ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ವಾಸಿಸುವ ಮಾಜಿ ಗಲ್ಫ್ ಉದ್ಯೋಗಿಯಾದ ೫೨ರ ಹರೆಯದ ವ್ಯಕ್ತಿ ನಿಗೂಢರೀತಿಯಲ್ಲಿ ಮೃತಪಟ್ಟ ಘಟನೆಗೆ ಸಂಬಂಧಿಸಿ ಪೊಲೀಸ್ನ ಗುಪ್ತಚರ ವಿಭಾಗ ತನಿಖೆ ಆರಂಭಿಸಿದೆ. ಸಹಜ ಸಾವು ಎಂಬ ನೆಲೆಯಲ್ಲಿ ಮೃತದೇ ಹವನ್ನು ಸಂಸ್ಕರಿಸಿದ ಬಳಿಕ ಅವರ ಸಾವಿನಲ್ಲಿ ನಿಗೂಢತೆ ಇದೆಯೆಂದು ತಿಳಿದು ಬಂದಿದೆ. ಸಾವಿಗೀಡಾದ ವ್ಯಕ್ತಿ ಈ ಹಿಂದೆ ಗಲ್ಫ್ನಲ್ಲಿದ್ದರು. ಊರಿಗೆ ಮರಳಿ ಬಂದ ಬಳಿಕ ನಿರ್ಮಾಣ ವಲಯದಲ್ಲಿ ಕೆಲಸ ನಿರ್ವಹಿಸು ತ್ತಿದ್ದರು. ಎರಡು ವಾರಗಳ ಹಿಂದೆ ಈ ವ್ಯಕ್ತಿ ಮೃತಪಟ್ಟಿದ್ದರು. ಮನೆಯಲ್ಲಿ ಕುಸಿದುಬಿದ್ದಿರುವು ದಾಗಿ ತಿಳಿಸಿ ಇವರನ್ನು ಕಾಞಂಗಾಡ್ನ ಖಾಸಗಿ ಆಸ್ಪತ್ರೆಗೆ ತಲುಪಿಸಲಾಗಿತ್ತು. ಆಸ್ಪತ್ರೆಗೆ ತಲುಪಿಸಿದಾಗ ಸಾವು ದೃಢೀಕರಿಸಿದ್ದು ಇದರಿಂದ ಮರಳಿ ಕಳುಹಿಸಲಾಗಿತ್ತು. ಈ ವಿಷಯವನ್ನು ಪೊಲೀಸರಿಗೆ ತಿಳಿಸಿರಲಿಲ್ಲ. ಮೃತದೇಹವನ್ನು ಊರಿಗೆ ತಲುಪಿಸಿದ ಬಳಿಕ ನಾಗರಿಕರ ನೇತೃತ್ವದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿತ್ತು. ವ್ಯಕ್ತಿ ಮೃತಪಟ್ಟ ದಿನದಂದು ಮನೆಯಲ್ಲಿ ಭಾರೀ ಗದ್ದಲ ಹಾಗೂ ಹೊಡೆ ದಾಟ ನಡೆದಿದೆಯೆಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಮೃತದೇಹವನ್ನು ಸ್ನಾನ ಮಾಡಿಸುವಾಗ ಹೊಟ್ಟೆ ಯಲ್ಲಿ ಒದೆತದ ಗಾಯ ಗಮನಕ್ಕೆ ಬಂದಿರುವುದಾಗಿ ಹೇಳ ಲಾಗುತ್ತಿದೆ. ಇದರಿಂದ ಸಾವಿನಲ್ಲಿ ಸಂಶಯ ಹುಟ್ಟಿಕೊಂ ಡಿದೆ. ಮೃತಪಟ್ಟ ವ್ಯಕ್ತಿಯ ೧೭ರ ಹರೆಯದ ಪುತ್ರ ಹಾಗೂ ಎಂಟನೇ ತರಗತಿಯ ಓರ್ವೆ ವಿದ್ಯಾರ್ಥಿನಿಯ ಮಧ್ಯೆ ಪ್ರೇಮವಿತ್ತೆನ್ನ ಲಾಗಿದೆ. ಇವರ ಸಂಬಂಧವನ್ನು ತಂದೆ ಪ್ರಶ್ನಿಸಿದ ಹಿನ್ನೆಲೆಯಲ್ಲಿ ವಾಗ್ವಾದವುಂಟಾಗಿದ್ದು, ಬಳಿಕ ಹೊಕೈ ನಡೆದಿದ್ದು, ಈ ವೇಳೆ ವ್ಯಕ್ತಿಗೆ ತುಳಿದಿರುವುದಾಗಿಯೂ ಹೇಳಲಾಗುತ್ತಿದೆ. ಈ ವಿಷಯ ಊರಿನಲ್ಲಿ ಚರ್ಚೆಯಾದ ಹಿನ್ನೆಲೆಯಲ್ಲಿ ಗುಪ್ತಚರ ವಿಭಾಗ ತನಿಖೆ ತೀವ್ರಗೊಳಿಸಿದೆ.







