ಸಹಕಾರಿ ವಾರಾಚರಣೆಯ ರಾಜ್ಯ ಮಟ್ಟದ ಸಮಾರೋಪ ನಾಳೆ: ಮುಖ್ಯಮಂತ್ರಿ ಉದ್ಘಾಟನೆ

 ಕಾಸರಗೋಡು: 73ನೇ ಅಖಿಲ ಭಾರತ ಸಹಕಾರಿ ವಾರಾಚರಣೆಯ ರಾಜ್ಯ ಮಟ್ಟದ ಸಮಾರೋಪ ಸಮಾರಂಭ ನಾಳೆ ಹೊಸದುರ್ಗದ ಪಾಲೇಡಿಯಂ ಕನ್ವೆನ್ಶನ್ ಹಾಲ್‌ನಲ್ಲಿ ನಡೆಯಲಿದೆ. ಇದರಲ್ಲಿ 15೦೦ ಪ್ರತಿನಿಧಿಗಳು ಸೇರಿದಂತೆ ಸಹಕಾರಿ ವಲಯದ 25೦೦ ಮಂದಿ ಪಾಲ್ಗೊಳ್ಳುವರು. ನಾಳೆ ಬೆಳಿಗ್ಗೆ 1೦ ಗಂಟೆಗೆ ಆರಂಭಗೊಳ್ಳುವ ಸಮಾರೋಪ ಸಮಾರಂಭವನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್ ಉದ್ಘಾಟಿಸುವರು. ಸಹಕಾರಿ ಖಾತೆ ಸಚಿವ ಎಂ. ಲಿಜು ಅಧ್ಯಕ್ಷತೆ ವಹಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿರುವರು. ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿ ರುವ ಸಹಕಾರಿ ಕಾಲೇಜುಗಳು …

ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಸ್ಮಾರಕ ಕನ್ನಡ ಭವನ ಲೋಕಾರ್ಪಣೆ: ಸಮಾಲೋಚನಾ ಸಭೆ ಇಂದು

ಬದಿಯಡ್ಕ: ನಾಡೋಜ ಕವಿ ಡಾ. ಕಯ್ಯಾರ ಕಿಞ್ಞಣ್ಣ ರೈಯವರ ಸ್ಮರಣಾರ್ಥ ಬದಿಯಡ್ಕದಲ್ಲಿ ಕರ್ನಾಟಕ ಸರಕಾರದ ಗಡಿ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ನಿರ್ಮಿಸಲಾದ ಕನ್ನಡ ಭವನದ ಉದ್ಘಾಟನೆ ಈ ತಿಂಗಳ 3೦ರಂದು ನಡೆಯಲಿದೆ. ಈ ಕಾರ್ಯಕ್ರಮದ ಯಶಸ್ವಿಗೆ, ಪೂರ್ವಸಿದ್ಧತೆಗಾಗಿ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ ಇಂದು ಅಪರಾಹ್ನ 2 ಗಂಟೆಗೆ ಬದಿಯಡ್ಕ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಸಾಹಿತಿಗಳು, ಕಲಾವಿದರು, ಸಂಘಸಂಸ್ಥೆಗಳ …

ಮೆಡಿಕಲ್ ಕಾಲೇಜು ಒ.ಪಿ. ವಿಭಾಗ ಮೊಟಕುಗೊಳಿಸಲಿರುವ ಯತ್ನ ಪ್ರತಿಭಟನಾರ್ಹ-ಶಾಸಕ ಕಲ್ಲಟ್ರ

ಕಾಸರಗೋಡು: ಉಕ್ಕಿನಡ್ಕ ಸರಕಾರಿ ವೈದ್ಯಕೀಯ ಕಾಲೇಜ್‌ನಲ್ಲಿ ಮುನ್ನೆಚ್ಚರಿಕೆ ಇಲ್ಲದೆ ಹೊರರೋಗ ವಿಭಾಗ ಸೇವೆಯನ್ನು ನಿಲುಗಡೆಗೊಳಿಸಲು ಪ್ರಾಂಶುಪಾಲ ನಡೆಸಿದ ಯತ್ನ ಪ್ರತಿಭಟನಾರ್ಹವೆಂದು ಶಾಸಕ ಕಲ್ಲಟ್ರ ಮಾಹಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆರೋಗ್ಯ ಸಚಿವ ಕೆ. ಮುರಳೀಧರನ್ ಒಂದು ವಾರದ ಹಿಂದೆ ಮೆಡಿಕಲ್ ಕಾಲೇಜಿನಲ್ಲಿ ಭಾಗವಹಿಸಿದ ಸಭೆಯಲ್ಲಿ ಒ.ಪಿ. ಸೇವೆ ನಿಲುಗಡೆಗೊಳಿಸುವುದಿಲ್ಲ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರಾಂಶುಪಾಲ ಏಕಪಕ್ಷೀಯವಾಗಿ ಕ್ರಮ ಕೈಗೊಂಡಿರುವುದು ಅತ್ಯಂತ ನಿಗೂಢವಾಗಿದೆಯೆಂದು ಅವರು ದೂರಿದರು. ಸರಕಾರಕ್ಕೆ ತಿಳಿದು ಅಥವಾ ಅನುಮತಿ ರಹಿತವಾಗಿ ಈ ರೀತಿಯ ಕ್ರಮಕ್ಕೆ ತೊಡಗಿರುವುದು …

ಕುಂಬಳೆ ಪೇಟೆಯಲ್ಲಿ ಗೂಡಂಗಡಿಗಳ ಹಾವಳಿ:ಕಾಂಗ್ರೆಸ್  ಮಂಡಲ ಅಧ್ಯಕ್ಷರಿಂದ ಜಿಲ್ಲಾಧಿಕಾರಿಗೆ ದೂರು

ಕುಂಬಳೆ: ಕುಂಬಳೆ  ಪೇಟೆ ಜಂಕ್ಷನ್‌ನ ಕೆಎಸ್‌ಟಿಪಿ ರಸ್ತೆಯಲ್ಲಿ ಗೂಡಂಗಡಿಗಳಿಂದಾಗಿ ಪೇಟೆಯಲ್ಲಿ ಸಮಸ್ಯೆ ಸೃಷ್ಟಿಯಾಗಿದೆಯೆಂದು    ತಿಳಿಸಿ ಕಾಂಗ್ರೆಸ್ ಮಂಡಲ ಅಧ್ಯಕ್ಷ ರವಿ ಪೂಜಾರಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಅತೀ ಹೆಚ್ಚು ಜನ,  ವಾಹನ ಸಂದಣಿಯುಳ್ಳ ಈ ಜಂಕ್ಷನ್‌ನಲ್ಲಿ ಗೂಡಂಗಡಿಗಳು ಪದೇ ಪದೇ ತಲೆಯೆತ್ತುತ್ತಿವೆಯೆಂದು ದೂರಿನಲ್ಲಿ ತಿಳಿಸಲಾಗಿದೆ. ಪಂಚಾಯತ್ ಅಧಿಕಾರಿಗಳಿಗೆ,  ರಸ್ತೆ ವಿಭಾಗದ ಅಧಿಕಾರಿಗಳಿಗೆ ಹಾಗೂ ಲೋಕೋಪಯೋಗಿ ಇಲಾಖೆಗೆ ದೂರು ನೀಡಿದ್ದರೂ ಸ್ಥಳ ಅತಿಕ್ರಮಿಸಿ ನಿರ್ಮಿಸಿದ ಬೀದಿ ವ್ಯಾಪಾರಕ್ಕೆ ವಿದ್ಯುತ್ ಸಂಪರ್ಕ ಕೂಡಾ ನೀಡಲಾಗಿದೆಯೆಂದು ರವಿ  ಪೂಜಾರಿ ಆರೋಪಿಸಿದ್ದಾರೆ. ಬೀದಿ …

ಬದಿಯಡ್ಕ ಮಂಡಲ ಕಾಂಗ್ರೆಸ್‌ನಿಂದ ಇಂದಿರಾಗಾಂಧಿ ಜನ್ಮ ದಿನಾಚರಣೆ

ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿಯವರ 109ನೇ ಜನ್ಮ ದಿನಾಚರಣೆ ಬದಿಯಡ್ಕದಲ್ಲಿ ನಡೆಯಿತು. ಹಿರಿಯ ಕಾಂಗ್ರೆಸ್ ನೇತಾರ ಚಂದ್ರಹಾಸ ರೈಯವರು ಇಂದಿರಾಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ಉದ್ಘಾಟಿಸಿದರು.  ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಜನಪ್ರತಿನಿಧಿಗಳಾದ ಗಂಗಾಧರ ಗೋಳಿಯಡ್ಕ, ಅಶ್ವತಿ ಅಶೋಕನ್, ನೇತಾರರಾದ ತಿರುಪತಿ ಕುಮಾರ್ ಭಟ್, ಕುಮಾರನ್ ನಾಯರ್, ಚಂದ್ರಹಾಸನ್ ಮಾಸ್ತರ್, ರಾಮ ಪಟ್ಟಾಜೆ, ಶ್ರೀನಾಥ್ ಬದಿಯಡ್ಕ, ಶಾಫಿ ಗೋಳಿಯಡ್ಕ, ಕೃಷ್ಣದಾಸ್, ನಿರಂಜನ ರೈ, ರವಿ …

ಕಂಬಾರು ಸುಬ್ರಹ್ಮಣ್ಯ ಭಟ್ ನಿಧನ

ನೀರ್ಚಾಲು: ಇಲ್ಲಿಗೆ ಸಮೀಪದ ಚುಕ್ಕಿನಡ್ಕ ನಿವಾಸಿ ಕಂಬಾರು ಸುಬ್ರಹ್ಮಣ್ಯ ಭಟ್ (83) ನಿನ್ನೆ ನಿಧನ ಹೊಂದಿದರು. ಹಿರಿಯ ಯಕ್ಷಗಾನ ಕಲಾವಿದರಾಗಿ ದ್ದರು. ಮೃತರು ಪತ್ನಿ ಸುಮತಿ, ಮಕ್ಕಳಾದ ಉದಯ ಕಂಬಾರು (ಸ್ಟುಡಿಯೋ ನೀರ್ಚಾಲು), ಶ್ರೀಪತಿ ಕಂಬಾರು (ಬಟ್ಟೆಬರೆ ವ್ಯಾಪಾರಿ ನೀರ್ಚಾಲು), ಸುರೇಶ ಕಂಬಾರು, ಸೊಸೆಯಂದಿರಾದ ಮಧುಮತಿ, ಭಾಗ್ಯಲಕ್ಷ್ಮಿ, ಗೀತಾ ಲಕ್ಷ್ಮಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.  

ಪ್ರವಾಸ ಹೊರಟ ಬಸ್‌ಗೆ ಅನುಮತಿ ನಿರಾಕರಿಸಿದ ಆರ್‌ಟಿಒ ವಿದ್ಯಾರ್ಥಿಗಳಿಗೆ ನಿರಾಶೆ ಮೂಡಿಸಿದ ಕ್ರಮಕ್ಕೆ ಶಾಸಕರ ಮಧ್ಯಸ್ಥಿಕೆಯಿಂದ ಪರಿಹಾರ

ಕಾಸರಗೋಡು: ಪ್ರವಾಸಕ್ಕೆ ತೆರಳಬೇಕಾಗಿದ್ದ ಟೂರಿಸ್ಟ್ ಬಸ್‌ಗಳನ್ನು ಎಂವಿಡಿ ತಡೆ ಹಿಡಿದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರವಾಸ ಮೊಟಕಾಗಬಹುದೆಂಬ ಸ್ಥಿತಿಗೆ ತಲುಪಿದಾಗ ಜನಪ್ರತಿನಿಧಿಗಳು, ಶಾಸಕ ಮಧ್ಯ ಪ್ರವೇಶಿಸಿ ಸಮಸ್ಯೆಗೆ ತುರ್ತು ಪರಿಹಾರ ಕಂಡುಕೊಂಡರು. ನಿನ್ನೆ ಮಧ್ಯಾಹ್ನ ವೆಳ್ಳರಿಕುಂಡ್‌ನಲ್ಲಿ ನಾಟಕೀಯ ಘಟನೆಗಳು ಜರಗಿದೆ. ಸೈಂಟ್ ಜುಡ್ಸ್ ಹೈಯರ್ ಸೆಕೆಂಡರಿ ಶಾಲೆಯ 1೦೦ರಷ್ಟು ವಿದ್ಯಾರ್ಥಿಗಳೊಂ ದಿಗೆ ಅಧ್ಯಾಪಕರು ಕರ್ನಾಟಕಕ್ಕೆ  ಪ್ರವಾಸ ತೆರಳಲು ಯೋಜನೆ ಹಾಕಿ ದ್ದರು. ಇದಕ್ಕಾಗಿ ಮಿನಿ ಬಸ್  ಹಾಗೂ ಟೂರಿಸ್ಟ್ ಬಸ್‌ಗಳ ದಾಖಲೆಗಳು ಹಾಗೂ ಇತರ ವಿವರಗಳನ್ನು ಕಳೆದ …