42 ವರ್ಷದಿಂದ ಇಚ್ಲಂಗೋಡು ಕಲ್ಪಾರದಲ್ಲಿ ಕಾರ್ಯಾಚರಿಸುತ್ತಿದ್ದ ಮೋಟಾರ್‌ನ ಫ್ಯೂಸ್ ತೆಗೆದ ಕೆಎಸ್‌ಇಬಿ: 500 ಎಕ್ರೆ ಸ್ಥಳದ ಕೃಷಿಗೆ ಸಮಸ್ಯೆ

ಕುಂಬಳೆ: ೫೦೦ ಎಕ್ರೆಗೂ ಅಧಿಕ ಸ್ಥಳದಲ್ಲಿ ಕಳೆದ ೪೨ ವರ್ಷದಿಂದ ಕೃಷಿ ಮಾಡಲು  ನೀರಾವರಿಗಾಗಿ ಉಪಯೋಗಿಸುತ್ತಿದ್ದ ಮೋಟರ್‌ನ ಫ್ಯೂಸ್ ಐದು ದಿನದ ಹಿಂದೆ ಕೆಎಸ್‌ಇಬಿ ತೆಗೆದಿದೆ. ಇದರಿಂದಾಗಿ ಇಚ್ಲಂಗೋಡು, ಕಲ್ಪಾರ, ಪಚ್ಚಬಂಳ, ಉಳುವಾರು, ಬಂಬ್ರಾಣಬೈಲು ಮೊದಲಾದ ಸ್ಥಳಗಳಲ್ಲಿ ನಡೆಸಿರುವ ಕೃಷಿಗಳು ಈಗ ಒಣಗಲು ಆರಂಭಿಸಿವೆ. ಇಚ್ಲಂಗೋಡು, ಪಚ್ಚಂಬಳ, ಕಲ್ಪಾರದಲ್ಲಿ ಸ್ಥಾಪಿಸಿದ್ದ ಮೋಟಾರ್ ಉಪಯೋಗಿಸಿ ಶಿರಿಯಾ ಹೊಳೆಯಿಂದ ನೀರನ್ನು ಪಂಪ್ ಮಾಡಿ ಅದನ್ನು ಚರಂಡಿ ಮೂಲಕ ಈ ಪ್ರದೇಶಗಳ ಕೃಷಿ ಅಗತ್ಯಕ್ಕೆ ಉಪಯೋಗಿಸಲಾಗುತ್ತಿತ್ತು. ೪೨ ವರ್ಷದಿಂದ ಪಂಪಿಂಗ್‌ಗೆ ಬೇಕಾಗಿ ಬರುತ್ತಿರುವ ವಿದ್ಯುತ್ ದರವನ್ನು ಸರಕಾರ ಹಾಗೂ ಕೃಷಿ ಭವನ ನೀಡುತ್ತಿತ್ತು. ಈಗ ನೌಕರರು ಹಾಗೂ ಸರಕಾರದ ಮಧ್ಯೆ ಉಂಟಾಗಿರುವ ಆರ್ಥಿಕ ಸಂದಿಗ್ಧತೆ ಯಿಂದಾಗಿ ಕೃಷಿಗೆ ಅಗತ್ಯವಾಗಿರುವ ಉಚಿತ ವಿದ್ಯುತ್ತನ್ನು ಮೊಟಕುಗೊಳಿ ಸಲಾಗಿದೆ ಎಂದು ಹೇಳಲಾಗುತ್ತಿದೆ. ಭತ್ತ, ತೆಂಗು, ಕಂಗು ಸಹಿತ ವಿವಿಧ ರೀತಿಯ ತರಕಾರಿ ಕೃಷಿಯನ್ನು ಈ ಪ್ರದೇಶದ ಜನರು ಕೈಗೊಳ್ಳುತ್ತಿದ್ದಾರೆ. ಬಿಸಿಲಿನ ಧಗೆ ಹೆಚ್ಚಿ ನೀರಾವರಿಯು ಮೊಟಕುಗೊಂಡ ಕೃಷಿ ನಾಶವಾಗಲಿದೆ ಎಂಬುದು ಖಚಿತವಾಗಿದೆ. ಇದರಿಂದ ಸ್ಥಳೀಯರ ಬದುಕಿನ ದಾರಿಯೇ ಇಲ್ಲದಾಗಬಹುದೆಂದು ಆತಂಕ ಪಡಲಾಗಿದೆ.

Leave a Reply

Your email address will not be published. Required fields are marked *

You cannot copy content of this page