ಪಚ್ಚಂಬಳ ಮಖಾಂ ಉರೂಸ್ ಕರಪತ್ರ ಬಿಡುಗಡೆ

ಕುಂಬಳೆ: ಇಚ್ಲಂಗೋಡು ಪಚ್ಚಂಬಳ ಮಖಾಂ ಉರೂಸ್ ನವಂಬರ್ 15ರಿಂದ 28ರ ವರೆಗೆ ನಡೆಯಲಿದ್ದು, ಇದರ ಕರಪತ್ರವನ್ನು ಉರೂಸ್ ಸಂಚಾಲಕ ಅಸೀಸ್ ಟಿಂಬರ್ ಜಮಾಯತ್ ಕಾರ್ಯದರ್ಶಿ ಮೊಹಮ್ಮದ್ ಅಬ್ದುಲ್ಲರಿಗೆ ನೀಡಿ ಬಿಡುಗಡೆಗೊಳಿಸಿದರು. ಜಮಾಯತ್ ಕೋಶಾಧಿಕಾರಿ ಮಜೀದ್ ಪಚ್ಚಂಬಳ, ಉಪಾಧ್ಯಕ್ಷ ಅಶ್ರಫ್ ಪಚ್ಚಂಬಳ, ಮೊದೀನ್‌ಕುಂಞಿ ಹಾಜಿ, ಹಸನ್ ಬೀರೊಳಿಕೆ, ಖತೀಬ್ ಜಹ್‌ಫರ್ ಮುಸ್ತಾನಿ, ಜೊತೆ ಸಂಚಾಲಕ ಯೂಸಫ್, ಪ್ರಚಾರ ಸಂಚಾಲಕ ಜಸೀಲ್ ಹುಬ್ಬಳ್ಳಿ, ಸೀರಾಜ್ ಇಚ್ಲಂಗೋಡು ಭಾಗವಹಿಸಿದರು. ಹಲವಾರು ಗಣ್ಯರು ಭಾಗವಹಿಸುವ ಉರೂಸ್ ನವಂಬಂರ್ 29ರಂದು ಅನ್ನಸಂತರ್ಪಣೆಯೊಂದಿಗೆ ಸಮಾಪ್ತಿಗೊಳ್ಳಲಿದೆ.

ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಸೇವಾ ಸಂಕಲ್ಪ ಅಭಿಯಾನ್ ಉಚಿತ ವೈದ್ಯಕೀಯ ಶಿಬಿರ

ಬದಿಯಡ್ಕ: ಬಿಜೆಪಿ ಬದಿಯಡ್ಕ ಪಂ. ಸಮಿತಿ ಹಾಗೂ ಆಶ್ರಯ ಆಶ್ರಮ ಕನ್ನೆಪ್ಪಾಡಿ ಇದರ ವತಿಯಿಂದ ಆಸ್ಟರ್ ಮಿಮ್ಸ್ ಆಸ್ಪತ್ರೆ ಕಾಸರಗೋಡು ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆ ಪ್ರಯುಕ್ತ ಸೇವಾಸೇತು ಅಭಿಯಾನದಂಗವಾಗಿ ಉಚಿತ ವೈದ್ಯಕೀಯ ಶಿಬಿರ ಆಯೋಜಿಸ ಲಾಯಿತು. ನಿನ್ನೆ ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಜರಗಿದ ಶಿಬಿರವನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಪಿ.ಆರ್. ಉದ್ಘಾಟಿಸಿ ಮಾತನಾಡುತ್ತಾ, ತನ್ನ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟ ಪ್ರಧಾನಿ ಹಾಗೂ ವಿಶ್ವದ ಪ್ರಭಾವಿ ನಾಯಕ ನರೇಂದ್ರ ಮೋದಿಯವರ ಜನ್ಮ ದಿನಾಚರಣೆ …

ಸುಲ್ತಾನ್ ಡಿಯರ್ ಪೇರೆಂಟ್ ಹೆತ್ತವರಿಗೆ ತರಬೇತಿ ತರಗತಿ

ಕಾಸರಗೋಡು: ಕುಣಿಯ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಪಿಟಿಎ ಸಮಿತಿ ಹಾಗೂ ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ಆಶ್ರಯದಲ್ಲಿ ಡಿಯರ್ ಪೇರೆಂಟ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಪಿಟಿಎ ಅಧ್ಯಕ್ಷ ಎ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿದ್ದು, ಕಾಸರಗೋಡು ನಾರ್ಕೋಟಿಕ್ ಡಿವೈಎಸ್‌ಪಿ ಡಾ. ವಿ. ಬಾಲಕೃಷ್ಣನ್ ಉದ್ಘಾಟಿಸಿದರು. ಜೇಸಿಸ್ ಅಂತಾರಾಷ್ಟ್ರೀಯ ತರಬೇತುದಾರ ವಿ. ವೇಣುಗೋಪಾಲನ್ ತರಗತಿ ನಡೆಸಿದರು. ಸುಲ್ತಾನ್ ಕಾಞಂಗಾಡ್ ಶೋರೂಂ ಮೆನೇಜರ್ ಇಕ್ಬಾಲ್, ಮದರ್ ಪಿಟಿಎ ಅಧ್ಯಕ್ಷೆ ತಸ್ನೀಮ ಬದ್ರುದ್ದೀನ್, ಸ್ಟಾಫ್ ಸೆಕ್ರೆಟರಿ ಪಿ. ರಾಜನ್, ಎಸ್‌ಆರ್‌ಜಿ …

ಜನರಲ್ ಆಸ್ಪತ್ರೆಯಲ್ಲಿ ದಸರಾ ಮಹೋತ್ಸವದಂಗವಾಗಿ ನಾಡಹಬ್ಬ ಆಚರಣೆ

ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆ ಸಭಾಂಗಣದಲ್ಲಿ ಆಸ್ಪತ್ರೆಯ ಸಿಬ್ಬಂದಿ ಮಂಡಳಿ ಹಾಗೂ ಕನ್ನಡ ಬಳಗ ಜಂಟಿಯಾಗಿ ನಿನ್ನೆ   ದಸರಾ ಮಹೋತ್ಸವದಂಗವಾಗಿ ನಾಡಹಬ್ಬ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಆಸ್ಪತ್ರೆಯ ಮೇಲ್ವಿಚಾರಕ ಡಾ| ಜಿತೇಶ್ ವಿ. ಉದ್ಘಾಟಿಸಿದರು. ಲೇ ಸೆಕ್ರೆಟರಿ ಬಾಲಸುಬ್ರಹ್ಮಣ್ಯಂ ಅಧ್ಯಕ್ಷತೆ ವಹಿಸಿದರು. ಡಾ| ಜನಾರ್ದನ್ ನಾಯ್ಕ್ ಮುಖ್ಯ ಭಾಷಣ ಮಾಡಿದರು. ವೈದ್ಯಾಧಿಕಾರಿ ಡಾ| ಸಂಧ್ಯಾ, ಸಿಬ್ಬಂದಿ ಮಂಡಳಿಯ ಅಧ್ಯಕ್ಷ ಡಾ| ಅರುಣ್ ರಾಮ್, ಶುಶ್ರೂಷ ವಿಭಾಗದ ಮುಖ್ಯಸ್ಥೆ ನಿರ್ಮಲಾ ಅಗಸ್ಟಿನ್, ಜೆಪಿಎಚ್‌ಎನ್ ತರಬೇತಿ ಶಾಲೆಯ ಪ್ರಾಂಶುಪಾಲೆ …

ಜನದ್ರೋಹಿ ಆಡಳಿತದ ವಿರುದ್ಧ ಸಿಪಿಎಂನ ಹೋರಾಟ ಮುಂದುವರಿಕೆ- ಎ. ವಿಜಯ ರಾಘವನ್

ಸಿಪಿಎಂನ ವಿಸ್ತೃತ ಜಿಲ್ಲಾ ಸಮಿತಿ ಸಭೆಕಾಸರಗೋಡು: ಸಿಪಿಎಂನ ಎರಡು ದಿನಗಳ ವಿಸ್ತೃತ ಜಿಲ್ಲಾ ಸಮಿತಿ ಸಭೆ  ನಿನ್ನೆ ಸಂಜೆ ನಡೆದ ಬೃಹತ್ ರ‍್ಯಾಲಿಯೊಂದಿಗೆ ಸಮಾಪ್ತಿಗೊಂಡಿತು. ರ‍್ಯಾಲಿಯಲ್ಲಿ ಜಿಲ್ಲೆಯಾದ್ಯಂತದಿಂದ ಆಗಮಿಸಿದ ಸಹಸ್ರಾರು ಸಿಪಿಎಂ ಕಾರ್ಯಕರ್ತರು ಭಾಗವಹಿಸಿದರು. ಬಳಿಕ ವಿದ್ಯಾನಗರದಲ್ಲಿ ನಡೆದ ಸಮಾರೋಪ ಸಭೆಯನ್ನು ಸಿಪಿಎಂ ಪೋಲಿಟ್ ಬ್ಯೂರೋ ಸದಸ್ಯ ಎ. ವಿಜಯ ರಾಘವನ್ ಉದ್ಘಾಟಿಸಿದರು. ಅವರು ಮಾತನಾಡಿ, ಜನದ್ರೋಹಿ ಆಡಳಿತದ ವಿರುದ್ಧ ಹೋರಾಟ ನಡೆಸುತ್ತಿರುವ ಕಮ್ಯೂನಿಸ್ಟ್ ಪಕ್ಷವನ್ನು ಸದ್ದಡಗಿಸಿ ಪರಾಜಯಗೊಳಿ ಸುವಂತೆ ಮಾಡುವ ಪ್ರಯತ್ನ ಎಂದೂ ಸಫಲವಾಗದು. ಇಂತಹ …