ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ವಾರ್ಷಿಕೋತ್ಸವ ಸಮಿತಿ ರೂಪೀಕರಣ

ಬದಿಯಡ್ಕ: ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ 18ನೇ ವರ್ಷದ ಆಚರಣೆ ಹಾಗೂ ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವದ ಯಶಸ್ಸಿಗಾಗಿ ಸಮಿತಿ ರೂಪೀಕರಣ ನಡೆಯಿತು. ಶ್ರೀ ಮಂದಿರದಲ್ಲಿ ಜರಗಿದ ಸಭೆಯನ್ನು ಧಾರ್ಮಿಕ ಮುಂದಾಳು ಹರಿನಾರಾಯಣ ಶಿರಂತಡ್ಕ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಧಾರ್ಮಿಕ ಕಾರ್ಯಗಳು ನಡೆದಷ್ಟು ನಮ್ಮ ಸಮಾಜವು ಒಂದುಗೂ ಡುತ್ತದೆ. ಎಲ್ಲರೂ ಜೊತೆಗೂಡಿ ಒಮ್ಮತದಿಂದ ದೇವರ ಕಾರ್ಯವನ್ನು ನೇರವೇರಿಸೋಣ ಎಂದರು. ನೂತನ ಸಮಿತಿಯ ಅಧ್ಯಕ್ಷರಾಗಿ ಉದ್ಯಮಿ ನಿತ್ಯಾನಂದ ಶೆಣೈ ಬದಿಯಡ್ಕ, ಕಾರ್ಯಾಧ್ಯಕ್ಷರಾಗಿ ಕುಂಬ್ಡಾಜೆ ಗ್ರಾಮಪಂಚಾಯಿತಿ ಉಪಾಧ್ಯಕ್ಷ …

ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಸ್ವಾಗತ ಸಮಿತಿ ಕಚೇರಿ ಉದ್ಘಾಟನೆ

ಕಾಸರಗೋಡು: ನವೆಂಬರ್ 24ರಿಂದ 28ರ ತನಕ ಪೆರಿಯ ಜಿಎಚ್‌ಎಸ್‌ಎಸ್‌ನಲ್ಲಿ ನಡೆಯಲಿರುವ ಜಿಲ್ಲಾ ಕಂದಾಯ ಶಾಲಾ ಕಲೋತ್ಸವದ ಸ್ವಾಗತಸಮಿತಿ ಕಚೇರಿಯನ್ನು ಪೆರಿಯಾದಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಶ್ರೀಧನ್ಯಾ ಸುರೇಶ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಶಾಲಾ ಕಲೋತ್ಸವದ ಲೋಗೊವನ್ನು ಇದೇ ಸಂದರ್ಭದಲ್ಲಿ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ನಿಧಿನ್‌ರಾಜ್ ಪ್ರಕಾಶನಗೈದರು. ಸ್ಮರಣಿಕಾ ಟೈಟಲ್ ಲಾಂಛನ ಪ್ರಕಾಶನವನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕೆ.ಕೆ. ಸೋಯಾ ನಿರ್ವಹಿಸಿದರು. 1987-88 ಎಸ್‌ಎಸ್‌ಎಲ್‌ಸಿ ಬ್ಯಾಚ್ ಪಬ್ಲಿಸಿಟಿ …

ಬೀಡಿ ಬ್ರಾಂಚ್‌ಗೆ ಹೋದ ವ್ಯಕ್ತಿ ನಾಪತ್ತೆ

ಉಪ್ಪಳ:  ವ್ಯಕ್ತಿಯೊಬ್ಬರು ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕಡಂಬಾರು ಚಾತಿಪಡ್ಪು ನಿವಾಸಿ ಇಬ್ರಾಹಿಂ (6೦) ನಾಪತ್ತೆಯಾದ ವ್ಯಕ್ತಿಯಾಗಿದ್ದಾರೆ. ಈ ಬಗ್ಗೆ ಇವರ ಪುತ್ರ ಮೊಯ್ದೀನ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಈ ತಿಂಗಳ 17ರಂದು ಬೆಳಿಗ್ಗೆ ಕಡಂಬಾರು ಮಸೀದಿ ಬಳಿಯಿರುವ  ಬೀಡಿ ಬ್ರಾಂಚ್‌ಗೆ ಇಬ್ರಾಹಿಂ ಬೀಡಿ  ಸಹಿತ ತೆರಳಿದ್ದರು. ಅನಂತರ ಮರಳಿ ಮನೆಗೆ ಬಂದಿಲ್ಲ.   ಇದರಿಂದ ವಿವಿಧೆಡೆ ಹುಡುಕಾಡಿದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲವೆಂದು ಪುತ್ರ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಶಂಪಾ ಪ್ರತಿಷ್ಠಾನದಿಂದ ಪೊಸಡಿಗುಂಪೆಯಲ್ಲಿ ಕೆ.ವಿ. ತಿರುಮಲೇಶ್, ಟಿ. ಕೇಶವ ಭಟ್ಟ, ಕೆ.ಟಿ.ಗಟ್ಟಿ ಸಾಹಿತಿ-ಸಾಹಿತ್ಯ ಸಂಸ್ಮರಣೆ ಅ.31ರಂದು

ಉಪ್ಪಳ: ಶಂಪಾ ಪ್ರತಿಷ್ಠಾನ ಬೆಂಗಳೂರು ಇದರ ಆಶ್ರಯದಲ್ಲಿ ಕೀರ್ತಿ ಶೇಷರಾದ ಪ್ರೊ. ಕೆ .ವಿ ತಿರುಮಲೇಶ್, ಪ್ರೊ.ಟಿ ಕೇಶವ ಭಟ್ಟ ಪ್ರೊ.ಕೆ.ಟಿ ಗಟ್ಟಿ ಸಾಹಿತಿ- ಸಾಹಿತ್ಯ- ಸಂಸ್ಮರಣಾ ಕಾರ್ಯಕ್ರಮ ಪೊಸಡಿ ಗುಂಪೆಯ ನಿಸರ್ಗಧಾಮದಲ್ಲಿ ಅ.31ರಂದು ನಡೆಯಲಿದೆ. ಕಾರ್ಯಕ್ರಮವನ್ನು ಬೆಳಗ್ಗೆ 1೦ ಗಂಟೆಗೆ ಹಿರಿಯ ವಿದ್ವಾಂಸ ಡಾ. ತಾಳ್ತಜೆ ವಸಂತಕುಮಾರ ಉದ್ಘಾಟಿಸುವರು. ಶಂಪಾ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ. ಪಿ. ಎನ್ ಮೂಡಿತ್ತಾಯ ಅಧ್ಯಕ್ಷತೆ ವಹಿಸುವರು.ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯ ಪ್ರಕಾಶ್ ನಾರಾಯಣ …

ಸಹಕಾರಿ ವಾರಾಚರಣೆ ರಾಜ್ಯ ಮಟ್ಟದ ಸಮಾರೋಪ ಕಾರ್ಯಕ್ರಮ ಇಂದಿನಿಂದ

ಕಾಸರಗೋಡು: 73ನೇ ಅಖಿಲ ಭಾರತ ಸಹಕಾರಿ ವಾರಾಚರಣೆಯ ರಾಜ್ಯ ಮಟ್ಟದ ಸಮಾರೋಪ ನವಂಬರ್ 2೦ರಂದು ಕಾಞಂಗಾಡ್‌ನಲ್ಲಿ ನಡೆಯಲಿದೆ. ಇದರ ಪ್ರಚಾರಾರ್ಥ ಕಾರ್ಯಕ್ರಮಗಳು ಇಂದು ಅಪರಾಹ್ನ 3 ಗಂಟೆಗೆ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಆರಂಭಗೊಳ್ಳಲಿದೆ. ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಪಿ. ನಿತಿನ್‌ರಾಜ್ ಉದ್ಘಾಟಿಸುವರು.  ಕೇರಳ ರಾಜ್ಯೋತ್ಸವ ದಿನದಂದು ಜಿಲ್ಲೆಯ ಆಯ್ದ 73 ಸಹಕಾರಿ ಸಂಘಗಳ ಪರಿಸರದಲ್ಲ ನೆನಪಿನ ಗಿಡಗಳನ್ನು ನೆಡಲಾಗುವುದು. ಇದರ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಹೊಸದುರ್ಗ ಸಹಕಾರಿ ಬ್ಯಾಂಕ್ ಪರಿಸರದಲ್ಲಿ ಮಾರ್ಕೆಟ್ ಫೆಡ್ ಚೆಯರ್‌ಮೆನ್  …

ಕೇರಳದಲ್ಲಿ ಬಹುಸಂಖ್ಯಾತರ ದೇವಾಲಯಗಳು, ಆರಾಧನಾ ಕೇಂದ್ರಗಳ ವಿರುದ್ಧ ಭಾರೀ ಪಿತೂರಿ ನಡೆಯುತ್ತಿದೆ- ರವೀಶ ತಂತ್ರಿ ಕುಂಟಾರು

ಜೋಡುಕಲ್ಲು: ಕೇರಳದಲ್ಲಿ ಬಹುಸಂಖ್ಯಾತ ಸಮುದಾಯದ ದೇವಾಲಯಗಳು ಹಾಗೂ ಆರಾಧನಾ ಕೇಂದ್ರಗಳ ವಿರುದ್ಧ ದೊಡ್ಡ ಮಟ್ಟದ ಪಿತೂರಿ ನಡೆಯುತ್ತಿದೆ. ಆಡಳಿತ ಪಕ್ಷದ ಹಿತಾಸಕ್ತಿಗೆ ತಕ್ಕಂತೆ ಬಹುಸಂಖ್ಯಾತ ಸಮುದಾಯದ ವಿರುದ್ಧ ಮಾತ್ರವೇ ಕ್ರಮ ಕೈಗೊಳ್ಳಲು ರಾಜ್ಯ ಮತ್ತು ಜಿಲ್ಲಾಡಳಿತಗಳು ಅತಿಯಾದ ಆತುರ ತೋರುತ್ತಿವೆ ಎಂದು ಜೋಡುಕಲ್ಲು ಶ್ರೀ ಗಣೇಶ ಮಂದಿರ ಸಂರಕ್ಷಣಾ ಕ್ರಿಯಾ ಸಮಿತಿಯ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಹೇಳಿದರು.ಕೇಶವ ಶಿಶು ಮಂದಿರದಲ್ಲಿ ನಿನ್ನೆ ಸಂಜೆ ನಡೆದ ಭಕ್ತಾದಿಗಳ, ಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಅವರು …