ಕುಂಬಳೆಯಲ್ಲಿ ಫೇಸ್ ಕ್ರೀಮ್ ವಿತರಣೆ ಕಂಪೆನಿಯ ಕಚೇರಿಗಳನ್ನು ಮುಚ್ಚಿ ನೌಕರರು ಪರಾರಿ: ಗುಪ್ತಚರ ವಿಭಾಗದಿಂದ ತನಿಖೆ ಆರಂಭ
ಕುಂಬಳೆ: ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ನಕಲಿ ಸೌಂದರ್ಯವರ್ಧಕಗಳ ವಿರುದ್ಧ ಸರಕಾರ ಕ್ರಮ ತೀವ್ರಗೊಳಿಸಿದ ಬೆನ್ನಲ್ಲೇ ಕುಂಬಳೆಯಲ್ಲಿ ಫೇಸ್ ಕ್ರೀಮ್ ವಿತರಣೆ ಕಂಪೆನಿಯ ಕಚೇರಿಗಳನ್ನು ಮುಚ್ಚಿ ನೌಕರರು ಪರಾರಿಯಾಗಿದ್ದಾರೆ. ಕುಂಬಳೆ ಶಾಲೆ ರಸ್ತೆಯ ವ್ಯಾಪಾರ ಸಮುಚ್ಛಯದಲ್ಲಿ ಕಾರ್ಯಾಚರಿಸುತ್ತಿದ್ದ ಆರರಷ್ಟು ಕಚೇರಿಗಳನ್ನು ಮುಚ್ಚುಗಡೆಗೊಳಿಸಲಾಗಿದೆ. ಈ ಬಗ್ಗೆ ಗುಪ್ತಚರ ವಿಭಾಗ ತನಿಖೆ ಆರಂಭಿಸಿದೆ. ಶನಿವಾರ ಸಂಜೆ ವೇಳೆ ಕಟ್ಟಡದ ಎರಡು ಅಂತಸ್ತುಗಳಲ್ಲಿ ಕಾರ್ಯಾಚರಿಸುತ್ತಿದ್ದ ಕಚೇರಿಗಳನ್ನು ಮುಚ್ಚಲಾಗಿದೆ. ಕಚೇರಿಯ ಹೊಣೆಗಾರಿಕೆಯುಳ್ಳವರು ಶುಕ್ರವಾರ ರಾತ್ರಿ ತಲುಪಿ ಸಂಸ್ಥೆಯ ಬೋರ್ಡ್‌ಗಳ ಸಹಿತ ಕಳಚಿ ತೆಗೆದಿರುವುದಾಗಿ ಮಾಹಿತಿಯಿದೆ. …