ಕಾಸರಗೋಡು ಸಹಿತ ಆರು ಜಿಲ್ಲೆಗಳಿಗೆ ಎರಡು ತಿಂಗಳುಗಳಲ್ಲಿ ತಲುಪಿರುವುದು 264 ಕೋಟಿ ರೂ. ಹವಾಲಾ ಹಣ

ಕಾಸರಗೋಡು: ಕಾಸರಗೋಡು ಸೇರಿದಂತೆ ರಾಜ್ಯದ ಆರು ಜಿಲ್ಲೆಗಳಲ್ಲಿ ಕಳೆದ ಎರಡು ತಿಂಗಳಲ್ಲಿ 264 ಕೋಟಿ ರೂ.ಗಳ ಹವಾಲಾ ಹಣ ವ್ಯವಹಾರ ನಡೆದಿದೆ ಎಂಬ ಕಳವಳಕಾರಿ ಮಾಹಿತಿ ರಾಜ್ಯ ಗುಪ್ತಚರ ವಿಭಾಗಕ್ಕೆ ಲಭಿಸಿದೆ.

ಕಾಸರಗೋಡು, ಕಣ್ಣೂರು, ಮಲಪ್ಪುರಂ, ತ್ರಿಶೂರು, ಕಲ್ಲಿಕೋಟೆ ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ ಈ ಹವಾಲಾ ವ್ಯವಹಾರ ನಡೆದಿದೆ. ಹೀಗೆ ಇಲ್ಲಿಗೆ ಹರಿದು ಬಂದಿರುವ  ಹಣ ವಿವಿಧ ರಾಜ್ಯಗಳ ನಂಟು ಹೊಂದಿರುವ ಮಾಹಿತಿಯೂ ಗುಪ್ತಚರ ಇಲಾಖೆಗೆ ಲಭಿಸಿದ್ದು, ಆ ಹಿನ್ನೆಲೆಯಲ್ಲಿ ಈ ಬಗ್ಗೆ ಕೇಂದ್ರ ಗುಪ್ತಚರ ವಿಭಾಗಗಳೂ ಇನ್ನೊಂದೆಡೆ ತನಿಖೆ ಆರಂಭಿಸಿವೆ. ಈ ರೀತಿಯಲ್ಲಿ ಹವಾಲಾ ಹಣ ರಾಜ್ಯಕ್ಕೆ ಹರಿದು ಬರುತ್ತಿರುವುದು ವರದಿಯಾದ ಹಿನ್ನೆಲೆಯಲ್ಲಿ ತಲಪಾಡಿಯಲ್ಲಿ ಕರ್ನಾಟಕ ಪೊಲೀಸರು ವಾಹನ ತಡೆದು ನಿಲ್ಲಿಸಿ ತಪಾಸಣೆ  ಆರಂಭಿಸಿ ದ್ದಾರೆ. ಚುನಾವಣೆ ಕಾಲದಲ್ಲಿ ಈ ರೀತಿಯಲ್ಲಿ ತಪಾಸಣೆ ಸಾಮಾನ್ಯವಾ ಗಿದೆ. ಆದರೆ ಈ ಬಾರಿ ಚುನಾವಣೆಗೆ ಒಂದು ತಿಂಗಳ ಮೊದಲೇ ಈ ಕಾರ್ಯಾ ಚರಣೆ ಆರಂಭಿಸಲಾಗಿದೆ.  ವ್ಯಾಪಕವಾಗಿ ಅನಧಿಕೃತ ಹಣ ರವಾನೆಯಾಗುತ್ತಿದೆ ಎಂಬ ಮಾಹಿತಿಯ ಆಧಾರದಲ್ಲಿ ಈಗಾಗಲೇ ಈ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.

ಕೇರಳದಿಂದ ಹಾದುಹೋಗುವ ವಾಹನಗಳನ್ನೆಲ್ಲಾ ಸಮಗ್ರವಾಗಿ ತಪಾಸೆಗೈಯ್ಯಲಾಗುತ್ತಿದೆ. ಕಳೆದ ಸೋಮವಾರದಿಂದ ಸಶಸ್ತ್ರ ಪೊಲೀಸರು ವಾಹನ ತಪಾಸಣೆ ಆರಂಭಿಸಿದ್ದಾರೆ.

ಕಾಸರಗೋಡು ಸೇರಿ ಉತ್ತರ ಕೇರಳದ ಜಿಲ್ಲೆಗಳಿಗೆ ಪ್ರಧಾನವಾಗಿ ವಾಹನಗಳಲ್ಲೇ ಹವಾಲಾ ಹಣ ಸಾಗಾಟವಾಗುತ್ತಿದೆ.  ಸಮುದ್ರ ಮಾರ್ಗ ಮೂಲಕವೂ ಇಲ್ಲಿಗೆ ಹಣ ಹರಿದು ಬರುತ್ತಿದೆ.  ಸಮುದ್ರ ಮಾರ್ಗವಾಗಿ ಹರಿದು ಬರುತ್ತಿರುವ ಹವಾಲಾ ಹಣ ವಿದೇಶ ಹಾಗೂ ಉಗ್ರಗಾಮಿಗಳ ನಂಟು ಹೊಂದಿರುವ  ಅತ್ಯಂತ ಆತಂಕಕಾರಿ ಶಂಕೆಯನ್ನೂ ತನಿಖಾ ಸಂಸ್ಥೆಗಳು ವ್ಯಕ್ತಪಡಿಸಿವೆ.

ಗ್ರಾಮೀಣ ಪ್ರದೇಶಗಳನ್ನು ಕೇಂದ್ರೀ ಕರಿಸಿ ಕಾರ್ಯವೆಸಗುವ ವ್ಯಕ್ತಿಗಳನ್ನು ಗುರುತಿಸಿ ಅವರ ಬ್ಯಾಂಕ್ ಖಾತೆಗಳಿಗೂ ಹಣ ರವಾನಿಸಲಾಗುತ್ತಿರುವುದನ್ನು ತನಿಖಾ ತಂಡ ಪತ್ತೆಹಚ್ಚಿದೆ. ಇದಕ್ಕಾಗಿ ಕೆಲವು  ಮಧ್ಯವರ್ತಿಗಳನ್ನು ಬಳಸಲಾಗು ತ್ತಿದೆ. ಇಂತಹ ಬ್ಯಾಂಕ್ ಖಾತೆಗಳಿಂದ ಹಣದ ಅತೀ ಅಗತ್ಯವಿರುವವರ ಬ್ಯಾಂಕ್ ಖಾತೆಗಳಿಗೆ ಈ ಹಣ  ನಂತರ ವರ್ಗಾಯಿಸಲಾಗುತ್ತಿದೆ. ಮೊಬೈಲ್ ಫೋನ್ ಮೂಲಕ ಹಣ ರವಾನೆ ಮಾಡಲಾಗುತ್ತಿದೆ. ಒಂದು ಖಾತೆ ಯಿಂದ ಇನ್ನೊಂದು ಖಾತೆಗೆ ಹಣ ವರ್ಗಾಯಿಸಿದ್ದಲ್ಲಿ  ಮಧ್ಯವರ್ತಿಗಳಿಗೆ 10 ಲಕ್ಷ ರೂ.ಗೆ10,000 ರೂ.ನಿಂದ 20,000 ರೂ. ತನಕ ಕಮಿಷನ್ ಲಭಿಸುತ್ತಿದೆ. ಹೀಗೆ ಹವಾಲಾ ಹಣವನ್ನು ಅತ್ತಿತ್ತ ರವಾನಿಸಲು ಮಧ್ಯವರ್ತಿಗಳು ಹಣದ ಆಮಿಷವೊಡ್ಡಿ ಇತರರ ಹೆಸರಲ್ಲೂ ಹೊಸ ಬ್ಯಾಂಕ್ ಖಾತೆಗಳನ್ನು ತೆರೆದು, ಆ ಮೂಲಕವೂ ಹಣದ ಅಗತ್ಯ ವಿರುವವರಿಗೆ ಅದನ್ನು ಕಳುಹಿಸಿಕೊಡ ಲಾಗುತ್ತಿರುವುದನ್ನು ಗುಪ್ತಚರ ವಿಭಾಗ ನಡೆಸಿದ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ.

ಸಮುದ್ರಮಾರ್ಗ ಮೂಲಕ ಹವಾಲಾ ಹಣ ಸಾಗಾಟ ನಡೆಯುತ್ತಿದೆ ಎಂಬ ಮಾಹಿತಿ ಲಭಿಸಿರುವ ಹಿನ್ನೆಲೆ ಯಲ್ಲಿ  ಕೋಸ್ಟ್‌ಗಾರ್ಡ್‌ಗಳ ಸಹಾಯ ದಿಂದ ಸಮುದ್ರದಲ್ಲಿ ಬೋಟುಗಳನ್ನು  ತಪಾಸಣೆಗೊಳಪಡಿಸಲಾಗುತ್ತಿದೆ.

ಬೇಕೂರು ಮೂಲಕ ಚಾಲಿ ಯಾರ್‌ನಲ್ಲಿ ಕೆಲವು ದಿನಗಳ ಹಿಂದೆ ಇದೇ ರೀತಿ ಕಂಡು ಬಂದ ಖಾಲಿ ಬೋಟೊಂದನ್ನು ಕರಾವಳಿ ಪೊಲೀಸರು ಮತ್ತು ಕೋಸ್ಟ್‌ಗಾರ್ಡ್‌ಗಳ ತಂಡ ವಶಪಡಿಸಿ ತಪಾಸಣೆಗೊಳಪಡಿ ಸಿದ್ದರು. ಆದರೆ ಅದರಲ್ಲಿ ಯಾವುದೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅದನ್ನು ಬಳಿಕ ಬಿಟ್ಟುಕೊಡಲಾಗಿತ್ತು.  ಅದರಲ್ಲಿ ಹವಾಲಾ ಹಣ ಸಾಗಿಸಿರಬಹುದೆಂಬ ಶಂಕೆ ಅಂದೇ ಉಂಟಾಗಿತ್ತು.

Leave a Reply

Your email address will not be published. Required fields are marked *

You cannot copy content of this page