡ್ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಲೋಬೊ ನಿಧನ

  ಮಾನ್ಯ: ಕೊಲ್ಲಂಗಾನದಲ್ಲಿ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತನಾಗಿದ್ದ ಅನಿಲ್ ಕುಮಾರ್ ಲೋಬೊ (46) ನಿಧನ ಹೊಂದಿದರು. ಕೊಲ್ಲಂಗಾನ ಕಾಂಗ್ರೆಸ್ ವಾರ್ಡ್ ಸಮಿತಿ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ ಅನಿತ ಮರಿಯ, ಮಕ್ಕಳಾದ ಆಶ್ವಾನ್ ಅಗಸ್ಟೀನ್, ಅಯಾನ, ಸಹೋದರರಾದ ಎಮಿಲ್ಡೊ ಲೋಬೊ, ಡೇವಿಡ್ ಲೋಬೊ, ಉಲ್ಲಾಸ್ ಲೋಬೊ, ಸಂತೋಷ್ ಲೋಬೊ, ಕ್ರಿಸ್ಟೀನ್ ಲೋಬೊ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪದ್ಮಾವತಿ ಅಮ್ಮ ನಿಧನ

 ನೀರ್ಚಾಲು: ಬೇಳದ ದಿ| ಜ್ಯೋತಿಷಿ ಬಿ. ವಿಷ್ಣು ಅಡಿಗರ ಪತ್ನಿ ಪದ್ಮಾವತಿ ಅಮ್ಮ (96) ನಿಧನರಾದರು. ಮೃತರು ಮಕ್ಕಳಾದ ಸುಬ್ರಹ್ಮಣ್ಯ ಅಡಿಗ (ಬೇಳ ಕುಮಾರಮಂಗಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪ್ರಧಾನ  ಅರ್ಚಕ ಜ್ಯೋತಿಷರತ್ನ ಪದ್ಮನಾಭ ಶರ್ಮ ಇರಿಞ್ಞಾಲಕ್ಕುಡ ಸಹಿತ ಆರು ಮಂದಿ ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿವೃತ್ತ ಅಧ್ಯಾಪಿಕೆ ನಿಧನ

ಉಪ್ಪಳ: ಸೋಂಕಾಲು ನಿವಾಸಿ ನಿವೃತ್ತ ಅಧ್ಯಾಪಿಕೆ ಸುಶೀಲ ಟೀಚರ್ (96) ಅಲ್ಪ ಕಾಲದ ಅಸೌಖ್ಯದಿಂದ ಪಾಪನ್‌ಶ್ಯೇರಿಯಲ್ಲಿರುವ ಮಗಳ ಮನೆಯಲ್ಲಿ ನಿನ್ನೆ ಸಂಜೆ ನಿಧನ ಹೊಂದಿದರು. ಇವರು ಕುಬಣೂರು ಶ್ರೀರಾಮ ಎ.ಯು.ಪಿ ಶಾಲೆಯಲ್ಲಿ ೩೫ ವರ್ಷಗಳ ತನಕ ವೃತ್ತಿ ಪರಿಚಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಹೊಂದಿದ್ದರು. ಮೃತರು ಪತಿ ದಿ| ಪಿ.ವಿ ಕುಂಞAಬು, ಮಕ್ಕಳಾದ ಶ್ರೀನಿವಾಸ (ದಾಸ), ಶೈಲಜಾ, ಸುಜಾತ, ಶ್ರೀಕಾಂತ್, ಅಳಿಯಂದಿರಾದ ವಲ್ಸರಾಜ್ ಪಾಪನ್‌ಶ್ಯೇರಿ, ರವೀಂದ್ರ, ಸೊಸೆಯಂದಿರಾದ ವಸಂತ, ಭಾಗೀರಥಿ, ಸಹೋದರ ಜಯಾನಂದ ಉಪ್ಪಳ, ಸಹೋದರಿ ಕಾರ್ತ್ಯಾಯಿನಿ …

ಅಸೌಖ್ಯ: ಬಸ್ ಕಂಡಕ್ಟರ್ ನಿಧನ

ಬಾಯಾರು: ಬಳ್ಳೂರು ನಿವಾಸಿ ಈಶ್ವರ ನಾಯ್ಕ ಆವಳ (55) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಇವರು ಈ ಹಿಂದೆ ಉಪ್ಪಳ ಬಾಯಾರು ರೂಟ್‌ನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತಿದ್ದರು. ಮೃತರು ಪತ್ನಿ ವಾರಿಜ, ಮಕ್ಕಳಾದ ಲೋಹಿತ್, ದೀಪಕ್, ಸಹೋದರ ಜಗದೀಶ ಆವಳ, ಸಹೋದರಿ ಲಕ್ಷಿ÷್ಮÃ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ತಾತ್ಕಾಲಿಕ ಕಂಡಕ್ಟರ್ ಆಗಿದ್ದ ಬಳ್ಳೂರು ನಿವಾಸಿ ಮೃತದೇಹ ಕೆರೆಯಲ್ಲಿ ಪತ್ತೆ

ಬಾಯಾರು: ಬಳ್ಳೂರು ತೆಂಕಮಜಲು ನಿವಾಸಿ ಮೋಹನ ನಾಯ್ಕ (50)ರ ಮೃತದೇಹ ತೋಟದ ಕೆರೆಯಲ್ಲಿ ಪತ್ತೆಯಾಗಿದೆ. ಶನಿವಾರ ಬೆಳಿಗ್ಗೆ 9 ಗಂಟೆ ವೇಳೆ ಮನೆಯಿಂದ ಹೊರಗಡೆ ಹೋಗಿದ್ದರು. ಮಧ್ಯಾಹ್ನ ವೇಳೆ ಮನೆ ಬಳಿಯ ತೋಟದ ಕೆರೆ ಬಳಿಯಲ್ಲಿ ಚಪ್ಪಲಿ ಕಂಡುಬAದಿದೆ. ಉಪ್ಪಳದಿಂದ ಅಗ್ನಿಶಾಮಕದಳ ತಲುಪಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ. ಇವರು ಕೆರೆಗೆ ಹಾರಿ ಆತ್ಮಹತ್ಯೆಗೈದಿರುವುದಾಗಿ ಅಂದಾಜಿಸಲಾಗಿದೆ. ಈ ಹಿಂದೆ ಹಲವು ತಿಂಗಳುಗಳ ಕಾಲ ಕೇರಳ ಸಾರಿಗೆ ಸಂಸ್ಥೆಯ ಕಾಸರಗೋಡು ಡಿಪ್ಪೋದ ಬಸ್‌ನಲ್ಲಿ ತಾತ್ಕಾಲಿಕ ಕಂಡಕ್ಟರ್ ಆಗಿದ್ದರು. ಮಂಜೇಶ್ವರ ಪೊಲೀಸರು …