5.12 ಲಕ್ಷ ಆದ್ಯತಾ ಕಾರ್ಡ್ ಸದಸ್ಯರಿಗೆ ರೇಶನ್ ನಷ್ಟಹೊಂದುವ ಸಾಧ್ಯತೆ
ತಿರುವನಂತಪುರ: ಆದ್ಯತಾ ವಿಭಾಗಕ್ಕೆ ಸೇರಿದ ಹಳದಿ ಮತ್ತು ಪಿಂಕ್ ಕಾರ್ಡ್ಗಳಲ್ಲಿ ಸದಸ್ಯರಾಗಿರುವವರ ಪೈಕಿ 5.12 ಲಕ್ಷ ಮಂದಿ ಇನ್ನೂ ಮಸ್ಟರಿಂಗ್ ನಡೆಸದೇ ಇರುವ ಕಾರಣದಿಂದಾಗಿ ಅವರಿಗೆ ರೇಶನ್ ನಷ್ಟಹೊಂದುವ ಸಾಧ್ಯತೆ ಇದೆ. ಮಸ್ಟರಿಂಗ್ ನಡೆಸಲು ಕೇಂದ್ರ ಸರಕಾರ ನೀಡಿದ ಸಮಯ ವ್ಯಾಪ್ತಿ ಈಗಾಗಲೇ ಕೊನೆಗೊಂಡಿದೆ. ಅದನ್ನು ಮತ್ತೆ ವಿಸ್ತರಿಸುವಂತೆ ಮಾಡುವ ಪ್ರಯತ್ನದಲ್ಲೂ ಕೇರಳ ಸರಕಾರ ಇನ್ನೊಂದೆಡೆ ತೊಡಗಿದೆ.
ಆದ್ಯತಾ ವಿಭಾಗಕ್ಕೊಳಪಟ್ಟ ರೇಶನ್ ಕಾರ್ಡ್ಗಳಲ್ಲಿ ಸದಸ್ಯರಾಗಿ ರುವವರ ಪೈಕಿ ಶೇ. 96.40ರಷ್ಟು ಮಂದಿ ಮಾತ್ರವೇ ಮಸ್ಟರಿಂಗ್ ನಡೆಸಿದ್ದಾರೆ. ಈ ವಿಭಾಗದಲ್ಲಿ ಒಟ್ಟು 1,42,27,292 ಸದಸ್ಯರಿದ್ದು, ಆ ಪೈಕಿ 1,37,15,142 ಮಂದಿ ಮಾತ್ರವೇ ಮಸ್ಟರಿಂಗ್ ನಡೆಸಿದ್ದಾರೆ. ಇದರ ಹೊರತಾಗಿ ಉದ್ಯೋಗ ಶಿಕ್ಷಣದ ಅಗತ್ಯಕ್ಕಾಗಿ ಕೇರಳದಿಂದ ಹೊರಗೆ ವಾಸಿಸುತ್ತಿರುವ 11 ಲಕ್ಷ ಮಂದಿಗೆ ಎನ್ಆರ್ಕೆ ಸ್ಟಾಟಸ್ ನೀಡಿ ಅವರನ್ನು ಹಳದಿ ಮತ್ತು ಪಿಂಕ್ ಕಾರ್ಡ್ಗಳ ಸದಸ್ಯರನ್ನಾಗಿ ಉಳಿಸಿಕೊಳ್ಳಲಾಗಿದೆ. ಇಂತಹವರು ಮಸ್ಟರಿಂಗ್ ನಡೆಸಿದಲ್ಲಿ ಅವರಿಗೆ ಅಂದಿನಿAದ ರೇಶನ್ ಸಾಮಗ್ರಿಗಳನ್ನು ವಿತರಿಸಲಾಗುವುದೆಂದು ಸಚಿವ ಜಿ.ಆರ್. ಅನಿಲ್ ತಿಳಿಸಿದ್ದಾರೆ.