36 ಡಿಗ್ರಿಗಿಂತಲೂ ಮೇಲೇರಿದ ತಾಪಮಾನ: ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ತಾಪಮಾನ  ಮಟ್ಟ ೩೬ ಡಿಗ್ರಿಗಿಂತಲೂ ಮೇಲೇರಿದ್ದು ಅದರಿಂ ದಾಗಿ ಕೇಂದ್ರ ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.  ಮಾತ್ರವಲ್ಲ ಈ ಬಗ್ಗೆ ಜಾಗ್ರತಾ ನಿರ್ದೇಶವನ್ನೂ ನೀಡಿದೆ.

ಜಿಲ್ಲೆಯ ಮುಳಿಯಾರು, ಮಡಿಕೈ ಪಾಣತ್ತೂರು ಮತ್ತು ಪಿಲಿಕ್ಕೋಡು ಪಿಲಿಕ್ಕೋಡಿನಲ್ಲಿರುವ ಆಟೋ ಮ್ಯಾಟಿಕ್ ವೆದರ್ ಸ್ಟೇಶನ್‌ನಲ್ಲಿ ಈ  ತಾಪಮಾನ ಮಟ್ಟ 37 ಡಿಗ್ರಿಗೂ ಮೇಲೇರಿರುವುದನ್ನು ಗುರುತಿಸಲಾ ಗಿದೆ. ಮಾರ್ಚ್ 29ರ ತನಕ ಜಿಲ್ಲೆಯಲ್ಲಿ ಸಾಧಾರಣ ಮಟ್ಟಕ್ಕಿಂತ ತಾಪಮಾನದಲ್ಲಿ ಇನ್ನೂ 2ರಿಂದ 4 ಡಿಗ್ರಿಯಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದು  ಸೂರ್ಯತಾಪ, ನಿರ್ಜಲೀಕರಣ, ಸೂರ್ಯಾಘಾತ ಇತ್ಯಾದಿ ಗಂಭೀರ ಆರೋಗ್ಯ ಸಮಸ್ಯೆಗೂ ದಾರಿಮಾಡಿಕೊ ಡಲಿದೆ. ಆದ್ದರಿಂದ ಜನರು ಬೆಳಿಗ್ಗೆ ೧೧ರಿಂದ ಅಪರಾಹ್ನ 3 ಗಂಟೆ ತನಕದ ಅವಧಿಯಲ್ಲಿ ಯಾರೂ ಬಿಸಿಲಲ್ಲಿ ನಡೆಯಬಾರದು.  ಇದರಲ್ಲ್ಲೂ ವಿಶೇಷ ವಾಗಿ ಗರ್ಭಿಣಿ ಯರು, ಮಕ್ಕಳು, ವಿಕಲ ಚೇತನರು, ವಯೋ ಜನರು ಮತ್ತು ಶಯ್ಯಾವಸ್ಥೆ ಯಲ್ಲಿರು ವವರು ಈಬಗ್ಗೆ ಹೆಚ್ಚಿನ ಗಮನ  ಹರಿಸಬೇಕೆಂದು  ಆರೋಗ್ಯ ಇಲಾಖೆ ಯಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. ಇಂತಹ ಸಮಯದಲ್ಲಿ ಬಾಯಾರಿಕೆ ಇಲ್ಲದಿದ್ದರೂ ಪದೇ ಪದೇ ನೀರು ಕುಡಿಯಬೇಕು. ಮದ್ಯ, ಕಾಫಿ, ಚಹಾ, ಕಾರ್ಬೋನೇಟೆಡ್ ಪಾನೀ ಯಗಳ ಸೇವನೆಯನ್ನು ಹಗಲು ವೇಳೆ ಹೊರತುಪಡಿಸುವುದು ಸೂಕ್ತವಾ ಗಿದೆ. ತೆಳ್ಳಗಿನ ಬಟ್ಟೆ ಧರಿಸಬೇಕು. ಪಾದರಕ್ಷೆಯನ್ನು ಧರಿಸಬೇಕೆಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page