ಒಂದು ದೇಹ ಎರಡು ತಲೆಯ ಮಗು ಜನನ

ಭುವನೇಶ್ವರ:  ಒಡಿಶಾದ ಕಂಡಮಾಲ್ ಜಿಲ್ಲೆಯಲ್ಲಿ ಒಂದು ದೇಹ ಹಾಗೂ ಎರಡು ತಲೆಯುಳ್ಳ ಮಗು ಜನಿಸಿದೆ.  ಕಳೆದ ಶನಿವಾರ ಸಿಸೇರಿಯನ್ ಮೂಲಕ ಮಗುವನ್ನು ಹೊರತೆಗೆಲಾಗಿದೆ.  ಮಗುವನ್ನು ಬೆರ್ಹಾಂಪುರದ ಎಂ.ಕೆ.ಸಿ.ಜಿ ಮೆಡಿಕಲ್ ಕಾಲೇಜು ಆಂಡ್ ಹಾಸ್ಪಿಟಲ್‌ನ ಸ್ಪೆಷಲ್ ನ್ಯೂಬೋನ್ ಕೇರ್ ಯೂನಿಟ್‌ನಲ್ಲಿ ದಾಖಲಿಸ ಲಾಗಿದೆ.  ಎರಡು ಕೈಗಳು, ಎರಡು ಕಾಲುಗಳಿರುವ  ಗಂಡು ಮಗು ಇದಾಗಿದೆ.  ಮಗುವಿನ ಆಂತರಿಕ ಅವಯವಗಳ ಕುರಿತಾದ ಹೆಚ್ಚಿನ ಮಾಹಿತಿಯನ್ನು ತಜ್ಞರು ಬಹಿರಂಗಪಡಿಸಿಲ್ಲ. ಇದೊಂದು ಅಪೂರ್ವ ಸಂಗತಿಯಾಗಿದೆ  ವೈದ್ಯರು ತಿಳಿಸಿದ್ದಾರೆ. ಮಗುವಿನ ತಾಯಿ ಕಾಂಡಮಾನ್ ಜಿಲ್ಲೆಯ ಟುಮೂಡಿ …

17ರ ಹರೆಯದ ವಿದ್ಯಾರ್ಥಿನಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನೆಕ್ರಾಜೆಯಲ್ಲಿ ಪ್ಲಸ್ ಟು ವಿದ್ಯಾರ್ಥಿನಿ ಮಲಗುವ ಕೊಠಡಿಯ ಫ್ಯಾನ್‌ಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ವೋರ್ಕೂಡ್ಲು ಕನಿಯಾನ್‌ಮೂಲೆಯ ಜಯರಾಮರ ಪುತ್ರಿ ಧನುಷ (17) ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ವಿದ್ಯಾರ್ಥಿನಿ. ನಿನ್ನೆ ಸಂಜೆ 7 ಗಂಟೆ ವೇಳೆ ಧನುಷ ಶಾಲು ಉಪಯೋಗಿಸಿ ಫ್ಯಾನ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ಕೆಳಗಿಳಿಸಿ ಚೆರ್ಕಳದ ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಘಟನೆಗೆ ಕಾರಣವೇನೆಂದು ಸ್ಪಷ್ಟಗೊಂಡಿಲ್ಲ. ಕಲಿಕೆಯಲ್ಲಿ ಮುಂದಿದ್ದ ಧನುಷಳ …

ಯಹೂದಿ ಆರಾಧನಾಲಯದ ಮುಂದೆ ಕಿಚ್ಚಿರಿಸಿ ದಾಳಿಗೆ ಯತ್ನ: ವಿದೇಶಿ ಭಯೋತ್ಪಾದಕ ಸಂಘಟನೆಗೆ ಸೇರಿದ ಓರ್ವ ಕೊಚ್ಚಿಯಲ್ಲಿ ಸೆರೆ

ಎರ್ನಾಕುಳಂ: ಎರ್ನಾಕುಳಂನಲ್ಲಿ ರುವ ಯಹೂದಿಯರ ಆರಾಧನಾಲ ಯದ ಮುಂದೆ ಕಿಚ್ಚಿರಿಸಿ ದಾಳಿ ನಡೆಸಲೆತ್ನಿಸಿದ ಉಗ್ರನನ್ನು ಎರ್ನಾಕುಳಂ ಸೆಂಟ್ರಲ್ ಪೊಲೀಸರು ಬಂಧಿಸಿದ್ದಾರೆ. ಕೊಚ್ಚಿ ಪುತ್ತನ್‌ಕುರುಶಿ ವಿದ್ಯಂಪಾಡಿ ಕುನ್ನು ಕಾವಿಲಂಕುಳಿ ಎಬಿನ್ ಬಿ. ಪೋಳಿ(೩೨) ಬಂಧಿತ ಆರೋಪಿ.  ಬಂಧಿತನು ಮೊನ್ನೆ  ಮುಂಜಾನೆ ೨.೩೦ಕ್ಕೆ ಎರ್ನಾಕುಳಂ  ಮಾರ್ಕೆಟ್ ಬಳಿಯ ಯಹೂದಿಯರ ಸೀನಾಗೋಟ್ ಎಂಬ ಆರಾಧನಾಲಯ  ಪರಿಸರದ ಬ್ಯಾನರ್ ಗಳು ಮತ್ತು ಫ್ಲೆಕ್ಸ್ ಬೋರ್ಡ್‌ಗಳಿಗೆ ಕಿಚ್ಚಿರಿಸಿದ್ದನು. ಬಳಿಕ  ಆರಾಧನಾಲ ಯದ ಮೇಲೂ ದಾಳಿಗೆ  ಯತ್ನಿಸಿದ್ದನು. ಕಾರಿನಲ್ಲಿ  ಬಂದಿದ್ದ ಆರೋಪಿ  ಆ ಪ್ರದೇಶವಿಡಿ ಪೆಟ್ರೋಲ್ …

ವೃದ್ದೆಯ ಕುತ್ತಿಗೆಗೆ ಸೀರೆ ಸುತ್ತಿ ಉಸಿರುಗಟ್ಟಿಸಿ ಕೊಲೆ : 16 ಪವನ್ ಚಿನ್ನಾಭರಣ ಲಪಟಾವಣೆ

ತೃಶೂರು: ಇರಿಂಙಾಲಕುಡ ಕಾರಳ ಎಂಬಲ್ಲಿ ವೃದ್ದೆಯನ್ನು ಅತೀ ಕ್ರೂರವಾಗಿ ಕೊಲೆಗೈದು 16 ಪವನ್ ಚಿನ್ನಾಭರಣಗಳನ್ನು ಅಪಹರಿಸಲಾಗಿದೆ. ಕಾರಳಂ ಮೃಗಾಸ್ಪತ್ರೆ ಸಮೀಪ ನಿವಾಸಿ ಅರಿಚ್ಚುಪಳ್ಳಿ ವಿಜಯನ್‌ರ ಪತ್ನಿ ಸಾವಿತ್ರಿ (79) ಕೊಲೆಗೀಡಾದ ವೃದ್ದೆ. ನಿನ್ನೆ ಸಂಜೆ ಮೂರೂವರೆಯಿಂದ ನಾಲ್ಕೂವರೆಯ ಮಧ್ಯೆಗಿನ ಸಮಯದಲ್ಲಿ ಈ ಕೊಲೆ ಕೃತ್ಯ ನಡೆದಿದೆ. ಮನೆಯೊಳಗೆ ಅತಿಕ್ರಮಿಸಿದ ಅಕ್ರಮಿಗಳು ಸಾವಿತ್ರಿಯ ಕುತ್ತಿಗೆ ಹಿಸುಕಿ, ಸೀರೆ ಯಿಂದ ಉಸಿರುಗಟ್ಟಿಸಿ ಕೊಲೆ ಗೈದಿರುವುದಾಗಿ ತಿಳಿಯಲಾಗಿದೆ. ಈ ವೇಳೆ ತಪ್ಪಿಸುವುದಕ್ಕಾಗಿ ನಡೆಸಿದ ಯತ್ನದ ಗುರುತುಗಳು,  ಸಾಕ್ಷಿ ನಾಶಪಡಿಸಲು ಮನೆಯೊಳಗೆ ಮೆಣಸಿನ …

ದೆಹ್ರಾ ದುಬೈಯಲ್ಲಿ ವ್ಯಾಪಾರದ ಹೆಸರಲ್ಲಿ ನಕಲಿ ಮೊಹರು ಉಪಯೋಗಿಸಿ 38 ಕೋಟಿ ರೂ. ವಂಚಿಸಿದ ಬಗ್ಗೆ ದೂರು: 5 ಮಂದಿ ವಿರುದ್ಧ ಪ್ರಕರಣ ದಾಖಲು

ಕಾಸರಗೋಡು: ದುಬೈಯಲ್ಲಿ ವ್ಯಾಪಾರದ ಹೆಸರಲ್ಲಿ ಕಾಸರಗೋಡು ನಿವಾಸಿ ಹಾಗೂ ಅವರ ಸಂಬಂಧಿಕ ಸಂಸ್ಥೆಯಿಂದ ನಕಲಿ ಮೊಹರು ಉಪಯೋಗಿಸಿ ೩೮ ಕೋಟಿ ರೂಪಾಯಿಗಳ ವಂಚನೆ ನಡೆಸಿರುವುದಾಗಿ ಆರೋಪಿಸಿ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಐದು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ನೆಲ್ಲಿಕುಂಜೆ ನಿವಾಸಿ ಹಾಗೂ ಈಗ ಚೆರ್ಕಳ ಬಾಲನಡ್ಕದಲ್ಲಿ ವಾಸಿಸುವ ಅಬ್ದುಲ್ ರೌಫ್ ಎನ್.ಎ. (46) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಕಲ್ಲಿಕೋಟೆ ಚುಂಡನ್ ಕಂಡಿಯ ರಮೀಸ್, ಮಲಪ್ಪುರಂ ವಲಾಂಚೇರಿಯ ಯೂಸಫ್, ಕೋಟಯಂ ಈರಾಟು …

ಕುಂಬಳೆಯಲ್ಲಿ ಪಂಚಾಯತ್‌ನ ಸಾರಿಗೆ ಪರಿಷ್ಕಾರ ಪರಾಭವ: ವಾಹನಗಳ ಸಂದಣಿಯಿಂದ ಅಪಘಾತ ಸಮಸ್ಯೆ;ಪರಿಹಾರಕ್ಕೆ ಬಸ್ ನೌಕರರ ಒತ್ತಾಯ

ಕುಂಬಳೆ: ಕುಂಬಳೆ ಪೇಟೆಯಲ್ಲಿ   ಪಂಚಾಯತ್ ಏರ್ಪಡಿಸಿದ ಸಾರಿಗೆ ಪರಿಷ್ಕಾರ ಪೂರ್ಣ ಪರಾಭವಗೊಂಡಿದೆ. ರಸ್ತೆ ಮಧ್ಯೆ ಬಾರಿಕೇಡ್‌ಗಳನ್ನಿರಿಸಿ  ವಾಹನ ನಿಯಂತ್ರಣ ಏರ್ಪಡಿಸುವುದ ರೊಂದಿಗೆ ಪೇಟೆಯಲ್ಲಿ  ಸಾರಿಗೆ ಅಡಚಣೆ ತೀವ್ರಗೊಂಡಿದೆ. ಇದರ ಪರಿಣಾಮ ನಿನ್ನೆ ಸಂಜೆ ೪ ವಾಹನ ಅಪಘಾತಗಳು  ಸಂಭವಿಸಿದೆ. ಒಂದು ಕೆಎಸ್‌ಆರ್‌ಟಿಸಿ ಬಸ್ ಕಾರಿಗೆ  ಹಾಗೂ ಮತ್ತೊಂದು ಕೆಎಸ್‌ಆರ್‌ಟಿಸಿ ಬಸ್ ಇತರ ವಾಹನ ಗಳಿಗೆ ಢಿಕ್ಕಿ ಹೊಡೆದಿದೆ.  ಇದರಿಂದ ಅರ್ಧ ಗಂಟೆ ಕಾಲ ಕೆಎಸ್‌ಟಿಪಿ ರಸ್ತೆಯಲ್ಲಿ ಸಾರಿಗೆ ಅಡಚಣೆ ಎದುರಾಯಿತು. ಬಸ್ ವೈಟಿಂಗ್ ಶೆಡ್ ಸಮೀಪದಲ್ಲಿರುವ ರಸ್ತೆಗೆ …

ಮೈಸೂರು ದಸರಾ ಕವಿಗೋಷ್ಠಿಗೆ  ಪ್ರಣಮ್ಯ ಕೆ.ಎಸ್ ಆಯ್ಕೆ

ಕಾಸರಗೋಡು: ಮೈಸೂರು ದಸರಾ ಬಹುರೂಪಿ ಕವಿಗೋಷ್ಠಿ-2026ರ ಚಿಗುರು ಕವಿಗೋಷ್ಠಿಗೆ ಮೊಗ್ರಾಲ್ ಪುತ್ತೂರು  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ೭ನೇ ತರಗತಿ ವಿದ್ಯಾರ್ಥಿನಿ ಪ್ರಣಮ್ಯ ಕೆ.ಎಸ್‌ಳ ಕವನ ಆಯ್ಕೆಗೊಂಡಿದೆ.  ನಾಳೆ ಮೈಸೂರಿನ ಬಿಎಂಶ್ರೀ ಸಭಾಂಗಣ, ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿಯಲ್ಲಿ ಅಗ್ರಹಾರ ಕೃಷ್ಣಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಚಿಗುರು ಕವಿಗೋಷ್ಠಿಯಲ್ಲಿ  ಪ್ರಣಮ್ಯ ಕವನ ವಾಚನ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದಾಳೆ.  ಇತ್ತೀಚೆಗೆ ಕಾಞಂಗಾಡ್ ಜಿಎಚ್‌ಎಸ್‌ಎಸ್ ಬಲ್ಲ ಈಸ್ಟ್ ಶಾಲೆಯಲ್ಲಿ ಜರಗಿದ ಜಿಲ್ಲಾ ಮಟ್ಟದ ೩೨ ಕಿಲೋಗಿಂತ ಕೆಳಗಿನವರ ಕರಾಟೆ ಸ್ಪರ್ಧೆಯಲ್ಲಿ ಈಕೆ …

ನಿಲುಗಡೆ ವಿಷಯದಲ್ಲಿ ವಾಗ್ವಾದ: ಇ-ಆಟೋಗಳಿಗೆ ಪಾಸ್ ನೀಡಲು ನಗರಸಭಾಧ್ಯಕ್ಷೆಗೆ ಮನವಿ

 . ಕಾಸರಗೋಡು: ನಗರದಲ್ಲಿ ಇ-ಆಟೋ ಕಾರ್ಮಿಕರನ್ನು ಅವಗಣಿಸುತಿ ರುವುದಾಗಿ ದೂರಲಾಗಿದೆ. ಆಟೋ ಗಳಿಗೆ ನಗರದಲ್ಲಿ ಎಲ್ಲಿಯೂ ನಿಲುಗಡೆಗೆ ಅವಕಾಶ ನೀಡಿಲ್ಲ ಎಂಬುದು ಈ ಆರೋಪಕ್ಕೆ ಪ್ರಧಾನ ಕಾರಣವಾಗಿದೆ. ಪೆಟ್ರೋಲ್, ಡೀಸೆಲ್ ಆಟೋ ಚಾಲಕರೊಂದಿಗೆ ಈ ಬಗ್ಗೆ ನಿರಂತರ ವಾಗ್ವಾದಗಳು ಉಂಟಾಗುತ್ತಿದೆ.  ಬಳಿಕ ಅದು ಪೊಲೀಸ್ ಠಾಣೆವರೆಗೆ ತಲುಪಿ ಆರ್ಥಿಕ ಹಾಗೂ ಮಾನಸಿಕವಾದ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಕಾರ್ಮಿಕರು ತಿಳಿಸುತ್ತಾರೆ. ಇತರ ಜಿಲ್ಲೆಗಳಲ್ಲಿ ಇ-ಆಟೋಗಳಿಗೆ ಪಾಸ್ ಮಂಜೂರು ಮಾಡಲಾಗುತ್ತಿದೆ. ಹಲವು ಬಾರಿ ಮನವಿ ನೀಡಿದ್ದರೂ ಕಳೆದ ಒಂದೂವರೆ ವರ್ಷದಿಂದ …

ಕೋಡಿಬೈಲು ರಸ್ತೆ  ಶೋಚನೀಯ: ಸಂಚಾರ ಸಮಸ್ಯೆ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ ಕೋಡಿಬೈಲು ಪ್ರದೇಶವನ್ನು ಸಂಗಮಿಸುವ ಎರಡು ರಸ್ತೆ ಹದಗೆಟ್ಟು ಶೋಚನೀಯಾವಸ್ಥೆಯಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ಮಣ್ಣಂಗುಳಿಯಿAದ ಕೋಡಿಬೈಲು ಹಾಗೂ ಉಪ್ಪಳ ಪತ್ವಾಡಿ ರಸ್ತೆಯಿಂದ ಕೋಡಿಬೈಲು ಪ್ರದೇಶವನ್ನು ಸಂಗ ಮಿಸುವ ರಸ್ತೆಗಳು ಶೋಚನೀಯ ವಾಗಿವೆ. ಈ ಪ್ರದೇಶದಲ್ಲಿ ಶಾಲೆ ಸಹಿತ ನೂರಾರು ಮನೆಗಳಿದ್ದು, ದಿನನಿತ್ಯ ನೂರಾರು ವಾಹನಗಳು ಸಂಚರಿಸು ತ್ತಿವೆ. ಅಲ್ಲಲ್ಲಿ ಡಾಮಾರೀ ಕರಣ, ಕಾಂಕ್ರೀಟ್, ಇಂಟರ್‌ಲಾಕ್ ರಸ್ತೆಲ್ಲಿದ್ದು, ಇವುಗಳೆಲ್ಲ ಹೊಂಡಗಳಿAದ ಕೂಡಿ ಸಂಚಾರ ದುಸ್ತರವಾಗಿದೆ. ಸಂಬAಧ ಪಟ್ಟ …

ಮೊಗ್ರಾಲ್‌ನ ಮಾಹಿನ್ ಸೈಫ್ ನೌಲ್‌ಗೆ ಎನ್‌ಐಟಿಕೆಯಿಂದ ಡಾಕ್ಟರೇಟ್, ಕೇಂದ್ರ ಪ್ಯಾಟೆಂಟ್

ಮೊಗ್ರಾಲ್: ಮೊಗ್ರಾಲ್‌ನ ಮಾಹಿನ್ ಸೈಫ್ ನೌಲ್‌ಗೆ ಸುರತ್ಕಲ್ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನೋಲಜಿಯಿಂದ ಮೆಟಲರ್ಜಿಕಲ್ ಆಂಡ್ ಮೆಟೀರಿಯಲ್ಸ್ ಇಂಜಿನಿಯರಿ ಂಗ್ ವಿಭಾಗದಲ್ಲಿ ಪಿಎಚ್‌ಡಿ ಹಾಗೂ ಕೇಂದ್ರ ಪ್ಯಾಟೆಂಟ್ ಲಭಿಸಿದೆ. ಸಮುದ್ರ ಸಂಪನ್ಮೂಲ ಸಂಸ್ಕರಣೆಯಿಂದಿರುವ ಜೈವ ತ್ಯಾಜ್ಯಗಳನ್ನು ಪ್ರಯೋಜನಪಡಿಸಿ ಅಲ್ಟ್ರಾ ವಯಲೆಟ್ ರಶ್ಮಿಗಳಿಂದ ಸಂರಕ್ಷಣೆ ನೀಡುವ ಪ್ರಕೃತಿಸ್ನೇಹಿ ಪೋಟಿಂಗ್‌ಗಳನ್ನು ಅಭಿವೃದ್ಧಿಪಡಿಸಿ ರುವುದಕ್ಕೆ ಕೇಂದ್ರ ಸರಕಾರದ ಪ್ಯಾಟೆಂಟ್ ಲಭಿಸಿದೆ. ಸಂಶೋಧನೆಯಂಗವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹವಾದ ಐದರಷ್ಟು ರಿಸರ್ಚ್ ಪೇಪರ್‌ಗಳನ್ನು ಇವರು ಪ್ರಕಟಿಸಿದ್ದಾರೆ. ಓರ್ವ ಸ್ಪೋರ್ಟ್ಸ್ ಮೆನ್ ಕೂಡಾ ಆಗಿರುವ ಇವರು …