ಬಿಜೆಪಿಯಿಂದ ಕೂಡ್ಲುನಲ್ಲಿ ಅಶೋಕ್ ಶೆಟ್ಟಿ ಸಂಸ್ಮರಣೆ

ಕಾಸರಗೋಡು: ಬಿಜೆಪಿ ಸಕ್ರಿಯ ಕಾರ್ಯಕರ್ತ ಅಶೋಕ್ ಶೆಟ್ಟಿ ರಾಜಕೀಯ ವಿರೋಧಿಗಳ ಆಕ್ರಮಣಕ್ಕೆ ಬಲಿಯಾಗಿ 3೦ ವರ್ಷ ಸಂದಿದ್ದು, ಇಂತಹ ಯುವಕರ ದೃಢತೆ ಬಿಜೆಪಿಯನ್ನು ರಾಮದಾಸ್ ನಗರದಲ್ಲಿ ಬಲಿಷ್ಠಗೊಳಿಸಲು ಕಾರಣವಾಯಿತೆಂದು ಬಿಜೆಪಿ ಹಿರಿಯ ಕಾರ್ಯಕರ್ತ ಕೆ. ವಿಠಲ ಶೆಟ್ಟಿ ನುಡಿದರು. ಬಲಿದಾನಿ ಅಶೋಕ್ ಶೆಟ್ಟಿಯವರ 3೦ನೇ ವರ್ಷದ ಸಂಸ್ಮರಣೆ ಪ್ರಯುಕ್ತ ಕೂಡ್ಲು ರಾಮದಾಸ್ ನಗರದ ಬಿಜೆಪಿ ಸಮಿತಿ ಕಾರ್ಯಾಲಯದಲ್ಲಿ ಜರಗಿದ  ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಮಧೂರು ಪಂಚಾಯತ್ ಈಸ್ಟ್ ಸಮಿತಿ ಅಧ್ಯಕ್ಷ ಮಹೇಶ್ ಮಧೂರು ಅಧ್ಯಕ್ಷತೆ …

ಕುಂಬಳೆಯಲ್ಲಿ ಪಿ. ಮುರಳೀಧರನ್ ಹುತಾತ್ಮ ದಿನಾಚರಣೆ

ಕುಂಬಳೆ: ರಾಜಕೀಯ ವಿರೋಧಿಗಳಿಂದ ಕೊಲೆಗೀಡಾದ ಪಿ. ಮುರಳೀಧರನ್‌ರ ಹುತಾತ್ಮ ದಿನಾಚರಣೆಯಂಗವಾಗಿ ಕುಂಬಳೆ ಶಾಂತಿಪಳ್ಳ ಪೆಟ್ರೋಲ್ ಬಂಕ್ ಬಳಿ ಯುವಜನ ರ‍್ಯಾಲಿ, ಕುಂಬಳೆ ಪೇಟೆಯಲ್ಲಿ ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಡಿವೈಎಫ್‌ಐ ರಾಜ್ಯ ಜೊತೆ ಕಾರ್ಯದರ್ಶಿ ಕೆ. ಅನುಶ್ರೀ ಉದ್ಘಾಟಿಸಿದರು. ಬ್ಲೋಕ್ ಅಧ್ಯಕ್ಷ ಅಬ್ದುಲ್ ಮಜೀದ್ ಎಂ.ಎಚ್. ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಎಂ.ವಿ. ರತೀಶ್, ಜೊತೆ ಕಾರ್ಯದರ್ಶಿ ಸಾದಿಕ್ ಚೆರುಗೋಳಿ, ಉಪಾಧ್ಯಕ್ಷ ನಿಸಾರುದ್ದೀನ್ ಮಲಂಗರ, ಬ್ಲೋಕ್ ಕೋಶಾಧಿಕಾರಿ ಮನೀಷ ಎಂ., ಏರಿಯಾ ಕಾರ್ಯದರ್ಶಿ ಸಿ.ಎ. ಸುಬೈರ್ ಮಾತನಾಡಿದರು. ಬ್ಲೋಕ್ …

ಸಹ ಸಿಬ್ಬಂದಿಗಳಿಗೆ ಬಟ್ಟೆಗಳನ್ನು ವಿತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದ ಡಾ| ಜನಾರ್ದನ್ ನಾಯ್ಕ್

ಕಾಸರಗೋಡು: ಆಸ್ಪತ್ರೆಯ ಶುಚೀಕರಣ ಸಿಬ್ಬಂದಿಗಳು, ಕುಟುಂಬಶ್ರೀ ಕಾರ್ಯಕರ್ತೆಯರು ಹಾಗೂ ಸಹ ಸಿಬ್ಬಂದಿಗಳಿಗೆ  ಬಟ್ಟೆಗಳನ್ನು ವಿತರಿಸುವ ಮೂಲಕ ಕಾಸರಗೋಡು ಜನರಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ| ಜನಾರ್ದನ್ ನಾಯ್ಕ್ ಸಿ.ಎಚ್. ನಿನ್ನೆ ತಮ್ಮ ಹುಟ್ಟುಹಬ್ಬ ಆಚರಿಸಿದರು. ಜನರಲ್ ಆಸ್ಪತ್ರೆಯ ನರ್ಸಿಂಗ್ ಸೂಪರಿಂಟೆಂಡೆಂಟ್‌ರ ಸಾನಿಧ್ಯದಲ್ಲಿ ಈ ಬಟ್ಟೆಬರೆಗಳನ್ನು ವಿತರಿಸಲಾಯಿತು. ಇದು ಮಾತ್ರವಲ್ಲ ನೇತ್ರ ಶಸ್ತ್ರಕ್ರಿಗೊಳಗಾಗಿ ಚಿಕಿತ್ಸೆಯಲ್ಲಿರುವ ಬಡ ಕುಟುಂಬದ ರೋಗಿಗಳಿಗೆ  ಡಾ| ಜನಾರ್ದನ್ ನಾಯ್ಕ್ ಇದೇ ಸಂದರ್ಭದಲ್ಲಿ ಒಂದು ವರ್ಷದ ತನಕವಿರುವ ಔಷಧ ಸಾಮಗ್ರಿಗಳನ್ನು ಉಚಿತವಾಗಿ ನೀಡಿದರಲ್ಲದೆ, ಓರ್ವೆ ರೋಗಿಗೆ …

ಸಿಪಿಎಂ ಕಾಞಂಗಾಡ್ ಏರಿಯಾ  ಸಮಿತಿಯಿಂದ ಎಂ. ರಾಘವನ್ ಅಮಾನತು

ಕಾಸರಗೋಡು: ಕಾಞಂಗಾಡ್ ಏರಿಯಾ ಸಮಿತಿ ಸದಸ್ಯ ಎಂ. ರಾಘವನ್ ವಿರುದ್ಧ ಸಿಪಿಎಂ ಕ್ರಮ ಕೈಗೊಂಡಿದೆ. ಕಾಞಂಗಾಡ್ ಏರಿಯಾ ಸಮಿತಿಯಿಂದ  ಇವರನ್ನು ಹೊರಹಾಕಲಾಗಿದೆ. ಏರಿಯಾ ಸಮಿತಿಯಿಂದ ಹೊರ ಹಾಕಲಿರುವ ಕಾಞಂಗಾಡ್ ಏರಿಯಾ ಸಮಿತಿ ಸಭೆಯ ತೀರ್ಮಾನಕ್ಕೆ ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಸೆಕ್ರೆಟರಿಯೇಟ್ ಒಪ್ಪಿಗೆ ನೀಡಿದೆ. ರಾಘವನ್ ಪಕ್ಷಕ್ಕೆ ಕಳಂಕವುಂಟುಮಾಡುವ ರೀತಿಯ ಬಹಿರಂಗ ಪ್ರತಿಕ್ರಿಯೆಯನ್ನು ನಡೆಸಿರುವುದಾಗಿಯೂ ಇದು ಗೌರವಯುತ ಶಿಸ್ತು ಉಲ್ಲಂಘನೆಯಾಗಿದೆ ಎಂದು ಜಿಲ್ಲಾ ಕಾರ್ಯದರ್ಶಿ ಎಂ. ರಾಜಗೋಪಾಲನ್ ಸುದ್ಧಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಸೋಮವಾರ ಪ್ರತ್ಯೇಕ ಏರಿಯಾ ಸಮಿತಿ ಸಭೆ …

ಸಿಐಟಿಯು ಆಟೋ ಕಾರ್ಮಿಕರ  ಯೂನಿಯನ್‌ನಿಂದ ನಗರಸಭಾ ಮಾರ್ಚ್

ಕಾಸರಗೋಡು: ನಗರದ ನಾಯಕ್ಸ್ ರಸ್ತೆ ಸಹಿತ ನಗರಸಭಾ ವ್ಯಾಪ್ತಿಯ ಎಲ್ಲಾ ರಸ್ತೆಗಳನ್ನು ಸಂಚಾರಯೋಗ್ಯ ಗೊಳಿಸಬೇಕು, ಆಟೋರಿಕ್ಷಾಗಳಿಗೆ ನಿಲುಗಡೆ ಸೌಕರ್ಯ ಏರ್ಪಡಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಟೋ ಕಾರ್ಮಿಕರ ಯೂನಿಯನ್ ಸಿಐಟಿಯು ನಗರಸಭೆಗೆ ಮಾರ್ಚ್ ನಡೆಸಿತು. ಕಾಸರಗೋಡು ಡಿವಿಶನ್ ಸಮಿತಿ ನೇತೃತ್ವದಲ್ಲಿ ನಡೆದ ಮಾರ್ಚನ್ನು ಜಿಲ್ಲಾ ಜೊತೆ ಕಾರ್ಯದರ್ಶಿ ಎ.ಆರ್. ಧನ್ಯವಾದ್ ಉದ್ಘಾಟಿಸಿದರು. ರವಿ ಕೆ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಗಿರಿಕೃಷ್ಣನ್, ಶಾಫಿ ಚಾಲಕುನ್ನು, ಪಿ. ಕುಂಞಿರಾಮನ್, ಎನ್. ರಾಮನ್ ಮಾತನಾಡಿದರು. ವಿ. ರವೀಂದ್ರನ್ ಪೆರುಂಬಳ ಸ್ವಾಗತಿಸಿದರು.

ಬಿದ್ದು ಸಿಕ್ಕಿದ ಒಂದು ಪವನ್ ಚಿನ್ನಾಭರಣ ವಾರಸುದಾರರಿಗೆ ಹಸ್ತಾಂತರಿಸಿ ಮಾದರಿಯಾದ ವಿದ್ಯಾರ್ಥಿನಿ

ಸೀತಾಂಗೋಳಿ: ಬಿದ್ದು ಸಿಕ್ಕಿದ ಒಂದು ಪವನ್ ತೂಕದ ಚಿನ್ನದ ಬ್ರೇಸ್‌ಲೆಟ್ ಅದರ ವಾರಸುದಾರರಿಗೆ ಹಸ್ತಾಂತರಿಸಿ ಕಾಲೇಜು ವಿದ್ಯಾರ್ಥಿನಿ ಮಾದರಿಯಾಗಿದ್ದಾಳೆ. ಸೀತಾಂಗೋಳಿ ಮಾಲಿಕ್ ದೀನಾರ್ ಕಾಲೇಜಿನ ವಿದ್ಯಾರ್ಥಿನಿಯೂ ಕಾಸರಗೋಡು ತೆರುವತ್ತ್ ಅಡ್ಕತ್ತುವಳಪ್ಪಿನ ಶಂಸುದ್ದೀನ್ ಎಂಬವರ ಪುತ್ರಿ ರುಖಿಯತ್ ಸೌಸನ್ ಸಲವಿಯ ಮಾದರಿಯಾಗಿದ್ದಾರ. ಮೊನ್ನೆ ಸಂಜೆ  ಸೀತಾಂಗೋಳಿ ಪೇಟೆಯಲ್ಲಿ ವಿದ್ಯಾರ್ಥಿನಿಗೆ ಒಂದು ಪವನ್ ತೂಕದ ಬ್ರೇಸ್‌ಲೆಟ್ ಬಿದ್ದು ಸಿಕ್ಕಿತ್ತು.  ಈ ಬಗ್ಗೆ ಆಕೆ ಸೀತಾಂಗೋಳಿ ಪೇಟೆ ಯಲ್ಲಿರುವ  ಪೊಲೀಸ್ ಸಹಾಯ ಕೇಂದ್ರದಲ್ಲಿ ತಿಳಿಸಿ ಬಳಿಕ ಕುಂಬಳೆ ಪೊಲೀಸ್ ಠಾಣೆಗೆ ತಲುಪಿ …

ಕಾಸರಗೋಡು ನಗರದಲ್ಲಿ ರಸ್ತೆ ಅತಿಕ್ರಮಣ ವ್ಯಾಪಕ:ಅಶ್ವಿನಿನಗರದಲ್ಲಿ ಬೀದಿ ವ್ಯಾಪಾರದ ಭರಾಟೆ

ಕಾಸರಗೋಡು: ನಗರಸಭಾ ವ್ಯಾಪ್ತಿಯಲ್ಲಿ ರಸ್ತೆ ಅತಿಕ್ರಮಣಕ್ಕೆ ಯಾವುದೇ ಕಾರಣದಿಂದಲೂ ಅನುಮತಿ ನೀಡುವುದಿಲ್ಲವೆಂದು ನಗರಸಭೆ ಹಾಗೂ ಜನಪ್ರತಿನಿಧಿಗಳು ಪುನರಾವರ್ತಿಸುತ್ತಿರುವ ಮಧ್ಯೆ ಇದೇ ಪ್ರದೇಶದ ರಸ್ತೆ ಬದಿಗಳಲ್ಲಿ ಬೀದಿ ವ್ಯಾಪಾರಿಗಳ ಭರಾಟೆ ವ್ಯಾಪಕವಾಗುತ್ತಿದೆ. ಕಾಸರಗೋಡು ಹೊಸ ಬಸ್ ನಿಲ್ದಾಣದ ಹಾಗೂ ಕಾಸರಗೋಡು ನರ್ಸಿಂಗ್ ಹೋಂನ ಮಧ್ಯೆ ಗೂಡಂಗಡಿಗಳು ತಲೆಯೆತ್ತುತ್ತಿವೆ. ನಗರಸಭೆ ಅಧಿಕಾರಿಗಳು ಅಥವಾ ನೌಕರರು, ವಾರ್ಡ್ ಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳು ಈ ಭಾಗಕ್ಕೆ ದೃಷ್ಟಿಹರಿಸುತ್ತಿಲ್ಲವೆಂದು ಹೇಳ ಲಾಗುತ್ತಿದೆ. ನಗರಸಭೆ ಆಡಳಿತಾಧಿ ಕಾರಿಗಳು ಕಚೇರಿಯಲ್ಲಿ ಕುಳಿತು ನಗರಸಭಾ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ …

ಜ್ಯುವೆಲ್ಲರಿ  ಮಾಲಕ ನಿಧನ

ಕಾಸರಗೋಡು : ಬಟ್ಟಂಪಾರೆ ಶ್ರೀ ಕೃಷ್ಣ ಟಾಕೀಸ್ ಬಳಿಯ ನಿವಾಸಿ, ಹಿರಿಯ ಗುರುಸ್ವಾಮಿ, ಜ್ಯುವೆಲ್ಲರಿ ಮಾಲಕ ಕೆ. ವಿ ಪ್ರಭಾಕರ ಆಚಾರ್ಯ ಪೆರ್ಣೆ (75) ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಸೂರ್ಲು ನ ಉಷಾ ಚಂದ್ರ ಜ್ಯುವೆಲ್ಲರಿ ಮಾಲಕರಾಗಿದ್ದರು. ಗುರುಸ್ವಾಮಿ ಯಾದ ಇವರು ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಬಳಿಯ ಶ್ರೀ ಅಯ್ಯಪ್ಪ ಮಂದಿರ, ಕರಂದಕ್ಕಾಡ್ ಶ್ರೀ ವೀರ ಹನುಮಾನ್ ವ್ಯಾಯಾಮ ಶಾಲೆಯಲ್ಲಿ ನೂರಾರು ಮಂದಿಗೆ ಮಾಲಾಧಾರಣೆ ಮಾಡಿದ್ದರು.ಮೃತರು ಪತ್ನಿ ಹೇಮಾವತಿ, ಮಕ್ಕಳಾದ ಚಕ್ರೇಶ್ ಆಚಾರ್ಯ, ಉಷಾ …

ಲಕ್ಷ್ಮೀಯಮ್ಮ ನಿಧನ

ಪೆರ್ಲ: ವಾಣಿನಗರ ಬಳಿಯ ನೆಕ್ಕರೆಕಾಡು ನಿವಾಸಿ ದಿ| ಶಂಕರ ಕಡಂಬಳಿತ್ತಾಯರ ಪತ್ನಿ ಲಕ್ಷ್ಮೀಯಮ್ಮ (95) ನಿಧನ ಹೊಂದಿ ದರು. ಜನ್ಮತಾ ಒಂದೇ ಕಿಡ್ನಿಯನ್ನು ಹೊಂದಿದ್ದರು. ಮೃತರು ಮಕ್ಕಳಾದ ಸುಬ್ರಹ್ಮಣ್ಯ ಕಡಂಬಳಿತ್ತಾಯ (ಕೃಷಿಕ), ರಾಮಕೃಷ್ಣ ಕಡಂಬಳಿತ್ತಾಯ (ನಿವೃತ್ತ ಮುಖ್ಯೋಪಾಧ್ಯಾಯ), ಸೊಸೆಯಂದಿ ರಾದ ರತ್ನ, ಲೀಲಾ ಸರಸ್ವತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ದಾಮೋದರ ಆಚಾರ್ಯ ನಿಧನ

ನೀರ್ಚಾಲು: ಪೇರಾಲ್ ಕುಟುಂಬ ಸದಸ್ಯ ನೀರ್ಚಾಲಿನ ದಾಮೋದರ ಆಚಾರ್ಯ(88) ನಿಧನಹೊಂದಿದರು. ಮೃತರು ಪತ್ನಿ ಲಲಿತ, ಮಕ್ಕಳಾದ ಅಂಬಿಕ, ರಾಧಿಕ, ಮೋಹನ, ಹೇಮಚಂದ್ರ, ನವೀನ, ಅಳಿಯ-ಸೊಸೆಯಂದಿರಾದ ವಸಂತ ಆಚಾರ್ಯ, ಮಮತಾ, ಅಶ್ವಿನಿ, ರೂಪಲತಾ, ವಿನುತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಇನ್ನೋರ್ವೆ ಪುತ್ರಿ ಲತಾ, ಅಳಿಯ ಯಾದವ ಆಚಾರ್ಯ ಈ ಹಿಂದೆ ನಿಧನರಾಗಿದ್ದಾರೆ.