6.96 ಕೋಟಿ ರೂ.ಗಳ ಖೋಟಾನೋಟು ಪ್ರಕರಣ : ವಯನಾಡಿನಿಂದ ಇಬ್ಬರ ಸೆರೆ; ವಿಚಾರಣೆ ತೀವ್ರ

ಕಾಸರಗೋಡು: ಹೊಸದುರ್ಗ ಸಮೀಪದ ಅಂಬಲತ್ತರ ಪಾರಪಳ್ಳಿ ಗುರುಪುರದ ಬಾಡಿಗೆ ಮನೆಯಲ್ಲಿ ಈತಿಂಗಳ ೨೦ರಂದು ರಾತ್ರಿ ಪತ್ತೆಹಚ್ಚಲಾದ 2000 ರೂ. ಮುಖಬೆಲೆಯ 6.96 ಕೋಟಿ ರೂ.ಗಳ ಖೋಟಾನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಯನಾಡಿನಿಂದ ಅಲ್ಲಿನ ಪೊಲೀಸರ ಸಹಾಯದೊಂದಿಗೆ ಅಂಬಲತ್ತರ ಪೊಲೀಸರು ಬಂಧಿಸಿ ದ್ದಾರೆ.  ಬಂಧಿತರನ್ನು ಅಲ್ಲಿಂದ ಇಂದು ಮುಂಜಾನೆ ೪.೩೦ಕ್ಕೆ ಅಂಬಲತ್ತರ ಪೊಲೀಸ್ ಠಾಣೆಗೆ ತರಲಾಗಿದ್ದು, ಅಲ್ಲಿ ಅವರನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ.

ಕಾಸರಗೋಡು ಪೆರಿಯಾ ಸಿ.ಎಚ್. ಹೌಸ್‌ನ ಅಬ್ದುಲ್ ರಜಾಕ್ (೪೯) ಮತ್ತು ಮೂಲತಃ ಕರ್ನಾಟಕದ ಪುತ್ತೂರು ನಿವಾಸಿ ಹಾಗೂ ಈಗ ಬೇಕಲ ಸಮೀಪದ ಮೌವ್ವಲ್ ಪರಂಡಾನ ವೀಟಿಲ್‌ನಲ್ಲಿ ವಾಸಿಸುವ ಸುಲೈಮಾನ್ (೫೨) ಬಂಧಿತರಾದ ಆರೋಪಿಗಳಾಗಿದ್ದಾರೆ.  ಖೋಟಾ ನೋಟುಗಳನ್ನು ಪೊಲೀಸರು ಪತ್ತೆಹಚ್ಚಿದ ದಿನದಿಂದ ಈ ಇಬ್ಬರು ಊರಿನಿಂದ ತಪ್ಪಿಸಿ ಕೊಂಡು  ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿಯ ರಿಸೋರ್ಟ್ ವೊಂದರಲ್ಲಿ ವಾಸಿಸುತ್ತಿದ್ದರು. ಅವರ ಮೊಬೈಲ್ ಫೋನ್‌ಗಳು ಅಂದಿನಿಂದ ಸ್ವಿಚ್ ಆಫ್‌ಗೊಂಡ ಸ್ಥಿತಿಯಲ್ಲಿತ್ತು. ಈ ಇಬ್ಬರು ಸುಲ್ತಾನ್ ಬತ್ತೇರಿಯಲ್ಲಿರು ವುದಾಗಿ  ಅಂಬಲತ್ತರ ಪೊಲೀಸರಿಗೆ ಲಭಿಸಿದ ಮಾಹಿತಿ ಯಂತೆ   ಸುಲ್ತಾನ್ ಬತ್ತೇರಿ ಠಾಣೆಯ ಇನ್‌ಸ್ಪೆಕ್ಟರ್ ಬೈಜು ಕೆ ಜೋನ್ ನೇತೃತ್ವದ ಪೊಲೀಸರು ನಡೆಸಿದ ಸಕಾಲಿಕ ಕಾರ್ಯಾಚರಣೆಯಲ್ಲಿ ಈ ಇಬ್ಬರನ್ನು  ಅಲ್ಲಿಂದ ಬಂಧಿಸುವಲ್ಲಿ ಸಫಲರಾಗಿದ್ದಾರೆ. ನಂತರ ಅಂಬಲತ್ತರ ಪೊಲೀಸರು ಸುಲ್ತಾನ್ ಬತ್ತೇರಿಗೆ ಸಾಗಿ ಬಂಧಿತರನ್ನು ನಿನ್ನೆ ರಾತ್ರಿ ಅಂಬಲತ್ತರ ಪೊಲೀಸ್ ಠಾಣೆಗೆ ತಲುಪಿಸಿದ್ದಾರೆ. ಆರೋಪಿಗಳನ್ನು ಈಗ ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದ್ದು, ಆ ಬಳಿಕವಷ್ಟೇ ಈ ಖೋಟಾನೋಟು ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಲಿದೆ. ಈ ಖೋಟಾ ನೋಟುಗಳನ್ನು ವಿದೇಶದಲ್ಲಿ ಮುದ್ರಿಸಲಾಗಿದೆಯೇ ಎಂಬವುದನ್ನು ತಿಳಿದುಕೊಳ್ಳಲು ಪೊಲೀಸರು ವಿಶೇಷ ಗಮನಹರಿಸುತ್ತಿದ್ದಾರೆ. ಒಂದು ವೇಳೆ ಈ ಖೋಟಾನೋಟುಗಳನ್ನು ವಿದೇಶದಲ್ಲಿ ಮುದ್ರಿಸಿರುವುದಾಗಿ ಸಾಬೀತುಗೊಂಡಲ್ಲಿ ಈ ಪ್ರಕರಣದ ಅಂತಾರಾಷ್ಟ್ರೀಯ ನಂಟು ಕೂಡಾ ಬಯಲುಗೊಳ್ಳಲಿ ದೆಯೆಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ವಶಪಡಿಸಿದ ಖೋಟಾ ನೋಟುಗಳಲ್ಲಿ ೨೦೦೦ ರೂ. ಮುಖಬೆಲೆಯ ಒಟ್ಟು ೩೪,೮೦೦ ನೋಟುಗಳು ಒಳಗೊಂಡಿವೆ. ಇದನ್ನು  ಅಂಬಲತ್ತರ ಗುರುಪುರದ  ಬಾಡಿಗೆ ಮನೆಯಲ್ಲಿ ಬಚ್ಚಿಡಲಾಗಿತ್ತು.  ಬಂಧಿತರಾದ ಆರೋಪಿಗಳ ಪೈಕಿ ಅಬ್ದುಲ್ ರಜಾಕ್‌ರ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದನೆಂದು ಪೊಲೀಸ್ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಪೊಲೀಸ್ ತನಿಖ ಮುಂ ದುವರಿಯುತ್ತಿದೆ.

Leave a Reply

Your email address will not be published. Required fields are marked *

You cannot copy content of this page