ಎಸ್ಡಿಪಿಐ ಕಾರ್ಯಕರ್ತ ಸೈನುಲ್ ಆಬೀದ್ ಕೊಲೆ ಪ್ರಕರಣ: ಎಲ್ಲಾ ಆರೋಪಿಗಳು ಖುಲಾಸೆ
ಕಾಸರಗೋಡು: ಭಾರೀ ರಾಜಕೀಯ ಸಂಚಲನಕ್ಕೆ ಗ್ರಾಸವಾಗಿದ್ದ ಎಸ್ಡಿಪಿಐ ಕಾರ್ಯಕರ್ತ ತಳಂಗರೆಯ ಸೈನುಲ್ ಆಬೀದ್ (24) ಕೊಲೆ ಪ್ರಕರಣದ ಎಲ್ಲಾ 21 ಆರೋಪಿಗಳ ಮೇಲಿನ ಆರೋಪ ವಿಚಾರಣೆಯಲ್ಲಿ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ಅವರನ್ನು ಕಾಸರಗೋಡು ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ (ದ್ವಿತೀಯ) ಖುಲಾಸೆಗೊಳಿಸಿ ತೀರ್ಪು ನೀಡಿದೆ. 2014 ಡಿಸೆಂಬರ್ 22ರಂದು ರಾತ್ರಿ ಕಾಸರಗೋಡು ನಗರದ ಎಂ.ಜಿ. ರಸ್ತೆ ಬಳಿಸೈನುಲ್ ಆಬೀದ್ನನ್ನು ಅಕ್ರಮಿಗಳ ತಂಡ ಮಾರಕಾಯುಧಗಳೊಂದಿಗೆ ದಾಳಿ ನಡೆಸಿ ಬರ್ಬರವಾಗಿ ಕೊಲೆಗೈದಿತ್ತು. ಅಬೀದ್ನ ತಂದೆ ಎಂ.ಜಿ ರಸ್ತೆಯ ಮುಸ್ಲಿಂ ಲೀಗ್ನ ಜಿಲ್ಲಾ ಕಚೇರಿ …
Read more “ಎಸ್ಡಿಪಿಐ ಕಾರ್ಯಕರ್ತ ಸೈನುಲ್ ಆಬೀದ್ ಕೊಲೆ ಪ್ರಕರಣ: ಎಲ್ಲಾ ಆರೋಪಿಗಳು ಖುಲಾಸೆ”