ಅಕ್ರಮ ಹಣ ವರ್ಗಾವಣೆ: ಅಪೀಲಿಗೆ ಅನುಮತಿ ಇಲ್ಲ; ಹೈಕೋರ್ಟ್‌ನಲ್ಲಿ ಪಿಣರಾಯಿಗೆ ತಿರುಗೇಟು

ಕೊಚ್ಚಿ: ಅಕ್ರಮ ಹಣ ವರ್ಗಾವಣೆ, ಹವಾಲ ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ಮುಖಂಡ ಪಿಣರಾಯಿ ವಿಜಯನ್, ಅವರ ಪುತ್ರಿ ಟಿ. ವೀಣ, ಮಾಜಿ ಸಚಿವ ಹಾಗೂ ಅಳಿಯನಾದ ಮುಹಮ್ಮದ್ ರಿಯಾಸ್ ಎಂಬಿವರ ವಿರುದ್ಧ ಭ್ರಷ್ಟಾಚಾರ ನಿಷೇಧ ಕಾನೂನು ಪ್ರಕಾರ ಎಫ್‌ಐಆರ್ ನೋಂದಾಯಿಸಬಹುದೆಂಬ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಅಪೀಲು ನೀಡಲಿರುವ ಮನವಿಯನ್ನು ವಿಭಾಗೀಯ ಪೀಠ ತಳ್ಳಿದೆ. ಏಕಸದಸ್ಯ ಪೀಠದ ಆದೇಶದ ವಿರುದ್ಧ ಅಪೀಲು ನೀಡುವುದಕ್ಕೆ ಒಪ್ಪಿಗೆ ನೀಡಬೇಕೆಂದು ಸಲ್ಲಿಸಿದ ಅರ್ಜಿಯನ್ನು ಡಿವಿಷನ್ …

ಸಿಪಿಎಂ ವಿಸ್ತೃತ ಜಿಲ್ಲಾ ಸಮಿತಿ ಸಭೆ ಆರಂಭ

ಕಾಸರಗೋಡು: ಸಿಪಿಎಂನ ವಿಸ್ತೃತ ಜಿಲ್ಲಾ ಸಮಿತಿ ಸಭೆ ವಿದ್ಯಾನಗರದಲ್ಲಿರುವ  ಎಕೆಜಿ ಮಂದಿರದಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿತು.  ಇದರಂಗವಾಗಿ  ಸಿಪಿಎಂನ ಮಾಜಿ ಕೇಂದ್ರ ಸಮಿತಿ ಸದಸ್ಯ ಪಿ. ಕರುಣಾಕರನ್ ಧ್ವಜಾರೋಹಣ ನಡೆಸಿದರು.  ಬಳಿಕ ನಡೆದ ಸಭೆಯನ್ನು ಸಿಪಿಎಂ ಪೊಲಿಟ್ ಬ್ಯೂರೋ ಸದಸ್ಯ  ಎ. ವಿಜಯ ರಾಘವನ್ ಉದ್ಘಾಟಿಸಿದರು. ಜಿಲ್ಲಾ ಸೆಕ್ರೆಟರಿ ಯೇಟ್ ಸದಸ್ಯ ಪಿ. ಜನಾರ್ದನನ್ ಅಧ್ಯಕ್ಷತೆ ವಹಿಸಿದರು.  ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ. ರಾಜಗೋಪಾಲನ್, ಕೇಂದ್ರ ಸಮಿತಿ ಸದಸ್ಯರಾದ  ಡಾ. ಥೋಮಸ್ ಐಸಾಕ್, ಪಿ. ರಾಜೀವ್, ಪಿ.ಕೆ. …

ಪತ್ನಿ, ಪುತ್ರನನ್ನು ಕುತ್ತಿಗೆ ಸೀಳಿ ಕೊಲೆಗೈದು ಆತ್ಮಹತ್ಯೆಗೆತ್ನಿಸಿದ ಯುವಕ

ತೃಶೂರು: ಪತ್ನಿ ಮತ್ತು ನಾಲ್ಕು ವರ್ಷದ ಪುತ್ರನನ್ನು ಕುತ್ತಿಗೆ ಸೀಳಿ ಕೊಲೆಗೈದ ಬಳಿಕ ಯುವಕ ಆತ್ಮಹತ್ಯೆಗೈಯ್ಯಲೆತ್ನಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಇಂದು ಮುಂಜಾನೆ ೧.೩೦ರ ವೇಳೆ ತೃಶೂರಿನಲ್ಲಿ  ಈ ಬೀಭತ್ಸ ಘಟನೆ ನಡೆದಿದೆ. ತೃಶೂರು ತೇಕಿನಿಯಡ್ಕದ ವಿಸ್ಮಯ (30), ಪುತ್ರ ದಕ್ಷಿತ್ (4) ಕೊಲೆಗೈಯ್ಯಲ್ಪಟ್ಟ ದುರ್ದೈವಿಗಳಾಗಿದ್ದಾರೆ. ವಿಸ್ಮಯಳ ಪತಿ ವಿಜೇಶ್ (35) ಈ ಅವಳಿ ಕೊಲೆಕೃತ್ಯ ನಡೆಸಿರುವುದಾಗಿ ಆರೋಪಿಸಲಾಗಿದೆ.  ಪತ್ನಿ ಮತ್ತು ಪುತ್ರನನ್ನು ಕುತ್ತಿಗೆ ಸೀಳಿ ಕೊಲೆಗೈದ ಬಳಿಕ ವಿಜೇಶ್ ಸ್ವಯಂ ತನ್ನ ಕುತ್ತಿಗೆಯನ್ನು ಸೀಳಿ …

14ರ ಬಾಲಕಿಗೆ ಕಿರುಕುಳ: ಯುವಕ ಸೆರೆ

ಮಂಜೇಶ್ವರ: 14ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ  ಆರೋಪದಂತೆ   ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 19ರ ಹರೆಯದ ಯುವಕ ಸೆರೆಗೀಡಾಗಿದ್ದಾನೆ.  ಈತ ಬಾಲಕಿಯ ಹತ್ತಿರದ ಸಂಬಂಧಿಕನೆನ್ನಲಾಗಿದೆ. ಆರೋಪಿಯ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಕಾರ್ಗೋ ಮೂಲಕ ಕಾಸರಗೋಡಿಗೆ ಸಾಗಿಸಲೆತ್ನಿಸಿದ 9 ಕೋಟಿ ಮೌಲ್ಯದ ಚಿನ್ನ ಪತ್ತೆ: ಓರ್ವ ಸೆರೆ

ಕಾಸರಗೋಡು: ಏರ್ ಕಾರ್ಗೋ ಮೂಲಕ ಕಾಸರಗೋಡಿಗೆ ಸಾಗಿಸಲೆಂದು ತಂದಿದ್ದ 9 ಕೋಟಿ ರೂ. ಮೌಲ್ಯದ 6.2 ಕಿಲೋ ಚಿನ್ನವನ್ನು ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದೆ. ಈ ಮಾಲನ್ನು ತಿರುವನಂತಪುರದಿಂದ ಕಾಸರಗೋಡಿಗೆ ಸಾಗಿಸಲೆಂದು ಬಂದಿದ್ದ ಕಾಸರಗೋಡು ಚಿನ್ನ ಕಳ್ಳಸಾಗಾಟ ಜಾಲಕ್ಕೆ ಸೇರಿದ ಕಣ್ಣೂರು ನಿವಾಸಿ ಅಮಲ್‌ರಾಜ್ ಎಂಬಾತನನ್ನು ಡಿಆರ್‌ಐ ಬಂಧಿಸಿದೆ. ತಿರುವನಂತಪುರ ಶಂಕಮುಖ ದಲ್ಲಿರುವ ಕೇರಳ ಸ್ಟೇಟ್ ಇಂಡಸ್ಟ್ರಿ ಯಲ್ ಎಂಟರ್‌ಪ್ರೈಸಸ್ (ಕೆಎಸ್ ಐಇ)ಯ ನಿಯಂತ್ರಣದಲ್ಲಿರುವ ಏರ್ …

ಸಂಚರಿಸುತ್ತಿದ್ದ ಕಾರು ಬೆಂಕಿಗಾಹುತಿ: ತಪ್ಪಿದ ಭಾರೀ ದುರಂತ

ಉಪ್ಪಳ: ಸಂಚರಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕೂಡಲೇ ನಿಲ್ಲಿಸಿ  ನಂದಿಸಲು ಸಾಧ್ಯವಾದು ದರಿಂದ ಭಾರೀ ದುರಂತ ತಪ್ಪಿಹೋಗಿದೆ. ನಿನ್ನೆ ಸಂಜೆ ೪ ಗಂಟೆಗೆ ಕೈಕಂಬ-ಬಾಯಾರು ರಸ್ತೆಯಲ್ಲಿ ಸೋಂಕಾಲು ಮಸೀದಿ ಬಳಿ  ಈ ಘಟನೆ ನಡೆದಿದೆ. ಕನ್ನಟಿ ಪಾರೆ ನಿವಾಸಿ ಜಾಸಿಂ ಎಂಬವರ ಕಾರು ಬೆಂಕಿಗಾಹುತಿಯಾಗಿದೆ. ಇವರು  ನಿನ್ನೆ ಸಂಜೆ ಉಪ್ಪಳಕ್ಕೆ ತೆರಳುತ್ತಿದ್ದರು. ಸೋಂಕಾಲು ಮಸೀದಿ ಬಳಿಗೆ ತಲುಪಿದಾಗ ಕಾರಿನ ಇಂಜಿನ್ ಭಾಗದಿಂದ ಹೊಗೆ ಕಾಣಿಸಿಕೊಂಡಿದೆ.  ಈ ಬಗ್ಗೆ   ಇತರರು ಜಾಸಿಂರಿಗೆ ಸೂಚನೆ ನೀಡಿದ್ದು ಕೂಡಲೇ ನಿಲ್ಲಿಸಿ ಬೋನೆಟ್ …

ಸಹೋದರನ ನಿಧನದ 2 ತಿಂಗಳ ಬಳಿಕ ಕುಸಿದು ಬಿದ್ದು ಯುವಕ ಮೃತ್ಯು

ಮೊಗ್ರಾಲ್ ಪುತ್ತೂರು: ಸಹೋದರ ನಿಧನ ಹೊಂದಿ ಎರಡು ತಿಂಗಳೊಳಗೆ ಈ ಹಿಂದೆ ಕೊಲ್ಲಿಯಲ್ಲಿದ್ದ ಯುವಕ ಊರಿನಲ್ಲಿ ಕೆಲಸದ ಮಧ್ಯೆ ಕುಸಿದು ಬಿದ್ದು ಮೃತಪಟ್ಟರು. ಕಂಬಾರು ನಿವಾಸಿ ಅಶ್ರಫ್ (47) ಮೃತಪಟ್ಟವರು. ನಿನ್ನೆ ಸಂಜೆ 7 ಗಂಟೆಗೆ ಘಟನೆ ನಡೆದಿದೆ. ಕೆಲಸದ ಸ್ಥಳದಲ್ಲಿ ಕುಸಿದು ಬಿದ್ದ ಅಶ್ರಫ್‌ರನ್ನು ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಎರಡು ತಿಂಗಳ ಹಿಂದೆ ಸಹೋದರ ಗಫೂರ್ ಮುಂಬೈಯಲ್ಲಿ ಮೃತಪಟ್ಟಿದ್ದರು. ಮೃತರು ಪತ್ನಿ ರಮ್ಲ, ಮಕ್ಕಳಾದ ರಿಫಾಯಿ, ರಾಹಿದ್, ಆಸಿಯಾ, ಸಲ್ಮಾನ್, …

ಹಲವು ವರ್ಷಗಳಿಂದ ಕುಸಿದಿರುವ ಕಾಲುಸೇತುವೆಯ ದುರಸ್ತಿಗೆ ಕ್ರಮವಿಲ್ಲ: ಸ್ಥಳೀಯರು, ಶಾಲಾ ಮಕ್ಕಳು ಅಪಾಯದ ಭೀತಿಯಲ್ಲಿ

ಮಂಜೇಶ್ವರ: ಕೊಡ್ಗಮೊಗರು ಗ್ರಾಮದ ಪಿಲಿಕುಂಡ ಕೂಟೇಲು ಬಳಿ ಇರುವ ಕಾಲು ಸೇತುವೆಯ ಆಧಾರಸ್ತಂಭ ಕುಸಿದು ಬಿದ್ದಿದ್ದು, , ಜನರಿಗೆ ಆತಂಕ ಹುಟ್ಟಿಸುತ್ತಿದೆ. ಸೇತುವೆಯ ಆಧಾರಸ್ತಂಭ ಕುಸಿದು ಬಿದ್ದು ವರ್ಷಗಳೇ ಕಳೆದರೂ ಇನ್ನೂ ಕೂಡ ದುರಸ್ತಿಗೊಳಿಸುವ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಕಳೆದ ವರ್ಷ ಸುರಿದ ಭಾರೀ ಮಳೆಗೆ ಈ ಕಾಲು ಸೇತುವೆಯ ತಳ ಭಾಗದಲ್ಲಿರುವ ಆಧಾರಸ್ತಂಭ ವೊಂದು ಕುಸಿದುಬಿದ್ದಿತ್ತು. ಈ ಕಾಲುಸೇತುವೆಯು ಈ ಭಾಗದ ಪ್ರಮುಖ ಸಂಪರ್ಕ ಮಾರ್ಗ ವಾಗಿದ್ದು ಪ್ರತಿನಿತ್ಯ ನೂರಾರು ಜನರು ಈ …

ಎಂಡಿಎಂಎ ವಶ: ಯುಟ್ಯೂಬ್ ಇನ್‌ಫ್ಲುವೆನ್ಸರ್ ಸಹಿತ ನಾಲ್ವರ ಸೆರೆ

ಮಲಪ್ಪುರಂ: ಮಲಪ್ಪುರಂ ನಲ್ಲಿ  ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಮಾದಕವಸ್ತು ವಶಪಡಿಸಿಕೊಂಡಿದ್ದು, ಈ ಸಂಬಂಧ ಸೋಶ್ಯಲ್ ಮೀಡಿಯಾ ಇನ್ ಫ್ಲುವೆನ್ಸರ್ ಸಹಿತ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಕೊಟ್ಟಿಲಂಗಾಡಿ ಕಾವುಂಗಲ್ ನಿವಾಸಿಯೂ ಇನ್‌ಫ್ಲುವೆನ್ಸರ್  ಆಗಿರುವ ಮಿನು ಜಾಸ್ಮಿನ್ (23), ಮಲಪ್ಪುರಂ ಹಾಜಿಯಾರ್‌ಪಳ್ಳಿ ನಿವಾಸಿ ಅನಸ್ (24), ಮಂಕಡ ನಿವಾಸಿ ಟಿ.ಪಿ.ಶಬೀರ್ (26), ವೇಂಙರ ಊರಕ ನಿವಾಸಿ ಸಜಾದ್ (21) ಎಂಬಿವರು ಸೆರೆಗೀಡಾದ ಆರೋಪಿಗಳಾಗಿದ್ದಾರೆ.  ಆಪರೇಶನ್ ತೂಫಾನ್ ನಾರ್ಕೋ ಹಂಟ್    ಕಾರ್ಯಾಚರಣೆ ಅಂಗವಾಗಿ  ಪೊಲೀಸರು ನಡೆಸಿದ ತಪಾಸಣೆ ವೇಳೆ ಕಾರಿನಲ್ಲಿ …

ಎಸ್‌ಐಆರ್ ವಿಶೇಷ ಅಭಿಯಾನ: ಪೂಜಾ ರಜೆ ದಿನಗಳನ್ನು ಹೊರತುಪಡಿಸಬೇಕು- ಕೆ. ಶ್ರೀಕಾಂತ್

ಕಾಸರಗೋಡು: ಪೂಜಾ ರಜಾದಿನಗಳಾದ ಅ.೨೦, ೨೧ರಂದು ವಿಶೇಷ ಮತದಾರರ ಪಟ್ಟಿಗೆ ಸಂಬಂಧಿಸಿದ ಎಸ್‌ಐಆರ್ ಅಭಿಯಾ ನದ ಕಾರ್ಯಚಟುವಟಿಕೆಗಳನ್ನು ನಿಗದಿಪಡಿಸಲಾಗಿದ್ದು, ಇದನ್ನು ಕೈಬಿಡಬೇಕೆಂದು ಬಿಜೆಪಿ ಕಣ್ಣೂರು ವಲಯ ಅಧ್ಯಕ್ಷ ಕೆ. ಶ್ರೀಕಾಂತ್ ಆಗ್ರಹಿಸಿದ್ದಾರೆ. ಈ ಬಗ್ಗೆ ಅವರು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದಾರೆ. ವಿಶೇಷ ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರನ್ನು,  ಅಗತ್ಯ ತಿದ್ದುಪಡಿಗಳನ್ನು ಕೈಗೊಳ್ಳಲು ಇಂದಿನಿಂದ ೩೧ರವರೆಗೆ ವಿಶೇಷ ಎನ್‌ರೋಲ್‌ಮೆಂಟ್ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ. ಪೂಜಾ ರಜಾದಿನಗಳಲ್ಲಿ ಜನರು ಧಾರ್ಮಿಕ ಆಚರಣೆಗಳು ಹಾಗೂ ಕುಟುಂಬ ಕಾರ್ಯಕ್ರಮಗಳಲ್ಲಿ ಭಾಗ ವಹಿಸುವುದರಿಂದಾಗಿ ಅಭಿಯಾನದ …